ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Spirit Movie: ಪ್ರಭಾಸ್ ಸ್ಪಿರಿಟ್ ಮೂವಿಯ ಬಿಗ್ ಅಪ್ಡೇಟ್ ಕೊಟ್ಟ ನಿರ್ದೆಶಕ ಸಂದೀಪ್ ರೆಡ್ಡಿ ವಾಂಗಾ!

ಸಂದೀಪ್ ರೆಡ್ಡಿ ವಂಗಾ ಜೊತೆ ‘ಸ್ಪಿರಿಟ್’ (Spirit) ಸಿನಿಮಾ ಮಾಡಲು ಪ್ರಭಾಸ್ ಸಜ್ಜಾಗಿದ್ದಾರೆ. ಇದೀಗ ಚಿತ್ರದ ಬಗ್ಗೆ ಅಭಿಮಾನಿಗಳು ಅಚ್ಚರಿಪಡುವಂತಹ ಇಂಟ್ರಸ್ಟಿಂಗ್ ಅಪ್‌ಡೇಟ್‌ ವೊಂದು ಸಿಕ್ಕಿದೆ. ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಹೊಸ ಚಿತ್ರ ‘ಸ್ಪಿರಿಟ್’ ಸೆಪ್ಟೆಂಬರ್ 2025ರಿಂದ ಶೂಟಿಂಗ್ ಆರಂಭಿಸಲಿದೆ ಎಂದು ಸ್ವತಃ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗಾ ಅಧಿಕೃತವಾಗಿ ಘೋಷಿಸಿದ್ದಾರೆ.

ಮುಂಬೈ: ಟಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾ ನೀಡಿ ಖ್ಯಾತಿ ಗಳಿಸಿದ್ದ ಪ್ರಭಾಸ್‌ (Prabhas) ಸಿನಿ ಪ್ರಿಯರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸಲಾರ್ ಸಿನಿಮಾ ಸಾಧರಣ ಹಿಟ್ ಕಂಡು ರಾಧೆ ಶ್ಯಾಮ ಸಿನಿಮಾ ಫ್ಲಾಪ್ ಆದರೂ ಪ್ರಭಾಸ್ ಗೆ ಸಿನಿಮಾ ಆಫರ್ ಮಾತ್ರ ಬರುತ್ತಲೇ ಇದೆ.'ಕಲ್ಕಿ 2898 ಎಡಿ’ ಅವರ ವೃತ್ತಿರಂಗದಲ್ಲಿ ಟರ್ನಿಂಗ್ ಪಾಯಿಂಟ್ ಪಡೆದ ಚಿತ್ರವಾಗಿದೆ. ಸದ್ಯ ಸಂದೀಪ್ ರೆಡ್ಡಿ ವಂಗಾ ಜೊತೆ ‘ಸ್ಪಿರಿಟ್’ (Spirit) ಸಿನಿಮಾ ಮಾಡಲು ಪ್ರಭಾಸ್ ಸಜ್ಜಾಗಿದ್ದಾರೆ. ಇದೀಗ ಚಿತ್ರದ ಬಗ್ಗೆ ಅಭಿಮಾನಿಗಳು ಅಚ್ಚರಿಪಡುವಂತಹ ಇಂಟ್ರಸ್ಟಿಂಗ್ ಅಪ್‌ಡೇಟ್‌ ವೊಂದು ಸಿಕ್ಕಿದೆ. ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಹೊಸ ಚಿತ್ರ ‘ಸ್ಪಿರಿಟ್’ ಸೆಪ್ಟೆಂಬರ್ 2025ರಿಂದ ಶೂಟಿಂಗ್ ಆರಂಭಿ ಸಲಿದೆ ಎಂದು ಸ್ವತಃ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗಾ ಅಧಿಕೃತವಾಗಿ ಘೋಷಿಸಿದ್ದಾರೆ.

ಬ್ಲಾಕ್‌ಬಸ್ಟರ್ ಹಿಟ್ ಚಿತ್ರಗಳನ್ನು ನೀಡಿ ಖ್ಯಾತಿ ಗಳಿಸಿರುವ ಸಂದೀಪ್ ರೆಡ್ಡಿ ವಂಗಾ, ತಮ್ಮ ಮುಂದಿನ ಚಿತ್ರಕ್ಕೆ ಪ್ರಭಾಸ್ ಅವರಂತಹ ಸ್ಟಾರ್ ನಟನ ಜೊತೆ ಕೈ ಜೋಡಿಸಿರುವುದು ಕುತೂಹಲ ಮೂಡಿಸಿದೆ. ಸಂದೀಪ್ ರೆಡ್ಡಿ ವಂಗಾ ಹಾಗೂ ಚಿತ್ರತಂಡದ ಸದಸ್ಯರು ಇತ್ತೀಚೆಗೆ ಈ ಸಿನಿಮಾ ಕುರಿತು ಮಾಹಿತಿ ನೀಡಿದ್ದು, ಚಿತ್ರಕಥೆ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.ಚಿತ್ರಕ್ಕೆ ಬ್ಯಾಕ್-ಟು-ಬ್ಯಾಕ್ ಶೆಡ್ಯೂಲ್ ಹಾಗೂ ಚಿತ್ರೀಕರಣದ ಹಂತದ ಬಗ್ಗೆ ಪ್ಲ್ಯಾನ್ ರೂಪಿಸ ಲಾಗಿದ್ದು ಚಿತ್ರದ ಶೂಟಿಂಗ್ ಸೆಪ್ಟೆಂಬರ್ 2025 ರಿಂದ ಪ್ರಾರಂಭವಾಗಲಿದೆ ಎಂದು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅಧಿಕೃತವಾಗಿ ಘೋಷಿಸಿದ್ದಾರೆ.

ಇದನ್ನು ಓದಿ:Fathers Day Movie: ತಂದೆ - ಮಗನ ಬಾಂಧವ್ಯದ ʼಫಾದರ್ಸ್ ಡೇʼ ಚಿತ್ರದ ಟೀಸರ್‌ ಔಟ್‌

‘ಸ್ಪಿರಿಟ್’ ಚಿತ್ರದಲ್ಲಿ ನಟಿ ತ್ರಿಪ್ತಿ ದಿಮ್ರಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆರಂಭದಲ್ಲಿ ಈ ಪಾತ್ರಕ್ಕೆ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದರೂ, ಕೆಲಸದ ಸಮಯ ಮತ್ತು ಸಂಭಾವನೆ ಕುರಿತ ಭಿನ್ನಾಭಿಪ್ರಾಯದಿಂದಾಗಿ ಅವರು ಹೊರಗುಳಿಯ ಬೇಕಾಯಿತು. ಚಿತ್ರದ ಸಂಗೀತವನ್ನು ‘ಅರ್ಜುನ್ ರೆಡ್ಡಿ’ ಖ್ಯಾತಿಯ ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಮೇಶ್ವರ್ ಅವರು ಸಂಯೋಜಿಸಲಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಂದೀಪ್ ರೆಡ್ಡಿ ವಂಗಾ ಅವರು 'ಸ್ಪಿರಿಟ್' ಚಿತ್ರವನ್ನು ಸುಮಾರು 300 ಕೋಟಿ ರೂಪಾಯಿಗಳ ಬೃಹತ್ ಬಜೆಟ್ ನಲ್ಲಿ ನಿರ್ಮಿಸಲಿದ್ದಾರೆ‌. ಟಿ- ಸೀರೀಸ್ ಮತ್ತು ಭದ್ರಕಾಳಿ ಪಿಕ್ಚರ್ಸ್ ಸಹಯೋಗ ದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಸದ್ಯದಲ್ಲೇ ರಿಲೀಸ್ ಗೆ ತಯಾರಿ ನಡೆಸುತ್ತಿದೆ. ‘ಸ್ಪಿರಿಟ್’ನ ನಂತರ, ಸಂದೀಪ್ ರೆಡ್ಡಿ ವಾಂಗಾ ಅವರು ತಮ್ಮ 2023ರ ಹಿಟ್ ಚಿತ್ರ ‘ಅನಿಮಲ್’ ಮುಂದುವರಿದ ಭಾಗವಾದ ‘ಅನಿಮಲ್ ಪಾರ್ಕ್’ನ ಚಿತ್ರೀಕರಣ ಪ್ರಾರಂಭಿಸುವ ಸಾಧ್ಯತೆ ಇದೆ. ಸದ್ಯ ಸ್ಪಿರಿಟ್ ಚಿತ್ರವು ಪ್ರಭಾಸ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದು ಪ್ರಭಾಸ್ ಅವರ ಪವರ್ ಫುಲ್ ಅಭಿನಯವನ್ನು ತೆರೆಮೇಲೆ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.