Nora Fatehi: ಹೊಸ ಆಲ್ಬಂ ಸಾಂಗ್ ಮೂಲಕ ಸೆಕ್ಸಿ ಲುಕ್‌ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ನೋರಾ ಫತೇಹಿ
ನಟಿ ನೋರಾ ಫತೇಹಿ ಉತ್ತಮ ಡ್ಯಾನ್ಸರ್ ಕೂಡ ಹೌದು. ಅನೇಕ ಸಿನಿಮಾಗಳ ಐಟಂ ಸಾಂಗ್ ಸೊಂಟ ಕುಣಿಸಿದ್ದಾರೆ. ನೋರಾ ಫತೇಹಿ ವಿಂಟರ್ ಒಕೆಶನ್ ಸೆಟ್‌ನಲ್ಲಿ 'ಓ ಮಾಮಾ ಟೆಟೆಮಾದ' ಹಾಡಿಗೆ ನೃತ್ಯ ಮಾಡಿದ್ದು, ಈಗಾಗಲೇ ಈ ಡ್ಯಾನ್ಸ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ನೋರಾ ಅವರ ಈ ಆಲ್ಬಂ ಸಾಂಗ್ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಈ ವಿಡಿಯೊದಲ್ಲಿ ನೋರಾ ಫತೇಹಿ ತಮ್ಮ ಸೆಕ್ಸಿ ಲುಕ್‌ನಿಂದ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ.

Nora Fatehi

ಮುಂಬೈ: ಡ್ಯಾನ್ಸ್, ಬೋಲ್ಡ್ ಅವತಾರದಿಂಲೇ ನೋರಾ ಫತೇಹಿ (Nora Fatehi) ಬಾಲಿವುಡ್‌ನಲ್ಲಿ ಗಮನ ಸೆಳೆದಿದ್ದಾರೆ. ಕೆನಡಾ ಮೂಲದವರಾದ ಅವರು ಬಾಲಿವುಡ್ ಅನೇಕ ಸಿನಿಮಾಗಳಲ್ಲಿ ಐಟಂ ಸಾಂಗ್‌ಗೆ ಮೈ ಬಳುಕಿಸಿದ್ದು, ಅಪಾರ ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದಾರೆ. ಇತ್ತೀಚೆಗಷ್ಟೆ ನೋರಾ ಫತೇಹಿ ವಿಂಟರ್ ಒಕೆಶನ್ ಸೆಟ್‌ನಲ್ಲಿ 'ಓ ಮಾಮಾ ಟೆಟೆ ಮಾದ' ಹಾಡಿಗೆ ನೃತ್ಯ ಮಾಡಿದ್ದು ಈಗಾಗಲೇ ಈ ಡ್ಯಾನ್ಸ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ನೋರಾ ಅವರ ಈ ಆಲ್ಬಂ ಸಾಂಗ್ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಈ ವಿಡಿಯೊದಲ್ಲಿ ನಟಿ ನೋರಾ ಫತೇಹಿ ತಮ್ಮ ಸೆಕ್ಸಿ ಲುಕ್‌ನಿಂದ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ.
ನಟಿ ನೋರಾ ಫತೇಹಿ ತಮ್ಮ ಹೊಸ ಆಲ್ಬಂ ಸಾಂಗ್‌ನಲ್ಲಿ ತಾಂಜೇನಿಯಾದ ಖ್ಯಾತ ಗಾಯಕ ರೇವಾನಿ ಜತೆ ನೃತ್ಯ ಮಾಡಿದ್ದಾರೆ. ದೇಸಿ ವೈಬ್‌ನಲ್ಲಿ ಪಾರ್ಟಿ ಥೀಂ ಜತೆಗೆ ಇವರಿಬ್ಬರು ಡ್ಯಾನ್ಸ್ ಮಾಡಿದ್ದು ಅಭಿಮಾನಿಗಳು ಈ ನೃತ್ಯಕ್ಕೆ ಮನ ಸೋತಿದ್ದಾರೆ. 'ಓ ಮಾಮಾ! ಟೆಟೆಮಾ'ವನ್ನು ಬೋಸ್ಕೊ ಲೆಸ್ಲಿ ಮಾರ್ಟಿಸ್ ನಿರ್ದೇಶಿಸಿದ್ದಾರೆ. ಅದರ ಜತೆಗೆ ನೃತ್ಯವನ್ನು ಕೂಡ ಸಂಯೋಜನೆ ಮಾಡಿದ್ದಾರೆ. ಈ ವಿಡಿಯೊ ಆಗಸ್ಟ್ 10ರಂದು ರಿಲೀಸ್ ಆಗುವ ಮೂಲಕ ಸೋಶಿಯಲ್ ಮಿಡಿಯಾದಲ್ಲಿ ಹೊಸ ಸಂಚಲನ ಉಂಟು ಮಾಡಿದೆ.
ನಟಿ ನೋರಾ ಫತೇಹಿ ಹಾಗೂ ಖ್ಯಾತ ಗಾಯಕ ರೇವಾನಿ ಈ ಆಲ್ಬಂ ಡ್ಯಾನ್ಸ್‌ನಲ್ಲಿ ಸಖತ್ ಬೋಲ್ಡ್ ಲುಕ್‌ನಿಂದ ನೆಟ್ಟಿಗರ ಗಮನ ಸೆಳೆದಿದ್ದಾರೆ. ನೋರಾ ಫತೇಹಿ ಬ್ರೌನ್ ಕಲರ್ ಡ್ರೆಸ್ ತೊಟ್ಟಿದ್ದು ತಮ್ಮ ಮೈ ಮಾಟ ಪ್ರದರ್ಶಿಸಿದ್ದಾರೆ. ಸಿಂಪಲ್ ಮೇಕಪ್ ಹಾಗೂ ಕರ್ಲಿ ಹೇರ್ ಸ್ಟೈಲ್ ಜತೆ ಬಾರ್ಬಿ ಡಾಲ್‌ನಂತೆ ತುಂಬಾ ಸೆಕ್ಸಿಯಾಗಿ ನೋರಾ ಕಂಗೊಳಿಸಿದ್ದಾರೆ.
ರೇವಾನಿ ಅವರ ಮೂಲ ಹೆಸರು ರೇಮಂಡ್ ಶಬನ್ ಮ್ವಾಕ್ಯುಸಾ ಎಂಬುದಾಗಿದ್ದು, ತಮ್ಮ ಗಾಯನದ ಮೂಲಕ ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳಿಸಿದ್ದಾರೆ. ರೇವಾನಿ ಮತ್ತು ವಿಶಾಲ್ ಮಿಶ್ರಾ ಸಂಯೋಜಿಸಿದ್ದಾರೆ. ರೇವಾನಿ, ವಿಶಾಲ್ ಮಿಶ್ರಾ, ನೋರಾ ಫತೇಹಿ ಮತ್ತು ದಿ ಪ್ಲಗ್ಜ್ ಯುರೋಪ್ ಸಹಯೋಗದ ಈ ಹಾಡಿಗೆ ಸಾಹಿತ್ಯ ರಚಿಸಲಾಗಿದೆ.
ಇದನ್ನು ಓದಿ:Coolie Movie: ರಿಲೀಸ್‌ಗೂ ಮುನ್ನ ರಜನಿಕಾಂತ್ ನಟನೆಯ ಕೂಲಿಗೆ ಭರ್ಜರಿ ಕಲೆಕ್ಷನ್!
ನೋರಾ ಫತೇಹಿ ಕೆನಡಾದಲ್ಲಿ ಜನಿಸಿದ್ದು, ಭಾರತದಲ್ಲಿ ನೆಲೆ ನಿಂತಿದ್ದಾರೆ. ಹಿಂದಿ, ಕನ್ನಡ ಸೇರಿದಂತೆ, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ನಟಿಸಿದ್ದಾರೆ. ಅವರು ʼರೋರ್: ಟೈಗರ್ಸ್ ಆಫ್ ದಿ ಸುಂದರ್ಬನ್ಸ್ʼನಲ್ಲಿ ನಟಿಸುವ ಮೂಲಕ ಬಾಲಿವಡ್‌ಗೆ ಕಾಲಿಟ್ಟರು.
'ಟೆಂಪರ್', 'ಬಾಹುಬಲಿ: ದಿ ಬಿಗಿನಿಂಗ್' ಮತ್ತು 'ಕಿಕ್ 2' ಮತ್ತಿತರ ಚಿತ್ರಗಳಲ್ಲಿನ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅವರು ಬಾಲಿವುಡ್ ಜತೆಗೆ ದಕ್ಷಿಣ ಬಾರತದ ಚಿತ್ರರಂಗದಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಫತೇಹಿ ಮಲಯಾಳಂ ಚಿತ್ರಗಳಾದ ʼಡಬಲ್ ಬ್ಯಾರೆಲ್ʼ ಮತ್ತು ʼಕಾಯಂಕುಲಂ ಕೊಚುನ್ನಿʼನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೆ ಬಿಗ್ ಬಾಸ್ ಮತ್ತು ಝಲಕ್ ದಿಖ್ಲಾ ಜಾ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.