ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‘ಶ್ರೀ ಜಗನ್ನಾಥದಾಸರು ಭಾಗ 2’ ಚಿತ್ರದ ಹಾಡುಗಳ ಅನಾವರಣಗೊಳಿಸಿದ ಶ್ರೀ ಸುಬುಧೇಂದ್ರ ತೀರ್ಥರು

Sri Jagannatha Dasaru -Part 2: ಮಾತಾಂಬುಜ ಮೂವೀಸ್ ಲಾಂಛನದಲ್ಲಿ ಮಧುಸೂದನ್ ಹವಾಲ್ದಾರ್ ಅವರೇ ನಿರ್ಮಿಸಿ, ನಿರ್ದೇಶಿಸಿರುವ ‘ಶ್ರೀ ಜಗನ್ನಾಥದಾಸರು ಭಾಗ 2’ ಚಿತ್ರದ ಹಾಡುಗಳನ್ನು ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಲೋಕಾರ್ಪಣೆ ಮಾಡಿದರು. ಮಧುಸೂದನ್ ಹವಾಲ್ದಾರ್ ಹಾಗೂ ರಾಯಚೂರು ಶೇಷಗಿರಿದಾಸ್ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ಎಂಟು ಹಾಡುಗಳಿದ್ದು, ಜನಪ್ರಿಯ ಗಾಯಕರು ಹಾಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

‘ಶ್ರೀ ಜಗನ್ನಾಥದಾಸರು ಭಾಗ 2’ ಚಿತ್ರದ ಹಾಡುಗಳು ಬಿಡುಗಡೆ

Profile Siddalinga Swamy Jun 11, 2025 7:03 PM

ಬೆಂಗಳೂರು: ನಾಡಿನ ಪ್ರಸಿದ್ಧ ಹರಿದಾಸರ ಜೀವನ ಚರಿತ್ರೆಯನ್ನು ಮಧುಸೂದನ್ ಹವಾಲ್ದಾರ್ ಅವರು ಸಿನಿಮಾ ಮೂಲಕ ಜನರಿಗೆ ಪರಿಚಯಿಸಿಸುತ್ತಿದ್ದಾರೆ. ದಾಸಶ್ರೇಷ್ಠರಾದ ʼಶ್ರೀ ಜಗನ್ನಾಥದಾಸರುʼ, ʼಶ್ರೀ ವಿಜಯದಾಸರುʼ, ʼಶ್ರೀ ಮಹಿಪತಿದಾಸರುʼ, ʼಶ್ರೀ ಪ್ರಸನ್ನ ವೆಂಕಟದಾಸರುʼ ಮುಂತಾದ ಮಹಾಮಹಿಮರ ಕುರಿತಾದ ಚಿತ್ರಗಳು ಈಗಾಗಲೇ ಬಿಡುಗಡೆಯಾಗಿದೆ. ಪ್ರಸ್ತುತ ʼಶ್ರೀ ಜಗನ್ನಾಥದಾಸರು ಭಾಗ 2ʼ (Sri Jagannatha Dasaru -Part 2 Movie ) ಚಿತ್ರ ಸಹ ತೆರೆಗೆ ಬರಲು ಸಿದ್ಧವಾಗಿದ್ದು, ಇತ್ತೀಚೆಗೆ ಹಾಡುಗಳು ಅನಾವರಣವಾಗಿದೆ. ಗಾಯನ ಸಮಾಜದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ʼಶ್ರೀ ಜಗನ್ನಾಥದಾಸರು ಭಾಗ 2ʼ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ಮಧುಸೂದನ್ ಹವಾಲ್ದಾರ್ ಹಾಗೂ ರಾಯಚೂರು ಶೇಷಗಿರಿದಾಸ್ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ಎಂಟು ಹಾಡುಗಳಿದ್ದು, ಜನಪ್ರಿಯ ಗಾಯಕರು ಹಾಡಿದ್ದಾರೆ. ಸಮಾರಂಭದಲ್ಲಿ ಆರು ಹಾಡುಗಳನ್ನು ಪ್ರದರ್ಶಿಸಲಾಯಿತು.

ಇದೇ ಸಂದರ್ಭದಲ್ಲಿ ನಾಡಿನ ಹೆಸರಾಂತ ದಾಸರಾದ 99 ವಯಸ್ಸಿನ ಶ್ರೀ ಅನಂತಾಚಾರ್ ಕಟಗೇರಿ ಅವರನ್ನು ಸನ್ಮಾನಿಸಲಾಯಿತು. ಈ ವಯಸ್ಸಿನಲ್ಲೂ ಕಟಗೇರಿ ದಾಸರು ವಿಜಯದಾಸರ ಕೀರ್ತನೆ ಹಾಡಿದ್ದು ಎಲ್ಲರ ಕಣ್ಣುಗಳಲ್ಲಿ ಆನಂದ ಭಾಷ್ಪ ಸುರಿಯಿತು. ಖ್ಯಾತ ಗಾಯಕಿ ಸಂಗೀತ ಕಟ್ಟಿ ಅವರ ಅಮೋಘ ಗಾಯನ ಕೂಡ ಕೇಳುಗರನ್ನು ಬೇರೆಯದೆ ಲೋಕಕ್ಕೆ ಕರೆದುಕೊಂಡು ಹೋಯಿತು.

ಹಾಡುಗಳನ್ನು ಬಿಡುಗಡೆ ಮಾಡಿ ಅನುಗ್ರಹ ಸಂದೇಶ ನೀಡಿದ ಪೂಜ್ಯ ಶ್ರೀಪಾದರು, ಮಧುಸೂದನ್ ಹವಾಲ್ದಾರ್ ಅವರು ಮಾಡುತ್ತಿರುವ ಕಾರ್ಯ ಬಹಳ ದೊಡ್ಡದು. ಅಶ್ಲೀಲ ಸಂಭಾಷಣೆಯಿಂದ ಕೂಡಿರುವ ಹಾಗೂ ಹೊಡಿಬಡಿ ಚಿತ್ರಗಳೇ ಹೆಚ್ಚು ಬರುತ್ತಿರುವ ಈ ಕಾಲದಲ್ಲಿ ನಾಡಿನ ಹರಿದಾಸರ ಬಗ್ಗೆ ಇಂದಿನ ಜನತೆಗೆ ಪರಿಚಯಿಸುವ ಚಿತ್ರಗಳನ್ನು ಮಧುಸೂದನ್ ಹವಾಲ್ದಾರ್ ಅವರು ನಿರ್ಮಾಣ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇದರ ಉಪಯೋಗವನ್ನು ಹೆಚ್ಚಾಗಿ ಯುವಜನತೆ ಪಡೆದುಕೊಳ್ಳಬೇಕು. ʼಶ್ರೀ ಜಗನ್ನಾಥದಾಸರು ಭಾಗ 2ʼ ಚಿತ್ರ ಅತ್ಯಂತ ಯಶಸ್ವಿಯಾಗಲಿ ಎಂದು ತಿಳಿಸಿದರು. ‌

ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಚಲನಚಿತ್ರ ತಂಡದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ | Monsoon Shopping Styling Tips: ಮಾನ್ಸೂನ್ ಸೀಸನ್ ಶಾಪಿಂಗ್ ಸ್ಟೈಲಿಂಗ್‌ಗೆ ಇಲ್ಲಿದೆ 5 ಐಡಿಯಾ

ಮಾತಾಂಬುಜ ಮೂವೀಸ್ ಲಾಂಛನದಲ್ಲಿ ಮಧುಸೂದನ್ ಹವಾಲ್ದಾರ್ ಅವರೇ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರ ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ.