ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sudhir Attavar: ಸುಧೀರ್ ಅತ್ತಾವರ್ ಅವರ ʼಆದಿ ಮಹಾ ಶಕ್ತಿ ಮಹಾಮಾಯಿಯೇʼ ಹಾಡಿಗೆ ವಿದ್ಯಾಭೂಷಣ್ ಧ್ವನಿ

ಸಹಸ್ರಾರು ಭಕ್ತಿ ಗೀತೆಗಳನ್ನು ಭಕ್ತಿ ಪರವಶತೆಯಿಂದ ಹಾಡಿ ದೇಶ-ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ವಿದ್ಯಾಭೂಷಣ್ ಅವರು ಸಾಹಿತ್ಯ ಅಕಾಡಮಿ ಪುರಸ್ಕೃತ ಸಾಹಿತಿ-ನಿರ್ದೇಶಕ ಸುಧೀರ್ ಅತ್ತಾವರ್ ಬರೆದಿರುವ ʼಆದಿ ಮಹಾ ಶಕ್ತಿ ಮಹಾಮಾಯಿಯೇ...ʼ ಎನ್ನುವ ಹಾಡನ್ನು ಪ್ರಪ್ರಥಮ ಬಾರಿಗೆ ಸಿನಿಮಾಕ್ಕಾಗಿ ಹಾಡಿದ್ದಾರೆ.

ಸುಧೀರ್ ಅತ್ತಾವರ್ ಬರೆದಿರುವ ಹಾಡಿಗೆ ವಿದ್ಯಾಭೂಷಣ್ ಧ್ವನಿ

-

Profile Siddalinga Swamy Sep 4, 2025 2:59 PM

ಬೆಂಗಳೂರು: ಸಹಸ್ರಾರು ಭಕ್ತಿ ಗೀತೆಗಳನ್ನು ಭಕ್ತಿ ಪರವಶತೆಯಿಂದ ಹಾಡಿ ದೇಶ-ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ವಿದ್ಯಾಭೂಷಣ್ ಅವರು ಸಾಹಿತ್ಯ ಅಕಾಡಮಿ ಪುರಸ್ಕೃತ ಸಾಹಿತಿ-ನಿರ್ದೇಶಕ ಸುಧೀರ್ ಅತ್ತಾವರ್ (Sudhir Attavar) ಬರೆದಿರುವ ʼಆದಿ ಮಹಾ ಶಕ್ತಿ ಮಹಾಮಾಯಿಯೇ...ʼ ಎನ್ನುವ ಹಾಡನ್ನು ಪ್ರಪ್ರಥಮ ಬಾರಿಗೆ ಸಿನಿಮಾಕ್ಕಾಗಿ ಹಾಡಿದ್ದಾರೆ. ಕನಕದಾಸರು, ಪುರಂದರದಾಸರು, ತ್ಯಾಗರಾಜರು... ಇಂತಹ ದಾಸ ಶ್ರೇಷ್ಠರ, ಋಷಿ-ಮುನಿಗಳ ಸಹಸ್ರಾರು ಭಕ್ತಿಗೀತೆಗಳನ್ನು ಹಾಡಿರುವ ವಿದ್ಯಾಭೂಷಣ್ ಅವರು ಭಕ್ತಿ ಸಾಹಿತ್ಯ ಮೆಚ್ಚಿ ಹಾಡಿರುವುದು ಧನ್ಯತಾ ಭಾವ ಮೂಡಿಸಿದೆ ಎಂದು ಗೀತೆ ರಚನೆಗಾರ ಸುಧೀರ್ ತಿಳಿಸಿದ್ದಾರೆ.

ʼಮಹಾಮಯಿʼ ಯಶೋದೆಯ ಮಗಳು. ಕ್ರಷ್ಣನನ್ನು ಉಳಿಸಲು ಕಂಸನಿಂದ ಶಿರಚ್ಛೇದಕ್ಕೊಳಗಾಗಿ, ಕೃಷ್ಣನನ್ನು ರಕ್ಷಿಸುವ ತಾತ್ಪರ್ಯ ಉಳ್ಳ ಈ ಹಾಡಿನಲ್ಲಿ ʼಮಹಾಮಯಿʼ ಯ ವರ್ಣನೆಯ ಅಂಶವಿದೆ. ಹಾಡಿನ ಲಿರಿಕಲ್ ಆಡಿಯೋ ಬಿಡುಗಡೆಯಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನವಿರುವ ʼಪಿದಾಯಿʼ ಚಿತ್ರವನ್ನು ರಮೇಶ್ ಶೆಟ್ಟಿಗಾರ್ ಅವರು ನಿರ್ಮಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Fashion News 2025: ಆಜಾದಿ ಮಹೋತ್ಸವ್‌ನಲ್ಲಿ ರ‍್ಯಾಂಪ್‌ ವಾಕ್‌ ಮಾಡಿದ ಮಹಿಳಾಮಣಿಯರು