ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Wamiqa Gabbi: ಸೆಕ್ಸಿ ಡ್ರೆಸ್‌ನಲ್ಲಿ ಹಾಟ್ ವಿಡಿಯೊ ಹಂಚಿಕೊಂಡ ಬಹುಭಾಷಾ ನಟಿ

ಪಂಜಾಬಿ, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ವಮಿಕಾ ಗಬ್ಬಿ ತಮ್ಮ ವಿಶೇಷ ಅಭಿಯಾನದ ಮೂಲಕವೇ ಮನ ಗೆದ್ದಿದ್ದಾರೆ. ಗ್ರಹಣ್, ಮಾಯ್ ಹಾಗೂ ಜುಬಿಲಿ ವೆಬ್ ಸಿರೀಸ್ ಮೂಲಕ ಹೆಚ್ಚು ಗುರುತಿಸಿಕೊಂಡಿರುವ ನಟಿ ವಾಮಿಕಾ ಗಬ್ಬಿ ಪ್ರಸ್ತುತ ತಮ್ಮ ಮುಂದಿನ ಶೂಟಿಂಗ್ ಗಾಗಿ ತಯಾರಿಯಲ್ಲಿದ್ದಾರೆ. ಈ ನಡುವೆ ನಟಿ ಸಖತ್ ಸೆಕ್ಸಿಯಾಗಿರುವ ಹೊಸದೊಂದು ಫೋಟೋಶೂಟ್ ಮಾಡಿಸಿಕೊಂಡಿದ್ದು ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೆಕ್ಸಿ ಡ್ರೆಸ್‌ನಲ್ಲಿ ಹಾಟ್ ವಿಡಿಯೊ ಹಂಚಿಕೊಂಡ ಬಹುಭಾಷಾ ನಟಿ

Profile Pushpa Kumari Jul 6, 2025 7:45 PM

ನವದೆಹಲಿ: ಭಾರತೀಯ ಚಲನಚಿತ್ರೋದ್ಯಮದ ಬಹು ಬೇಡಿಕೆಯ ನಟಿಯರಲ್ಲಿ ವಾಮಿಕ ಗುಬ್ಬಿ (Wamiqa Gabbi) ಕೂಡ ಒಬ್ಬರು. ಈಗಾಗಲೇ ಪಂಜಾಬಿ, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ವಮಿಕಾ ಗಬ್ಬಿ ತಮ್ಮ ವಿಶೇಷ ಅಭಿಯಾನದ ಮೂಲ ಕವೇ ಮನ ಗೆದ್ದಿದ್ದಾರೆ. ಗ್ರಹಣ್​, ಮಾಯ್​ ಹಾಗೂ ಜುಬಿಲಿ ವೆಬ್​ಸಿರೀಸ್​ಗಳಿಂದ ಹೆಚ್ಚು ಗುರುತಿಸಿ ಕೊಂಡಿರುವ ನಟಿ ವಾಮಿಕಾ ಗಬ್ಬಿ ಪ್ರಸ್ತುತ ತಮ್ಮ ಮುಂದಿನ ಪ್ರಾಜೆಕ್ಟ್ ಶೂಟಿಂಗ್​ ಗಾಗಿ ತಯಾರಿ ಯಲ್ಲಿದ್ದಾರೆ. ಈ ನಡುವೆ ನಟಿ ಸಖತ್ ಸೆಕ್ಸಿಯಾಗಿರುವ ಹೊಸದೊಂದು ಫೋಟೋಶೂಟ್ ಮಾಡಿಸಿಕೊಂಡಿದ್ದು ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತೆಲುಗು ಹಾಗೂ ತಮಿಳಿನಲ್ಲಿ ಬಹುಬೇಡಿಕೆಯ ನಟಿಯಾಗಿರುವ ವಾಮಿಕ ಇತ್ತೀಚೆಗೆ ಫೋಟೋ ಶೂಟ್‌ಗಳ ಮೂಲಕ ಮಿಂಚುತ್ತಿದ್ದಾರೆ. ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡು ಜನಪ್ರಿಯತೆ ಗೊಳಿಸಿರುವ ನಟಿ‌ ಇದೀಗ ಮತ್ತೊಂದು ಫೋಟೋ ಶೂಟ್‌ನೊಂದಿಗೆ ಗಮನ ಸೆಳೆದಿದ್ದಾರೆ.. ಈ ಭಾರಿ ನಟಿ‌ ಕಟೌಟ್ ಲ್ಯಾವೆಂಡರ್ ಡ್ರೆಸ್ ಧರಿಸಿ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಶೂಟ್‌ ಎಲ್ಲರ ಗಮನ ಸೆಳೆಯುತ್ತಿರುವುದೇ ಇವರ ಕಾಸ್ಟ್ಯೂಮ್‌ ಡಿಸೈನ್ ಕಾರಣಕ್ಕೆ ಅನ್ನೋದು ವಿಶೇಷವಾಗಿದೆ.

ಕಟೌಟ್ ಲ್ಯಾವೆಂಡರ್ ಡ್ರೆಸ್‌ ಧರಿಸಿ ಫೋಟೋ ಶೂಟ್ ಮಾಡಿಸಿರುವ ದೃಶ್ಯವನ್ನು ನಟಿ ವಾಮಿಕಾ ಗಬ್ಬಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ಈ ಡ್ರೆಸ್ ನಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ನಟಿಯ ನೋಟಕ್ಕೆ ಪಡ್ಡೆ ಹೈಕ್ಲು ಫಿದಾ ಆಗಿದ್ದಾರೆ. ಸೆಕ್ಸಿ ಆಗಿ ಪೋಸ್ ನೀಡಿರುವ ನಟಿ ವೆಸ್ಟರ್ನ್ ಡ್ರೆಸ್ ಗೆ ಸಿಂಪಲ್ ಮೇಕಪ್ ಮಾಡಿಕೊಂಡಿದ್ದಾರೆ. ಸದ್ಯ ಇವರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಭರ್ಜರಿ ಲೈಕ್‌,ಕಮೆಂಟ್ ಸಿಗುತ್ತಿವೆ. ವಿಡಿಯೊ ದಲ್ಲಿ ಹಾಫ್‌ ಶೋಲ್ಡರ್‌ ವೆಸ್ಟರ್ನ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿರುವ ನಟಿ‌ ತನ್ನ ಫಿಟ್ ಫಿಗರ್ ಅನ್ನು ತೋರ್ಪಡಿಸಿದ್ದಾರೆ.

ಇದನ್ನು ಓದಿ:Capital City Movie: ರಾಜೀವ್ ರೆಡ್ಡಿ ನಟನೆಯ ‘ಕ್ಯಾಪಿಟಲ್ ಸಿಟಿ’ ಚಿತ್ರ ಈ ವಾರ ತೆರೆಗೆ

ವಾಮಿಕಾ 2018 ರಲ್ಲಿ ಗೋಧಾ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಅವರು ತಮಿಳು ಚಿತ್ರ "ಮಲೈ ನರತು ಮಾಯಕ್ಕಂ"‌ ಮತ್ತು ಮಲಯಾಳಂ ಚಿತ್ರ ಕಲಿ ಜೋಟ್ಟಾ ಮುಂತಾದ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ವಾಮಿಕಾ ಅಕ್ಷಯ್ ಕುಮಾರ್ ಅವರ ಜೊತೆ ಮುಂಬರುವ ಭೂತ್ ಬಂಗ್ಲಾ ಎಂಬ ಹಾರರ್ ಕಾಮಿಡಿ ಚಿತ್ರದಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಪ್ರಿಯದರ್ಶನ್ ನಿರ್ದೇಶಿಸುತ್ತಿದ್ದು, ಟಬು ಮತ್ತು ಪಾರೇಶ್ ರಾವಲ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 2026ರ ಏಪ್ರಿಲ್‌ನಲ್ಲಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.