Monsoon Shopping Styling Tips: ಮಾನ್ಸೂನ್ ಸೀಸನ್ ಶಾಪಿಂಗ್ ಸ್ಟೈಲಿಂಗ್ಗೆ ಇಲ್ಲಿದೆ 5 ಐಡಿಯಾ
Monsoon Shopping Styling Tips: ಮಾನ್ಸೂನ್ ಸೀಸನ್ನಲ್ಲಿ ಶಾಪಿಂಗ್ ಮಾಡುವುದು ಸುಲಭವೇನಲ್ಲ! ಮಳೆ-ಗಾಳಿಯ ಭರಾಟೆಯಲ್ಲಿ ಕಿರಿಕಿರಿ ಎಂದೆನಿಸುವುದು ಸಹಜ. ಹಾಗಾಗಿ ಈ ಸೀಸನ್ನಲ್ಲಿ ಆರಾಮವಾಗಿ ಒಂದಿಷ್ಟು ಸ್ಟೈಲಿಂಗ್ ಟಿಪ್ಸ್ ಪಾಲಿಸಿದಲ್ಲಿ ಕಂಫರ್ಟಬಲ್ ಆಗಿ ಶಾಪಿಂಗ್ ಮಾಡಬಹುದು. ಇದಕ್ಕಾಗಿ ಒಂದೈದು ಸಿಂಪಲ್ ಐಡಿಯಾ ನೀಡಿದ್ದಾರೆ ಸ್ಟೈಲಿಂಗ್ ಎಕ್ಸ್ಪರ್ಟ್ಸ್.
ಚಿತ್ರ ಕೃಪೆ: ಪಿಕ್ಸೆಲ್ -
ಶೀಲಾ ಸಿ ಶೆಟ್ಟಿ
Jun 10, 2025 8:00 AM
ಮಾನ್ಸೂನ್ನಲ್ಲಿ ಶಾಪಿಂಗ್ಗೆ ಹೋಗುವಾಗ ಧರಿಸುವ ಔಟ್ಫಿಟ್ ಬಗ್ಗೆಯೂ ಗಮನಹರಿಸುವುದು ಅಗತ್ಯ. ಮಾನ್ಸೂನ್ನಲ್ಲಿ ಬೇಸಿಗೆಯಲ್ಲಿ ಧರಿಸುವಂತಹ ಉಡುಪುಗಳನ್ನು ಧರಿಸಿ ಹೋಗುವುದು ಔಟ್ ಆಫ್ ಟ್ರೆಂಡ್ ಮಾತ್ರವಲ್ಲ, ನೋಡಲು ಚೆನ್ನಾಗಿ ಕಾಣಿಸದು ಕೂಡ. ಇನ್ನು ಶಾಪಿಂಗ್ಗೆ ಹೋಗುವಾಗ ಆದಷ್ಟೂ ಆರಾಮದಾಯಕ ಎನಿಸುವ ಔಟ್ಫಿಟ್ಗಳನ್ನೇ ಧರಿಸುವುದು ಉತ್ತಮ. ಈ ಸೀಸನ್ನಲ್ಲಿ ಫ್ಯಾಷನ್ವೇರ್ ಶಾಪಿಂಗ್ ಮಾಡುವವರು ಇದರ ಜತೆಗೆ ಒಂದಿಷ್ಟು ಸ್ಟೈಲಿಂಗ್ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ ಎನ್ನುವ ಸ್ಟೈಲಿಸ್ಟ್ ಜೆನ್. ಈ ಕುರಿತಂತೆ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ.
ಔಟ್ಫಿಟ್ ಲುಕ್ ಹೀಗಿರಲಿ
ಮಳೆಗಾಲದಲ್ಲಿ ಹೊರ ಹೋಗಬೇಕಾದಾಗ ಧರಿಸುವ ಔಟ್ಫಿಟ್ ಹೆಚ್ಚು ಚಳಿಯಾಗುವಂತಿರಬಾರದು. ಹಾಗೆಂದು ಒಂದರ ಮೇಲೊಂದು ಲೇಯರ್ ಲುಕ್ ಧರಿಸಿ, ಶಾಪಿಂಗ್ಗೆ ಹೋದಲ್ಲಿ ನೀವು ಕೊಳ್ಳುವ ಡ್ರೆಸ್ಗಳನ್ನು ಟ್ರಯಲ್ ಮಾಡಲು ಸಾಧ್ಯವಿಲ್ಲ. ಹಾಗಾಗಿ ಆದಷ್ಟೂ ಸಿಂಪಲ್ ಆಗಿರುವಂತಹ ಫ್ರಾಕ್, ಕಾಟನ್ ಕುರ್ತಾ, ಟೀ ಶರ್ಟ್ ಟಾಪ್ಗಳನ್ನು ಧರಿಸುವುದು ಉತ್ತಮ. ಜೀನ್ಸ್ ಬದಲು ಕೇಪ್ರೀಸ್, ಕ್ಯುಲ್ಲೋಟ್ಸ್, ಶಾರ್ಟ್ ಲೆಗ್ಗಿಂಗ್ಸ್ ಧರಿಸುವುದು ಉತ್ತಮ.
ಸಿಂಪಲ್ ಹೇರ್ ಸ್ಟೈಲ್ ನಿಮ್ಮದಾಗಿರಲಿ
ಸಿಂಪಲ್ ಬನ್ ಹೇರ್ಸ್ಟೈಲ್, ಬ್ರೈಡ್ ಅಥವಾ ಪೋನಿಟೇಲ್ ಹಾಕಿದಲ್ಲಿ ಶಾಪಿಂಗ್ ಮಾಡುವಾಗ ಹೆಚ್ಚು ಕಿರಿಕಿರಿಯಾಗದು. ಫ್ರೀ ಹೇರ್ ಸ್ಟೈಲ್ ನಿಮ್ಮದಾಗಿದ್ದಲ್ಲಿ ಇದೀಗ ಟ್ರೆಂಡಿಯಾಗಿರುವ ಬಿಗ್ ಹೇರ್ ಬ್ಯಾಂಡನ್ನು ನೆತ್ತಿ ಮೇಲೆ ಹಾಕಿ. ಆಕರ್ಷಕವಾಗಿ ಕಾಣುವುದು.
ಹೆವ್ವಿ ಮೇಕಪ್ ಬೇಡ
ಶಾಪಿಂಗ್ ಸಮಯದಲ್ಲಿ ಹೆವ್ವಿ ಮೇಕಪ್ ಹಾಕಬೇಡಿ. ಸಿಂಪಲ್ ಮೇಕಪ್ ಸಾಕು. ಹೊರಾಂಗಣದಲ್ಲಿ ಮಳೆಯಲ್ಲಿ ನೆನೆದಾಗ ಮೇಕಪ್ ಮಾಡಿದ ಮುಖದ ಕಾಸ್ಮೆಟಿಕ್ಸ್ ಎಲ್ಲೆಡೆ ಹರಡಬಹುದು. ಆದಷ್ಟೂ ವಾಟರ್ ಪ್ರೂಫ್ ಸೌಂದರ್ಯವರ್ಧಕಗಳನ್ನು ಬಳಸಿ, ನಂತರ ಹೊರ ಹೋಗಿ.
ಜಾಕೆಟ್/ರೈನ್ ಕೋಟ್ ಜತೆಗಿರಲಿ
ಮಳೆಯ ಮುನ್ಸೂಚನೆ ಇದ್ದಾಗ ಆದಷ್ಟೂ ಜಾಕೆಟ್ ಹಾಗೂ ರೈನ್ ಕೋಟ್ ಜತೆಗಿರಿಸಿಕೊಳ್ಳುವುದು ಉತ್ತಮ. ಶಾಪಿಂಗ್ ಹೋಗುವಾಗ ಅತಿ ಹೆಚ್ಚು ನಡೆದಾಡುವುದು ಇರುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಹೈ ಹೀಲ್ಸ್ ಧರಿಸಬೇಡಿ. ಮಳೆಯಲ್ಲಿ, ಲೆದರ್ನ ಚಪ್ಪಲಿ ಧರಿಸುವುದನ್ನು ಅವಾಯ್ಡ್ ಮಾಡಿ. ನೀರಿಗೆ ಜಾರದಂತಹ ಹಾಗೂ ಕಂಫರ್ಟಬಲ್ ಆಗಿರುವ ಫ್ಲಿಪ್ಫ್ಲಾಪ್ ನಂತಹ ಸ್ಯಾಂಡಲ್ಗಳನ್ನು ಇಲ್ಲವೇ ಫ್ಲ್ಯಾಟ್ ಚಪ್ಪಲಿಗಳನ್ನು ಧರಿಸಬಹುದು. ಆಗ ಎಷ್ಟು ಸಮಯವಾದರೂ ಆರಾಮವಾಗಿ ಶಾಪಿಂಗ್ ಮಾಡಬಹುದು.