ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aaradhya Bachchan: ಕೋರ್ಟ್‌ ಮೆಟ್ಟಿಲೇರಿದ ಆರಾಧ್ಯ ಬಚ್ಚನ್;‌ ಐಶ್ವರ್ಯಾ-ಅಭಿಷೇಕ್‌ ಪುತ್ರಿ ಕೋರ್ಟ್‌ಗೆ ಮಾಡಿರುವ ಮನವಿಯೇನು?

ಬಾಲಿವುಡ್‌ ಚಿತ್ರರಂಗದ ಜನಪ್ರಿಯ ಜೋಡಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ಆಗಿಂದಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ಅವರ ಪುತ್ರಿ ಆರಾಧ್ಯ ಬಚ್ಚನ್‌ ಕೂಡ ಸುದ್ದಿಯಲ್ಲಿರುತ್ತಾರೆ. ಇದೀಗ ಆರಾಧ್ಯ ರೈ ಬಚ್ಚನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆರಾಧ್ಯ ಅರ್ಜಿ ಪುರಸ್ಕರಿಸಿದ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುಳ್ಳು ವಿಡಿಯೊಗಳನ್ನು ತೆಗೆದುಹಾಕುವಂತೆ ಮನವಿ ಮಾಡಲು ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ.

Aaradhya Bachchan

ಮುಂಬೈ: ಬಾಲಿವುಡ್‌ ಚಿತ್ರರಂಗದ ಜನಪ್ರಿಯ ಜೋಡಿ ಅಭಿಷೇಕ್ ಬಚ್ಚನ್(Abhishek Bachchan) ಮತ್ತು ಐಶ್ವರ್ಯ ರೈ ಬಚ್ಚನ್(Aishwarya Bachchan) ಆಗಿಂದಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ಅವರ ಪುತ್ರಿ ಆರಾಧ್ಯ ಬಚ್ಚನ್‌(Aradhya Bachchan) ಕೂಡ ಸುದ್ದಿಯಲ್ಲಿರುತ್ತಾರೆ. ಇದೀಗ ಆರಾಧ್ಯ ರೈ ಬಚ್ಚನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅವರ ಅರ್ಜಿ ಪುರಸ್ಕರಿಸಿದ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುಳ್ಳು ವಿಡಿಯೊಗಳನ್ನು ತೆಗೆದುಹಾಕುವಂತೆ ಮನವಿ ಮಾಡಲು ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಆರಾಧ್ಯ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತನ್ನ ವಿರುದ್ಧ ಗೂಗಲ್ ಸೇರಿದಂತೆ ಕೆಲ ವೆಬ್‌ಸೈಟ್,ಯೂಟ್ಯೂಬ್ ಚಾನೆಲ್ ಸೇರಿದಂತೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದಿದ್ದಾರೆ. ಇದನ್ನು ನಿರ್ಬಂಧಿಸುವಂತೆ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಆರಾಧ್ಯ ರೈ ಹೈಕೋರ್ಟ್‌ಗೆ ಹೋಗಿದ್ದಾರೆ.



ಏಪ್ರಿಲ್ 2023 ರಲ್ಲಿ ʼಆರಾಧ್ಯ ಅವರು ಅಸ್ವಸ್ಥರಾಗಿದ್ದಾರೆʼ ಹೀಗೆ ಅನೇಕ ಸುಳ್ಳು ಸುದ್ದಿಗಳು ವೈರಲ್‌ ಆಗಿತ್ತು. ಸುಳ್ಳು ವಿಡಿಯೊಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಗೂಗಲ್‌ಗೆ ಆದೇಶ ನೀಡಿತ್ತು. ನ್ಯಾಯಮೂರ್ತಿ ಸಿ ಹರಿ ಶಂಕರ್ ಅವರು ಇಂತಹ ವಿಷಯದ ಹರಡುವಿಕೆಯನ್ನು ಟೀಕಿಸಿದ್ದರು. ಪ್ರತಿ ಮಗುವು ಘನತೆ ಮತ್ತು ಗೌರವಕ್ಕೆ ಅರ್ಹವಾಗಿದೆ ಎಂದು ಹೇಳಿದ್ದರು. ಅಪ್ರಾಪ್ತ ವಯಸ್ಕ ಹುಡುಗಿಯ ಆರೋಗ್ಯದ ಬಗ್ಗೆ ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವುದು ಕಾನೂನಿನ ದೃಷ್ಟಿಯಲ್ಲಿ ತಪ್ಪು ಎಂದಿದ್ದರು.

ಈ ಸುದ್ದಿಯನ್ನೂ ಓದಿ: VIP Entries: ದೇಗುಲಗಳಲ್ಲಿ VIP ದರ್ಶನ ನಿರ್ಬಂಧಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಸುಳ್ಳು ಸುದ್ದಿ ಅಪ್‌ಲೋಡ್ ಮಾಡಿದವರ ವಿವರಗಳನನ್ನು ಸಂಗ್ರಹಿಸಲು ಮತ್ತು ಯಾವುದೇ ತಪ್ಪುದಾರಿಗೆಳೆಯುವ ವಿಡಿಯೊಗಳನ್ನುಕೂಡಲೇ ತೆಗೆದು ಹಾಕುವಂತೆ ನ್ಯಾಯಾಲಯವು ಗೂಗಲ್‌ಗೆ ತಿಳಿಸಿದೆ. ಈ ಕುರಿತು ಉತ್ತರ ನೀಡುವಂತೆ ಗೂಗಲ್ ಸೇರಿದಂತೆ ಹಲವು ವೆಬ್‌ಸೈಟ್‌ಗಳಿಗೆ ನೋಟಿಸ್ ನೀಡಿದೆ. ಇದೇ ವೇಳೆ ಮುಂದಿನ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಲಾಗಿದೆ.

ಆರಾಧ್ಯ ಬಚ್ಚನ್‌ ಮನವಿಯೇನು?

ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕುರಿತು ತಪ್ಪು ಮಾಹಿತಿಗಳನ್ನು ನೀಡಲಾಗುತ್ತಿದೆ. ಸೆಲೆಬ್ರೆಟಿ ಮಕ್ಕಳೇ ಆಗಿರಬಹುದು, ಜನಸಾಮಾನ್ಯರ ಮಕ್ಕಳೇ ಆಗಿರಬಹುದು. ಅವರ ವೈಯಕ್ತಿಕ, ಖಾಸಗಿತನ, ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವುದು ಅಪರಾಧವಾಗಿದೆ ಎಂದು ಮನವಿ ಮಾಡಿದ್ದಾರೆ. ದೆಹಲಿ ಹೈಕೋರ್ಟ್‌ ಅರ್ಜಿಯನ್ನು ಪುರಸ್ಕರಿಸಿ ನೋಟಿಸ್‌ ಜಾರಿ ಮಾಡಿದೆ.