Jogi Prem: ನನ್ನ ಉದ್ದೇಶ ಅದಾಗಿರಲಿಲ್ಲ, ನೋರಾ ಮಾತಾಡಿದ್ದು ಸರಿಯಲ್ಲ; ಜೋಗಿ ಪ್ರೇಮ್
KD movie: ಜೋಗಿ ಪ್ರೇಮ್ ಅವರ ʻಕೆಡಿʼ ಚಿತ್ರದ ಐಟಂ ಸಾಂಗ್ ವಿವಾದ ಸದ್ಯಕ್ಕಂತೂ ನಿಲ್ಲುವಂತೆ ಕಾಣುತ್ತಿಲ್ಲ. ಈಗಾಗಲೇ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಇದೆ ಎಂದು ಹಿಂದಿ ವರ್ಷನ್ ಅನ್ನು ತೆಗೆದು ಹಾಕಲಾಗಿದೆ. ಆದರೂ ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನ ಕುರಿತ ಚರ್ಚೆಗೆ ಬ್ರೇಕ್ ಬಿದ್ದಿಲ್ಲ. ಅತ್ತ ಹಾಡಿನಲ್ಲಿ ಡ್ಯಾನ್ಸ್ ಮಾಡಿರುವ ನೋರಾ ಫತೇಹಿ ಕೂಡ ಪ್ರೇಮ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಾಡನ್ನು ನಿಷೇಧ ಮಾಡಿರುವುದಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಹೇಳಿದ್ದಾರೆ. ಇದೀಗ ಹಾಡು ಬರೆದ ಪ್ರೇಮ್ ಸಾಮಾಜಿಕ ಜಾಲತಾಣದ ಮೂಲಕ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಜೋಗಿ ಪ್ರೇಮ್ -
ಜೋಗಿ ಪ್ರೇಮ್ (Jogi Prem) ಅವರ ʻಕೆಡಿʼ ಚಿತ್ರದ ಐಟಂ ಸಾಂಗ್ ವಿವಾದ ಸದ್ಯಕ್ಕಂತೂ ನಿಲ್ಲುವಂತೆ ಕಾಣುತ್ತಿಲ್ಲ. ಈಗಾಗಲೇ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಇದೆ ಎಂದು ಹಿಂದಿ ವರ್ಷನ್ ಅನ್ನು ತೆಗೆದು ಹಾಕಲಾಗಿದೆ. ಆದರೂ ಸಾಮಾಜಿಕ ಜಾಲತಾಣದಲ್ಲಿ (Social Media) ಈ ಹಾಡಿನ ಕುರಿತ ಚರ್ಚೆಗೆ ಬ್ರೇಕ್ ಬಿದ್ದಿಲ್ಲ. ಅತ್ತ ಹಾಡಿನಲ್ಲಿ ಡ್ಯಾನ್ಸ್ ಮಾಡಿರುವ ನೋರಾ ಫತೇಹಿ ಕೂಡ ಪ್ರೇಮ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಾಡನ್ನು ನಿಷೇಧ ಮಾಡಿರುವುದಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಹೇಳಿದ್ದಾರೆ. ಇದೀಗ ಹಾಡು ಬರೆದ ಪ್ರೇಮ್ (Prem) ಸಾಮಾಜಿಕ ಜಾಲತಾಣದ ಮೂಲಕ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಚಿರಋಣಿ
ಪ್ರೇಮ್ ಮಾತನಾಡಿ, ʻಯಾವುದೇ ಉದ್ದೇಶದಿಂದ ಏನೂ ಮಾಡಿಲ್ಲ. ಈ ಥರ ಮಾಡಲೇ ಬೇಕು ಅಂತ ಯಾರೂ ತಪ್ಪು ಮಾಡಲ್ಲ. ಪ್ರತಿ ಸಿನಿಮಾದಲ್ಲಿಯೂ ಸಾಲುಗಳನ್ನು ಬರೆದಿದ್ದೀನಿ. ದೇವರದ್ದು ಬರೆದಿದ್ದೀನಿ. ಲವ್, ಅಣ್ಣತಮ್ಮ ಬಗ್ಗೆ ಹೀಗೆ ಅನೇಕ ವಿಚಾರಗಳ ಬಗ್ಗೆ ಹಾಡು ಬರೆದಿರುವೆ. ಎಲ್ಲ ನನ್ನ ಸಾಂಗ್‌ಗಳನ್ನು ಪ್ರೋತ್ಸಾಹಿಸಿ ಕೇಳಿ ಇಲ್ಲಿ ತನಕ ಕರೆತಂದಿದ್ದೀರಿ. ಪ್ರೇಮ್ ಸಾಂಗ್ ಅಂತ ಅಂದರೆ ಕಾಯುತ್ತ ತುಂಬಾ ಇಷ್ಟ ಪಡ್ತಾ ಇದ್ರಿ. ಅದಕ್ಕೆ ನಾನು ಚಿರಋಣಿ. ಆದರೆ ಈ ಸಾಂಗ್‌ವನ್ನು ಬಾಟೆಲ್, ಉಪ್ಪಿನ ಕಾಯಿ ಇಟ್ಟುಕೊಂಡು ಬರೆದೆʼ.
ಬಾಟಲ್ನ ಮೇಲೆತ್ತಿ ಎಂದು ಬರೆಯಬೇಕಿತ್ತು ಆದರೆ ಆ ಬಾಟಲಿ ಪದವನ್ನು ನಾನು ಕೊನೆಯಲ್ಲಿ ಬಳಸಿದೆ. ಹಾಡಿನಲ್ಲಿ ಕುತೂಹಲ ಇರಲಿ ಎಂಬ ಕಾರಣಕ್ಕೆ ಹಾಗೆ ಮಾಡಿದೆ. ಆದರೆ ಜನ ಅದನ್ನು ಬೇರೆಯದ್ದೇ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ. ಕೆಲವರು ನನ್ನ ವಿರುದ್ಧ ಕಾಲೆಳೆಯಲು, ಹೀಗಳೆಯಲು ಈ ಸಮಯವನ್ನು ಬಳಸಿಕೊಳ್ಳುತ್ತಿದ್ದಾರೆ. ಲೈಕು, ಕಮೆಂಟಿಗಾಗಿ ವಿಡಿಯೋ ಮಾಡುತ್ತಿದ್ದಾರೆ, ಅವರಿಗೆ ಒಳ್ಳೆಯದಾಗಲಿ’ ಎಂದಿದ್ದಾರೆ ಪ್ರೇಮ್.
ಇದನ್ನೂ ಓದಿ: Nora Fatehi: ಪ್ರೇಮ್ಗೆ ಆ ದಿನವೇ ಹೇಳಿದ್ದೆ! ತಿರುಗಿಬಿದ್ದ ನೋರಾ ಫತೇಹಿ
ಬೇಸರ ಆಗಿದ್ದರೆ ಕ್ಷಮೆ ಕೇಳುವೆ
ಆದರೆ ಯಾರನ್ನೂ ನೋವು ಮಾಡುವ ಉದ್ದೇಶ ನನಗಿರಲಿಲ್ಲ. ಯಾವ ಉದ್ದೇಶಕ್ಕೂ ನಾನು ಹೀಗೆ ಮಾಡುವುನಲ್ಲ.
ಆದರೆ ಹಾಡು ಕೇಳಿದ ಕೆಲವರಿಗೆ ಹರ್ಟ್ ಆಗಿರಬಹುದು, ಪ್ರೇಮ್ ಹೀಗೆ ಮಾಡಿದ್ದಾರಾ? ಪ್ರೇಮ್ ಈ ಥರಾನ? ಅನಿಸಿರಬಹುದು. ಸಾಹಿತಿ ಆದ ಮೇಲೆ ಎಲ್ಲ ರೀತಿಯಲ್ಲಿಯೂ ಬರೆಯಬೇಕಾಗುತ್ತದೆ. ಆದರೆ ನಾನು ಅಶ್ಲೀಲ ಅರ್ಥದಲ್ಲಿ ಬರೆದಿಲ್ಲ. ನನ್ನಿಂದ ಬೇಸರ ಆಗಿದ್ದರೆ ಕ್ಷಮೆ ಕೇಳುವೆ. ಹಾಡನ್ನು ರೀರೈಟ್ ಮಾಡುವೆ, ಬೇರೆ ರೀತಿ ಬರೆದು ಮತ್ತೆ ಅಪ್‌ಲೋಡ್ ಮಾಡುತ್ತೀವಿ, ನಿಮಗೆ ಹರ್ಟ್ ಮಾಡಲು ಇಷ್ಟವಿಲ್ಲ’ ಎಂದಿದ್ದಾರೆ ಪ್ರೇಮ್.
ಅವರು ಸಮಜಾಯಿಷಿಕೊಳ್ಳಲಿಲ್ಲ
ಯಾರು ಯಾರಿಗೇ ನನ್ನ ಕಾಲು ಎಳೆಯಬೇಕು, ಕೀಳಾಗಿ ಮಾತನಾಡಬೇಕು ಅನ್ನೋರಿಗೆಲ್ಲ ಧನ್ಯವಾದ. ಆ ಥರ ಕಾಲು ಏಳೆಯೋರಿಗೆ ದೇವರು ಒಳ್ಳೆಯದು ಮಾಡಲಿ, ಚೆನ್ನಾಗಿ ಇಟ್ಟರಲಿ. ಹಿಂದಿ ಸಾಂಗ್ ವಿಚಾರಕ್ಕೆ ಬರೋದಾದರೆ ಕೆಲವು ಪದ ನನಗೆ ಗೊತ್ತು.
ಕೆಲವು ಜಾಸ್ತಿ ಪದಗಳು ನನಗೆ ಗೊತ್ತಿಲ್ಲ. ಆದರೆ ಭಾಷೆ ಸಮಸ್ಯೆಯಿಂದ ನಾನು ಪ್ರಶ್ನೆ ಮಾಡಲಿಲ್ಲ. ಆದರೆ ಹಿಂದಿ ಹಾಡು ಬರೆದಿರುವ ರತಿ ಬಾಲಮ್ ಅವರು ಎಲ್ಲ ತಪ್ಪನ್ನು ನನ್ನ ಮೇಲೆ ಹೊರಿಸಿದ್ದಾರೆ. ಅಸಲಿಗೆ ನನ್ನ ಹಿಂದಿನ ಹಿಟ್ ಹಾಡುಗಳನ್ನು ಕನ್ನಡದಿಂದ ಹಿಂದಿಗೆ ಬರೆದಿದ್ದು ಅವರೇ. ಆದರೆ ಅವರು ಸಮಜಾಯಿಷಿಕೊಳ್ಳಲಿಲ್ಲ, ಎಲ್ಲ ತಪ್ಪು ನನ್ನ ಮೇಲೆ ಹಾಕಿದರು, ಬಹುಷಃ ಭಯಪಟ್ಟು ನನ್ನ ಮೇಲೆ ಆಗಲಿ ಪ್ರೊಡಕ್ಷನ್ ಮೇಲೆ ಆಗಲಿ ಹಾಕಿದ್ದಾರೆ’ ಎಂದಿದ್ದಾರೆ ಪ್ರೇಮ್.
ನೋರಾ ಕೂಡ ಮಾತನಾಡಿದ್ದು, ತುಂಬಾ ತಪ್ಪು
ಇನ್ನು ನೋರಾ ಕೂಡ ಮಾತನಾಡಿದ್ದು, ತುಂಬಾ ತಪ್ಪು. ಯಾವುದೇ ಕಲಾವಿದ ಆಗಲಿ ಸಾಂಗ್ ಮಾಡುವಾಗ ಸಾಹಿತ್ಯ ಕೇಳ್ತಾರೆ, ಸಾಂಗ್ ಕೇಳ್ತಾರೆ. ಅವರ ಎಕ್ಸ್‌ಪ್ರೆಷನ್ ಸಾಹಿತ್ಯ ಕೇಳದೇ ಬರುತ್ತಾ? ಇನ್ನು ಮೊನ್ನೆ ಕಾರ್ಯಕ್ರಮದ ವೇಳೆ ಅವರು ನನ್ನ ಜೊತೆ ಕೆಲಸ ಮಾಡಿದ್ದಕ್ಕೆ ಖುಷಿ ಎಂದು ಹೇಳಿದ್ದರು. ಆದರೆ ಈಗ ವಿವಾದ ಆಗ್ತಿದ್ದಂರತೆ ಅವರೂ ನೊಂದು ಇರಬೇಕು.
ಇದನ್ನೂ ಓದಿ: Jogi Prem: ಪಾರ್ಲಿಮೆಂಟ್ ತಲುಪಿದ ʻಕೆಡಿʼ ಸಿನಿಮಾ ಹಾಡಿನ ವಿವಾದ; ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಏನಂದ್ರು ನೋಡಿ!
ಅದಕ್ಕೆ ಹೀಗೆ ಹೇಳಿರಬಹುದು. ಈ ಸಾಂಗ್‌ನ್ನ ಮತ್ತೆ ರೀ ರೈಟ್ ಮಾಡಿ, ಮತ್ತೆ ಯಾರಿಗೂ ಹರ್ಟ್ ಆಗದ ಹಾಗೇ ಅಪ್‌ಲೋಡ್ ಮಾಡ್ತೀನಿ. ಯಾರಿಗಾದರೂ ನೋವಾಗಿದ್ದರೆ ನನ್ನ ಕಡೆಯಿಂದ ಕ್ಷಮೆ ಇರಲಿ ಎಂದಿದ್ದಾರೆ.