ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Funky Jewel Fashion: ಗಾಳಿಯಲ್ಲಿ ಹಾರುವ ಬಣ್ಣ ಬಣ್ಣದ ಫೆದರ್‌ ಆಕ್ಸೆಸರೀಸ್‌

Funky Jewel Fashion: ಕಿವಿಗೆ ಧರಿಸಿದಾಗ ಗಾಳಿಗೆ ಹಾರಾಡುವ ಬಣ್ಣ ಬಣ್ಣದ ಫೆದರ್‌ ಆಕ್ಸೆಸರೀಸ್‌, ಈ ಸೀಸನ್‌ನಲ್ಲಿ ಯುವತಿಯರ ಫಂಕಿ ಫ್ಯಾಷನ್‌ ಲಿಸ್ಟ್‌ಗೆ ಸೇರಿವೆ. ನಾನಾ ಡಿಸೈನ್‌ನಲ್ಲಿ ಹಾಗೂ ಕಲರ್‌ನಲ್ಲಿ ದೊರಕುವ ಇವುಗಳ ಸ್ಟೈಲಿಂಗ್‌ ಹೇಗೆ? ಎಲ್ಲದರ ಕುರಿತಂತೆ ಆಕ್ಸೆಸರೀಸ್‌ ಸ್ಟೈಲಿಸ್ಟ್‌ಗಳು ಸಿಂಪಲ್ಲಾಗಿ ವಿವರಿಸಿದ್ದಾರೆ.

ಗಾಳಿಯಲ್ಲಿ ಹಾರುವ ಬಣ್ಣ ಬಣ್ಣದ ಫೆದರ್‌ ಆಕ್ಸೆಸರೀಸ್‌

ಚಿತ್ರಕೃಪೆ: ಪಿಕ್ಸೆಲ್‌

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬಣ್ಣ ಬಣ್ಣದ ಫೆದರ್‌ ಆಕ್ಸೆಸರೀಸ್‌ (Funky Jewel Fashion) ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಯುವತಿಯರ ಕಿವಿಯನ್ನು ಅಲಂಕರಿಸುತ್ತಾ ಗಾಳಿಯಲ್ಲಿ ಹಾರಾಡುತ್ತಿವೆ. ಕಿವಿಯಲ್ಲಿ ಬಣ್ಣ ಬಣ್ಣದ ರೆಕ್ಕೆ-ಪುಕ್ಕ ಹಾರಾಡುತ್ತಿದ್ದರೇ, ಕುತ್ತಿಗೆಯಲ್ಲಿ ಹಕ್ಕಿಯ ಪುಕ್ಕವೊಂದರ ಪೆಂಡೆಂಟ್‌ ನೇತಾಡುತ್ತಿದೆ. ಇನ್ನು ಹ್ಯಾಟ್‌ಗಳ ಮೇಲೆ ಕೂದಲಿನ ಸೈಡಿನಲ್ಲಿ ಸುಂದರವಾದ ಗರಿಗಳು ರಾರಾಜಿಸುತ್ತಿವೆ. ಹೌದು. ಇದು ಆಭರಣ ಲೋಕದಲ್ಲಿ ಹಾಟ್‌ ಟ್ರೆಂಡಿಯಾಗಿರುವ ಫೆದರ್‌ ಆ್ಯಕ್ಸೆಸರೀಸ್‌ ಮಹಿಮೆಯ ಪರಿಣಾಮವಿದು. ಪಕ್ಷಿಗಳ ಉದುರಿದ ರೆಕ್ಕೆ-ಪುಕ್ಕಗಳಿಂದ ತಯಾರಿಸಲಾಗುವ ಈ ಫೆದರ್‌ ಆ್ಯಕ್ಸೆಸರೀಸ್‌ ಸೆಲೆಬ್ರೆಟಿಗಳ ಹಾಗೂ ಯುವತಿಯರ ಸ್ಟಾರ್‌ಗಳ ಜ್ಯುವೆಲ್‌ ಕಿಟ್‌ ಸೇರಿವೆ.‌

Funky Jewel Fashion 1

ಗಾಳಿಯಲ್ಲಿ ಹಾರುವ ಇಯರಿಂಗ್‌ಗಳಿವು

ಮೈನಾ, ಪಾರಿವಾಳ, ಲವ್‌ ಬರ್ಡ್ಸ್ ಸೇರಿದಂತೆ ನಾನಾ ಪಕ್ಷಿಗಳ ಉದುರಿದ ರೆಕ್ಕೆ-ಪುಕ್ಕಗಳನ್ನು ಸುಂದರವಾಗಿ ಜೋಡಿಸಿ, ಅದಕ್ಕೆ ಒಂದು ಆಕಾರ ನೀಡಿ ಫೆದರ್‌ ಆಕ್ಸೆಸರೀಸ್‌ ರೂಪಿಸಲಾಗಿರುತ್ತದೆ. ಬೇಡಿಕೆ ಹೆಚ್ಚಿರುವುದರಿಂದ ಕೆಲವು ಒರಿಜಿನಲ್‌ ಬಣ್ಣಗಳಲ್ಲಿ ಲಭ್ಯ, ಇನ್ನು ಕೆಲವು ಡೈ ಮಾಡಿದ ರೂಪದಲ್ಲಿ ಲಭ್ಯ. ಇಯರಿಂಗ್‌, ನೆಕ್‌ಪೀಸ್‌, ಬ್ರೆಸ್‌ಲೆಟ್‌, ಪೆಂಡೆಂಟ್‌, ಹೇರ್‌ ಆ್ಯಕ್ಸೆಸರೀಸ್‌ ಹೆಚ್ಚು ಪ್ರಚಲಿತದಲ್ಲಿವೆ.

ನಾನಾ ವರ್ಣಗಳಲ್ಲಿ ಹಾಗೂ ವಿನ್ಯಾಸಗಳಲ್ಲಿ ಲಭ್ಯವಿರುವ ಇವು ಯುವತಿಯರ ಹಾಟ್‌ ಫೇವರಿಟ್‌ ಟ್ರೆಂಡ್‌ಗಳಲ್ಲೊಂದಾಗಿದೆ ಎನ್ನುವ ಸ್ಟೈಲಿಸ್ಟ್‌ ರೀನಾ ಪ್ರಕಾರ, ಮುಂಗುರುಳ ಹಿಂದೆ ಕೂದಲ ನಡುವೆ ಕಿವಿಗಳಲ್ಲಿ ನೇತಾಡುತ್ತ ಇವು ನೋಡುಗರ ಮನ ಸೆಳೆಯುತ್ತಿವೆ. ಮೆಟ್ರೊ ಸಿಟಿ ಹುಡುಗಿಯರ ಫ್ಯಾಷನ್‌ ಆಕ್ಸೆಸರೀಸ್‌ ಲಿಸ್ಟ್‌ಗೆ ಸೇರಿ ಹಂಗಾಮ ಎಬ್ಬಿಸಿವೆಯಂತೆ.

Funky Jewel Fashion 2

ನ್ಯಾಚುರಲ್‌ ಆ್ಯಕ್ಸೆಸರೀಸ್‌

ಫ್ಯಾಷನ್‌ ರಾರ‍ಯಂಪ್‌ ಏರುವ ಮಾಡೆಲ್‌ಗಳಿಂದಿಡಿದು ಕಾಲೇಜು ಹುಡುಗಿಯರು ಈ ಫೆದರ್‌ ಆಕ್ಸೆಸರೀಸ್‌ ಕ್ರೇಜ್‌ಗೆ ಮರುಳಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಇತ್ತೀಚೆಗೆ ಬಹುತೇಕ ಫ್ಯಾಷನ್‌ ಶೋಗಳಲ್ಲಿ ಫೆದರ್‌ ಆಕ್ಸೆಸರೀಸ್‌ ಹೆಚ್ಚೆಚ್ಚು ಬಳಕೆಯಾಗುತ್ತಿವೆ. ಕಿವಿಯೊಲೆ, ಪೆಂಡೆಂಟ್‌, ಕೈ ಉಂಗುರ, ಕಿರೀಟ, ಹೆಡ್‌ಬ್ಯಾಂಡ್‌, ಹೇರ್‌ಬ್ಯಾಂಡ್‌ ಹೀಗೆ ನಾನಾ ಬಗೆಯಲ್ಲಿ ಈ ರೆಕ್ಕೆ-ಪುಕ್ಕಗಳ ಆಭರಣಗಳು ಬಳಕೆಯಾಗುತ್ತಿವೆ. ಇವು ನ್ಯಾಚುರಲ್‌ ಲುಕ್‌ನ ಪ್ಲಸ್‌ ಪಾಯಿಂಟ್‌ ಎಂಬುದು ಜ್ಯುವೆಲ್‌ ಆಕ್ಸೆಸರೀಸ್‌ ಡಿಸೈನರ್‌ಗಳ ಅಭಿಪ್ರಾಯ. ಇನ್ನು ಕೂದಲನ್ನು ಕಟ್ಟದೇ ಬಿಟ್ಟಾಗ, ಈ ಫೆದರ್‌ ಇಯರಿಂಗ್‌ಗಳು ಕಲರಿಂಗ್‌ ಲುಕ್‌ ಕೂಡ ನೀಡುತ್ತವೆ. ನೋಡಲು ವಿಭಿನ್ನವಾಗಿ ಕಾಣುತ್ತವೆ. ಇವನ್ನು ಧರಿಸಿದಾಗ ಮಾಡರ್ನ್‌ ಹಾಗೂ ವೆಸ್ಟರ್ನ್‌ ಲುಕ್‌ ಗ್ಯಾರಂಟಿ ಎನ್ನುತ್ತಾರೆ ಮಾಡೆಲ್‌ ರಾಶಿ ಜನಮ್‌.

Funky Jewel Fashion 3

ಫೆದರ್‌ ಲವ್ಲಿ ಲುಕ್‌

ಅಂದಹಾಗೆ, ಈ ಡಿಸೈನರ್‌ ಆಕ್ಸೆಸರೀಸ್‌ ಬೆಲೆ ಕಡಿಮೆಯೇನಿಲ್ಲ! ಮಾಲ್‌ನಲ್ಲಿ ಇನ್ನೂರು ರೂ. ದಾಟಿದರೇ, ಫ್ಯಾನ್ಸಿ ಸ್ಟೋರ್‌ಗಳಲ್ಲಿ ಇವುಗಳ ಗುಣಮಟ್ಟದ ಮೇಲೆ ನಿರ್ಧರಿತವಾಗಿರುತ್ತವೆ. ಕುಶಲಕರ್ಮಿಗಳ ಕೈಗಳಲ್ಲಿ ತಯಾರಾಗಿ ಬರುವ ಇವುಗಳು ನಾನಾ ಬಗೆಯ ಡಿಸೈನ್‌ಗಳಲ್ಲಿ ಲಭ್ಯ. ಆಕಾರಕ್ಕೆ ತಕ್ಕಂತೆ ಬೆಲೆ. ಆದರೆ, ಹೆಡ್‌ಬ್ಯಾಂಡ್‌ ಹಾಗೂ ಫಿಂಗರ್‌ ರಿಂಗ್‌ಗಳ ಬೆಲೆ ತುಸು ಹೆಚ್ಚು ಎನ್ನುತ್ತಾರೆ ಡಿಸೈನರ್‌ ಗರಿ ಆಕ್ಸೆಸರೀಸ್‌ ಮಾರಾಟಗಾರ ಶರಾಫ್‌.

ಈ ಸುದ್ದಿಯನ್ನೂ ಓದಿ | Royal Blue Colour Fashionwears: ಸೀಸನ್‌ ಫ್ಯಾಷನ್‌ವೇರ್‌ಗಳಲ್ಲಿ ರಾಯಲ್‌ ಬ್ಲ್ಯೂ ಕಲರ್‌ ಹಂಗಾಮ

ಫೆದರ್‌ ಇಯರಿಂಗ್‌ ಟಿಪ್ಸ್‌

  • ಇವಕ್ಕೆ ನೀರು ತಾಗಕೂಡದು.
  • ವೈಬ್ರೆಂಟ್‌ ಕಲರ್ಸ್‌ ಉಡುಪುಗಳಿಗೆ ಸಖತ್‌ ಮ್ಯಾಚ್‌ ಆಗುತ್ತವೆ.
  • ಕ್ಯಾಶುವಲ್ಸ್‌ ಹಾಗೂ ಫಾರ್ಮಲ್ಸ್‌ ಉಡುಗೆಗಳಿಗೆ ಓಕೆ.
  • ನ್ಯಾಚುರಲ್‌ ಬಣ್ಣಗಳದ್ದೇ ಆಯ್ಕೆ ಮಾಡಿ.
  • ಮೆತ್ತಗಿನ ಪೇಪರ್‌ನಲ್ಲಿ ಸಂರಕ್ಷಿಸಿಡಬೇಕು.
  • ಹೆಲ್ಮೆಟ್‌ ಹಾಕುವಾಗ ಬಳಸಬೇಡಿ. ಮುರಿದು ಹೋಗುವುದು.
  • ಕೂದಲು ಬಾಚಿದ ಹಾಗೂ ಮೇಕಪ್‌ ಮುಗಿದ ನಂತರ ಧರಿಸಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)