Puneeth Rajkumar: ಬರ್ತಿದೆ ಪುನೀತ್ ರಾಜ್‌ಕುಮಾರ್ ಬಯೋಗ್ರಫಿ, ʼಅಪ್ಪುʼ ಮುಖಪುಟ ಅನಾವರಣ
Puneeth Rajkumar: ಫ್ಯಾನ್ಸ್ ಪ್ರೀತಿಯಿಂದ ಪುನೀತ್ ಅವರನ್ನು ಕರೆಯುವ ʼಅಪ್ಪುʼ ಎಂಬ ಹೆಸರಿನಲ್ಲೇ ಪುನೀತ್ ಬಯೋಗ್ರಫಿ ಬರೆಯಲಾಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಪ್ರಕೃತಿ ಬನವಾಸಿ ಒಟ್ಟಾಗಿ ಸೇರಿ ಈ ಪುಸ್ತಕ ಬರೆದಿದ್ದಾರೆ. ಎರಡು ವರ್ಷಗಳ ಪ್ರಯತ್ನದಿಂದ ಈ ಪುಸ್ತಕ ಹೊರ ಬಂದಿದೆ. ಈ ಪುಸ್ತಕದ ಕವರ್ ಪೇಜ್ ಹೇಗಿದೆ ಎಂಬುದನ್ನು ರಿವೀಲ್ ಮಾಡಲಾಗಿದೆ.

ಅಪ್ಪು ಬಯಾಗ್ರಫಿಯ ಮುಖಪುಟ ಅನಾವರಣ

ಬೆಂಗಳೂರು: ಪುನೀತ್ ರಾಜ್‌ಕುಮಾರ್ (Puneeth Rajkumar) ಅವರನ್ನು ನೆನಪಿಸಿಕೊಳ್ಳುವ ಪುಸ್ತಕವೊಂದು ಬರುತ್ತಿದೆ. ಇದು ಅಂತಿಂಥ ಪುಸ್ತಕವಲ್ಲ. ಸ್ವತಃ ಪುನೀತ್ ಅವರ ಸ್ವಂತ ನೆನಪುಗಳನ್ನು ಒಳಗೊಂಡಿರುವ ಬಯೋಗ್ರಫಿ (biography). ಈ ಬಗ್ಗೆ ಅಪ್ಪು ಜನ್ಮದಿನದ (ಮಾರ್ಚ್ 17) ಪ್ರಯುಕ್ತ (Puneeth Rajkumar birthday) ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಅವರು ಘೋಷಣೆ ಮಾಡಿದ್ದಾರೆ. ಇದರ ಮುಖಪುಟವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಇಬ್ಬರು ಮಕ್ಕಳು ಬಿಡುಗಡೆ ಮಾಡಿದ್ದಾರೆ. ಪುಸ್ತಕ ಬಿಡುಗಡೆಯ ದಿನಾಂಕ ಇನ್ನು ರಿವೀಲ್ ಆಗಬೇಕಿದೆ.
ಪುನೀತ್ ರಾಜ್‌ಕುಮಾರ್ ಅವರ ದೇಹ ನಮ್ಮನ್ನು ಅಗಲಿದ್ದರೂ ಅವರ ಕೆಲಸಗಳ ಮೂಲಕ, ಸಿನಿಮಾಗಳ ಮೂಲಕ, ಸೇವಾ ಕಾರ್ಯಗಳ ಮೂಲಕ ಅವರು ಜೀವಂತವಾಗಿ ಇದ್ದಾರೆ ಎಂಬುದನ್ನು ನೆನೆಪಿಸಿಕೊಡುವ ಕೆಲಸಗಳು ಆಗಾಗ ಆಗುತ್ತಲೇ ಇರುತ್ತವೆ. ಫ್ಯಾನ್ಸ್ ಪ್ರೀತಿಯಿಂದ ಪುನೀತ್ ಅವರನ್ನು ಕರೆಯುವ ʼಅಪ್ಪುʼ ಎಂಬ ಹೆಸರಿನಲ್ಲೇ ಪುನೀತ್ ಬಯೋಗ್ರಫಿ ಬರೆಯಲಾಗಿದೆ. ಅಶ್ವಿನಿ ಮತ್ತು ಪ್ರಕೃತಿ ಬನವಾಸಿ ಒಟ್ಟಾಗಿ ಸೇರಿ ಈ ಪುಸ್ತಕ ಬರೆದಿದ್ದಾರೆ. ಎರಡು ವರ್ಷಗಳ ಪ್ರಯತ್ನದಿಂದ ಈ ಪುಸ್ತಕ ಹೊರ ಬಂದಿದೆ. ಈ ಪುಸ್ತಕದ ಕವರ್ ಪೇಜ್ ಹೇಗಿದೆ ಎಂಬುದನ್ನು ರಿವೀಲ್ ಮಾಡಲಾಗಿದೆ.
ಪ್ರಸ್ತುತಪಡಿಸುತ್ತಿದ್ದೇವೆ 'ಅಪ್ಪು' - ಅಪ್ಪುವಿನ ಭಾವನಾತ್ಮಕ ಜೀವನಚರಿತ್ರೆ... ❤️✨
— Ashwini Puneeth Rajkumar (@Ashwini_PRK) March 17, 2025
Presenting 'Appu' - a soulful biographical tribute to Appu...
ಹೆಚ್ಚಿನ ಮಾಹಿತಿ ಶೀಘ್ರದಲ್ಲಿ | More updates soon#Appu #Biography pic.twitter.com/jq9uzDtQJp
ಇದನ್ನು ಅಪ್ಪುವಿನ ʼಭಾವನಾತ್ಮಕ ಜೀವನಚರಿತ್ರೆʼ ಎಂದು ಅಶ್ವಿನಿ ಪುನೀತ್ ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಅಪ್ಪು ನಗುತ್ತಿರುವ ಕಪ್ಪು ಬಿಳುಪು ಫೋಟೋ ಕವರ್ ಪೇಜ್‌ನಲ್ಲಿದೆ. ಅಪ್ಪು ಕುರಿತ ಕುತೂಹಲಕಾರಿ ಸಂಗತಿಗಳನ್ನು ಈ ಕೃತಿ ಒಳಗೊಂಡಿದೆ. ಸದ್ಯದಲ್ಲಿಯೇ ಈ ಕೃತಿ ಬಿಡುಗಡೆಯಾಗಲಿದೆ ಎಂದು ಪ್ರಕೃತಿ ಬನವಾಸಿ ವಿಶ್ವವಾಣಿ ಟಿವಿಗೆ ತಿಳಿಸಿದ್ದಾರೆ. ಪ್ರಕೃತಿ ಬನವಾಸಿ ಹಾಗೂ ಪುನೀತ್ ರಾಜ್‌ಕುಮಾರ್ ಅವರು ಒಟ್ಟಾಗಿ ಈ ಹಿಂದೆ ವರನಟ ಡಾ.ರಾಜ್‌ಕುಮಾರ್ ಅವರ ನೆನಪುಗಳ ವರ್ಣಮಯ ಪುಸ್ತಕವನ್ನು ಹೊರತಂದಿದ್ದರು.
ಪುನೀತ್ ರಾಜ್‌ಕುಮಾರ್ ಅವರ ಬರ್ತ್ಡೇ ಸಂಭ್ರಮದ ಸಂದರ್ಭದಲ್ಲಿ ಅಶ್ವಿನಿ ಹಾಗೂ ಅವರ ಹೆಣ್ಣುಮಕ್ಕಳಿಬ್ಬರು ಪುಸ್ತಕ ಹಿಡಿದು ಪೋಸ್ ಕೊಟ್ಟಿದ್ದಾರೆ. ಅಪ್ಪು ಕಲರ್ಫುಲ್ ಜೀವನವನ್ನು ತೆರೆದಿಡುವ ಪುಸ್ತಕಕ್ಕೆ ಬ್ಲ್ಯಾಕ್ ಆ್ಯಂಡ್ ವೈಟ್ನ ಕವರ್ ಪೇಜ್ ಮಾಡಲಾಗಿದೆ. ಈ ಪುಸ್ತಕದಲ್ಲಿ ಯಾವೆಲ್ಲ ವಿಚಾರಗಳು ಇರಲಿವೆ ಎನ್ನುವ ಕುತೂಹಲ ಮೂಡಿದೆ. ಅಪ್ಪು ಕುಟುಂದವರು, ಆಪ್ತರು, ಗೆಳೆಯರು, ಸಿನಿಮಾ ಉದ್ಯಮದ ಪ್ರಮುಖರನ್ನು ಮಾತನಾಡಿಸಿ ಮಾಹಿತಿ ಕಲೆ ಹಾಕಿ ಪುಸ್ತಕ ಬರೆಯಲಾಗಿದೆಯಂತೆ. ಸದ್ಯದಲ್ಲೇ ಅಧಿಕೃತವಾಗಿ ‘ಅಪ್ಪು’ ಪುಸ್ತಕ ರಿಲೀಸ್ ಮಾಡಲು ಅಶ್ವಿನಿ ಪ್ಲ್ಯಾನ್ ಮಾಡಿದ್ದಾರೆ. ಸಿನಿಮಾದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.
ಪುನೀತ್ ಜನ್ಮದಿನದ ಪ್ರಯುಕ್ತ ‘ಅಪ್ಪು’ ಸಿನಿಮಾ ಮರಳಿ ರಿಲೀಸ್ ಆಗಿದೆ. ಜತೆಗೆ ಪುನೀತ್ ಹಾಗೂ ರಾಜ್‌ಕುಮಾರ್ ಅವರನ್ನು ಮತ್ತೆ ಜೊತೆಯಾಗಿ ತೋರಿಸುವ ಧ್ರುವ ಸಿನಿಮಾ ಕೂಡ ತೆರೆ ಏರುತ್ತಿದೆ. ಇದರ ಈ ಬೆನ್ನಲ್ಲೇ ‘ಅಪ್ಪು’ ಬಯೋಗ್ರಫಿ ಹೊರಬರುತ್ತಿರುವುದು ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ.
ಇದನ್ನೂ ಓದಿ: Puneeth Rajkumar: ನಗುವಿನ ಒಡೆಯ ಅಪ್ಪು ಬಗ್ಗೆ ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವು