ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Suthradhari Movie: ಸಿನಿಮಾ ಬಿಡುಗಡೆಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ʼಸೂತ್ರಧಾರಿʼ ಚಿತ್ರತಂಡ

Suthradhari Movie: ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ʼಸೂತ್ರಧಾರಿʼ ಚಿತ್ರ ಮೇ 9 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೂ ಮುನ್ನ ನಿರ್ಮಾಪಕ ನವರಸನ್, ನಿರ್ದೇಶಕ ಕಿರಣ್ ಕುಮಾರ್, ನಾಯಕ ಚಂದನ್ ಶೆಟ್ಟಿ ಹಾಗೂ ನಾಯಕಿ ಅಪೂರ್ವ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ʼಸೂತ್ರಧಾರಿʼ ಚಿತ್ರತಂಡ

Profile Siddalinga Swamy Apr 24, 2025 2:44 PM

ಬೆಂಗಳೂರು: ಖ್ಯಾತ ನಿರ್ಮಾಪಕ, ನಿರ್ದೇಶಕ ಹಾಗೂ ಈಗಲ್ ಮೀಡಿಯಾ ಕ್ರಿಯೇಷನ್ಸ್ ಸ್ಥಾಪಕ ನವರಸನ್ ನಿರ್ಮಾಣದ, ಕಿರಣ್ ಕುಮಾರ್ ನಿರ್ದೇಶನದ ಹಾಗೂ ಜನಪ್ರಿಯ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ʼಸೂತ್ರಧಾರಿʼ ಚಿತ್ರ (Suthradhari Movie) ಮೇ 9 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೂ ಮುನ್ನ ನಿರ್ಮಾಪಕ ನವರಸನ್, ನಿರ್ದೇಶಕ ಕಿರಣ್ ಕುಮಾರ್, ನಾಯಕ ಚಂದನ್ ಶೆಟ್ಟಿ ಹಾಗೂ ನಾಯಕಿ ಅಪೂರ್ವ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಚಿತ್ರ ಯಶಸ್ವಿಯಾಗಲೆಂದು ಏಳುಬೆಟ್ಟದ ಒಡೆಯನ ಹತ್ತಿರ ಚಿತ್ರತಂಡದ ಸದಸ್ಯರು ಪ್ರಾರ್ಥನೆ ಮಾಡಿದ್ದಾರೆ.

ಕಾಣಿಪಕ್ಕಂನ ಗಣೇಶ,‌ ತಿರುಚಾನೂರು ಪದ್ಮಾವತಿ ಅಮ್ಮನವರು ಹಾಗೂ ಗೋಲ್ಡನ್ ಟೆಂಪಲ್‌ನ ಮಹಾಲಕ್ಷ್ಮಿ ದೇವಸ್ಥಾನಕ್ಕೂ ಚಿತ್ರತಂಡದ ಸದಸ್ಯರು ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ | Akshaya Trutiya Special: ಅಕ್ಷಯ ತೃತೀಯಾಗೆ ಎಂಟ್ರಿ ಕೊಟ್ಟ ವೈವಿಧ್ಯಮಯ ಆಭರಣಗಳು

Suthradhari Movie: ಚಂದನ್ ಶೆಟ್ಟಿ ಅಭಿನಯದ ʼಸೂತ್ರಧಾರಿʼ ಚಿತ್ರ ಮೇ 9 ಕ್ಕೆ ರಿಲೀಸ್‌

ಬೆಂಗಳೂರು: ದಕ್ಷಿಣ ಭಾರತದಲ್ಲಿ ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಸಾಕಷ್ಟು ಇವೆಂಟ್‌ಗಳನ್ನು ನಡೆಸುತ್ತಿರುವ ಹಾಗೂ ಇತ್ತೀಚೆಗೆ ʼCWKLʼ ʼಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್ʼ ಅದ್ಧೂರಿಯಾಗಿ ಆಯೋಜಿಸಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿರುವ ನವರಸನ್ ತಮ್ಮ ಈಗಲ್ ಮೀಡಿಯಾ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಚಿತ್ರ ʼಸೂತ್ರಧಾರಿʼ (Suthradhari Movie). ಇದು ನವರಸನ್ ಅವರ ನಿರ್ಮಾಣದ ಐದನೇ ಚಿತ್ರ. ತಮ್ಮ ಗಾಯನ ಹಾಗೂ ಸಂಗೀತ ನಿರ್ದೇಶನದ ಮೂಲಕ ಮೋಡಿ ಮಾಡಿರುವ ಚಂದನ್ ಶೆಟ್ಟಿ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಇತ್ತೀಚೆಗೆ ಈ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ‌ಮಂಡಳಿ ಯು/ಎ ಪ್ರಮಾಣಪತ್ರವನ್ನು ನೀಡಿದೆ. ಬಹು ನಿರೀಕ್ಷಿತ ಈ ಚಿತ್ರ ಮೇ 9 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಚಂದನ್ ಶೆಟ್ಟಿ ಅವರೆ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಈಗಾಗಲೇ ಟ್ರೆಂಡಿಂಗ್‌ನಲ್ಲಿದೆ. ʼಡ್ಯಾಶ್ʼ ಸಾಂಗ್ ಅಂತೂ ನಿರೀಕ್ಷೆಗೂ ಮೀರಿ ಜನಪ್ರಿಯವಾಗಿದೆ. ಟೀಸರ್ ಹಾಗೂ ಹಾಡುಗಳ ಮೂಲಕ ಮೋಡಿ ಮಾಡಿರುವ ʼಸೂತ್ರಧಾರಿʼ ಚಿತ್ರದ ಬಿಡುಗಡೆಗೆ ಚಂದನ್ ಶೆಟ್ಟಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಿರಣ್ ಕುಮಾರ್ ನಿರ್ದೇಶಿಸಿದ್ದಾರೆ. ಪಿ.ಕೆ.ಎಚ್ ದಾಸ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನ ʼಸೂತ್ರಧಾರಿʼ ಚಿತ್ರಕ್ಕಿದೆ.‌ ಚಂದನ್ ಶೆಟ್ಟಿ ಅವರಿಗೆ ನಾಯಕಿಯಾಗಿ ಅಪೂರ್ವ ನಟಿಸಿದ್ದಾರೆ‌. ಸಂಜನಾ ಆನಂದ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ತಬಲನಾಣಿ, ಪ್ರಶಾಂತ್ ನಟನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ‌.

ಈ ಸುದ್ದಿಯನ್ನೂ ಓದಿ | Funky Jewel Fashion: ಗಾಳಿಯಲ್ಲಿ ಹಾರುವ ಬಣ್ಣ ಬಣ್ಣದ ಫೆದರ್‌ ಆಕ್ಸೆಸರೀಸ್‌