ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Met Gala 2025: ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಶಾರುಖ್‌ಗಾಗಿ ಕಾದು ಕುಳಿತ ಪಾಕಿಸ್ತಾನಿ ಅಭಿಮಾನಿ; ವಿಡಿಯೊ ಇಲ್ಲಿದೆ

ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಬಾಲಿವುಡ್ ನ ಖ್ಯಾತ ನಟ ಶಾರುಖ್ ಖಾನ್ ಇದೇ ಮೊದಲ ಬಾರಿಗೆ ಆಗಮಿಸಿದ್ದು, ಭಾರತದಿಂದ ಮೆಟ್​ ಗಾಲಾದಲ್ಲಿ ಭಾಗಿಯಾದ ಮೊದಲ ನಟ ಎಂಬ ಖ್ಯಾತಿ ಇವರಿಗೆ ಲಭಿಸಿದೆ. ನಟ ಶಾರುಖ್ ಖಾನ್ ಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದು ನ್ಯೂಯಾರ್ಕ್ ಕಾರ್ಯಕ್ರಮದಲ್ಲಿಯೂ ಪಾಕಿಸ್ತಾನಿ ಮಹಿಳಾ ಅಭಿಮಾನಿಯೊಬ್ಬರು ಶಾರುಖ್ ಖಾನ್ ಆಗಮನಕ್ಕಾಗಿ ಕಾಯುತ್ತಿರುವ ವಿಡಿಯೋ ಒಂದು ಇತ್ತೀಚೆಗಷ್ಟೆ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.

ಶಾರುಖ್‌ಗಾಗಿ ಕಾದ ಪಾಕಿಸ್ತಾನಿ ಅಭಿಮಾನಿ; ವಿಡಿಯೊ ಇದೆ

Profile Pushpa Kumari May 8, 2025 3:18 PM

ನವದೆಹಲಿ: ವಿಶ್ವದ ಅತ್ಯಂತ ಪ್ರತಿಷ್ಠಿತ ಫ್ಯಾಷನ್ ಶೋ ಮೆಟ್ ಗಾಲಾ ಕಾರ್ಯಕ್ರಮವು ಈಗಾಗಲೇ ಅದ್ದೂರಿಯಾಗಿ ನಡೆದಿದೆ. ಈ ಶೋಗೆ ಬಾಲಿವುಡ್ , ಹಾಲಿವುಡ್ ನ ತಾರಾಗಣದ ಸಂಗಮವಾಗಿದೆ. ಖ್ಯಾತ ನಟ ನಟಿ ಯರು, ಸೆಲೆಬ್ರಿಟಿಗಳು ಮೆಟ್ ಗಾಲಾ ಕಾರ್ಯಕ್ರಮದಲ್ಲಿ ವಿಭಿನ್ನವಾದ ಉಡುಗೆ ತೊಟ್ಟು ಕಾರ್ಯಕ್ರಮದ ಮೆರುಗು ಹೆಚ್ಚಿಸಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಬಾಲಿವುಡ್ ನ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ಇದೇ ಮೊದಲ ಬಾರಿಗೆ ಆಗಮಿಸಿದ್ದು ಭಾರತದಿಂದ ಮೆಟ್​ ಗಾಲಾದಲ್ಲಿ ಭಾಗಿಯಾದ ಮೊದಲ ನಟ ಎಂಬ ಖ್ಯಾತಿ ಇವರಿಗೆ ಲಭಿಸಿದೆ. ನಟ ಶಾರುಖ್ ಖಾನ್ ಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದು ನ್ಯೂಯಾರ್ಕ್ ಕಾರ್ಯಕ್ರಮದಲ್ಲಿಯೂ ಪಾಕಿ ಸ್ತಾನಿ ಮಹಿಳಾ ಅಭಿಮಾನಿಯೊಬ್ಬರು ಶಾರುಖ್ ಖಾನ್ ಆಗಮನಕ್ಕಾಗಿ ಕಾಯುತ್ತಿರುವ ವಿಡಿಯೋ ಒಂದು ಇತ್ತೀಚೆಗಷ್ಟೆ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.

ಮೆಟ್ ಗಾಲಾ 2025ರ ಕಾರ್ಯಕ್ರಮಕ್ಕಾಗಿ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ನ್ಯೂಯಾರ್ಕ್ ಪ್ರತಿಷ್ಠಿತ ಹೊಟೇಲ್ ಒಂದರಲ್ಲಿ ತಂಗಿದ್ದಾರೆ. ಮೆಟ್ ಗಾಲಾ ಕಾರ್ಯಕ್ರಮ ಮುಗಿಸಿ ಹೋಗುತ್ತಿದ್ದಂತೆ ನಟ ಶಾರುಖ್ ಖಾನ್ ಅವರನ್ನು ಕಾಣಲು ಅಭಿಮಾನಿಗಳು ಕಾತುರರಾಗಿದ್ದರು.ಈ ಸಂದರ್ಭ ಪಾಕಿಸ್ತಾನ ಮೂಲದ ಮಹಿಳೆಯೊಬ್ಬರು ಶಾರುಖ್ ಖಾನ್ ಗಾಗಿ ನ್ಯೂಯಾರ್ಕ್ ಹೊಟೇಲ್ ಹೊರಾಂಗಣದಲ್ಲಿ ಕಾಯುತ್ತಿದ್ದು ತನ್ನ ಮೆಚ್ಚಿನ ಸ್ಟಾರ್ ನಟನನ್ನು ಕಣ್ಣಾರೆ ಕಂಡ ಖುಷಿಯ ಕ್ಷಣದ ವಿಡಿಯೋವನ್ನು ಕೂಡ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಿಂಗ್‌ ಖಾನ್‌ ಅಭಿಮಾನಿಯ ವಿಡಿಯೊ ಇಲ್ಲಿದೆ

ಪಾಕಿಸ್ತಾನಿ ಮಹಿಳೆ ಸೆಹ್ರೀಶ್ ಗೆ ಬಾಲ್ಯದಿಂದಲೂ ಶಾರುಖ್ ಖಾನ್ ಎಂದರೆ ಅಚ್ಚುಮೆಚ್ಚಿನ ನಟನಂತೆ. ಆದರೆ ಇದುವರೆಗೂ ನಟನನ್ನು ನೇರವಾಗಿ ಭೇಟಿ ಆಗಲು ಸಾಧ್ಯವಾಗಿಲ್ಲ. ಆಕೆ ಕೂಡ ನ್ಯೂಯಾರ್ಕ್ ಗೆ ಬಂದಿದ್ದು ಹೇಗಾದರೂ ಮಾಡಿ ತನ್ನ ನೆಚ್ಚಿನ ನಟನನ್ನು ನೋಡಬೇಕು ಎಂದು ನ್ಯೂಯಾರ್ಕ್ ಹೊಟೇಲ್ ಹೊರಗಡೆ ಕಾದಿದ್ದಾರೆ. ಶಾರುಖ್ ಖಾನ್ ಅವರನ್ನು ನ್ಯೂಯಾರ್ಕ್‌ ನಲ್ಲಿ ಕಾಣುವ ಬಗ್ಗೆ ವಿಶೇಷ ‌ಕ್ಯಾಪ್ಶನ್ ಬರೆದುಕೊಂಡು ಮಹಿಳೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನು ಓದಿ:Kannada New Movie: ವಿನಯ್ ವಾಸುದೇವ್ ನಿರ್ದೇಶಿಸಿ, ನಟಿಸಿರುವ ʼದಿʼ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಅಸ್ತು

ನ್ಯೂಯಾರ್ಕ್ ಹೊಟೇಲ್ ಹೊರಗೆ ಅಭಿಮಾನಿಗಳು ಶಾರುಖಾನ್ ಆಗಿ ಕಾಯುತ್ತಿದ್ದು ಅವರ ಜೊತೆ ಪಾಕಿಸ್ತಾನದ ಮಹಿಳೆ ಕೂಡ ಭಾಗಿಯಾಗಿದ್ದರು. ಶಾರುಖ್ ಖಾನ್ ಹೋಟೆಲ್ ನಿಂದ ಹೊರ ಆಗಮಿಸುತ್ತಿದ್ದಂತೆ ಈ ಮಹಿಳೆ ತನ್ನ ನೆಚ್ಚಿನ ನಟನನ್ನು ಕಂಡ ಖುಷಿಯ ವಿಚಾರವನ್ನು ವಿಡಿಯೊ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಹಂಚಿ ಕೊಂಡಿದ್ದಾರೆ. ಈ ವೀಡಿಯೊ 2.7 ಮಿಲಿಯನ್ ವೀಕ್ಷಣೆಗಳಿದ್ದು ಈ ಬಗ್ಗೆ ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆ ಗೈಯುತ್ತಿದ್ದಾರೆ. ಶಾರುಖಾನ್ ಗೆ ವಿಶ್ವಾ ದ್ಯಂತ ಅಭಿಮಾನಿಗಳು ಇದ್ದಾರೆ ಎನ್ನಲು ಈ ವಿಡಿಯೊ ಒಂದು ಬೆಸ್ಟ್ ಉದಾಹರಣೆ ಎಂದರೆ ತಪ್ಪಾಗದು.