ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepika Padukone: ಸ್ಪಿರಿಟ್‌ ಚಿತ್ರತಂಡದಿಂದ ಹೊರಬಂದ ದೀಪಿಕಾ ಪಡುಕೋಣೆ ಬೆಂಬಲಕ್ಕೆ ನಿಂತ ಮಣಿರತ್ನಂ

ಬಾಲಿವುಡ್‌ ಖ್ಯಾತ ನಟಿ ದೀಪಿಕಾ ಪಡುಕೋಣೆ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸ್ಪಿರಿಟ್ ಚಿತ್ರದಿಂದ ಹಿಂದೆ ಸರಿದಿರುವ ವರದಿಗಳು ತೀವ್ರ ಚರ್ಚೆಗೆ ಕಾರಣವಾಗಿವೆ. ದೀಪಿಕಾ “ವೃತ್ತಿನಿಷ್ಠೆಗೆ ವಿರುದ್ಧವಾದ” ಬೇಡಿಕೆಗಳಾದ ದಿನಕ್ಕೆ 8 ಗಂಟೆ ಕೆಲಸ, 20 ಕೋಟಿ ರೂ. ಸಂಭಾವನೆ, ಲಾಭದ ಶೇಕಡಾವಾರು ಹಂಚಿಕೆ, ಮತ್ತು ತೆಲುಗು ಸಂಭಾಷಣೆ ನಿರಾಕರಣೆಯನ್ನು ಮಾಡಿದ್ದಾರೆ ಎಂದು ಅನಾಮಿಕ ಮೂಲಗಳು ಆರೋಪಿಸಿವೆ. ಈ ವಿವಾದದ ನಡುವೆ, ಖ್ಯಾತ ನಿರ್ದೇಶಕ ಮಣಿರತ್ನಂ ದೀಪಿಕಾರ ಬೇಡಿಕೆಗಳನ್ನು ಸಮರ್ಥಿಸಿದ್ದಾರೆ.

ದೀಪಿಕಾ ಪಡುಕೋಣೆ ಬೆಂಬಲಕ್ಕೆ ನಿಂತ ಮಣಿರತ್ನಂ

Profile Rakshita Karkera Jun 3, 2025 2:20 PM

ಮುಂಬೈ: ಬಾಲಿವುಡ್‌(Bollywood) ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone), ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನದ ಸ್ಪಿರಿಟ್ (Spirit Movie) ಚಿತ್ರದಿಂದ ಹಿಂದೆ ಸರಿದಿರುವ ವರದಿಗಳು ತೀವ್ರ ಚರ್ಚೆಗೆ ಕಾರಣವಾಗಿವೆ. ದೀಪಿಕಾ “ವೃತ್ತಿನಿಷ್ಠೆಗೆ ವಿರುದ್ಧವಾದ” ಬೇಡಿಕೆಗಳಾದ ದಿನಕ್ಕೆ 8 ಗಂಟೆ ಕೆಲಸ, 20 ಕೋಟಿ ರೂ. ಸಂಭಾವನೆ, ಲಾಭದ ಶೇಕಡಾವಾರು ಹಂಚಿಕೆ, ಮತ್ತು ತೆಲುಗು ಸಂಭಾಷಣೆ ನಿರಾಕರಣೆಯನ್ನು ಮಾಡಿದ್ದಾರೆ ಎಂದು ಅನಾಮಿಕ ಮೂಲಗಳು ಆರೋಪಿಸಿವೆ. ಈ ವಿವಾದದ ನಡುವೆ, ಖ್ಯಾತ ನಿರ್ದೇಶಕ ಮಣಿರತ್ನಂ ದೀಪಿಕಾರ ಬೇಡಿಕೆಗಳನ್ನು ಸಮರ್ಥಿಸಿದ್ದಾರೆ.

ಬೆಂಬಲಕ್ಕೆ ನಿಂತ ಮಣಿರತ್ನಂ

“ದೀಪಿಕಾರ ಬೇಡಿಕೆ ನ್ಯಾಯಸಮ್ಮತವಾದದ್ದು. ಆಕೆಯಂತಹ ಸ್ಥಾನದಲ್ಲಿರುವವರು ಇಂತಹ ಬೇಡಿಕೆ ಇಡುವುದು ಸಂತೋಷದ ವಿಷಯ. ನಿರ್ದೇಶಕರಾಗಿ, ಚಿತ್ರಕ್ಕೆ ನಟರನ್ನು ಆಯ್ಕೆ ಮಾಡುವಾಗ ಇದನ್ನು ಪರಿಗಣಿಸಬೇಕು. ಇದು ಅತಿಯಾದ ಬೇಡಿಕೆಯಲ್ಲ, ಬದಲಿಗೆ ಒಂದು ಅಗತ್ಯ. ಇದನ್ನು ಗೌರವಿಸಿ, ಅರ್ಥಮಾಡಿಕೊಂಡು ಕೆಲಸ ಮಾಡಬೇಕು” ಎಂದು ಮಣಿರತ್ನಂ ಹೇಳಿದ್ದಾರೆ.

ಅಜಯ್ ದೇವಗನ್‌ ಕಾಮೆಂಟ್

ಈ ವಿವಾದದ ಕುರಿತು ಪ್ರತಿಕ್ರಿಯಿಸಿದ ನಟ ಅಜಯ್ ದೇವಗನ್, “8 ಗಂಟೆ ಕೆಲಸದ ಬೇಡಿಕೆಗೆ ಜನರು ವಿರೋಧಿಸುತ್ತಿಲ್ಲ. ಪ್ರಾಮಾಣಿಕ ನಿರ್ದೇಶಕರಿಗೆ ಇದರಿಂದ ಯಾವುದೇ ತೊಂದರೆಯಿಲ್ಲ. ತಾಯಿಯಾಗಿರುವ ದೀಪಿಕಾ 8-9 ಗಂಟೆ ಕೆಲಸ ಮಾಡುವುದು ಸಾಮಾನ್ಯವಾಗಿದೆ. ಈಗ ಹೆಚ್ಚಿನ ಜನರು ಇಂತಹ ವೇಳಾಪಟ್ಟಿಯನ್ನು ಅನುಸರಿಸುತ್ತಿದ್ದಾರೆ” ಎಂದಿದ್ದಾರೆ.

ದೀಪಿಕಾರ ಪಾತ್ರ

ಸ್ಪಿರಿಟ್ ಚಿತ್ರದಲ್ಲಿ ದೀಪಿಕಾ, ಪ್ರಭಾಸ್ ಜೊತೆಗೆ ನಾಯಕಿಯಾಗಿ ನಟಿಸಬೇಕಿತ್ತು. ಇದು ಕಲ್ಕಿ 2898 AD ನಂತರ ಆಕೆಯ ಎರಡನೇ ತೆಲುಗು ಚಿತ್ರವಾಗಿತ್ತು. ಆದರೆ, ಆಕೆಯ ಬೇಡಿಕೆಗಳು ಈಡೇರದ ಕಾರಣ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ. ದೀಪಿಕಾ ಈ ಕುರಿತು ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತೃಪ್ತಿ ದಿಮ್ರಿ ಆಯ್ಕೆ

ದೀಪಿಕಾ ಹಿಂದೆ ಸರಿದ ಬಳಿಕ, ಸ್ಪಿರಿಟ್ ಚಿತ್ರದ ನಾಯಕಿಯಾಗಿ ತೃಪ್ತಿ ದಿಮ್ರಿಯನ್ನು ಆಯ್ಕೆ ಮಾಡಲಾಗಿದೆ ಎಂದು ಚಿತ್ರತಂಡ ಘೋಷಿಸಿದೆ. ಇದು ಅನಿಮಲ್ ಚಿತ್ರದ ನಂತರ ತೃಪ್ತಿ ಮತ್ತು ಸಂದೀಪ್ ರೆಡ್ಡಿ ವಂಗಾ ಜತೆಗಿನ ಎರಡನೇ ಚಿತ್ರವಾಗಿದೆ.

ವಂಗಾ ಆಕ್ಷೇಪ

ವಿವಾದದ ಬಳಿಕ, ವಂಗಾ ಎಕ್ಸ್‌ನಲ್ಲಿ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಯಾರನ್ನೂ ಹೆಸರಿಸದೆ, “ನಾನು ನಟರಿಗೆ ಕಥೆಯನ್ನು ಹೇಳಿದಾಗ 100% ವಿಶ್ವಾಸ ಇಡುತ್ತೇನೆ. ಒಂದು ಅಪ್ರಕಟಿತ ಒಪ್ಪಂದ (NDA) ನಮ್ಮ ನಡುವೆ ಇರುತ್ತದೆ. ಆದರೆ ಸ್ಕ್ರಿಪ್ಟ್ ಸೋರಿಕೆ ಮಾಡುವುದರಿಂದ ನೀವು ಯಾರೆಂಬುದನ್ನು ಬಹಿರಂಗಪಡಿಸಿದ್ದೀರಿ. ಯುವ ನಟಿಯನ್ನು ಕೆಳಗಿಳಿಸಿ ನನ್ನ ಕಥೆಯನ್ನು ಹೊರತೆಗೆಯುವುದೇನಾ? ಇದೇನಾ ನಿಮ್ಮ ಸ್ತ್ರೀವಾದ?” ಎಂದು ಬರೆದಿದ್ದಾರೆ.