VIP Entries: ದೇಗುಲಗಳಲ್ಲಿ VIP ದರ್ಶನ ನಿರ್ಬಂಧಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ದೇಶದ ಹಲವು ಪ್ರಸಿದ್ಧ ದೇಗುಲಗಳಲ್ಲಿ ವಿಐಪಿ ದರ್ಶನ ವ್ಯವಸ್ಥೆ ಸರ್ವೇ ಸಾಮಾನ್ಯ. ಅನುಕೂಲಸ್ಥ ವರ್ಗದ ಜನ ಹೆಚ್ಚುವರಿ ಹಣ ಪಾವತಿಸಿ ವಿಐಪಿ ದರ್ಶನ ಪಡೆಯುತ್ತಾರೆ ಈ ವ್ಯವಸ್ಥೆಯನ್ನು ನಿಲ್ಲಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಇದೀಗ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನವದೆಹಲಿ: ದೇಗುಲಗಳಲ್ಲಿ ವಿಐಪಿ ದರ್ಶನಕ್ಕೆ(VIP Entries) ಅವಕಾಶ ನಿರ್ಬಂಧಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್(Supreme Court) ತಿರಸ್ಕರಿಸಿದೆ. ದೇಶದ ಹಲವು ಪ್ರಸಿದ್ಧ ದೇಗುಲಗಳಲ್ಲಿ ವಿಐಪಿ ದರ್ಶನ ವ್ಯವಸ್ಥೆ ಸರ್ವೇ ಸಾಮಾನ್ಯ. ಅನುಕೂಲಸ್ಥ ವರ್ಗದ ಜನ ಹೆಚ್ಚುವರಿ ಹಣ ಪಾವತಿಸಿ ವಿಐಪಿ ದರ್ಶನ ಪಡೆಯುತ್ತಾರೆ ಈ ವ್ಯವಸ್ಥೆಯನ್ನು ನಿಲ್ಲಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಇದೀಗ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
#SupremeCourt refuses to pass any direction in a plea challenging #VIP entries into #temples across the country.
— Argus News (@ArgusNews_in) January 31, 2025
Chief Justice of India (CJI) Sanjiv Khanna led bench, clarified that although they may agree with the issue raised in the plea, the case is not fit for the Court to… pic.twitter.com/zAsB4F2xXQ
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು, ಈ ವಿಷಯವನ್ನು ನಿರ್ಧರಿಸುವುದು ಸಮಾಜ ಮತ್ತು ದೇವಾಲಯ ಆಡಳಿತ ಮಂಡಳಿಗೆ ಬಿಟ್ಟದ್ದು ಮತ್ತು ನ್ಯಾಯಾಲಯವು ಯಾವುದೇ ನಿರ್ದೇಶನವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಯಾವುದೇ ವಿಶೇಷ ಸೌಲಭ್ಯ ನೀಡಬಾರದು ಎಂದು ನಾವು ಅಭಿಪ್ರಾಯಪಟ್ಟಿರಬಹುದು. ಆದರೆ ಈ ನ್ಯಾಯಾಲಯವು ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ. ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ನ್ಯಾಯವ್ಯಾಪ್ತಿಯನ್ನು ಚಲಾಯಿಸಲು ಇದು ಸೂಕ್ತವಾದ ಪ್ರಕರಣ ಎಂದು ನಾವು ಭಾವಿಸುವುದಿಲ್ಲ. ಎಂದು ಪೀಠ ಸ್ಪಷ್ಟವಾಗಿ ಹೇಳಿದೆ.
ಈ ಸುದ್ದಿಯನ್ನೂ ಓದಿ: Tahawwur Rana: ಮುಂಬೈ ಅಟ್ಯಾಕ್‌ನ ಆರೋಪಿ ತಹವ್ವುರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್!