#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Udit Narayan: ಲೈವ್ ಶೋನಲ್ಲಿ ಮಹಿಳೆಯ ತುಟಿಗೆ ಚುಂಬಿಸಿದ ಗಾಯಕ ಉದಿತ್ ನಾರಾಯಣ್ !ವಿಡಿಯೊ ವೈರಲ್

ಬಾಲಿವುಡ್‌ ನ ಖ್ಯಾತ ಗಾಯಕ ಉದಿತ್ ನಾರಾಯಣ್‌ ಅವರು ಮಹಿಳಾ ಅಭಿಮಾನಿ ಒಬ್ಬರಿಗೆ ತುಟಿಗೆ ಮುತ್ತಿಟ್ಟು ಟ್ರೋಲ್ ಆಗುತ್ತಿದ್ದಾರೆ‌. ಟಿಪ್ ಟಿಪ್ ಬರ್ಸಾ ಪಾನಿ ಹಾಡು ಹೇಳುವ ಸಂದರ್ಭದಲ್ಲಿ ಉದಿತ್ ಮಹಿಳೆಯ ತುಟಿಗಳಿಗೆ ಮುತ್ತಿಕ್ಕಿದ್ದು, ಗಾಯಕನ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಲೈವ್ ಶೋನಲ್ಲಿ ಮಹಿಳಾ ಅಭಿಮಾನಿಗೆ ಮುತ್ತಿಟ್ಟು ಟ್ರೋಲ್ ಆದ ಉದಿತ್ ನಾರಾಯಣ್‌;

Udit Narayan

Profile Pushpa Kumari Feb 1, 2025 1:39 PM

ನವದೆಹಲಿ: ಕೆಲವೊಮ್ಮೆ ಅಭಿಮಾನಿಗಳು ‌ತಮ್ಮ ನೆಚ್ಚಿನ ಹೀರೋ ಅಥವಾ ಹೀರೋಯಿನ್ ‌ಭೇಟಿ ಆದಾಗ ವಿಪರೀತವಾಗಿ ವರ್ತಿ ಸುವುದನ್ನು ನೋಡಬಹುದು. ತಮ್ಮ ಸ್ಟಾರ್ ನಟ, ನಟಿಯರು ಎದುರು ಸಿಕ್ಕಾಗ ಎಕ್ಸೈಟ್​ಮೆಂಟ್​ನಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸುವುದು ಬಹಳಷ್ಟು ಸಲ ಸುದ್ದಿಯಾಗುತ್ತದೆ. ಆದರೆ ಇಲ್ಲೊಬ್ಬ ಖ್ಯಾತ ಗಾಯಕರೇ ಮಹಿಳಾ ಅಭಿಮಾನಿ ತುಟಿಗೆ ಮುತ್ತಿಟ್ಟ ವಿಡಿಯೊ‌ ಟ್ರೋಲ್ ಆಗುತ್ತಿದ್ದು‌ ಗಾಯಕನ ವರ್ತನೆಗೆ ನೆಟ್ಟಿಗರು ಕ್ಲಾಸ್‌ .(Viral Video) ತೆಗೆದುಕೊಂಡಿದ್ದಾರೆ.

ಬಾಲಿವುಡ್‌ ನ ಖ್ಯಾತ ಗಾಯಕ ಉದಿತ್ ನಾರಾಯಣ್‌ (Udit Narayan) ಅವರು ಮಹಿಳಾ ಅಭಿಮಾನಿ ಒಬ್ಬರಿಗೆ ತುಟಿಗೆ ಮುತ್ತಿಟ್ಟು ಬಹಳಷ್ಟು ಟ್ರೋಲ್ ಆಗುತ್ತಿದ್ದಾರೆ‌. ಗಾಯಕ ಉದಿತ್ ನಾರಾಯಣ್ ಲೈವ್ ಶೋ ನೀಡುತ್ತಿದ್ದ ಸಂದರ್ಭ ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ನಟನೆಯ ಚಿತ್ರದ 'ಟಿಪ್ ಟಿಪ್ ಬರ್ಸಾ ಪಾನಿ' ಎಂಬ ಪ್ರಸಿದ್ಧ ಗೀತೆಯನ್ನು ಹಾಡುತ್ತಿದ್ದರು.

ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಉದಿತ್ ಜೊತೆ ಸೆಲ್ಫಿ ಕ್ಲಿಕ್ಕಿಸಲು ಅನುಮತಿಸುವಂತೆ ಬಾಡಿಗಾರ್ಡ್ ಬಳಿ ಮನವಿ ಮಾಡಿದ್ದಾರೆ. ಇದನ್ನು ಕಂಡು ಗಾಯಕ ಉದಿತ್ ಕೂಡ ಹಾಡನ್ನು ಹಾಡುತ್ತಲೇ ಆಕೆಗೆ ಸೆಲ್ಫಿ ಪಡೆಯಲು ಅನುಮತಿ ನೀಡಿದ್ದು ಮಂಡಿ ಊರಿ ಸೆಲ್ಫಿಗೆ ಪೋಸ್ ನೀಡಲು ಮುಂದಾಗಿದ್ದಾರೆ. ಫೋಟೋಗಳನ್ನು ಕ್ಲಿಕ್ ಮಾಡಿದ ನಂತರ ಮಹಿಳಾ ಅಭಿಮಾನಿಯೇ ಉದಿತ್ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಆ ನಂತರ ಉದಿತ್ ಕೂಡ ಮಹಿಳಾ ಅಭಿಮಾನಿಗಳ ಕೆನ್ನೆಗೆ ಮುತ್ತಿಡುತ್ತಾರೆ.ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಗಾಯಕನ ನಡೆಗೆ ನೆಟ್ಟಿಗರು ಗರಂ ಆಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಕೆಲವು ನೆಟ್ಟಿಗರು ಗಾಯಕನ ವರ್ತನೆಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೆಲವರು ಇದನ್ನು ನಂಬಲು ಅಸಾಧ್ಯ ಎಂದರೆ ಇನ್ನು ಕೆಲವರು ಉದಿತ್ ಸರ್ .. ನನ್ನ ಕಣ್ಣಿನಿಂದ ಇದನ್ನು ನೋಡಲು ಆಗುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು‌ ಕೆಲವರು ಇದು AI ಫೇಕ್ ವಿಡಿಯೊ ಎಂದು ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ. ಈ ಕುರಿತು ಗಾಯಕ ಉದಿತ್ ನಾರಾಯಣ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ

ಇದನ್ನು ಓದಿ: Viral News: ಶಿವಲಿಂಗದ ಮೇಲೆ ಕಾಲಿಟ್ಟು ರೀಲ್ಸ್! ಮುಸ್ಲಿಂ ಕಿಡಿಗೇಡಿ ಅರೆಸ್ಟ್

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಾದ ಗಾಯಕ ಉದಿತ್ ನಾರಾಯಣ್ ‌ ಕನ್ನಡ, ತೆಲುಗು, ತಮಿಳು, ನೇಪಾಳಿ, ಮಲಯಾಳಂ ಸೇರಿದಂತೆ ಬಹುಭಾಷೆ ಸಿನೆಮಾಗಳಿಗೆ ಹಾಡಿದ್ದಾರೆ.ಇತರ ಕಾರ್ಯ ಕ್ರಮದಲ್ಲಿ ಕೂಡ ಆಗಾಗ ಲೈವ್ ಶೋ ಸಹ ನೀಡುತ್ತಿದ್ದು ಈ ಬಾರಿಯ ಲೈವ್ ಶೋನಲ್ಲಿ ಮಹಿಳೆಯ ತುಟಿಗೆ ಕಿಸ್ ಮಾಡುವ ಮೂಲಕ ವಿವಾದಕ್ಕೆ ಸಿಲುಕುವಂತಾಗಿದೆ.