ಬೆಂಗಳೂರು: ಮಂಜು ಸ್ವರಾಜ್ ಅಮೂಲ್ಯರವರಿಗೆ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ ಇದಾಗಿದ್ದು ಇದಕ್ಕೂ ಮುಂಚೆ 'ಗೋಲ್ಡನ್ ಸ್ಟಾರ್' ಗಣೇಶ್ ಮತ್ತು 'ಗೋಲ್ಡನ್ ಕ್ವೀನ್' ಅಮೂಲ್ಯ ಅವರೊಟ್ಟಿಗೆ "ಶ್ರಾವಣಿ ಸುಬ್ರಮಣ್ಯ" ಸಿನಿಮಾ ಮಾಡಿದ್ದು, ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಈಗ ಮಾಡುತ್ತಿರುವ ಸಿನಿಮಾ “ಪೀಕಬೂ" (Peekaboo Movie) ಎನ್ನುವ ಶೀರ್ಷಿಕೆಯಲ್ಲಿ ಚಿತ್ರೀ ಕರಣ ಪ್ರಾರಂಭವಾಗಲಿದೆ. ಇದೀಗ "ಶ್ರೀ ಕೆಂಚಾಂಬಾ ಫಿಲಂನ ಅಡಿಯಲ್ಲಿ ಗಣೇಶ್ ಕೆಂಚಾಂಬಾ ನಿರ್ಮಿಸು ತ್ತಿರುವ ಈ ಸಿನಿಮಾದ ಅಮೂಲ್ಯ ಅವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಮೊದಲ ಟೈಟಲ್ ಟೀಸರ್ ಬಿಡುಗಡೆಯಾಗಿದೆ.
ಸುಮಾರು ಎಂಟು ವರ್ಷಗಳ ಬಳಿಕ ನಟಿ ಅಮೂಲ್ಯ ಚಿತ್ರರಂಗಕ್ಕೆ ಮರಳುತ್ತಿರುವುದು ವಿಶೇಷ ವಾಗಿದ್ದು ಅವರ ಫ್ಯಾನ್ಸ್ ಬಹಳಷ್ಟು ಎಕ್ಸೈಟ್ ಆಗಿದ್ದಾರೆ. 'ಪೀಕಬೂ' ಚಿತ್ರದ ಶೀರ್ಷಿಕೆಯ ಟೀಸರ್ ಮತ್ತು ಫಸ್ಟ್ ಲುಕ್ ಇದೀಗ ಬಿಡುಗಡೆಯಾಗಿದೆ. ಅಮೂಲ್ಯ ಅವರು ಈ ಚಿತ್ರದ ನಾಯಕಿ ಮತ್ತು ಕಥೆಯ ಮುಖ್ಯ ಭಾಗವಾಗಿದ್ದು ಚಿತ್ರದ ಶೂಟಿಂಗ್ ಇನ್ನೂ ಪ್ರಾರಂಭವಾಗಿಲ್ಲ, ಆದರೆ ಆದರೆ ಶೀಘ್ರದಲ್ಲೇ ಶೂಟಿಂಗ್ ಆರಂಭವಾಗುವ ಬಗ್ಗೆ ಚಿತ್ರ ತಂಡ ತಿಳಿಸಿದೆ.
ಅಮೂಲ್ಯ ಅವರ ಹುಟ್ಟುಹಬ್ಬದ ಅಂಗವಾಗಿ ಈ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಯಾಗಿದೆ.' ಪೀಕಬೂ' ಚಿತ್ರವನ್ನು ಶ್ರೀ ಕೆಂಚಾಂಬಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಗಣೇಶ್ ಕೆಂಚಾಂಬಾ ಅವರು ನಿರ್ಮಿಸುತ್ತಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಸುರೇಶ್ ಬಾಬು ಬಿ. ಅವರು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಸಂಗೀತ ನಿರ್ದೇಶಕರು ವೀರ್ ಸಮರ್ಥ್ ಮತ್ತು ಶ್ರೀಧರ್ ಆಗಿದ್ದು, ಕಲಾ ನಿರ್ದೇಶಕ ಅಮರ್ ಮಾಡುತ್ತಿದ್ದು ಸಂಕಲನವನ್ನು ಎನ್. ಎಂ. ವಿಶ್ವ ಅವರು ಮಾಡಲಿದ್ದಾರೆ. ಸದ್ಯ ಈ ಸಿನಿಮಾದ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.