Pawan Kalyan Movie: ಪವನ್ ಕಲ್ಯಾಣ್ ನಟನೆಯ 'ಒಜಿ'ಗೆ ಸಖತ್ ರೆಸ್ಪಾನ್ಸ್- ಸಿನಿಮಾ ನೋಡಿ ಪ್ರಶಾಂತ್ ನೀಲ್ ಫುಲ್ ಖುಷ್!
Prashanth Neel watched Pawan's film: ಟಾಲಿವುಡ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಗ್ಯಾಂಗ್ ಸ್ಟರ್ ಡ್ರಾಮಾ 'ಒಜಿ' ಚಿತ್ರ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಕೇಳಿಬರುತ್ತಿದೆ. ಚಿತ್ರರಂಗದ ಅನೇಕ ಸೆಲೆಬ್ರಿಟಿ ಗಳು ಈ ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದು ಇದೀಗ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಪ್ರೇಕ್ಷಕರ ಜೊತೆಯಲ್ಲೇ 'ಒಜಿ' ಸಿನಿಮಾ ವೀಕ್ಷಣೆ ಮಾಡಿದ್ದಾರೆ.

-

ನವದೆಹಲಿ: ಟಾಲಿವುಡ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಗ್ಯಾಂಗ್ ಸ್ಟರ್ ಡ್ರಾಮಾ 'ಒಜಿ' ಚಿತ್ರ (OG Movie) ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರ ಬಿಡು ಗಡೆಯಾದ ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಕೇಳಿಬರುತ್ತಿದೆ. ಪವನ್ ಕಲ್ಯಾಣ್, ಇಮ್ರಾನ್ ಹಶ್ಮಿ, ಪ್ರಿಯಾಂಕಾ ಮೋಹನ್ ನಟನೆ ಅಭಿಮಾನಿಗಳನ್ನು ಬಹಳಷ್ಟು ಆಕ ರ್ಷಿಸಿವೆ. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈ ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದು ಇದೀಗ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಪ್ರೇಕ್ಷಕರ ಜೊತೆಯಲ್ಲೇ 'ಒಜಿ' ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ಸುಜಿತ್ ರೆಡ್ಡಿ ನಿರ್ದೇಶನದ ಚಿತ್ರ ಭರ್ಜರಿ ಆ್ಯಕ್ಷನ್ ದೃಶ್ಯಗಳನ್ನು ಹೊಂದಿದ್ದು ಪ್ರೇಕ್ಷಕರು ಕೂಡ ಫಿದಾ ಆಗಿದ್ದಾರೆ. ಸುಜಿತ್ ಈ ಹಿಂದೆ ‘ಸಾಹೋ’ ಚಿತ್ರ ನಿರ್ದೇಶಿಸಿದ್ದು ಯಶಸ್ಸು ಕೂಡ ಕಂಡಿತ್ತು ಇದೀಗ 'ಒಜಿ' ಚಿತ್ರ ನೋಡಲು ಮೆಗಾ ಫ್ಯಾಮಿಲಿ ಸ್ಟಾರ್ಸ್, ಪವನ್ ಪುತ್ರ ಅಕಿರಾ ಸೇರಿದಂತೆ ಹಲವರು ಸೆಲೆಬ್ರಿಟಿಗಳು ಆಗಮಿಸಿದ್ದು ಇದಕ್ಕೆ ಸಂಬಂಧಿಸಿದ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದೇ ರೀತಿ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಹೈದರಾಬಾದ್‌ನಲ್ಲಿ ಈ ಸಿನಿಮಾ ವೀಕ್ಷಣೆ ಮಾಡಿದ್ದಾರೆ.
#AkiraNandan with #PrashantNeel at #TheyCallHimOG Premiere, Hyderabad. pic.twitter.com/IMmCmqk1A9
— Twood Trolls ™ (@TwoodTrolls_2_0) September 24, 2025
ಹೈದರಾಬಾದ್ ವಿಮಲ್ ಟಾಕೀಸ್ ನಲ್ಲಿ ಪ್ರಶಾಂತ್ ನೀಲ್ ಹಾಗೂ ಅಕಿರಾ ಈ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಪವನ್ ಪುತ್ರಿ ಆದ್ಯ ಹಾಗೂ ಸೋದರಳಿಯ ವೈಷ್ಣವ್ ತೇಜ್ ಕೂಡ ಸಿನಿಮಾ ನೋಡಲು ಆಗಮಿಸಿದ್ದಾರೆ. ಒಜಿ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ನಿರ್ದೇಶಕ ಸುಜೀತ್ ಅವರ ಕಥೆ ಹೇಳಿದ ರೀತಿ ಅದ್ಬುತವಾಗಿದೆ ಎಂದು ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೊಂದು ಕಡೆ ಪ್ರಭಾಸ್ ನಟಿಸಿದ್ದ 'ಸಾಹೋ' ಚಿತ್ರಕ್ಕೂ 'ಒಜಿ' ಚಿತ್ರಕ್ಕೂ ಲಿಂಕ್ ಇಟ್ಟೆ ಸುಜಿತ್ ಸಿನಿಮಾ ಮಾಡಿದ್ದಾರೆ ಎನ್ನಲಾಗಿದೆ. 6 ವರ್ಷಗಳ ಹಿಂದೆ ಬಂದಿದ್ದ 'ಸಾಹೋ' ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಮುಂದೊಂದು ದಿನ 'ಸಾಹೋ' ಪಾರ್ಟ್-2 ಬರಬಹುದು ಎಂದು ಪ್ರಭಾಸ್ ಕೂಡ ಹೇಳಿದ್ದರು. ಹಾಗಾಗಿ ಪವನ್ ಹಾಗೂ ಪ್ರಭಾಸ್ ಒಟ್ಟಿಗೆ ಒಂದೇ ಚಿತ್ರದಲ್ಲಿ ನಟಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.
ಇದನ್ನೂ ಓದಿ:Marutha Movie: ಎಸ್. ನಾರಾಯಣ್ ನಿರ್ದೇಶನದ ʼಮಾರುತʼ ಚಿತ್ರದ ಹಾಡು ರಿಲೀಸ್!
ಸಾಹೋ' ಚಿತ್ರದಲ್ಲಿದ್ದ ರಾಯ್ ಹಾಗೂ ಲಾಲ್ ಪಾತ್ರಗಳನ್ನು ಒಜಿ' ಚಿತ್ರದಲ್ಲಿ ತೋರಿಸಲಾಗಿದೆ. ಹೀಗಾಗಿ ಈ ಎರಡೂ ಕಥೆಗಳಿಗೆ ಇರುವ ಲಿಂಕ್ ಏನು ಎಂದು ಪ್ರೇಕ್ಷಕರು ಆಶ್ಚರ್ಯ ಗೊಂಡಿದ್ದಾರೆ. ಒಜಿ ಚಿತ್ರದಲ್ಲಿ ಪವನ್ ಕಲ್ಯಾಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ, ಪ್ರಿಯಾಂಕಾ ಮೋಹನ್, ಅರ್ಜುನ್ ದಾಸ್, ಪ್ರಕಾಶ್ ರಾಜ್, ಶ್ರೀಯಾ ರೆಡ್ಡಿ ಮತ್ತು ಹರೀಶ್ ಉತ್ತಮನ್ ಪ್ರಮುಖ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಸಂಗೀತವನ್ನು ಥಮನ್ ಎಸ್ ಸಂಯೋಜಿಸಿದ್ದಾರೆ ಮತ್ತು ಛಾಯಾಗ್ರಹಣವನ್ನು ರವಿ ಕೆ. ಚಂದ್ರನ್ ನಿರ್ವಹಿಸಿದ್ದಾರೆ.