ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepika Padukone: ಜಗತ್ತಿನಾದ್ಯಂತ ಜನಪ್ರಿಯತೆ ಪಡೆದಿರುವ ಕಾರ್ಯಕ್ರಮಕ್ಕೆ ದೀಪಿಕಾ ಪಡುಕೋಣೆಯೇ ಜಡ್ಜ್‌!

Louis Vuitton's LVMH jury: 2025 ರ LVMH ಪ್ರಶಸ್ತಿಯ ತೀರ್ಪುಗಾರರ ಸದಸ್ಯರಾಗಿ ನಟಿ ದೀಪಿಕಾ ಅವರನ್ನು ಆಯ್ಕೆ ಮಾಡಲಾಗಿದ್ದು ಈ ಬಗ್ಗೆ ಸ್ವತಃ LVMH ನ ಇನ್‌ಸ್ಟಾಗ್ರಾಮ್ ಪೇಜ್ ನಲ್ಲಿಯೇ ಪೋಸ್ಟ್ ಮಾಡಲಾಗಿದೆ. ಈ ಮೂಲಕ ನಟಿ ದೀಪಿಕಾ ಅವರು ಸಿನಿಮಾ ಮಾತ್ರವಲ್ಲದೆ ಜಾಗತಿಕ ಮಟ್ಟದ ಕಾರ್ಯಕ್ರಮ ಒಂದಕ್ಕೂ ತೀರ್ಪುಗಾರರಾಗಿರುವುದು ದೊಡ್ಡ ಸಾಧನೆ ಎಂದೇ ಹೇಳಬಹುದು. ನಟಿ ದೀಪಿಕಾ ಅವರು ಜಾಗತಿಕ ಮಟ್ಟದ ವರೆಗೂ ಪ್ರಭಾವಿ ನಟಿ ಯಾಗಿದ್ದು ಈ ಪೋಸ್ಟ್ ಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಗತ್ತಿನಾದ್ಯಂತ ಜನಪ್ರಿಯತೆ ಪಡೆದಿರುವ ಕಾರ್ಯಕ್ರಮಕ್ಕೆ ದೀಪಿಕಾ ಜಡ್ಜ್‌!

-

Profile Pushpa Kumari Sep 3, 2025 5:29 PM

ನವದೆಹಲಿ: ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಬಾಲಿವುಡ್ ಸಿನಿಮಾರಂಗದಲ್ಲಿ ತಮ್ಮ ಅದ್ಭುತ ಅಭಿನಯದಿಂದ ತುಂಬಾ ಖ್ಯಾತಿ ಪಡೆದಿದ್ದಾರೆ. 'ಐಶ್ವರ್ಯ', 'ಓಂ ಶಾಂತಿ ಓಂ', 'ಬಚ್ನಾ ಏ ಹಸೀನಾ', 'ಹೌಸ್ ಫುಲ್', 'ದೇಸಿ ಬಾಯ್ಸ್', 'ರೇಸ್2', 'ಪಿಕು', 'ಪದ್ಮಾವತ್' ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ದೀಪಿಕಾ ಅವರಿಗೆ ಸಾಕಷ್ಟು ದೊಡ್ಡ ಮಟ್ಟಿಗೆ ಅಭಿಮಾನಿ ಬಳಗವಿದೆ ಎನ್ನಬಹುದು. ಅಂತೆಯೇ ನಟಿ ದೀಪಿಕಾ ಅವರಿಗೆ ಇದೀಗ ಜಾಗತಿಕ ಮಟ್ಟದಲ್ಲಿ ಗುರುತಿಸಲು ಮತ್ತೊಂದು ಅವಕಾಶ ದೊರೆತಿದೆ. 2025 ರ LVMH ಪ್ರಶಸ್ತಿಯ ತೀರ್ಪುಗಾರರ ಸದಸ್ಯರಾಗಿ ನಟಿ ದೀಪಿಕಾ ಅವರನ್ನು ಆಯ್ಕೆ ಮಾಡಲಾಗಿದ್ದು ಈ ಬಗ್ಗೆ ಸ್ವತಃ LVMH ನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿಯೇ ಪೋಸ್ಟ್ ಮಾಡಲಾಗಿದೆ. ಈ ಮೂಲಕ ನಟಿ ದೀಪಿಕಾ ಅವರು ಸಿನಿಮಾ ಮಾತ್ರವಲ್ಲದೆ ಜಾಗತಿಕ ಮಟ್ಟದ ಕಾರ್ಯಕ್ರಮ ಒಂದಕ್ಕೂ ತೀರ್ಪುಗಾರರಾಗಿರುವುದು ದೊಡ್ಡ ಸಾಧನೆ ಎಂದೇ ಹೇಳಬಹುದು. ನಟಿ ದೀಪಿಕಾ ಅವರು ಜಾಗತಿಕ ಮಟ್ಟದವರೆಗೂ ಪ್ರಭಾವಿ ನಟಿಯಾಗಿದ್ದು ಈ ಪೋಸ್ಟ್ ಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LVMH ನ ಇನ್‌ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ನಟಿ ದೀಪಿಕಾ ಪಡುಕೋಣೆ ಅವರು 2025 ರ LVMH ಪ್ರಶಸ್ತಿ ತೀರ್ಪುಗಾರರ ಸದಸ್ಯೆಯಾಗಿದ್ದಾರೆ. ಈ ಮೂಲಕ ಅಂತಿಮ ಸ್ಪರ್ಧೆಯಲ್ಲಿ ಪ್ರತಿಷ್ಠಿತ ತೀರ್ಪುಗಾರರ ಸದಸ್ಯೆಯಾಗಿ ನಟಿ ದೀಪಿಕಾ ಆಗಮಿಸಲಿದ್ದಾರೆ ಎಂದು ಘೋಷಿಸಲು ನಾವು ಖುಷಿ ಪಡುತ್ತೇವೆ. ಜಾಗತಿಕ ಮಟ್ಟದವರೆಗೂ ಪ್ರಸಿದ್ಧರಾಗಿರುವ ದೀಪಿಕಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ವಿಶ್ವದಾದ್ಯಂತ ಪ್ರೇಕ್ಷಕರನ್ನು ಪ್ರೇರೇಪಿಸಲಿದ್ದಾರೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ವಿಚಾರ ತಿಳಿದ ನಟಿ ದೀಪಿಕಾ ಅವರ ಸ್ನೇಹಿತರು ಪೋಸ್ಟ್ ಮೂಲಕವೇ ಶುಭಾಶಯಗಳನ್ನು ಕೂಡ ತಿಳಿಸಿದ್ದಾರೆ. ದೀಪಿಕಾ, ಪ್ಯಾರಿಸ್‌ಗೆ ಅಡ್ವಾನ್ಸ್ ಸ್ವಾಗತ. 2025 ರ LVMH ಪ್ರಶಸ್ತಿಗೆ ನಿಮ್ಮನ್ನು ನೋಡಲು ಕಾತುರರಾಗಿದ್ದೇವೆ. ಈ ವಿಚಾರ ಬಹಳ ಸಂತೋಷವಾಗಿದೆ. ಈ ಮೂಲಕ ವಿಶೇಷ ಕ್ಷಣವನ್ನು ಒಟ್ಟಿಗೆ ಕಳೆಯಲು ನಾವು ಎದುರು ನೋಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಯಾವುದು ಈ ಪ್ರಶಸ್ತಿ?

ಯುವ ಫ್ಯಾಷನ್ ವಿನ್ಯಾಸಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ನೀಡುವ ಪ್ರಶಸ್ತಿಯೇ LVMH ಪ್ರಶಸ್ತಿಯಾಗಿದೆ. ಉದಯೋನ್ಮುಖ ಫ್ಯಾಷನ್ ವಿನ್ಯಾಸಕರಿಗೆ, ಸೃಜನಶೀಲರಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ಮಾರ್ಗದರ್ಶನವನ್ನು ಒದಗಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿ ಸಲಾಗುವುದು.‌ ಅದರೊಂದಿಗೆ ಫ್ಯಾಷನ್ ಅನ್ನು ಉದ್ಯಮವಾಗಿ ರೂಪಿಸುವ ಸಾಮರ್ಥ್ಯ ವಿರುವ ವೃತ್ತಿಪರರಾಗಿ ಇಲ್ಲಿ ಅವಕಾಶ ಕಲ್ಪಿಸಲಾಗುವುದು. ಈ ವರ್ಷ ಈ ಸ್ಪರ್ಧೆಗೆ 12 ತೀರ್ಪುಗಾರರ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಜೋನಾಥನ್ ಆಂಡರ್ಸನ್, ನಿಕೋ ಲಸ್ ಗೆಸ್ಕ್ವಿಯರ್, ಸಾರಾ ಬರ್ಟನ್, ಸ್ಟೆಲ್ಲಾ ಮೆಕ್ಕರ್ಟ್ನಿ, ಫ್ಯಾರೆಲ್ ವಿಲಿಯಮ್ಸ್, ಫೋಬೆ ಫಿಲೋ, ನಿಗೊ, ಡೆಲ್ಫಿನ್ ಅರ್ನಾಲ್ಟ್ ಮತ್ತು ಜೀನ್-ಪಾಲ್ ಕ್ಲಾವೆರಿ ಜೊತೆಗೆ ನಟಿ ದೀಪಿಕಾ ಕೂಡ ಜೂರಿ ಮೆಂಬರ್ ಆಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ:Ranveer Singh and Deepika: ಅಂಬಾನಿ ಕುಟುಂಬದ ಅದ್ಧೂರಿ ಗಣೇಶೋತ್ಸವದಲ್ಲಿ ನಟ ರಣವೀರ್ ಸಿಂಗ್ - ದೀಪಿಕಾ

ಪ್ಯಾರಿಸ್‌ನಲ್ಲಿರುವ ಲೂಯಿ ವಿಟಾನ್‌ನಲ್ಲಿ ಈ ಸ್ಪರ್ಧೆ ಸೆಪ್ಟೆಂಬರ್ 3 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇದೇ ಸ್ಪರ್ಧೆ ಮೂಲಕ ಹನ್ನೆರಡನೇ ಆವೃತ್ತಿಯಲ್ಲಿ ವಿಜೇತರನ್ನು ಘೋಷಿಸಲಾಗುವುದು. ಸದ್ಯ ನಟಿ ದೀಪಿಕಾ ಅವರು ತಮ್ಮ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದು ಈ ನಡುವೆ ಕೆಲವು ಸಿನಿಮಾವನ್ನು ಕೂಡ ಮಾಡುವುದಾಗಿ ಒಪ್ಪಿದ್ದಾರೆ. ಈ ಮೂಲಕ ಪ್ರತಿಷ್ಠಿತ ಕಾರ್ಯಕ್ರಮದ ತೀರ್ಪುಗಾರರಾಗಿ ಅವರು ಆಯ್ಕೆ ಆಗಿದ್ದು ಅಭಿಮಾನಿಗಳಿಗೆ ಖುಷಿ ತಂದ ವಿಚಾರ ಕೂಡ ಎನ್ನಬಹುದು.