ಹಿಂದಿ ಕಿರುತೆರೆಯ ನಟ ಸಿದ್ಧಾಂತ್ ಸೂರ್ಯವಂಶಿ ನಿಧನ
ಹಿಂದಿ ಕಿರುತೆರೆಯ ನಟ ಸಿದ್ಧಾಂತ್ ಸೂರ್ಯವಂಶಿ ನಿಧನ
-
Vishwavani News
Nov 11, 2022 5:38 PM
ನವದೆಹಲಿ: ಹಿಂದಿ ಕಿರುತೆರೆಯ ಜನಪ್ರಿಯ ಮುಖ, 'ಕುಸುಮ್' ಮತ್ತು 'ಕಸೌತಿ ಜಿಂದಗಿ ಕೇ' ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ನಟ ಸಿದ್ಧಾಂತ್ ಸೂರ್ಯವಂಶಿ ಅವರು ಶುಕ್ರವಾರ ಅಕಾಲಿಕ ಮರಣಕ್ಕೀಡಾಗಿದ್ದಾರೆ .
ವರದಿಗಳ ಪ್ರಕಾರ, ನಟ ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪತ್ನಿ ಮತ್ತು ಅವರ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಛಾಯಾಗ್ರಾಹಕ ವಿರಲ್ ಭಯಾನಿ ಅವರು ಸುದ್ದಿಯನ್ನು ಹಂಚಿಕೊಂಡಿದ್ದು, ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಅವರಿಗೆ ಹೃದಯಾಘಾತವಾಗಿದೆ. ನಾವು ಈ ವರ್ಷ ಸಾಕಷ್ಟು ಯುವಕರನ್ನು ಕಳೆದು ಕೊಂಡಿದ್ದೇವೆ. ಅವನು ತನ್ನ ಹೆಂಡತಿ ಅಲೆಸಿಯಾ ಳೊಂದಿಗೆ ಹಲವಾರು ಬಾರಿ ಅವನನ್ನು ಭೇಟಿ ಮಾಡಿದ್ದೆ, ಆತ ಫಿಟ್ ಆಗಿದ್ದ ಆತನಿಗೆ ಏಕೆ ಹೀಗೆ ಆಯ್ತು ಎಂದು ನನಗೆ ತಿಳಿದಿಲ್ಲ. ಅವರ ಕುಟುಂಬಕ್ಕೆ ಸಂತಾಪಗಳು. ಓಂ ಶಾಂತಿ.'
ಸಿದ್ಧಾಂತ್ ಅವರು ಇತ್ತೀಚೆಗೆ ತಮ್ಮ ಹೆಸರನ್ನು ಆನಂದ್ ನಿಂದ ಸಿದ್ಧಾಂತ್ ಸೂರ್ಯವಂಶಿ ಎಂದು ಬದಲಾಯಿಸಿಕೊಂಡಿದ್ದರು.