ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತಮಿಳು ಬಿಗ್ ಬಾಸ್ ಮಾಜಿ ಸ್ಪರ್ಧಿ ಯಶಿಕಾ ಆನಂದ್ ಕಾರು ಅಪಘಾತ

ತಮಿಳು ಬಿಗ್ ಬಾಸ್ ಮಾಜಿ ಸ್ಪರ್ಧಿ ಯಶಿಕಾ ಆನಂದ್ ಕಾರು ಅಪಘಾತ

image-3c084597-3e82-4753-919f-e5666c7bdbb0.jpg
ಚೆನ್ನೈ : ತಮಿಳು ಚಿತ್ರನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಯಶಿಕಾ ಆನಂದ್ ಕಾರು ಕಳೆದ ರಾತ್ರಿ ಅಪಘಾತಕ್ಕೆ ಈಡಾಗಿದೆ. ಇದರಿಂದಾಗಿ, ಯಶಿಕಾ ಗಂಭೀರವಾಗಿ ಗಾಯಗೊಂಡು, ಆಕೆಯ ಜೊತೆಗೆ ಕಾರಿನಲ್ಲಿದ್ದ ಸ್ನೇಹಿತೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ ತಮಿಳು ಚಿತ್ರನಟಿ ಯಶಿಕಾ ಹಾಗೂ ಅವರ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಮಮಲ್ಲಪುರಂ ಬಳಿ ತಮ್ಮ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ, ಕಾರು ಅಪಘಾತಗೊಂಡಿದೆ. ಕಾರಿನಲ್ಲಿದ್ದ ಬಿಗ್ ಬಾಸ್ ಮಾಡಿ ಸ್ಪರ್ಧಿ ಯಶಿಕಾ ಆನಂದ್ ಅವರು ಗಂಭೀರವಾಗಿ ಗಾಯಗೊಂಡಿದ್ದರೇ, ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವಂತ ಯಶಿಕಾ ಆನಂದ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ತಮಿಳು ಚಿತ್ರನಟಿ ಯಶಿಕಾ ಆನಂದ್ ಕಾರು ಅಪಘಾತಕ್ಕೆ ಅತಿ ವೇಗದ ಚಾಲನೆಯೇ ಕಾರಣ ಎನ್ನಲಾಗಿದೆ. ಈ ಸಂಬಂಧ ಮಮಲ್ಲಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.