Actress Prabhas: ಫುಲ್ ಹ್ಯಾಂಡ್‌ಸಮ್ ಲುಕ್‌ನಲ್ಲಿ ನಟ ಪ್ರಭಾಸ್- ಫ್ಯಾನ್ಸ್ ದಿಲ್ ಖುಷ್!
Spirit Movie Prabhas Look: ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿರುವ ಸ್ಪಿರಿಟ್ ಸಿನಿಮಾಕ್ಕಾಗಿ ನಟ ಪ್ರಭಾಸ್ ಅವರು ಲುಕ್ ಚೇಂಜ್ ಗಾಗಿ ಸಂಪೂರ್ಣವಾಗಿ ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸಿನಿಮಾದಲ್ಲಿ ಅವರು ಬಹಳ ಡಿಫರೆಂಟ್ ಆಗಿ ಕಾಣಬೇಕಾದ ಕಾರಣ ಡಿಫರೆಂಟ್ ಡ್ರೆಸ್ ಹಾಗೂ ಹೇರ್ ಸ್ಟೈಲ್ ಮಾತ್ರವಲ್ಲದೆ ಯಂಗ್ ಲುಕ್‌ಗಾಗಿ ವರ್ಕೌಟ್ ಕೂಡ ಮಾಡುತ್ತಿದ್ದಾರೆ ಎನ್ನಲಾಗಿದೆ.

-

ನವದೆಹಲಿ: ಭಾರತೀಯ ಸಿನಿಮಾ ರಂಗದ ಹೆಸರಾಂತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಬಹುನಿರೀಕ್ಷಿತ ಸ್ಪಿರಿಟ್ ಸಿನಿಮಾವು (Spirit Movie) ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸುತ್ತಿದೆ. ಟಿ-ಸೀರೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಭೂಷಣ್ ಕುಮಾರ್ ಅವರು ಈ ಸಿನಿಮಾ ನಿರ್ಮಿಸಲಿದ್ದು ಬಾಹುಬಲಿ ಸಿನಿಮಾ ಖ್ಯಾತಿಯ ಪ್ರಭಾಸ್ ಅವರು ಈ ಸಿನಿ ಮಾದ ನಾಯಕನಾಗಿದ್ದು ದೀಪ್ತಿ ದಿಮ್ರಿ ಅವರು ಈ ಸಿನಿಮಾದ ನಾಯಕಿಯಾಗಿ ಪ್ರಮುಖ ಪಾತ್ರ ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ (Actor Prabhas) ಅವರು ಪೊಲೀಸ್ ಅಧಿಕಾರಿಯಾಗಿ ತೆರೆ ಮೇಲೆ ಮಿಂಚಲಿದ್ದು ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಕೂಡ ಬರದಿಂದ ಸಾಗುತ್ತಿದೆ.
ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡು ಗಡೆಯಾಗಲಿದ್ದ ಸ್ಪಿರಿಟ್ ಸಿನಿಮಾಕ್ಕಾಗಿ ನಟ ಪ್ರಭಾಸ್ ಅವರು ಲುಕ್ ಚೇಂಜ್ ಗಾಗಿ ಸಂಪೂರ್ಣವಾಗಿ ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸಿನಿಮಾದಲ್ಲಿ ಅವರು ಬಹಳ ಡಿಫರೆಂಟ್ ಆಗಿ ಕಾಣಬೇಕಾದ ಕಾರಣ ಡಿಫರೆಂಟ್ ಡ್ರೆಸ್ ಹಾಗೂ ಹೇರ್ ಸ್ಟೈಲ್ ಮಾತ್ರವಲ್ಲದೆ ಯಂಗ್ ಲುಕ್‌ಗಾಗಿ ವರ್ಕೌಟ್ ಕೂಡ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಕೆಲವು ತಿಂಗಳ ಹಿಂದೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತು ನಟಿ ದೀಪಿಕಾ ಪಡುಕೋಣೆ ಅವರ ಕಾರಣಕ್ಕೆ ಸ್ಪಿರಿಟ್ ಸಿನಿಮಾವು ಅನೇಕ ಗಾಸಿಪ್ ಅನ್ನು ಹುಟ್ಟುಹಾಕಿತ್ತು. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಇತ್ತೀಚೆಗೆ ತಮ್ಮ ಬಹು ನಿರೀಕ್ಷಿತ ಚಿತ್ರ ಸ್ಪಿರಿಟ್ ಚಿತ್ರೀಕರಣ ಸೆಪ್ಟೆಂಬರ್ 2025 ರಲ್ಲಿ ಪ್ರಾರಂಭವಾಗಲಿದೆ ಎಂದು ದೃಢಪಡಿಸಿದರು. ಇದೀಗ ಚಿತ್ರೀಕರಣ ಮತ್ತೆ ಆರಂಭವಾಗಿದ್ದು, ನಟ ಪ್ರಭಾಸ್ ಅವರು ಈ ಸಿನಿಮಾಕ್ಕಾಗಿ ಸಂಪೂರ್ಣವಾಗಿ ಮೇಕ್ ಓವರ್ (ರೂಪಾಂತರ) ಆಗಲು ರೆಡಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತೀಚಿನ ವರದಿ ಒಂದರ ಪ್ರಕಾರ ಈ ಹಿಂದಿನ ಸಿನಿಮಾಕ್ಕೆ ಹೋಲಿಸಿದರೆ ಪ್ರಭಾಸ್ ಅವರು ಈ ಸಿನಿಮಾದಲ್ಲಿ ಬಹಳ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಅವರು ಯಂಗ್ ಆಗಿ ಕಾಣಬೇಕು ಎಂಬ ಉದ್ದೇಶದಿಂದ ತೂಕ ಇಳಿಸಿಕೊಳ್ಳಲು ಮುಂದಾಗಿದ್ದಾರೆ ಎಂಬ ಮಾಹಿತಿ ವೈರಲ್ ಆಗಿದೆ. ಈಗಾಗಲೇ 5ಕೆ.ಜಿ. ತೂಕ ಇಳಿಸಿಕೊಂಡಿದ್ದು, ಇನ್ಮು ಕೂಡ ತೂಕ ಇಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಹಿತಿ ಹರಿದಾಡುತ್ತಿದೆ. ಪ್ರಭಾಸ್ ಅವರು ಭೂಗತ ಲೋಕದ ವಿರುದ್ಧ ಧ್ವನಿ ಎತ್ತಿ ಸಮಾಜವನ್ನು ಮುನ್ನೆಡೆಸುವ ಪ್ರಬಲ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಇದೊಂದು ಹೈ-ಆ್ಯಕ್ಷನ್ ಹಾಗೂ ವಿಭಿನ್ನ ಕಥಾಹಂದರವನ್ನು ಹೊಂದಿದ್ದ ಸಿನಿಮಾವಾಗಿದೆ.
ಸ್ಪಿರಿಟ್ ಸಿನಿಮಾ 6 ಹಾಡುಗಳನ್ನು ಒಳಗೊಂಡಿದ್ದು, ಹರ್ಷ ವರ್ಧನ್ ರಾಮೇಶ್ವರ್ ಅವರು ಈ ಸಿನಿಮಾದ ಹಾಡನ್ನು ಸಂಯೋಜಿಸಿದ್ದಾರೆ. ಮೊದಲ ಹಾಡು ಹೀರೊ ಓಪನಿಂಗ್ ಸಾಂಗ್ ಆಗಲಿದ್ದು ಇದರಲ್ಲಿ ಪ್ರಭಾಸ್ ವಿಶೇಷವಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಫ್ಲ್ಯಾಷ್‌ಬ್ಯಾಕ್ ಗಾಗಿ ಒಂದು ಹಾಡು, ಎರಡು ರೋಮ್ಯಾಂಟಿಕ್ ಹಾಡು ಹೀಗೆ ಒಂದೊಂದು ಹಾಡನ್ನು ಕೂಡ ವಿಭಿನ್ನವಾಗಿ ತೆರೆ ಮೇಲೆ ತರಲು ನಿರ್ದೆಶಕ ಸಂದೀಪ್ ರೆಡ್ಡಿ ಅವರು ತಯಾರಿ ನಡೆಸುತ್ತಿದ್ದಾರೆ.
ಇದನ್ನೂ ಓದಿ:Kumbha Sambhava Movie: ‘ಭೀಮ’ ಚಿತ್ರದ ಖ್ಯಾತಿಯ ಪ್ರಿಯಾ ಅಭಿನಯದ ‘ಕುಂಭ ಸಂಭವ’ ಸಿನಿಮಾದ ಟೀಸರ್ ಔಟ್
ಈ ಸಿನಿಮಾಕ್ಕಾಗಿ ಬಾಲಿವುಡ್ ನಟಿ ದೀಪಿಕಾ ಅವರಿಗೆ ಅಭಿನಯಿಸುವ ಆಫರ್ ನೀಡಲಾಗಿತ್ತು. ಆದರೆ ದೀಪಿಕಾ ಅವರ ಕೆಲಸದ ಸಮಯ ಹಾಗೂ ಸಂಭಾವನೆ ವಿಚಾರಕ್ಕೆ ಭಿನ್ನಾಭಿಪ್ರಾಯ ಮೂಡಿದ್ದು ಈ ಸಿನಿಮಾದಿಂದ ದೂರ ಉಳಿದಿದ್ದಾರೆ. ಹೀಗಾಗಿ ಅವರ ಬದಲಾಗಿ ಸಿನಿಮಾ ಆಫರ್ ಅನ್ನು ನಟಿ ದೀಪ್ತಿ ದಿಮ್ರಿ ಅವರಿಗೆ ನೀಡಲಾಗಿದ್ದು ಈ ಚಿತ್ರದಲ್ಲಿ ಅವರು ವೈದ್ಯೆಯಾಗಿ ಅಭಿನಯಿಸಲಿದ್ದಾರೆ. ಸುಮಾರು 300 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿರುವ ಈ ಆ್ಯಕ್ಷನ್ ಮೂವಿ 9 ವಿಭಿನ್ನ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.