ಜೆನ್ ಝಿ ತಲೆಮಾರನ್ನೂ ಸೆಳೆಯುವ ಆಶಾ ಭೋಸ್ಲೆ ಹಾಡಿರುವ 10 ಐಕಾನಿಕ್ ಹಾಡುಗಳು
ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರು ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರು ಹಾಡಿರುವ ಹಾಡುಗಳು ಇವತ್ತಿನ ಪೀಳಿಗೆಯೂ ಗುನುಗುನಿಸುತ್ತದೆ. ಇದಕ್ಕೆ ಕಾರಣ ಅವರ ಧ್ವನಿ ಬೀರಿರುವ ಪ್ರಭಾವ. ಚುರಾ ಲಿಯಾ ಹೈ ತುಮ್ನೆ ಜೋ ನಂತಹ ಪ್ರಣಯ ಹಾಡುಗಳಿಂದ ಹಿಡಿದು ಹಂಗಾಮಾ ಹೋ ಗಯಾ ನಂತಹ ಹಲವಾರು ಲವಲವಿಕೆಯ ಹಾಡುಗಳನ್ನು ಹಾಡಿರುವ ಆಶಾ ಭೋಸ್ಲೆ ಅವರ ಹಾಡುಗಳು ಇಂದಿನ ಯುವಜನರ ಪ್ಲೇಪಟ್ಟಿಯಲ್ಲೂ ಸ್ಥಾನ ಪಡೆದಿದೆ. ಅಂತಹ ಹತ್ತು ಹಾಡುಗಳು ಇಲ್ಲಿವೆ.
ಆಶಾ ಭೋಸ್ಲೆ (ಸಂಗ್ರಹ ಚಿತ್ರ) -
ಸ್ವರ ಸಾಮ್ರಾಜ್ಞಿ ಆಶಾ ಭೋಸ್ಲೆ ಅವರ ನಿಧನದೊಂದಿಗೆ ಹಿಂದಿ ಸಂಗೀತದ ಒಂದು ಯುಗಾಂತ್ಯವಾಗಿದೆ. ಆದರೆ ಅವರ ಧ್ವನಿ ನಿರಂತರ ಪ್ರಭಾವ ಬಿರುವಂತೆ ಒಂದು ವಿಶಿಷ್ಟ ಸಂಗೀತ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅವರ ನಿಧನದ ಈ ಸಂದರ್ಭದಲ್ಲಿ ಜಗತ್ತು ಶೋಕಿಸುತ್ತಿದ್ದರೂ ಅವರು ಹಾಡಿರುವ ಹಾಡುಗಳು ನಿರಂತರ ಪ್ಲೇಪಟ್ಟಿಯಲ್ಲೂ ಸ್ಥಾನ ಪಡೆಯುತ್ತದೆ. ಚುರಾ ಲಿಯಾ ಹೈ ತುಮ್ನೆ ಜೋ ನಂತಹ ಪ್ರಣಯ ಹಾಡುಗಳಿಂದ ಹಿಡಿದು ಹಂಗಾಮಾ ಹೋ ಗಯಾ ನಂತಹ ಲವಲವಿಕೆಯ ಹಾಡುಗಳವರೆಗೆ ಅವರು ಹಾಡಿರುವ ಎವರ್ ಗ್ರೀನ್ ಹಾಡುಗಳು ಇಲ್ಲಿವೆ.
ಅಭಿ ನಾ ಜಾವೋ ಛೋಡ್ ಕರ್
1961ರ ದಶಕದ ಈ ಹಾಡು ಹಮ್ ದೋನೋ ಚಿತ್ರದ್ದು. ದೇವ್ ಆನಂದ್ ಮತ್ತು ಸಾಧನಾ ಅವರಿಗಾಗಿ ಆಶಾ ಭೋಸ್ಲೆ ಅವರು ಹಾಡಿರುವ ಈ ಹಾಡು ಅಗಲುವ ಪ್ರೇಮಿಗಳ ಭಾವನಾತ್ಮಕ ಸೆಳೆತವನ್ನು ಸೆರೆಹಿಡಿದಿದೆ.
ದೋ ಲಫ್ಜೋನ್ ಕಿ ಹೈ ದಿಲ್ ಕಿ ಕಹಾನಿ
1979ರ ದಶಕದಲ್ಲಿ ವೆನಿಸ್ನಲ್ಲಿ ಅಮಿತಾಬ್ ಬಚ್ಚನ್ ಮತ್ತು ಜೀನತ್ ಅಮನ್ ಅವರಿಗಾಗಿ ಚಿತ್ರೀಕರಿಸಿದ ಈ ಹಾಡಿನಲ್ಲಿ ಸಂಗೀತದ ಮೋಡಿ ಎದ್ದು ಕಾಣುತ್ತದೆ. ಆಶಾ ಅವರ ಧ್ವನಿಯು ಪ್ರೇಮಿಗಳ ಪ್ರಣಯ ಆಕರ್ಷಣೆಯನ್ನು ಹೆಚ್ಚಿಸುವಂತಿದೆ.
ಓ ಹಸೀನಾ ಜುಲ್ಫೋನ್ವಾಲಿ
1966ರ ದಶಕದ ತೆರೆಕಂಡ ಚಿತ್ರ ತೀಸ್ರಿ ಮಂಜಿಲ್ ನ ಈ ಹಾಡನ್ನು ಶಮ್ಮಿ ಕಪೂರ್ ಮತ್ತು ಹೆಲೆನ್ ಅವರಿಗಾಗಿ ಆಶಾ ಅವರು ಹಾಡಿದ್ದರು. ಅವರ ಧ್ವನಿಗೆ ತಕ್ಕಂತ ಲವಲವಿಕೆಯ ನೃತ್ಯ ಸಂಯೋಜನೆಯು ಇಂದಿಗೂ ಅಭಿಮಾನಿಗಳ ನೆನಪಿನಲ್ಲಿ ಉಳಿದಿದೆ.
ಪಿಯಾ ತು ಅಬ್ ತೋ ಆಜಾ
1971ರ ದಶಕದಲ್ಲಿ ಹೆಲೆನ್ ಅವರನ್ನು ಒಳಗೊಂಡ ಕ್ಯಾರವಾನ್ನ ಈ ಹಾಡು ಹಿಂದಿ ಸಿನಿಮಾದಲ್ಲಿ ಕ್ಯಾಬರೆಯನ್ನು ಮರು ಪರಿಚಯಿಸಿತ್ತು. ಈ ಹಾಡು ಆಶಾ ಅವರ ಧ್ವನಿಯ ಉತ್ಸಾಹದಿಂದಾಗಿ ಇಂದಿಗೂ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.
ಏಕ್ ಮೈ ಔರ್ ಏಕ್ ತು
ರಿಷಿ ಕಪೂರ್ ಮತ್ತು ನೀತು ಸಿಂಗ್ ನಟಿಸಿದ ಖೇಲ್ ಖೇಲ್ ಮೇ ಚಿತ್ರದ 1975ರ ದಶಕದ ಈ ಹಾಡು ಯೌವ್ವನದ ನಿರಾತಂಕದ ಕಂಪನ್ನು ಪ್ರತಿಬಿಂಬಿಸುತ್ತದೆ. ಹೀಗಾಗಿ ಇಂದಿಗೂ ಶಾಶ್ವತವಾಗಿ ಜನರ ಮನದಲ್ಲಿ ಉಳಿದಿದೆ.
ಆಖೋ ಕಿ ಮಸ್ತಿ
ರೇಖಾ ಅಭಿನಯದ 1981ರಲ್ಲಿ ತೆರೆಕಂಡ ಉಮ್ರಾವ್ ಜಾನ್ ಚಿತ್ರದ ಪ್ರಸಿದ್ಧ ಹಾಡು ಆಖೋ ಕಿ ಮಸ್ತಿ ಇಂದಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಪ್ರಮುಖ ಪ್ರಶಸ್ತಿ ಸಮಾರಂಭದಲ್ಲಿ ಇದನ್ನು ನುಡಿಸಲಾಗುತ್ತದೆ.
ಜಬ್ ಚಾಯೇ ಮೇರಾ ಜಾದು
1980ರ ದಶಕದಲ್ಲಿ ತೆರೆಕಂಡ ಲೂಟ್ಮಾರ್ ಚಿತ್ರದ ಈ ಹಾಡು ದೇವ್ ಆನಂದ್ ಮತ್ತು ಟೀನಾ ಮುನಿಮ್ ಅವರಿಗಾಗಿ ಆಶಾ ಹಾಡಿದ್ದರು. ಇದು ಪ್ರಪಂಚದಾದ್ಯಂತದ ಹಿಂದಿ ಸಂಗೀತ ಪ್ರಿಯರನ್ನು ಇವತ್ತಿಗೂ ಆಕರ್ಷಿಸುತ್ತಿದೆ.
ಖತೌಬಾ
1980ರ ದಶಕದಲ್ಲಿ ಅಲಿಬಾಬಾ ಔರ್ 40 ಚೋರ್ ಚಿತ್ರದ ಈ ಹಾಡನ್ನು ಜೀನತ್ ಅಮನ್ ಗಾಗಿ ಚಿತ್ರೀಕರಿಸಲಾಗಿತ್ತು. ವಿಶಿಷ್ಟ ಲಯ ಮತ್ತು ಸ್ವರಕ್ಕಾಗಿ ಇವತ್ತಿಗೂ ಪ್ರಸಿದ್ದಿ ಉಳಿಸಿಕೊಂಡಿರುವ ಈ ಹಾಡಿಗೆ ಧ್ವನಿಯಾಗಿದ್ದು ಆಶಾ ಭೋಂಸ್ಲೆ.
ಹಂಗಾಮಾ ಹೋ ಗಯಾ
1973ರ ದಶಕದಲ್ಲಿ ತೆರೆಕಂಡ ಅನ್ಹೋನಿ ಚಿತ್ರಕ್ಕಾಗಿ ಬಿಂದು ಮತ್ತು ಸಂಜೀವ್ ಕುಮಾರ್ ಅವರಿಗಾಗಿ ಈ ಹಾಡನ್ನು ಆಶಾ ಹಾಡಿದ್ದರು. ಇವತ್ತಿಗೂ ಈ ಹಾಡು ಸಂಗೀತ ಪ್ರಿಯರನ್ನು ಒಂದುಗೂಡಿಸುತ್ತದೆ.