Puneeth Rajkumar: ಪುನೀತ್ ರಾಜ್‌ಕುಮಾರ್ ಅವರನ್ನು 'ಕರ್ನಾಟಕದ ಪವರ್ ಸ್ಟಾರ್' ಎಂದು ಏಕೆ ಕರೆಯುತ್ತಾರೆ ಗೊತ್ತಾ?
ಪುನೀತ್ ನಮ್ಮನಗಲಿ ಮೂರೂವರೆ ವರ್ಷಗಳು ಕಳೆದರೂ, ಅವರ ಸಿನಿಮಾಗಳು(cinema) ಇಂದಿಗೂ ಕನ್ನಡಿಗರ ಮನದಲ್ಲಿ ಹಚ್ಚಹಸುರಾಗಿ ಉಳಿದಿವೆ. ಅವರ ನಟನೆ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲಿಯೂ ಅವರು ತೋರಿದ ಸರಳತೆ, ಪರೋಪಕಾರ, ಸಾಮಾಜಿಕ ಕಳಕಳಿಯಿಂದಾಗಿ ಅಭಿಮಾನಿಗಳು ಅವರನ್ನು ʼಪವರ್ ಸ್ಟಾರ್ʼ(Power Star) ಎಂದು ಕರೆಯುತ್ತಾರೆ... ಹಾಗಾದ್ರೆ ಅಪ್ಪುವನ್ನು ಯಾಕೆ ಪವರ್ ಸ್ಟಾರ್ ಅಂತ ಕರೆಯುವುದೇಗೆ ಯಾಕೆ...? ಇಲ್ಲಿದೆ ಉತ್ತರ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್

ಬೆಂಗಳೂರು: ಕೇವಲ ಕನ್ನಡ ಮಾತ್ರವಲ್ಲದೆ ಸಂಪೂರ್ಣ ಭಾರತೀಯ ಚಿತ್ರರಂಗದಲ್ಲಿ ನಟನೆಯಿಂದ ತಮ್ಮದೇ ಆದ ಛಾಪು ಮೂಡಿಸಿದ್ದ ಕನ್ನಡಿಗರ ಕಣ್ಮಣಿ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ 50ನೇ ಹುಟ್ಟುಹಬ್ಬವನ್ನು(Birthday) ಅವರ ಅಭಿಮಾನಿಗಳು(Fans) ಇಂದು ಆಚರಿಸುತ್ತಿದ್ದಾರೆ. ಪುನೀತ್ ನಮ್ಮನಗಲಿ ಮೂರೂವರೆ ವರ್ಷಗಳು ಕಳೆದರೂ, ಅವರ ಸಿನಿಮಾಗಳು(cinema) ಇಂದಿಗೂ ಕನ್ನಡಿಗರ ಮನದಲ್ಲಿ ಹಚ್ಚಹಸುರಾಗಿ ಉಳಿದಿವೆ. ಅವರ ನಟನೆ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲಿಯೂ ಅವರು ತೋರಿದ ಸರಳತೆ, ಪರೋಪಕಾರ, ಸಾಮಾಜಿಕ ಕಳಕಳಿಯಿಂದಾಗಿ ಅಭಿಮಾನಿಗಳು ಅವರನ್ನು ʼಪವರ್ ಸ್ಟಾರ್ʼ(Power Star) ಎಂದು ಕರೆದರೂ, ಕೊನೆವರೆಗೂ ಅವರು ಅಭಿಮಾನಿಗಳಿಗಾಗಿ ʼಅಪ್ಪುʼ ಆಗಿಯೇ ಉಳಿದರು.
ವೈಯಕ್ತಿಕವಾಗಿ ಎಲ್ಲ ಸೆಲೆಬ್ರಿಟಿಗಳಿಗೆ ಅವರ ಅಭಿಮಾನಿಗಳು ಸ್ಟಾರ್ ಪಟ್ಟವನ್ನು ಕಟ್ಟಿ, ಅವರಿಗೊಂದು ಬಿರುದು ಕೊಡುತ್ತಾರೆ. ಪುನೀತ್ ರಾಜ್‌ಕುಮಾರ್ ಅವರಿಗೆ ಅಭಿಮಾನಿಗಳು ಕೊಟ್ಟ ಬಿರುದು ʼಪವರ್ ಸ್ಟಾರ್ʼ. ಬೇರೆ ಬೇರೆ ಚಿತ್ರರಂಗಗಳಲ್ಲಿ ಪವರ್ ಸ್ಟಾರ್ ಎಂಬ ಬಿರುದನ್ನು ಬೇರೆ ಬೇರೆ ನಟರಿಗೆ ಕೊಟ್ಟಿರಬಹುದು, ಅದರೆ ಕನ್ನಡಿಗರ ಪಾಲಿಗೆ ಪವರ್ ಸ್ಟಾರ್ ಎಂದರೆ ಅದು ಪುನೀತ್ ರಾಜ್‌ಕುಮಾರ್ ಮಾತ್ರ.
ತಾವು ಸಿನಿಮಾಗಳಲ್ಲಿ ಮಾಡಿದ ಅತ್ಯುತ್ತಮ ನಟನೆಯಿಂದಾಗಿ ಹಾಗೂ ಕನ್ನಡ ಚಿತ್ರರಂಗಕ್ಕೆ ನೀಡಿದ ಅಮೂಲ್ಯವಾದ ಕೊಡುಗೆಗಳಿಗಾಗಿ ಅಭಿಮಾನಿಗಳಿಂದ ಪುನೀತ್ ಅವರು ಪವರ್ ಸ್ಟಾರ್ ಬಿರುದನ್ನು ಪಡೆದುಕೊಂಡರು. ಅವರ ನಟನಾ ಪ್ರತಿಭೆ ಮತ್ತು ವಿನಮ್ರ ಸ್ವಭಾವವು ಅವರನ್ನು ಪ್ರೇಕ್ಷಕರ ನೆಚ್ಚಿನ ನಟನನಾಗಿ ಮಾಡಿತು. ಎಷ್ಟು ದೊಡ್ಡ ನಟನಾಗಿ ಬೆಳೆದರೂ, ಎಂದಿಗೂ ಅಭಿಮಾನಿಗಳಿಗೆ ಹತ್ತಿರವಾಗಿ ಇರುತ್ತಿದ್ದರು ಪುನೀತ್. ಅವರು ತಮ್ಮ ಅಭಿಮಾನಿಗಳನ್ನು ಆಗಾಗ್ಗೆ ತಮ್ಮ ಮನೆಗೂ ಆಹ್ವಾನಿಸುತ್ತಿದ್ದರು. ಅದು ಅಭಿಮಾನಿಗಳಲ್ಲಿ ವಿಶೇಷ ಭಾವನೆ ಮತ್ತು ಮೆಚ್ಚುಗೆಯನ್ನುಂಟು ಮಾಡಿತ್ತು. ಆಕಾಶದೆತ್ತರಕ್ಕೆ ಬೆಳೆದರೂ ಸದಾ ಭೂಮಿಗೆ ಬಾಗಿ ಇರುತ್ತಿದ್ದ ವ್ಯಕ್ತಿತ್ವ ಪುನೀತ್ ಅವರದ್ದು.
Puneeth Rajkumar: ನಗುವಿನ ಒಡೆಯ ಅಪ್ಪು ಬಗ್ಗೆ ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವು
ವರನಟ ಡಾ. ರಾಜ್‌ಕುಮಾರ್ ಅವರ ಮಗನಾಗಿ, ಪುನೀತ್ ಕನ್ನಡ ಚಲನಚಿತ್ರೋದ್ಯಮದ ಅತ್ಯಂತ ಪ್ರಭಾವಶಾಲಿ ಕುಟುಂಬಗಳಲ್ಲಿ ಒಂದಕ್ಕೆ ಸೇರಿದವರು. ಬಾಕ್ಸ್ ಆಫೀಸ್‌ನಲ್ಲಿ ಅವರ ಯಶಸ್ಸು ಅದ್ಭುತವಾಗಿತ್ತು. ಇಂಡಿಯಾ ಟುಡೇ ವರದಿಯ ಪ್ರಕಾರ, ಅವರು ನಟಿಸಿದ 49 ಚಿತ್ರಗಳಲ್ಲಿ 40 ಚಿತ್ರಗಳು 100 ದಿನಗಳಿಗಿಂತ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ. ಅವರು ಪ್ರಮುಖ ಪಾತ್ರ ವಹಿಸಿದ 29 ಚಿತ್ರಗಳಲ್ಲಿ 6 ಚಿತ್ರಗಳು ಮಾತ್ರ 100 ದಿನಗಳನ್ನು ಪೂರೈಸಲು ವಿಫಲವಾಗಿವೆ. ಬಾಕ್ಸ್ ಆಫೀಸ್‌ನಲ್ಲಿ ಸೋಲಿಲ್ಲದ ಸರದಾರನಂತೆ ಮೆರೆದಿದ್ದರು ಪುನೀತ್ ರಾಜ್‌ಕುಮಾರ್.
ಉಳಿದ 23 ಚಿತ್ರಗಳು 100 ದಿನಗಳಿಗಿಂತ ಹೆಚ್ಚು ಪ್ರದರ್ಶನ ಕಂಡಿದ್ದು, ಇದು ಅಭಿಮಾನಿಗಳಲ್ಲಿ ಅವರ ಅಪಾರ ಜನಪ್ರಿಯತೆಯನ್ನು ಸಾಬೀತುಪಡಿಸಿದೆ. 2014ರಲ್ಲಿ ತಮ್ಮ ಪವರ್ ಸ್ಟಾರ್ ಬಿರುದಿನ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪುನೀತ್, ಇದು ನನಗೆ ಅಭಿಮಾನಿಗಳು ನೀಡಿದ ಬಿರುದು, ಅವರೇ ನನ್ನ ಶಕ್ತಿ. ನನ್ನ ಅಭಿಮಾನಿಗಳಿಗೆ ನಾನು ಚಿರಋಣಿ ಎಂದು ಹೇಳಿದ್ದರು.