ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Laapataa Ladies: ಆಸ್ಕರ್‌ಗೆ ನಾಮಿನೇಟ್‌ ಆಗಿದ್ದ ʻಲಾಪತಾ ಲೇಡಿಸ್ʼ ಅರೇಬಿಕ್‌ ಸಿನಿಮಾದ ಕಾಪಿನಾ? ಇಲ್ಲಿದೆ ನೋಡಿ ಸಾಕ್ಷಿ

Laapataa Ladies: 2019ರಲ್ಲಿ ತೆರೆಕಂಡ ಬುರ್ಖಾ ಸಿಟಿ ಎಂಬ ಅರೇಬಿಕ್ ಸಿನೆಮಾದ ಕಥೆಯೇ ಲಾಪತಾ ಲೇಡಿಸ್ ಚಿತ್ರದಲ್ಲೂ ಇದೆ ಎಂದು ಹೇಳಲಾಗುತ್ತಿದೆ. ಬುರ್ಖಾ ಸಿಟಿ ಕಿರುಚಿತ್ರವಾಗಿದ್ದು ಫ್ಯಾಬ್ರಿಸ್ ಬ್ರಾಕ್ ನಿರ್ಮಾಣ ಮಾಡಿದ್ದಾರೆ. ಕೇವಲ 19 ನಿಮಿಷಗಳಲ್ಲಿ ಈ ಕಿರು ಚಿತ್ರ ಮೂಡಿ ಬಂದರೂ ಈ ಚಿತ್ರದ ಅಷ್ಟು ಕಥೆಯು ಯಥಾವತ್ತು ಲಾಪತಾ ಲೇಡಿಸ್‌ನಲ್ಲೂ ಇದೆ ಎನ್ನಲಾಗಿದೆ.

ಕಥೆ ಕದ್ದ ಆರೋಪದ ಸುಳಿಯಲ್ಲಿ ʼಲಾಪತಾ ಲೇಡಿಸ್ʼ!

Profile Pushpa Kumari Apr 2, 2025 3:56 PM

ನವದೆಹಲಿ: ಬಾಲಿವುಡ್ ಫೇಮಸ್ ಸ್ಟಾರ್ ಆಮೀರ್ ಖಾನ್ ನಿರ್ಮಾಣದಲ್ಲಿ ಮೂಡಿ ಬಂದ ಲಾಪತಾ ಲೇಡಿಸ್ (Laapataa Ladies) ಸಿನಿಮಾದ  ಭಾವನಾತ್ಮಕ ಕಥೆ ಅನೇಕ ಪ್ರೇಕ್ಷಕರ ಮನಗೆದ್ದಿತ್ತು. ಹೀಗಾಗಿ ಸಿಂಪಲ್ ಕಥೆ ಎಳೆ ಹೊಂದಿದ್ದರೂ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಲ್ ಮಾಡಿದೆ. ಬಹುತೇಕ ಹೊಸ ನಟ ನಟಿಯರೇ ಈ ಸಿನಿಮಾದಲ್ಲಿ ಅಭಿನಯಿಸಿದ್ದೂ ಈ ಚಿತ್ರ ಆಸ್ಕರ್‌ಗೂ ನಾಮಿನೇಟ್‌ ಆಗಿತ್ತು. ಇಷ್ಟೆಲ್ಲಾ ಪ್ರಶಸ್ತಿ ಗಿಟ್ಟಿಸಿಕೊಂಡಿರುವ ಈ ಸಿನಿಮಾ ಇದೀಗ ಕಾಫಿ ರೈಟ್ ಆರೋಪದಲ್ಲಿ ಸಿಲುಕಿದೆ. ʼಲಾಪತಾ ಲೇಡಿಸ್ʻ ಸಿನಿಮಾದ ಕಥೆ  2019ರಲ್ಲಿ ತೆರೆಕಂಡ ಕಿರುಚಿತ್ರದ ಕಥೆಯನ್ನೇ ‌ಹೋಲುತ್ತದೆ ಎಂಬ ಸುದ್ದಿಯು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ಯಾವುದು ಆ ಸಿನಿಮಾ?

2019ರಲ್ಲಿ ತೆರೆಕಂಡ ಬುರ್ಖಾ ಸಿಟಿ ಎಂಬ ಅರೇಬಿಕ್ ಸಿನೆಮಾದ ಕಥೆಯೇ ಲಾಪತಾ ಲೇಡಿಸ್ ಚಿತ್ರದಲ್ಲೂ ಇದೆ ಎಂದು ಹೇಳಲಾಗುತ್ತಿದೆ. ಬುರ್ಖಾ ಸಿಟಿ ಕಿರುಚಿತ್ರವಾಗಿದ್ದು ಫ್ಯಾಬ್ರಿಸ್ ಬ್ರಾಕ್ ನಿರ್ಮಾಣ ಮಾಡಿದ್ದಾರೆ. ಕೇವಲ 19 ನಿಮಿಷಗಳಲ್ಲಿ ಈ ಕಿರು ಚಿತ್ರ ಮೂಡಿ ಬಂದರೂ ಈ ಚಿತ್ರದ ಅಷ್ಟು ಕಥೆಯು ಯಥಾವತ್ತು ಲಾಪತಾ ಲೇಡಿಸ್ ನಲ್ಲೂ ಇದೆ ಎನ್ನಲಾಗಿದೆ. ಬುರ್ಖಾ ಸಿಟಿ ಕಿರುಚಿತ್ರದಲ್ಲಿ ಬುರ್ಖಾ ಧರಿಸಿದ ಮಹಿಳೆ ಕಾಣೆಯಾಗಿ ಬೇರೆ ಮಹಿಳೆಯನ್ನು ನಾಯಕ ಮನೆಗೆ ಕರೆದುಕೊಂಡು ಬಂದಿರುತ್ತಾನೆ. ಸತ್ಯ ಗೊತ್ತಾದ ನಂತರ ಹುಡುಕಾಟದ ಪ್ರಯಾಣ ಆರಂಭವಾಗುತ್ತದೆ.‌ ಇನ್ನು ಲಾಪತಾ ಲೇಡೀಸ್ ತೆರೆಗೆ ಬಂದಾಗ ರವಿಕಿಶನ್ ಅವರ ಪಾತ್ರ ಗಮನ ಸೆಳೆದಿತ್ತು.‌ ರವಿಕಿಶನ್ ಅವರ ಪಾತ್ರವನ್ನೇ ಹೋಲುವಂತಹ ಪೊಲೀಸ್ ಪಾತ್ರ ಬುರ್ಖಾ ಸಿಟಿಯಲ್ಲಿ ಕೂಡ ಇದೆ ಎನ್ನಲಾಗಿದೆ. ಹೀಗಾಗಿ ಇದೇ ಕಥೆಯ ಮೂಲವನ್ನು ನಿರ್ಮಾಪಕ ಕಿರಣ್ ರಾವ್ ಕಾಪಿ ಮಾಡಿದ್ದಾರೆ. ಚಿತ್ರದ ಥೀಮ್ ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ಈ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: Laapataa Ladies: ಆಸ್ಕರ್‌ ಪ್ರ‍ಶಸ್ತಿ ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್

ಸೋಶಿಯಲ್ ಮೀಡಿಯಾದಲ್ಲಿ ‘ಬುರ್ಖಾ ಸಿಟಿ’ ಕಿರುಚಿತ್ರದ ತುಣುಕುಗಳನ್ನು ಶೇರ್ ಮಾಡಲಾಗುತ್ತಿದ್ದು ಇದರಲ್ಲಿನ ಕಥೆಯು ಲಾಪತಾ ಲೇಡೀಸ್’ ಚಿತ್ರಕ್ಕೆ ಹೋಲಿಕೆ ಆಗುತ್ತಿವೆ. ಕೃತಿ ಚೌರ್ಯದಂತಹ (ಕಾಪಿ ರೈಟ್) ಕೆಲಸಕ್ಕೆ ಕಿರಣ್ ರಾವ್ ಇಳಿಯುತ್ತಾರೆ ಎಂದು ನಿರೀಕ್ಷೆ ಮಾಡಿ ರಲಿಲ್ಲ ಎಂದು ಅನೇಕರ ಈ ಚಿತ್ರದ ಕಥೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಆದರೆ ಕಿರಣ್ ರಾವ್ ಈ ಕಥೆ ಕದ್ದ ಆರೋಪಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಮಿರ್ ಖಾನ್ ಕೂಡ ಈ ಬಗ್ಗೆ ಮೌನ ಮುರಿದಿದ್ದಾರೆ. ಲಾಪತಾ ಲೇಡಿಸ್ ಸಿನಿಮಾದಲ್ಲಿ ನಿತಾಂಶಿ ಗೋಯಲ್, ಸ್ಪರ್ಶ್ ಶ್ರೀವಾಸ್ತವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ರವಿ ಕಿಶನ್, ಗೀತಾ ಅಗರ್ವಾಲ್ ಶರ್ಮಾ, ಛಾಯಾ ಕದಮ್ ಅವರು ಸಹ ಈ ಸಿನೆಮಾದಲ್ಲಿ ನಟಿಸಿದ್ದಾರೆ. ಸದ್ಯ ಕಥೆ ಕದ್ದ ಆರೋಪದ ಬಗ್ಗೆ ಸಿನೆಮಾ ತಂಡ ಪ್ರತಿಕ್ರಿಯೆ ಏನು? ಎಂಬುದನ್ನು ಕಾದುನೋಡಬೇಕು.