IPL 2026: ಕೋಲ್ಕತಾ ನೈಟ್ ರೈಡರ್ಸ್‌ಗೆ ರಾಹುಲ್ ದ್ರಾವಿಡ್ ಕೋಚ್ ಆಗುವ ಸಾಧ್ಯತೆ!
ಮುಂದಿನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಿಮಿತ್ತ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗುವ ಸಾದ್ಯತೆ ಇದೆ. ಅವರು 2025ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್‌ಗೆ ಕೋಚ್ ಆಗಿದ್ದರು. ಇದೀಗ ಅವರು ಆರ್‌ಆರ್ ತಂಡವನ್ನು ತೊರೆದಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್‌ಗೆ ರಾಹುಲ್ ದ್ರಾವಿಡ್ ಕೋಚ್ ಆಗುವ ಸಾಧ್ಯತೆ ಇದೆ. -

ನವದೆಹಲಿ: ಭಾರತ ಕ್ರಿಕೆಟ್ ತಂಡದೊಂದಿಗೆ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ, ದಿಗ್ಗಜ ರಾಹುಲ್ ದ್ರಾವಿಡ್ (Rahul Dravid) 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಆರಂಭಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡಕ್ಕೆ ಮುಖ್ಯ ಕೋಚ್ ಆಗಿ ಸೇರಿಕೊಂಡಿದ್ದರು. ಆದರೆ, ಕೇವಲ ಒಂದು ಸೀಸನ್ ನಂತರ ಅವರು ತಮ್ಮ ಹುದ್ದೆಯನ್ನು ತೊರೆದಿದ್ದಾರೆ. ರಾಜಸ್ಥಾನ್ ಫ್ರಾಂಚೈಸಿಯಲ್ಲಿನ ಆಂತರಿಕ ಸಂಗತಿಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಹಲವು ವರದಿಗಳಿಂದ ಬಹಿರಂಗಗೊಂಡಿತ್ತು. ಈ ಕಾರಣದಿಂದಲೇ ಅವರು ರಾಜಸ್ಥಾನ್ ರಾಯಲ್ಸ್ ತಂಡದ ಹೆಡ್ ಕೋಚ್ ಹುದ್ದೆಯನ್ನು ತೊರೆದಿದ್ದರು ಎಂದು ಹಲವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮುಂದಿನ 2026ರ ಐಪಿಎಲ್ ಟೂರ್ನಿಯ ನಿಮಿತ್ತ ಸದ್ಯ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹೆಡ್ ಕೋಚ್ ಇಲ್ಲ. ಹತ್ತೊಂಬತ್ತನೇ ಆವೃತ್ತಿಗೂ ಮುನ್ನ ರಾಜಸ್ಥಾನ್ ಫ್ರಾಂಚೈಸಿ ತನ್ನ ತಂಡಕ್ಕೆ ನೂತನ ಹೆಡ್ ಕೋಚ್ ಅನ್ನು ನೇಮಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ತಂಡ ವಾತಾವರಣಕ್ಕೆ ಸೂಕ್ತವಾಗುವ ವ್ಯಕ್ತಿಯನ್ನು ಹುಡುಕುವುದು ಆರ್‌ಆರ್‌ಗೆ ಸುಲಭದ ಕೆಲಸವಲ್ಲ. ರಾಜಸ್ಥಾನ್ ರಾಯಲ್ಸ್ ತಂಡದಂತೆ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೂ ಕೂಡ ಪ್ರಸ್ತುತ ಕೋಚ್ ಇಲ್ಲ. 2025ರ ಐಪಿಎಲ್ ಬಳಿಕ ಚಂದ್ರಕಾಂತ್ ಪಂಡಿತ್ ಹೆಡ್ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು.
Rahul Dravid: ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ ರಾಹುಲ್ ದ್ರಾವಿಡ್ ಮುಖ್ಯಸ್ಥ?
ಕೆಕೆಆರ್‌ಗೆ ರಾಹುಲ್ ದ್ರಾವಿಡ್ ಕೋಚ್ ಆಗಬಹುದು
2025ರ ಐಪಿಎಲ್ ನಂತರ ಕೋಲ್ಕತ್ತಾ ನೈಟ್ ರೈಡರ್ಸ್‌ನ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಕೂಡ ತಮ್ಮ ಹುದ್ದೆಯಿಂದ ಕೆಳಗಿಳಿದ್ದರು. ಈಗ ಕೆಕೆಆರ್ ಕೂಡ ಈ ಸಮಯದಲ್ಲಿ ಮುಖ್ಯ ಕೋಚ್ ಇಲ್ಲದೆ ಇದೆ. ಈಗ 2026ರ ಐಪಿಎಲ್‌ಗೂ ಮುನ್ನ ಕೋಲ್ಕತ್ತಾ ಫ್ರಾಂಚೈಸಿ ರಾಹುಲ್ ದ್ರಾವಿಡ್ ಅವರನ್ನು ಮುಖ್ಯ ಕೋಚ್ ಆಗಿ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ದ್ರಾವಿಡ್ ಕೋಚಿಂಗ್‌ನಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಅವರು ಭಾರತ ತಂಡಕ್ಕೂ ಕೂಡ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.
ಇದಲ್ಲದೆ, ಅವರು ಅಂಡರ್ 19 ಭಾರತ ತಂಡದ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಮುಖ್ಯ ತರಬೇತುದಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ರಾಹುಲ್ ದ್ರಾವಿಡ್‌ಗೆ ಆಟಗಾರನಾಗಿಯೂ ಐಪಿಎಲ್ ಟೂರ್ನಿಯಲ್ಲಿ ಆಡಿದ ಅನುಭವವಿದೆ ಎಂದು ಎಲ್ಲರಿಗೂ ಗೊತ್ತಿದೆ. 2008 ರಿಂದ 2013 ರ ಅವಧಿಯಲ್ಲಿ ಅವರು ಐಪಿಎಲ್‌ನಲ್ಲಿ 89 ಪಂದ್ಯಗಳಲ್ಲಿ 2174 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ದ್ರಾವಿಡ್ 11 ಅರ್ಧಶತಕಗಳನ್ನು ಗಳಿಸಿದ್ದಾರೆ.
ಈ ಇಬ್ಬರಿಂದ ರಾಜಸ್ಥಾನ್ ರಾಯಲ್ಸ್ ಹೆಡ್ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಹುಲ್ ದ್ರಾವಿಡ್!
2025ರ ಐಪಿಎಲ್‌ನಲ್ಲಿ ಕೆಕೆಆರ್-ಆರ್‌ಆರ್ ಪಯಣ ಉತ್ತಮವಾಗಿರಲಿಲ್ಲ
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಎರಡೂ ತಂಡಗಳ ಪ್ರದರ್ಶನ ಅಷ್ಟೊಂದು ಉತ್ತಮವಾಗಿಲ್ಲ. ಕೋಲ್ಕತ್ತಾ 14 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 12 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 8ನೇ ಸ್ಥಾನವನ್ನು ಗಳಿಸಿತ್ತು. ಮತ್ತೊಂದೆಡೆ, ರಾಜಸ್ಥಾನ ರಾಯಲ್ಸ್ 14 ಪಂದ್ಯಗಳಲ್ಲಿ ಕೇವಲ 4ರ ಗೆದ್ದು 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿತ್ತು.