ನವದೆಹಲಿ: ಬಹಳ ದಿನಗಳಿಂದ ಬಹುನಿರೀಕ್ಷಿತ 'ರಾಮಾಯಣ' (Ramayana) ಚಿತ್ರದ ಬಗ್ಗೆ ಚರ್ಚೆ ನಡೆಯುತ್ತಿದ್ದು ರಾಮಾಯಣ ಸಿನಿಮಾದ ಬಗ್ಗೆ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಯಶ್, ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಮೊದಲಾದ ಖ್ಯಾತ ನಟ ನಟಿಯರೆ ಈ ಚಿತ್ರದಲ್ಲಿ ನಟಿಸಲಿದ್ದು ಸಿನಿಪ್ರಿಯರು ಕೂಡ ಕಾತುರರಾಗಿದ್ದಾರೆ.ಈ ಚಿತ್ರವನ್ನು ಅತಿ ದೊಡ್ಡ ಬಜೆಟ್‌ನಲ್ಲೇ ನಿರ್ಮಿಸಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿ ಸಿನಿಮಾದ ಚಿತ್ರೀಕರಣ ಮಾಡ ಲಾಗುತ್ತಿದೆ. ಈಗಾಗಲೇ ಸಿನಿಮಾದ ಟೀಸರ್ ಅಥವಾ ಗ್ಲಿಂಪ್ಸ್ ಅನ್ನು ಬಿಡುಗಡೆ ಮಾಡಲಾಗಿದೆ. ಅದೇ ರೀತಿ ರಾಮಾ ಯಣ ಚಿತ್ರದ ಬಗ್ಗೆ ಇದೀಗ ಮತ್ತೊಂದು ಹೊಸ ಅಪ್ಡೇಟ್ ಸಿಕ್ಕಿದ್ದು ಹಾಲಿವುಡ್ ಸಿನಿಮಾಗಳಿಗೆ ಬಳಸುವ ತಂತ್ರಜ್ಞಾನ ಮತ್ತು ತಂತ್ರಜ್ಞರನ್ನು ಆಯ್ಕೆ ಮಾಡುವ ಮೂಲಕ ‘ರಾಮಾ ಯಣ’ ಚಿತ್ರವನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಚಿತ್ರಕ್ಕೆ ಹಾಲಿವುಡ್‌ನ ಟಾಪ್ ವಿಎಫ್‌ಎಕ್ಸ್ ಸ್ಟುಡಿಯೋ ಡಿಎನ್‌ಇಜಿ ಕೆಲಸ ಮಾಡುತ್ತಿದ್ದು ಈ ಸಂಸ್ಥೆ ‘ಹ್ಯಾರಿಪಾಟರ್’, ‘ಡಾರ್ಕ್ ನೈಟ್’, ಜೇಮ್ಸ್ ಬಾಂಡ್ ಸರಣಿಯಂತೆ ವಿಶ್ವದ ಪ್ರಸಿದ್ಧ ಸಿನಿಮಾ ಗಳಿಗೆ ವಿಎಫ್‌ಎಕ್ಸ್ ನೀಡಿದೆ. ಇದೇ ಸಂಸ್ಥೆ ‘ರಾಮಾಯಣ’ ಜೊತೆಗೂ ಇದೀಗ ಕೈ ಜೋಡಿಸಿದೆ. ವೆನಮ್’, ‘ಕಾಂಗ್ vs ಗಾಡ್ಜಿಲ್ಲಾ’ ಸಿನಿಮಾಗಳಲ್ಲಿ ಕೆಲಸ ಮಾಡಿದ ಕ್ಸೇವಿಯರ್ ಬೆರ್ನಾ ಶೋನಿ ಅವರನ್ನು ಕೂಡ ‘ರಾಮಾಯಣ 2’ ಚಿತ್ರದ ವಿಎಫ್‌ಎಕ್ಸ್ ಮೇಲ್ವಿಚಾರಕರಾಗಿ ಆಯ್ಕೆಮಾಡಲಾಗಿದೆ. ಹೀಗಾಗಿ ಈ ಸಿನಿಮಾಕ್ಕೆ ಈ ಒಂದು ಪ್ಲಸ್ ಪಾಯಿಂಟ್ ಕೂಡ ಆಗಲಿದೆ.
ಈಗಾಗಲೇ ರಾಮಾಯಣ ಕಾವ್ಯವನ್ನು ಕಥೆಯಾಗಿ ಕೇಳಿ ಖುಷಿಪಟ್ಟಿದ್ದೇವೆ. ನಾಟಕಗಳಲ್ಲಿ, ಧಾರಾವಾಹಿ, ಸಿನಿಮಾಗಳಲ್ಲಿ ನೋಡಿದ್ದೇವೆ. ಇದೀಗ ಮತ್ತೊಮ್ಮೆ ಆ ಕಥೆಯನ್ನು ತೆರೆಗೆ ತರಲಾಗುತ್ತಿದೆ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅವರು ನಟಿಸುತ್ತಿದ್ದು ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ. ಮುಖ್ಯವಾಗಿ ರಾವಣನ ಪಾತ್ರವನ್ನು ‘ರಾಕಿಂಗ್ ಸ್ಟಾರ್’ ಯಶ್ ಅವರು ನಿರ್ವಹಿಸುತ್ತಿದ್ದು ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ರಾಮಾಯಣ’ ಚಿತ್ರವನ್ನು ನಿತೀಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಬಂಡವಾಳ ಹೂಡಿದ್ದು ಈ ಸಿನಿಮಾ ಸುಮಾರು 800 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣ ಆಗುತ್ತಿದೆ.ಎರಡು ಪಾರ್ಟ್ನಲ್ಲಿ ರಾಮಾಯಣ ಸಿನಿಮಾ ಸಿದ್ಧವಾಗುತ್ತಿದೆ. 2026ರ ದೀಪಾವಳಿ ಸಮಯಕ್ಕೆ ಮೊದಲ ಭಾಗ ಬಿಡುಗಡೆ ಆಗಲಿದೆ. 2027ರ ದೀಪಾವಳಿಗೆ 2ನೇ ಪಾರ್ಟ್ ತೆರೆಕಾಣಲಿದೆ.