ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rani Kapur: ಕರಿಷ್ಮಾ ಕಪೂರ್‌ ಮಾಜಿ ಪತಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತ!

ಸಂಜಯ್ ಕಪೂರ್ ಅವರು ನಿಧನರಾಗಿ 1 ತಿಂಗಳು ಕಳೆದಿವೆ. ಅವರ ಹಠಾತ್ ಮರಣದ ಒಂದು ತಿಂಗಳ ನಂತರ ಅವರ ತಾಯಿ ರಾಣಿ ಕಪೂರ್ ಅವರು ಮಗನ ಸಾವಿನ ಕುರಿತು ಅನುಮಾನ ವ್ಯಕ್ತ ಪಡಿಸಿದ್ದಾರೆ. ಕಂಪೆನಿಯ ಸೋನಾ ಕಾಮ್‌ಸ್ಟಾರ್ ಮತ್ತು ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗೆ ಪತ್ರ ಒಂದನ್ನು ಬರೆದಿದ್ದಾರೆ. ತಮ್ಮ ಮಗನ ಸಾವು ಆಕಸ್ಮಿಕ ಎಂಬ ಬಗ್ಗೆ ಅನುಮಾನಾಸ್ಪದ ಅಂಶಗಳನ್ನು ಈ ಮೂಲಕ ಹಂಚಿಕೊಂಡಿದ್ದು, ಸದ್ಯ ಈ ವಿಚಾರ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಕರಿಷ್ಮಾ ಕಪೂರ್‌ ಮಾಜಿ ಪತಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತ!

Rani Kapur

Profile Pushpa Kumari Jul 25, 2025 5:20 PM

ನವದೆಹಲಿ: ಬಾಲಿವುಡ್ ನ ಖ್ಯಾತ ನಟಿ ಕರಿಷ್ಮಾ ಕಪೂರ್(Karishma Kapoor) ಅವರ ಮಾಜಿ ಪತಿ, ಉದ್ಯಮಿ ಸಂಜಯ್ ಕಪೂರ್ (Sunjay Kapur) ಅವರು ನಿಧನರಾಗಿ 1 ತಿಂಗಳು ಕಳೆದಿವೆ. ಅವರ ಹಠಾತ್ ಮರಣದ ಒಂದು ತಿಂಗಳ ನಂತರ ಅವರ ತಾಯಿ ರಾಣಿ ಕಪೂರ್ ಅವರು ಮಗನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಕಂಪೆನಿಯ ಸೋನಾ ಕಾಮ್‌ಸ್ಟಾರ್ ಮತ್ತು ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗೆ ಪತ್ರ ಒಂದನ್ನು ಬರೆದಿದ್ದಾರೆ. ತಮ್ಮ ಮಗನ ಸಾವು ಆಕಸ್ಮಿಕ ಎಂಬ ಬಗ್ಗೆ ಅನುಮಾನಾಸ್ಪದ ಅಂಶಗಳನ್ನು ಈ ಮೂಲಕ ಹಂಚಿಕೊಂಡಿದ್ದು ಸದ್ಯ ಈ ವಿಚಾರ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಉದ್ಯಮಿ ಸಂಜಯ್ ಕಪೂರ್ ಅವರು ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದ ಆಟೋಮೋಟಿವ್ ಬಿಡಿ ಭಾಗ ಉತ್ಪಾದನಾ ಸಂಸ್ಥೆಯಾದ ಸೋನಾ ಕಮ್ ಸ್ಟಾರ್ ನ ಅಧ್ಯಕ್ಷರಾಗಿದ್ದರು. ಸೋನಾ ಕಾಮ್‌ ಸ್ಟಾರ್ ಅನ್ನು ಅವರ ತಂದೆ ಸುರಿಂದರ್ ಕಪೂರ್ 1997 ರಲ್ಲಿ ಸ್ಥಾಪಿಸಿದ್ದರು. ಈಗ ಆ ಕಂಪೆನಿ ಪ್ರಪಂಚದಲ್ಲೇ ತನ್ನ ಪ್ರಾಬಲ್ಯ ಹೊಂದಿದೆ. ಕಂಪೆನಿಯ ಶೇರ್ ಬಹುತೇಕ ಸಂಜಯ್ ಅವರದ್ದೇ ಆಗಿದ್ದು ಅವರ ನಿಧನದ ಬಗ್ಗೆ ಅವರ ತಾಯಿ ರಾಣಿ ಕಪೂರ್ ಕೆಲ ವಿಚಾರಕ್ಕೆ ಅನುಮಾನ ವ್ಯಕ್ತಪಡಿಸಿ ಕಂಪೆನಿಯ ವಾರ್ಷಿಕ ಸಾಮಾನ್ಯ ಸಭೆ ಮುಂದೂಡಲು ಮನವಿ ಮಾಡಿದ್ದಾರೆ.

ನನ್ನ ಮಗ ಸಂಜಯ್ ಕಪೂರ್ ಕಳೆದ ತಿಂಗಳು ಯುನೈಟೆಡ್ ಕಿಂಗ್ ಡಮ್ ನಲ್ಲಿ ಮೃತ ರಾಗಿದ್ದಾರೆ. ಅವರ ಸಾವು ಅನುಮಾನಾಸ್ಪದವಾಗಿದ್ದು ಸಾವಿನ ಕಾರಣ ಇನ್ನು ಸರಿಯಾಗಿ ತಿಳಿದುಬಂದಿಲ್ಲ. ಅನೇಕ ಪ್ರಯತ್ನಗಳ ಹೊರತಾಗಿಯೂ, ನನ್ನ ಮಗನ ಸಾವಿನ ಬಗ್ಗೆ ನನಗೆ ಉತ್ತರಗಳನ್ನು ಪಡೆ ಯಲು ಸಾಧ್ಯವಾಗುತ್ತಿಲ್ಲ. ಮಗನ ಅಗಲುವಿಕೆ ಶೋಕದಲ್ಲಿರುವಾಗ ಕಂಪೆನಿ ವ್ಯವಹಾರಕ್ಕೆ ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಹೀಗಾಗಿ ವಾರ್ಷಿಕ ಸಾಮಾನ್ಯ ಸಭೆಯನ್ನು ಮುಂದೂಡು ವಂತೆ ಕೋರಿ ರಾಣಿ ಅವರು ಮನವಿ ಮಾಡಿದ್ದಾರೆ.

ಇದನ್ನು ಓದಿ:Ramayana Movie: ರಾಮಾಯಣಕ್ಕೋಸ್ಕರವೇ 10 ವರ್ಷ ಮೀಸಲಿಟ್ಟ ನಿರ್ದೇಶಕ; ಸಿನಿಮಾಗಾಗಿ ನಿತೇಶ್ ತಿವಾರಿ ಮಾಡಿದ ಅಧ್ಯಯನ ಹೇಗಿತ್ತು ಗೊತ್ತಾ?

ಕಂಪೆನಿಗೆ ಸಂಬಂಧ ಪಟ್ಟ ಆಡಳಿತದ ಕೆಲವು ದಾಖಲೆಗಳಿಗೆ ಕೆಲವರು ನನ್ನನ್ನು ಹಲವು ಬಾರಿ ಸಂಪರ್ಕಿಸಿದ್ದಾರೆ. ಈಗಾಗಲೇ ವಿವಿಧ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದ್ದಾರೆ. ಆ ದಾಖಲೆ ಪತ್ರದಲ್ಲಿ ಏನಿದೆ ಎಂಬುದು ಕೂಡ ನನಗೆ ಸರಿಯಾಗಿ ತಿಳಿದಿಲ್ಲ. ನಾನು ಅಪಾರ ಮಾನಸಿಕ ಒತ್ತಡ ಸಮಸ್ಯೆ ಅನುಭವಿಸುತ್ತಿದ್ದೇನೆ. ನಾನು ಪದೇ ಪದೇ ದಾಖಲೆ ಬಗ್ಗೆ ಪ್ರಶ್ನಿ ಸಿದರೂ, ವಿನಂತಿಸಿದರೂ, ಅಂತಹ ದಾಖಲೆಗಳ ವಿಷಯಗಳು ನನಗೆ ಎಂದಿಗೂ ಬಹಿರಂಗ ಪಡಿಸಿಲ್ಲ‌ ಎಂದು ಅವರು ಹೇಳಿದ್ದಾರೆ.

ಸೋನಾ ಕಾಮ್‌ಸ್ಟಾರ್‌ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಸಂಜಯ್ ಜೆ. ಕಪೂರ್ ಅವರು ನಟಿ ಕರಿಷ್ಮಾ ಕಪೂರ್ ಅವರನ್ನು ವಿವಾಹವಾಗಿದ್ದರು. ಬಳಿಕ ವೈಮನಸ್ಸು ಮೂಡಿ 2017ರಲ್ಲಿ ಪ್ರಿಯಾ ಸಚ್‌ದೇವ್ ಕಪೂರ್ ಅವರನ್ನು ವಿವಾಹವಾದರು. ಇವರು ಯುಕೆ ಯಲ್ಲಿ ನೆಲೆಸಿದ್ದರು. ಜೂನ್ 12, 2025 ರಂದು ಯುಕೆಯಲ್ಲಿ ಹಠಾತ್ ಹೃದಯಾಘಾತದಿಂದ ಅಕಾಲಿಕ ನಿಧನರಾಗಿದ್ದು ಇದೀಗ ಮಗನ ಸಾವಿನ ಬಗ್ಗೆ ಮತ್ತು ಕಂಪೆನಿಯ ಆಡಳಿತ ವೈಖರಿ ಬಗ್ಗೆ ಅವರ ತಾಯಿ ಅನುಮಾನ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನದಲ್ಲಿ ಈ ಬಗ್ಗೆ ಕೂಡ ತನಿಖೆ ಆಗುವ ಸಾಧ್ಯತೆ ಇದೆ.