Puneeth Rajkumar: ನಗುವಿನ ಒಡೆಯ ಅಪ್ಪು ಬಗ್ಗೆ ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವು
ಇಂದು ಪುನೀತ್ ಜನ್ಮದಿನ. ಅವರ ಅನುಪಸ್ಥಿತಿಯ ನಡುವೆಯೂ ಹಲವು ಸಾಮಾಜಿಕ ಕೆಲಸಗಳ ಮೂಲಕ ಅಭಿಮಾನಿಗಳು ನೆಚ್ಚಿನ ನಟನ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಪುನೀತ್ ಬಾಲ್ಯದಿಂದಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಅವರ ಬಗೆಗಿನ ಇನ್ನಷ್ಟು ಇಂಟ್ರಸ್ಟಿಂಗ್ ಫ್ಯಾಕ್ಟ್ಸ್ ಇಲ್ಲಿವೆ ಓದಿ.

ಪುನೀತ್ ರಾಜ್‌ಕುಮಾರ್

ಪುನೀತ್ ರಾಜ್‌ಕುಮಾರ್ (Puneeth Rajkumar).. ಈ ಹೆಸರು ಕೇಳಿದರೆ ಕನ್ನಡಿಗರಿಗೆ ರೋಮಾಂಚನವಾಗುತ್ತದೆ. ಅಭಿಮಾನಿಗಳಂತೂ (Fans) ಈ ಹೆಸರು ಕೇಳಿದ್ರೆ ಹೆಮ್ಮೆ ಪಡುತ್ತಾರೆ, ಭಾವುಕಾರಗುತ್ತಾರೆ. ಅಭಿನಯ (Acting), ಸಮಾಜಸೇವೆ (Social Service) ಮೂಲಕ ಚಿರಪರಿಚಿತರಾಗಿದ್ದ ಪವರ್ ಸ್ಟಾರ್ (Power Star), ತಮ್ಮ ಸರಳ ನಡೆನುಡಿ, ಸೌಜನ್ಯದ ನಡವಳಿಕೆಯಿಂದಲೂ ‘ಅಪ್ಪು’ (Appu) ಅಂತಾನೇ ಕರೆಸಿಕೊಂಡವರು. ಹೌದು ಸ್ಯಾಂಡಲ್‌ವುಡ್(Sandalwood) ನಲ್ಲಿ ಹೈವೋಲ್ಟೇಜ್ ಕರೆಂಟ್ ಆಗಿದ್ದವರು ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್. ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ.. ಎಲ್ಲರಿಂದ ಪ್ರೀತಿಯಿಂದ ಅಪ್ಪು ಅಂತ ಕರೆಯಿಸಿಕೊಳ್ಳುತ್ತಿದ್ದ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನೋತ್ಸವ ಇವತ್ತು..!
ಮಾರ್ಚ್ 17, 2022.. ಅಭಿಮಾನಿಗಳ ನೆಚ್ಚಿನ ಅಪ್ಪು ಇಂದು ನಮ್ಮೊಂದಿಗೆ ಇದ್ದಿದ್ದರೆ ತಮ್ಮ 50ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ದುರಾದೃಷ್ಟವಶಾತ್ ಪುನೀತ್ ರಾಜ್‌ಕುಮಾರ್ ಇಂದು ನಮ್ಮೊಂದಿಗೆ ಇಲ್ಲ. ದೈಹಿಕವಾಗಿ ಪುನೀತ್ ರಾಜ್‌ಕುಮಾರ್ ನಮ್ಮೊಂದಿಗೆ ಇಲ್ಲದಿದ್ದರೂ, ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ನಗುವಿನ ಒಡೆಯ ರಾಜಕುಮಾರ ಎಂದೆಂದಿಗೂ ಅಮರ. ಅದಕ್ಕೆ ಸಾಕ್ಷಿ ಇಂದು ಅವರ ಜನ್ಮದಿನವನ್ನು ಹಾಗೂ ಅವರ ‘ಅಪ್ಪು’ ಚಿತ್ರವನ್ನ ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡ ರೀತಿ..!
ಪುನೀತ್ ಕಂಡ್ರೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾ ವ್ಯಕ್ತಿಗಳಿಗೂ ಅಚ್ಚಮೆಚ್ಚು. ಅಂಥ ವ್ಯಕ್ತಿತ್ವ ಅಪ್ಪು ಅವರದ್ದು. ಅಷ್ಟು ದೊಡ್ಡ ಮನೆತನದಲ್ಲಿ ಜನಿಸಿ, ಸ್ಟಾರ್ ನಟನಾಗಿದ್ದರೂ ಯಾರನ್ನೇ ಆಗಲಿ ಒಂದಷ್ಟೂ ಹಮ್ಮು-ಬಿಮ್ಮು ತೋರದೆ ಮಾತನಾಡಿಸುತ್ತಿದ್ದರು. ಅವರಿದ್ದ ಕಡೆ ಒಂದು ರೀತಿಯ ಉತ್ಸಾಹ ಪುಟಿದೇಳುತ್ತಿತ್ತು. ಸ್ಯಾಂಡಲ್‌ವುಡ್‌ನ ನಟರಲ್ಲಿ ಅತ್ಯುತ್ತಮ ಡ್ಯಾನ್ಸರ್ ಎಂದು ಗುರುತಿಸಿಕೊಂಡವರು. ಇವರು ಬರೀ ನಟರಾಗಿಷ್ಟೇ ಅಲ್ಲ ನಿರೂಪಕರಾಗಿ, ಹಾಡುಗಾರರಾಗಿ, ಒಳ್ಳೆಯ ಡ್ಯಾನ್ಸರ್ ಹೀಗೆ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡವರು.
1975, ಮಾ 17ರಂದು ಜನಿಸಿದ ಪುನೀತ್ ರಾಜ್ ರಾಜ್ ಕುಟುಂಬದ ಕಿರಿಯ ಸದಸ್ಯನಾಗಿದ್ದ ಕಾರಣಕ್ಕೆ ಮನೆಯವರಿಗೆ ಅವರೆಂದರೆ ತುಸು ಪ್ರೀತಿ ಅಧಿಕ. ಅಕ್ಕಅಣ್ಣಂದಿರ ಮುದ್ದಿನ ತಮ್ಮನಾಗಿದ್ದ ಪುನೀತ್ ರಾಜ್‌ಕುಮಾರ್ ಬಾಲ ನಟನಾಗಿ ಚಿತ್ರರಂಗಕ್ಕೆ ಪರಿಚಯವಾದ ಬಳಿಕ ಕರ್ನಾಟಕದ ಮನೆ ಮಗನಾದರು. ಅವರ ನಟನೆಗೆ ಕರ್ನಾಟಕ ಮರಳಾಗಿತ್ತು. ನಂತರ ಅಪ್ಪು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ 'ಅಪ್ಪು' 49 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಪ್ರತಿಯೊಂದು ಚಿತ್ರವೂ ಹಿಟ್ ಲಿಸ್ಟ್‌ಗೆ ಸೇರಿದೆ. ಇಡೀ ಜೀವನ ಅಷ್ಟೇ ಸಿಂಪಲ್ ಆಗಿಯೇ ಜೀವಿಸಿದ ಅಪ್ಪು ಬಗೆಗಿನ ಇನ್ನಷ್ಟು ಇಂಟ್ರಸ್ಟಿಂಗ್ ಫ್ಯಾಕ್ಟ್ಸ್ ಇಲ್ಲಿವೆ ಓದಿ.
ಅಂಬೆಗಾಲಿಡುತ್ತಿರುವಾಗಲೇ ನಟನೆ
ಮಗುವಾಗಿದ್ದಾಗಲೇ ಸಿನಿಮಾದಲ್ಲಿ ಕಾಣಿಸಿದ್ದ ಪುನೀತ್ ಎಲ್ಲರಿಗೆ ಪುನೀತ್ ಬಾಲ ನಟನಾಗಿದ್ದರು ಎಂಬುವುದು ಗೊತ್ತು. ಆದರೆ ಅವರು ಅಂಬೆಗಾಲಿಡುತ್ತಿರುವಾಗಲ್ಲೇ ಅಂದರೆ 6 ತಿಂಗಳ ಮಗುವಾಗಿದ್ದಾಗಲೇ ಸ್ಕ್ರೀನ್ ಮೇಲೆ ಕಾಣಿಸಿದರು ಎಂಬುವುದು ಹೆಚ್ಚಿನವರಿಗೆ ಗೊತ್ತಿಲ್ಲ. 1976ರಲ್ಲಿ ಬಿಡುಗಡೆಯಾದ ಪ್ರೇಮದ ಕಾಣಿಕೆ ಚಿತ್ರದಲ್ಲಿ ಮಗುವಾಗಿದ್ದ ಪುನೀತ್ ಅವರನ್ನು ತೋರಿಸಲಾಗಿದೆ. ಅದರಲ್ಲಿ ಅವರ ತಂದೆ ವರನಟ ರಾಜ್‌ಕುಮಾರ್ ನಾಯಕ ಪಾತ್ರದಲ್ಲಿದ್ದರು. ಆ ಚಿತ್ರ ಬ್ಲಾಕ್‌ಬಸ್ಟರ್ ಆಗಿತ್ತು.
6 ವರ್ಷ ಇರುವಾಗಲೇ ಗಾಯನ
ಬೊಂಬೆ ಹೇಳತೈತೆ, ನಿನ್ನಿಂದಲೇ ಮುಂತಾದ ಹಾಡುಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರ ಮಧುರ ಧ್ವನಿ ಕೇಳಿದ್ದೇವೆ. ಆದರೆ ಅವರು 6 ವರ್ಷ ಇರುವಾಗಲೇ ಹಾಡು ಹಾಡಿದ್ದಾರೆ. ಅವರ ಮೊದಲ ಹಾಡು ಬಾನ ಧರೆಯಲ್ಲಿ ಸೂರ್ಯ ಹಾಡನ್ನು ಹಾಡಿದ್ದಾರೆ. ಭಾಗ್ಯವಂತ ಚಿತ್ರದಲ್ಲಿ ಈ ಹಾಡು ಇದೆ, ಈ ಚಿತ್ರ 1982ರಲ್ಲಿ ಬಿಡುಗಡೆಯಾಗಿತ್ತು.
ಅತ್ಯುತ್ತಮ ಬಾಲ ನಟ ಪ್ರಶಸ್ತಿ
ಕನ್ನಡ ಚಿತ್ರರಂಗ ಇತಿಹಾಸದಲ್ಲಿಯೇ ಮೊದಲ ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದವರು ಪುನೀತ್ ರಾಜ್‌ಕುಮಾರ್. 1982-83ರಲ್ಲಿ ಬಿಡುಗಡೆಯಾದ ಚಲಿಸುವ ಮೋಡಗಳು ಚಿತ್ರದಲ್ಲಿ ಇವರ ಅಭಿನಯಕ್ಕೆ ಆ ಪ್ರಶಸ್ತಿ ಲಭಿಸಿತು.'
Puneeth Rajkumar birthday: ಇಂದು ಪುನೀತ್ 50ನೇ ಜನ್ಮದಿನ, ಧ್ರುವ 369 ಸಿನಿಮಾ ಟೀಸರ್ ರಿಲೀಸ್
ಮಾಸ್ಟರ್ ಲೋಹಿತ್ ಅಪ್ಪು ಆಗಿದ್ದು ಹೇಗೆ...?
ಮಾಸ್ಟರ್ ಲೋಹಿತ್ಗೆ ಅಪ್ಪು ಅಂತ ಮುದ್ದಾಗಿ ಹೆಸರಿಟ್ಟಿದ್ದು ಡಾ.ರಾಜ್ ಕುಮಾರ್ ತಾಯಿ ಲಕ್ಷ್ಮಮ್ಮನವರು. ತಮ್ಮ ಮುದ್ದಿನ ಕೊನೆಯ ಮೊಮ್ಮಗನನ್ನ ಪ್ರೀತಿಯಿಂದ ಅಪ್ಪು ಅಂತ ಕರೀತಿದ್ರು. ಅದೇ ಹೆಸ್ರಿನಲ್ಲೇ ಮನೆಯಲ್ಲೂ ಎಲ್ರು ಕರೆಯೋಕೆ ಶುರು ಮಾಡಿದ್ರು. ಇದೇ ಹೆಸ್ರು ಅವರ ಪೂರ್ತಿ ಪ್ರಮಾಣದ ನಾಯಕನಾದ ಚಿತ್ರಕ್ಕೂ ಟೈಟಲ್ ಆಯ್ತು.
ಅಪ್ಪು ಹೆಸ್ರರನ್ನ ಮಾಸ್ಟರ್ ಲೋಹಿತ್ನಿಂದ ಮಾಸ್ಟರ್ ಪುನೀತ್ ಅಂತ ಬದಲಾಯಿಸಲಾಯ್ತು. ಸುಮಾರು 16 ಚಿತ್ರಗಳಲ್ಲಿ ಮಾಸ್ಟರ್ ಲೋಹಿತ್ ಹೆಸರಲ್ಲೇ ಕಾಣಿಸಿಕೊಂಡಿದ್ರು. ಆದ್ರೆ ಮಾರ್ಚ್ 16, 1985ರಲ್ಲಿ ಮಾಸ್ಟರ್ ಪುನೀತ್ ಅಂತ ಹೆಸರು ಬದಲಾವಣೆ ಮಾಡಲಾಯ್ತು. ಈ ಬಗ್ಗೆ ಅಧಿಕೃತವಾಗಿ ನಿಯಮದಂತೆ ಪೇಪರ್ನಲ್ಲಿ ಪ್ರಕಟಣೆ ಕೂಡ ನೀಡಲಾಗಿತ್ತು. ಈ ಮೂಲಕ ಅಪ್ಪು ಪುನೀತ್ ರಾಜ್ ಕುಮಾರ್ ಅಂತ ನಾಮಾಂಕಿತಗೊಂಡ್ರು.
ನ್ಯಾಷನಲ್ ಅವಾರ್ಡ್
1985ರಲ್ಲಿ ಬೆಟ್ಟದ ಹೂವು ಸಿನಿಮಾಗಾಗಿ ಅಪ್ಪು ನ್ಯಾಷನಲ್ ಅವಾರ್ಡ್ ಮೂಡಿಗೇರಿಸಿಕೊಂಡಿದ್ರು. ಬೆಟ್ಟದ ಹೂವು ಚಿತ್ರದಲ್ಲಿ ಮನೋಜ್ಞವಾಗಿ ನಟನೆ ಮಾಡಿ ಅತಿ ಚಿಕ್ಕವಯಸ್ಸಿನಲ್ಲೇ ಅವಾರ್ಡ್ ಪಡೆದುಕೊಂಡ ಕೀರ್ತಿ ಅಪ್ಪುಗೆ ಸಲ್ಲುತ್ತದೆ.