ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Salman Khan: ಬಾಲಿವುಡ್‌ ಭಾಯ್‌ಜಾನ್‌ನನ್ನು ಅಪ್ಪಿಕೊಂಡ ಪುಟ್ಟ ಕಂದಮ್ಮ- ಸಲ್ಮಾನ್ ಖಾನ್‌ ಕ್ಯೂಟ್‌ ವಿಡಿಯೊ ಫುಲ್‌ ವೈರಲ್‌

ಬಾಲಿವುಡ್ ನಟ ಸಲ್ಮಾನ್ ಖಾನ್ ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ಎನಿಸಿ ಕೊಂಡಿದ್ದಾರೆ. ಅದರಲ್ಲೂ ಬಾಲಿವುಡ್ ನ ಭಾಯಿಜಾನ್ ಗೆ ಮಕ್ಕಳೆಂದರೆ ಅಚ್ಚುಮೆಚ್ಚು.ಇದೀಗ ಸಲ್ಮಾನ್ ಖಾನ್ ಮತ್ತೊಮ್ಮೆ‌ ಮಕ್ಕಳ ಮೇಲಿನ ಪ್ರೀತಿಯನ್ನು ಸಾಬೀತು ಪಡಿಸಿದ್ದಾರೆ. ಮುಂಬೈನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಲ್ಮಾನ್, ಅಲ್ಲಿ ಕಾಣಿಸಿಕೊಂಡ ಪುಟ್ಟ ಅಭಿಮಾನಿ ಯೊಂದಿಗೆ ಹಂಚಿಕೊಂಡ ಫೋಟೋ ಇಂಟರ್ನೆಟ್‌ನಲ್ಲಿ ಸೆನ್ಸೇಶನ್ ಸೃಷ್ಟಿಸುತ್ತಿದೆ.

1/5

ಬಾಲಿವುಡ್ ನಟ ಸಲ್ಮಾನ್ ಖಾನ್ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದವರು. ಅತೀ ಹೆಚ್ಚು ಪ್ಯಾನ್ ಫಾಲೋವರ್ಸ್ ಹೊಂದಿರುವ ಇವರು ಪುಟ್ಟ ಅಭಿಮಾನಿಯೊಂದಿಗೆ ಕಳೆದಿರುವ ಚಿತ್ರಗಳನ್ನು ನಟ ಸಲ್ಮಾನ್ ಹಂಚಿಕೊಂಡಿದ್ದಾರೆ. ಇದು ಸೊಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಸಲ್ಮಾನ್ ಪ್ರೀತಿ ಕಂಡು ಅಭಿಮಾನಿಗಳು ಮನ ಸೋತಿದ್ದಾರೆ.

2/5

ಮುಂಬೈನ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ಖಾನ್‌ ಬಳಿ ಓಡಿ ಬಂದ ಪುಟ್ಟ ಹುಡುಗಿಯನ್ನು ನಟ ಸಲ್ಮಾನ್ ಅಪ್ಪಿಕೊಂಡಿರುವ ದೃಶ್ಯ ವೈರಲ್ ಆಗಿದೆ.. ಆ ಮಗುವನ್ನು ಮುದ್ದಾಗಿ ನಗುವಿ ನೊಂದಿಗೆ ಮಾತನಾಡಿಸಿದ ಸಲ್ಮಾನ್ ಪ್ರೀತಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ‌

3/5

ಸಲ್ಮಾನ್ ಖಾನ್ ಅವರ ಸರಳತೆ, ಪ್ರೀತಿ ಹಾಗೂ ಮಕ್ಕಳ ಮೇಲಿನ ಕಾಳಜಿಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿ ಲೈಕ್ ಕಮೆಂಟ್ ಗಳ ಸುರಿಮಳೆ ಗೈದಿದ್ದಾರೆ. ನೆಟ್ಟಿಗರೊಬ್ಬರು "ಇಂಥ ನಟರು ಅಪರೂಪ" ಎಂದು ಪ್ರಶಂಸಿಸಿದ್ದಾರೆ...

4/5

ಈ ಮಧ್ಯೆ ಸಲ್ಮಾನ್ ಖಾನ್ ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದಾರೆ. ʼಬ್ಯಾಟಲ್ ಆಫ್ ಗಲ್ವಾನ್ʼ‌ ಸಿನಿಮಾದಲ್ಲಿ ಸಲ್ಮಾನ್ ಅಭಿನಯಿಸುತ್ತಿದ್ದಾರೆ‌. ಅಪೂರ್ವ ಲಖಿಯಾ ಅವರ ನಿರ್ದೇಶನ ದಲ್ಲಿ ಬರುವ ಈ ಚಿತ್ರ 2020 ರ ಗಲ್ವಾನ್ ಕಣಿವೆಯ ಭಾರತ-ಚೀನಾ ಸೇನೆಗಳ ನಡುವೆ ನಡೆದ ಸಂಘ ರ್ಷದ ಕುರಿತಾದ ಇತಿಹಾಸಾಧಾರಿತ ಕಥೆ ಹೊಂದಿದ್ದು, ಭಾರಿ ನಿರೀಕ್ಷೆ ಮೂಡಿಸಿದೆ...

5/5

2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆ ನಡೆದಿತ್ತು. ಜೂನ್ 15ರಂದು ನಡೆದ ಈ ಘರ್ಷಣೆಯಲ್ಲಿ ಎರಡೂ ಕಡೆಗಳಲ್ಲಿ ಸಾವು ನೋವು ಸಂಭವಿಸಿತ್ತು. ಈ ಸಂದರ್ಭ ಭಾರತೀಯ ಸೇನೆಯು ‌ಮೂಲಭೂತ ಆಯುಧಗಳನ್ನು ಬಳಸಿ ಕೊಂಡು‌ ಅಪ್ರತಿಮ ಧೈರ್ಯವನ್ನು ಪ್ರದರ್ಶಿಸಿತ್ತು. ಇದೇ ಕಥೆಯಲ್ಲಿ ನಟ ಸಲ್ಮಾನ್ ನಟಿಸಲಿದ್ದಾರೆ.