ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

New Tungabhadra gate: ತುಂಗಭದ್ರೆ ಹೊಸ ಗೇಟ್‌ʼಗಳು ಇಂದು ಲೋಕಾರ್ಪಣೆ

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಜನರ ಜೀವನಾಡಿ, ತುಂಗಭದ್ರಾ ಜಲಾಶಯದ 33 ನೂತನ ಸ್ಪಿಲ್ ವೇ ಗೇಟ್‌ಗಳ ಲೋಕಾರ್ಪಣೆ ಗುರುವಾರ ನಡೆಯಲಿದೆ. ಐತಿಹಾಸಿಕ ಕ್ಷಣಕ್ಕೆ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಆಂಧ್ರಪ್ರದೇಶ, ತೆಲಂಗಾಣದ ಮುಖ್ಯಮಂತ್ರಿಗಳು ಸಾಕ್ಷಿಯಾಗ ಲಿದ್ದಾರೆ. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬಹುತೇಕ ಖಚಿತವಾಗಿದೆ.

ತುಂಗಭದ್ರೆ ಹೊಸ ಗೇಟ್‌ʼಗಳು ಇಂದು ಲೋಕಾರ್ಪಣೆ

-

Profile
Ashok Nayak Jun 25, 2026 6:00 AM

ಹೊಸಪೇಟೆಯಲ್ಲಿ ಡಿಕೆಶಿ, ಚಂದ್ರಬಾಬು, ರೇವಂತ್ ಸೇರಿ ಮೂವರು ಸಿಎಂಗಳಿಂದ ಗೇಟ್‌ಗಳಿಗೆ ಪೂಜೆ

ಕೊಪ್ಪಳ: ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಜನರ ಜೀವನಾಡಿ, ತುಂಗಭದ್ರಾ ಜಲಾಶಯದ 33 ನೂತನ ಸ್ಪಿಲ್ ವೇ ಗೇಟ್‌ಗಳ ಲೋಕಾರ್ಪಣೆ ಗುರುವಾರ ನಡೆಯಲಿದೆ.

ಐತಿಹಾಸಿಕ ಕ್ಷಣಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಆಂಧ್ರಪ್ರದೇಶ, ತೆಲಂಗಾಣದ ಮುಖ್ಯಮಂತ್ರಿಗಳು ಸಾಕ್ಷಿಯಾಗಲಿದ್ದಾರೆ. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬಹುತೇಕ ಖಚಿತ ವಾಗಿದೆ. ಇಬ್ಬರೂ ಹೆಲಿಕಾಪ್ಟರ್ ಮೂಲಕ ಮುನಿರಾಬಾದ್ ಸಮೀಪದ ಐಆರ್‌ಬಿ ಬೆಟಾಲಿ ಯನ್ ಆವರಣದಲ್ಲಿ ನಿರ್ಮಿಸಲಾದ ಹೆಲಿಪ್ಯಾಡ್ʼಗೆ ಬಂದಿಳಿಯಲಿದ್ದಾರೆ.

ಇನ್ನೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಬೆಂಗ ಳೂರಿನಿಂದ ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಐಆರ್‌ಬಿ ಆವರಣಕ್ಕೆ ಬರಲಿದ್ದಾರೆ.

ಇದನ್ನೂ ಓದಿ: Tungabhadra Dam Crest Gates: ಮೇ 15ರಂದು ತುಂಗಭದ್ರಾ ಅಣೆಕಟ್ಟು ಹೊಸ ಗೇಟ್‌ಗಳ ಉದ್ಘಾಟನೆ: ಡಿಸಿಎಂ ಡಿ.ಕೆ. ಶಿವಕುಮಾರ್

ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ವೇದಿಕೆ ಸಿದ್ಧತೆ ಕಾರ್ಯ ಬಹುತೇಕ ಪೂರ್ಣ ಗೊಂಡಿದ್ದು,ಕೊನೆಯ ಕ್ಷಣದ ತಯಾರಿ ನಡೆದಿತ್ತು.

ಏನಿದು ಸ್ಪಿಲ್ ವೇ ಗೇಟ್?

ಒಟ್ಟು 133 ಟಿಎಂಸಿ ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಜಲಾಶಯ ಅಖಂಡ ಆಂಧ್ರಪ್ರದೇಶ- ಕರ್ನಾಟಕದ ರಾಜ್ಯದ ರೈತರ ಜೀವನಾಡಿ. ಸದ್ಯ ಮೂರು ರಾಜ್ಯಗಳ ಸುಮಾರು 6 ಜಿಲ್ಲೆಯ ನೀರಾವರಿ ಮತ್ತು ಕುಡಿವ ನೀರಿನ ಯೋಜನೆಗೆ ನೀರು ಒದಗಿಸುತ್ತದೆ. ಕಳೆದ 75 ವರ್ಷದ ಹಿಂದೆ ತುಂಗಭದ್ರಾ ಅಣೆಕಟ್ಟು ಲೋಕಾರ್ಪಣೆ ಆಗಿತ್ತು. ಅದಕ್ಕೆ ಬರೋಬ್ಬರಿ 33 ಸ್ಪಿಲ್ ವೇ ಗೇಟ್‌ಗಳನ್ನು ಅಳವಡಿಸಲಾಗಿತ್ತು. ಅಣೆಕಟ್ಟಿನಲ್ಲಿ ನೀರನ್ನು ತಡೆದಿಟ್ಟುಕೊಂಡು, ಅದು ಅಪಾಯದ ಮಟ್ಟ ಹರಿದಾಗ, ಸುರಕ್ಷಿತವಾಗಿ ಹೊರಹರಿಯುವಂತೆ ತೆರೆದುಕೊಳ್ಳುವುದು ಈ ಸ್ಪಿಲ್ ವೇ ಗೇಟ್‌ಗಳು. ಇಂತಹ ಸ್ಪಿಲ್ ವೇ ಗೇಟ್‌ಗಳ ಪೈಕಿ 19ನೇ ಗೇಟ್ ಕಳೆದ 2024ರ ನವೆಂಬರ್‌ನಲ್ಲಿ ಕೊಚ್ಚಿ ಹೋಗಿತ್ತು.

ಈ ವೇಳೆ ಜಲಾಶಯಕ್ಕೆ ಭೇಟಿ ನೀಡಿದ್ದ ತಜ್ಞರ ತಂಡ, ಕೂಡಲೇ ಜಲಾಶಯದ ಎಲ್ಲ ಸ್ಪಿಲ್ ವೇ ಗೇಟ್‌ಗಳ ಬದಲಾವಣೆ ಮಾಡಬೇಕು ಎಂದು ಸಲಹೆ ನೀಡಿದ್ದರು. ಇಲ್ಲವಾದರೆ ಇಡೀ ಜಲಾಶಯಕ್ಕೆ ಆಪತ್ತು ಬರಬಹುದು ಎಂದು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ತುರ್ತಾಗಿ ಜಲಾಶಯದ ಗೇಟ್ ಬದಲಾಯಿಸಿ, ಕ್ರೆಸ್ಟ್ ಗೇಟ್ ಅಳವಡಿಸಿತ್ತು. ಇದೀಗ 53 ಕೋಟಿ ರು. ವೆಚ್ಚದಲ್ಲಿ ನೂತನ ಸ್ಪಿಲ್ ವೇ ಗೇಟ್‌ಗಳನ್ನು ಅಳವಡಿಸಿದೆ.

ನವಲಿ ಜಲಾಶಯ ನಿರ್ಮಾಣಕ್ಕಾಗಿ ಸಿಎಂಗಳ ಸಭೆ?

ಕರ್ನಾಟಕ ಸರಕಾರದ ಯೋಜನೆಯಂತೆ ಸ್ಪಿಲ್ ವೇ ಗೇಟ್‌ಗಳ ಲೋಕಾರ್ಪಣೆ ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಅನಂತರ ಮೂರು ರಾಜ್ಯಗಳ ಸಿಎಂಗಳ ಸಭೆ ನಡೆಯಲಿದೆ. ಸದ್ಯ ತುಂಗಭದ್ರಾ ಜಲಾಶಯದಲ್ಲಿ ಸುಮಾರು 30 ಟಿಎಂಸಿ ಹೂಳು ತುಂಬಿದೆ. ಈ ನೀರಿನ ಸಮರ್ಪಕ ಬಳಕೆಗೆ ಕನಕಗಿರಿ ತಾಲೂಕು ನವಲಿ ಗ್ರಾಮದ ಸಮೀಪ ಸಮಾನಾಂತರ ಜಲಾಶಯ ನಿರ್ಮಿಸುವ ಯೋಜನೆ ಕರ್ನಾಟಕ ಸರಕಾರ ಮುಂದಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಬೇಕು ಎನ್ನುವುದು ಕರ್ನಾಟಕ ಸರಕಾರದ ಇರಾದೆ. ಈ ಕಾರಣಕ್ಕೆ ವೇದಿಕೆ ಕಾರ್ಯಕ್ರಮದ ನಂತರ ಮುನಿರಾಬಾದ್ ಇಂಡಿಯನ್ ರಿಸರ್ವ್ ಬೆಟಾಲಿಯನ್‌ನ ಸಭಾಂಗಣದಲ್ಲಿ ಸಭೆಯನ್ನು ಆಯೋಜಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನವಲಿ ಸಮಾನಾಂತರ ಜಲಾಶಯ ನಿರ್ಮಾಣದ ಯೋಜನೆಗೆ ಮುಂದಡಿ ಸಿಗಲಿದೆ.