Ranveer Singh and Deepika: ಅಂಬಾನಿ ಕುಟುಂಬದ ಅದ್ಧೂರಿ ಗಣೇಶೋತ್ಸವದಲ್ಲಿ ನಟ ರಣವೀರ್ ಸಿಂಗ್ - ದೀಪಿಕಾ
Ranveer Singh and Deepika Padukone: ಈ ಬಾರಿ ಅಂಬಾನಿ ಕುಟುಂಬದಲ್ಲಿ ಗಣೇಶೋತ್ಸವವನ್ನು ಬಹಳ ವೈಭವ ಯುತವಾಗಿ ಆಚರಿಸಲಾಗಿದ್ದು ಅನೇಕ ಗಣ್ಯರು ಕೂಡ ಈ ಸಮಾರಂಭದಲ್ಲಿ ಭಾಗಿ ಯಾಗಿದ್ದಾರೆ. ಬಾಲಿವುಡ್ ಫೇಮಸ್ ಕಪಲ್ ನಟ ರಣವೀರ್ ಸಿಂಗ್ -ದೀಪಿಕಾ ಪಡುಕೋಣೆ ಹಾಗೂ ಗಾಯಕಿ ಹರ್ಷದೀಪ್ ಕೌರ್ ಮತ್ತು ಅವರ ಪತಿ ಮಂಕೀತ್ ಸಿಂಗ್ ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸದ್ಯ ಅವರ ಕೆಲವು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಶ್ವದ ಶ್ರೀಮಂತ ಕುಟುಂಬದಲ್ಲಿ ಅಂಬಾನಿ ಕುಟುಂಬ ಕೂಡ ಒಂದು. ಅಂಬಾನಿ ಕುಟುಂಬದಲ್ಲಿ ಹಬ್ಬ, ಆಚರಣೆ, ಮದುವೆ ಸಂಪ್ರದಾಯ ಏನೇ ನಡೆದರೂ ಅದು ಬಹಳ ವೈಭವಪೂರಿತ ವಾಗಿ ರುತ್ತದೆ. ಅಂತೆಯೇ ಈ ಬಾರಿ ಅಂಬಾನಿ ಕುಟುಂಬದಲ್ಲಿ ಗಣೇಶೋತ್ಸವವನ್ನು ಬಹಳ ವೈಭವ ಯುತವಾಗಿ ಆಚರಿಸಲಾಗಿದ್ದು ಅನೇಕ ಗಣ್ಯರು ಕೂಡ ಈ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಭಾರತದ ಪ್ರಸಿದ್ಧ ಗಾಯಕಿ ಹರ್ಷದೀಪ್ ಕೌರ್ ಮತ್ತು ಅವರ ಪತಿ ಮಂಕೀತ್ ಸಿಂಗ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬಾಲಿವುಡ್‌ನ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಜೊತೆಗೆ ಜೋಡಿಯಾಗಿ ನಿಂತು ಸೆಲ್ಫಿ ಫೋಟೊಗೆ ಪೋಸ್ ನೀಡಿದ್ದು ಈ ಫೋಟೊ ನೆಟ್ಟಿಗರ ಗಮನ ಸೆಳೆಯುತ್ತಿದೆ.
ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟಿ ದೀಪಿಕಾ ಅವರು ಟ್ರೆಡಿಶನಲ್ ಡ್ರೆಸ್ ನಲ್ಲಿ ಬಹಳ ಸುಂದರವಾಗಿ ಕಂಡಿದ್ದಾರೆ. ನಟಿ ದೀಪಿಕಾ ಅವರು ಗೋಲ್ಡನ್ ಕಲರ್ ಫುಲ್ ನೆಕ್ ಅನಾರ್ಕಲಿ ಬಟ್ಟೆ ತೊಟ್ಟಿದ್ದಾರೆ. ಗಾಯಕಿ ಹರ್ಷ ದೀಪ್ ಕೂಡ ಹಳದಿ ಬಣ್ಣದ ಚೂಡಿದಾರ್ ತೊಟ್ಟಿದ್ದು ಇಬ್ಬರು ಜೊತೆಯಾಗಿ ನಿಂತು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ವೈರಲ್ ಆದ ಇನ್ನೊಂದು ಫೋಟೊದಲ್ಲಿ ಗಾಯಕಿ ಹರ್ಷ ದೀಪ್ ಹಾಗೂ ಅವರ ಪತಿ ಮಂಕೀತ್ ಸಿಂಗ್ ಅವರು ನಟ ರಣವೀರ್ ಸಿಂಗ್ ಜೊತೆಗೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಈ ಫೋಟೊದಲ್ಲಿ ನಟ ರಣವೀರ್ ಸಿಂಗ್ ಅವರು ಕ್ಲೀನ್ ಶೇವ್ ಮಾಡಿಸಿದ್ದ ಕಾರಣಕ್ಕೆ ತುಂಬಾ ಡಿಫರೆಂಟ್ ಆಗಿ ಕಂಡಿ ದ್ದಾರೆ. ಕ್ಲಾಸಿಕಲ್ ಶರ್ಟ್ ಧರಿಸಿದ್ದು ತುಂಬಾ ಟ್ರೆಡಿಶನಲ್ ಆಗಿ ನಟ ರಣವೀರ್ ಸಿಂಗ್ ಕಂಡಿದ್ದಾರೆ.
ಗಾಯಕಿ ಹರ್ಷದೀಪ್ ಅವರು ಇದೇ ಕಾರ್ಯಕ್ರಮದಲ್ಲಿ ಅಂಬಾನಿ ಕುಟುಂಬದ ಜೊತೆಗೂ ಫೋಟೊ ತೆಗೆಸಿಕೊಂಡಿದ್ದಾರೆ. ನೀತಾ ಅಂಬಾನಿ ಅವರು ಆರೆಂಜ್ ಕಲರ್ ಸೀರೆಯಲ್ಲಿ ಬಹಳ ಸುಂದರವಾಗಿ ಕಂಡಿದ್ದಾರೆ. ಸೀರೆಗೆ ಹೊಂದುವ ಜುವೆಲರಿ ಹಾಗೂ ಮೇಕಪ್ ಮತ್ತು ಹೇರ್ ಸ್ಟೈಲ್ ನಲ್ಲಿ ನೀತಾ ಅಂಬಾನಿ ಬಹಳ ಟ್ರೆಡಿಶನಲ್ ಆಗಿ ಕಂಡಿದ್ದಾರೆ...
ರಣವೀರ್ ಸಿಂಗ್ ಅವರು 2024 ರಲ್ಲಿ ಬಿಡುಗಡೆಯಾದ ಅಜಯ್ ದೇವಗನ್ ಅಭಿನಯದ 'ಸಿಂಘಮ್ ಅಗೇನ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ 'ಧುರಂಧರ್' ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈಗ ಚಿತ್ರೀಕರಣ ಮುಗಿದ ಬಳಿಕ ಅವರು ಕ್ಲೀನ್ ಶೇವ್ ಮಾಡಿಸಿಕೊಂಡಿದ್ದಾರೆ. 'ಧುರಂಧರ್' ಸಿನಿಮಾ ಡಿಸೆಂಬರ್ 5 ರಂದು ಬಿಡುಗಡೆಯಾಗುತ್ತದೆ ಎನ್ನಲಾಗಿದೆ.