ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

20ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿರುವ ಗಾಯಕಿ ಆಶಾ ಭೋಸ್ಲೆ; ಧುರಂಧರ್‌ನಲ್ಲೂ ಸೂಪರ್‌ ಹಿಟ್‌ ಆಯ್ತು ʼಪಿಯಾʼ ಸಾಂಗ್‌

Singer Asha Bhosle: ಹಿರಿಯ ಗಾಯಕಿ ಆಶಾ ಭೋಸ್ಲೆ ಅವರ ಎಂಟು ದಶಕಗಳ ದೀರ್ಘ ವೃತ್ತಿಜೀವನದಲ್ಲಿ ಅವರು ಹಾಡಿದ ಘಜಲ್‌ಗಳು, ಪಾಪ್ ಹಾಡುಗಳು ಮತ್ತು ಡ್ಯೂಯೆಟ್‌ಗಳನ್ನು ನೆನೆದು ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ಎಲ್ಲ ಪೀಳಿಗೆಯವರಿಗೂ ಇಷ್ಟವಾಗಿರುವ ವಿಶೇಷ ಹಾಡು ಎಂದರೆ ಪಿಯಾ ತು ಅಬ್ ತೊ ಆಜಾ. ಇದು ಕ್ಯಾರವಾನ್ ಸಿನಿಮಾದ ಹಾಡು.

ಇತ್ತೀಚೆಗೆ ಆಶಾ ಭೋಸ್ಲೆ ಹಾಡಿದ್ದ ಧುರಂಧರ್ ಹಾಡು ಸೂಪರ್‌ಹಿಟ್

ಮುಂಬೈ, ಏ.12: ಏಪ್ರಿಲ್ 11ರಂದು ಎದೆ ಸೋಂಕಿನ ಕಾರಣದಿಂದ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ನಂತರ ಆಶಾ ಭೋಸ್ಲೆ (Asha Bhosle) ನಿಧನರಾದ ಸುದ್ದಿ ಹೊರಬಂದಾಗ, ಅಭಿಮಾನಿಗಳು ಅವರ ಎಂಟು ದಶಕಗಳ ದೀರ್ಘ ವೃತ್ತಿಜೀವನದಲ್ಲಿ ಅವರು ಹಾಡಿದ ಘಜಲ್‌ಗಳು, ಪಾಪ್ ಹಾಡುಗಳು ಮತ್ತು ಡ್ಯೂಯೆಟ್‌ಗಳನ್ನು ನೆನೆದು ಶ್ರದ್ಧಾಂಜಲಿ ಸಲ್ಲಿಸಿದರು. ಹಿರಿಯ ಗಾಯಕಿ ಆಶಾ ಭೋಸ್ಲೆ 20ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ (Indian languages) ಸಾವಿರಾರು ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.

ಆದರೆ ಎಲ್ಲ ಪೀಳಿಗೆಯವರಿಗೂ ಇಷ್ಟವಾಗಿರುವ ವಿಶೇಷ ಹಾಡು ಎಂದರೆ ಪಿಯಾ ತು ಅಬ್ ತೊ ಆಜಾ. ಇದು ಕ್ಯಾರವಾನ್ ಸಿನಿಮಾದ ಹಾಡು. ಈ ಚಿತ್ರದಲ್ಲಿ ಆಶಾ ಪರೇಖ್, ಜಿತೇಂದ್ರ ಮತ್ತು ಅರುಣ ಇರಾನಿ ಅಭಿನಯಿಸಿದ್ದಾರೆ. 1971ರಿಂದ ಇಂದಿನವರೆಗೂ ಈ ಹಾಡಿನ ಅನೇಕ ರಿಮಿಕ್ಸ್‌ಗಳು ಬಿಡುಗಡೆಯಾಗಿದೆ. ಇತ್ತೀಚೆಗೆ ಹಾಡಿದ ಧುರಂಧರ್ ಸಿನಿಮಾದ ಹಾಡು ಕೂಡ ಸೂಪರ್‌ಹಿಟ್ ಆಗಿ ಹೊರಹೊಮ್ಮಿದೆ.

ಈ ಹಾಡನ್ನು ನೀವು ಧುರಂಧರ್ ಚಿತ್ರದ ಹೈ-ಡ್ರಾಮಾ ಚೇಸ್ ಸೀಕ್ವೆನ್ಸ್‌ನಿಂದ ನೆನಪಿಸಿಕೊಳ್ಳಬಹುದು. ಆ ದೃಶ್ಯದಲ್ಲಿ ಹಂಝಾ ಅಲಿ ಮಜಾರಿ (ರಣವೀರ್ ಸಿಂಗ್) ಯಲಿನಾ (ಸಾರಾ ಅರ್ಜುನ್) ಅವರನ್ನು ಲಿಯಾರಿ ಕ್ಲಬ್ ಮೇಲೆ ಪೊಲೀಸರು ದಾಳಿ ನಡೆಸಿದ ನಂತರ ರಕ್ಷಿಸುತ್ತಿರುವುದು ತೋರಿಸಲಾಗುತ್ತದೆ.

ಜೆನ್ ಝಿ ತಲೆಮಾರನ್ನೂ ಸೆಳೆಯುವ ಆಶಾ ಭೋಸ್ಲೆ ಹಾಡಿರುವ 10 ಐಕಾನಿಕ್ ಹಾಡುಗಳು

ಆದರೆ ಈ ಹಾಡನ್ನು ಆಶಾ ಭೋಸ್ಲೆ ಮೊದಲ ಬಾರಿಗೆ ಹಾಡಿದ ಹಿನ್ನೆಲೆಯ ಕಥೆ, ಆದಿತ್ಯಾ ಧಾರ್ ನಿರ್ದೇಶನದ ಚಿತ್ರದಲ್ಲಿ ನೀವು ನೋಡಿದ ಚೇಸ್ ಸನ್ನಿವೇಶಕ್ಕಿಂತಲೂ ಹೆಚ್ಚು ರೋಚಕವಾಗಿದೆ.

ಪಿಯಾ ತು ಹಾಡು ಹೇಗೆ ಸೂಪರ್‌ಹಿಟ್ ಆಯಿತು ಎಂಬ ಕಥೆ ಇಲ್ಲಿದೆ

ವರದಿಗಳ ಪ್ರಕಾರ, ಆಶಾ ಭೋಸ್ಲೆ ಈ ಹಾಡನ್ನು ಹಾಡಲು ಒಪ್ಪಿಕೊಂಡರೂ, ಅವರಿಗೆ ಆರ್.ಡಿ. ಬರ್ಮನ್ ವಿರುದ್ಧ ಒಂದು ಅಸಮಾಧಾನವಿತ್ತು. ಅವರು ತಮಗೆ ಸದಾ ಬೋಲ್ಡ್ ರೀತಿಯ ಹಾಡುಗಳನ್ನೇ ನೀಡುತ್ತಿದ್ದಾರೆ ಎಂಬುದು ಅವರ ದೂರಾಗಿತ್ತು. ಆದರೆ ಈ ಹಾಡು ಖಂಡಿತವಾಗಿಯೂ ದೊಡ್ಡ ಹಿಟ್ ಆಗುತ್ತದೆ ಎಂಬ ವಿಶ್ವಾಸ ಆರ್.ಡಿ. ಬರ್ಮನ್ ಅವರಿಗೆ ಇತ್ತು. ಅಂತಿಮವಾಗಿ ಅವರ ಮಾತು ನಿಜವಾಯಿತು.

ಆದರೆ ಈ ಹಾಡಿನ ರೆಕಾರ್ಡಿಂಗ್‌ನಲ್ಲಿನ ಅತ್ಯಂತ ಆಸಕ್ತಿದಾಯಕ ಭಾಗ ಎಂದರೆ ಗೀತರಚನಾಕಾರರ ಪ್ರತಿಕ್ರಿಯೆ. ಹಿರಿಯ ಗಾಯಕಿ ಆಶಾ ಭೋಸ್ಲೆ ಸ್ಟುಡಿಯೋದಲ್ಲಿ ಈ ಹಾಡನ್ನು ರೆಕಾರ್ಡ್ ಮಾಡುತ್ತಿದ್ದಾಗ, ಗೀತರಚನಾಕಾರ ಮಜ್ರೂಹ್ ಸುಲ್ತಾನ್ಪುರಿ ಅಲ್ಲಿಂದ ಹೊರನಡೆದರು. ಏಕೆಂದರೆ, ತಮ್ಮದೇ ಸಾಹಿತ್ಯದ ಬಗ್ಗೆ ಅವರು ಮುಜುಗುರಕ್ಕೊಳಗಾಗಿದ್ದರಂತೆ.

ಪಿಯಾ ತು ಅಬ್ ತೋ ಆಜಾ ಜೊತೆಗೆ, ಆಶಾ ಭೋಂಸ್ಲೆ ಅವರು ಹರೇ ರಾಮ ಹರೇ ಕೃಷ್ಣ ಮತ್ತು ದಮ್ ಮಾರೋ ದಮ್ ಹಾಡುಗಳನ್ನು ಸಹ ಹಾಡಿದರು. ಇವು ಅವರ ಕಾಲದಲ್ಲಿ ವಿವಾದಾತ್ಮಕ ಹಾಡುಗಳೆಂದು ಪರಿಗಣಿಸಲ್ಪಟ್ಟವು. ಆದರೆ ಇಂದು ಅವು ಅವರ ಅತ್ಯಂತ ಸ್ಮರಣೀಯ ಹಾಡುಗಳಲ್ಲೊಂದಾಗಿವೆ.

ಆಶಾ ಭೋಂಸ್ಲೆ ಏಪ್ರಿಲ್ 12, 2026 ರಂದು ನಿಧನರಾದರು. ಅವರ ಸುದೀರ್ಘ ವೃತ್ತಿಜೀವನದಲ್ಲಿ, ಅವರು ಪ್ರಸಿದ್ಧ ಹಾಡುಗಳನ್ನು ಹಾಡಿದ್ದಲ್ಲದೆ, ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದರು. ಅವರು ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ ಏಳು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದರು ಮತ್ತು ಪದ್ಮವಿಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವಕ್ಕೂ ಪಾತ್ರರಾಗಿದ್ದರು.