ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಸೆನ್ಸೆಕ್ಸ್-ನಿಫ್ಟಿ ಮಹಾಪತನ; ಕರಗಿದ 19 ಲಕ್ಷ ಕೋಟಿ! ಹೂಡಿಕೆದಾರರು ಏನು ಮಾಡಬೇಕು?

Stock Market: ಸೋಮವಾರ ಬೆಳಗ್ಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್‌ 3,000ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡರೆ, ನಿಫ್ಟಿ ಕೂಡ 1,000ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡಿತು. ಹೂಡಿಕೆದಾರರಿಗೆ ಇದರಿಂದಾಗಿ ಇವತ್ತು 19 ಲಕ್ಷ ಕೋಟಿ ರುಪಾಯಿಗಳ ನೋಶನಲ್‌ ನಷ್ಟ ಉಂಟಾಗಿದೆ.

19  ಲಕ್ಷ ಕೋಟಿ ನಷ್ಟ! ಹೂಡಿಕೆದಾರರು ಏನು ಮಾಡಬೇಕು?

Profile Rakshita Karkera Apr 7, 2025 1:36 PM

ಮುಂಬೈ: ಜಾಗತಿಕ ಮಟ್ಟದಲ್ಲಿ ಟ್ರೇಡ್‌ ವಾರ್‌ ಮತ್ತು ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಸಂಭವಿಸುವ ಭೀತಿಯ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರದಿಂದ ವಿಶ್ವಾದ್ಯಂತ ಷೇರು ಮಾರುಕಟ್ಟೆಗಳಲ್ಲಿ(Stock Market) ಸೂಚ್ಯಂಕಗಳು ಭಾರಿ ಕುಸಿತಕ್ಕೀಡಾಗಿದೆ. ಭಾರತದಲ್ಲೂ ಸೋಮವಾರ ಬಾಂಬೆ ಸ್ಟಾಕ್ಸ್‌ ಎಕ್ಸ್‌ಚೇಂಜ್‌ ಸೂಚ್ಯಂಕ ಸೆನ್ಸೆನ್ಸ್‌ ಮತ್ತು ನ್ಯಾಶನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಸೂಚ್ಯಂಕ ನಿಫ್ಟಿ ತೀವ್ರ ಕುಸಿತಕ್ಕೀಡಾಯಿತು. ಎಲ್ಲ ಸೆಕ್ಟರ್‌ಗಳಲ್ಲೂ ಸೂಚ್ಯಂಕಗಳು ಪತನವಾಯಿತು. ಸೋಮವಾರ ಬೆಳಗ್ಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್‌ 3,000ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡರೆ, ನಿಫ್ಟಿ ಕೂಡ 1,000ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡಿತು. ಹೂಡಿಕೆದಾರರಿಗೆ ಇದರಿಂದಾಗಿ ಇವತ್ತು 19 ಲಕ್ಷ ಕೋಟಿ ರುಪಾಯಿಗಳ ನೋಶನಲ್‌ ನಷ್ಟ ಉಂಟಾಗಿದೆ.

ಸ್ಟಾಕ್‌ ಮಾರ್ಕೆಟ್‌ನ ಸೆಕ್ಟರ್‌ಗಳನ್ನು ಗಮನಿಸುವುದಿದ್ದರೆ, ನಿಫ್ಟಿ ಮೆಟಲ್‌ 8% ಮತ್ತು ನಿಫ್ಟಿ ಐಟಿ 7% ಕುಸಿತಕ್ಕೀಡಾಯಿತು. ನಿಫ್ಟಿ ಆಟೊ, ರಿಯಾಲ್ಟಿ ಮತ್ತು ತೈಲ ಮತ್ತು ಅನಿಲ ಸೂಚ್ಯಂಕಗಳು ತಲಾ 5% ಇಳಿಕೆಯಾಯಿತು. ವಿಶಾಲ ಮಾರುಕಟ್ಟೆಯಲ್ಲಿ ಸ್ಮಾಲ್‌ ಕ್ಯಾಪ್‌ ಷೇರುಗಳು 10% ಮತ್ತು ಮಿಡ್‌ ಕ್ಯಾಪ್‌ಗಳು 7.3% ಕುಸಿತಕ್ಕೀಡಾಯಿತು.

ಬೆಳಗ್ಗೆ 9:16 ಕ್ಕೆ ಬಿಎಸ್‌ಇ ಸೆನ್ಸೆಕ್ಸ್‌ 3,072 ಅಂಕ ಕುಸಿತಕ್ಕೀಡಾಯಿತು. ನಿಫ್ಟಿ 50 ಸೂಚ್ಯಂಕವೂ 1,146 ಅಂಕಿ ಇಳಿಯಿತು. ಮಧ್ಯಾಹ್ನ 12 ಗಂಟೆಯ ವೇಳೆಗೆ ಸೆನ್ಸೆಕ್ಸ್‌ 72,133 ಅಂಕಗಳಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 21,872ರ ಮಟ್ಟದಲ್ಲಿತ್ತು. ಬಿಎಸ್‌ಇನಲ್ಲಿ ಲಿಸ್ಟೆಡ್‌ ಆಗಿರುವ ಎಲ್ಲ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ 19 ಲಕ್ಷ ಕೋಟಿ ರುಪಾಯಿ ಇಳಿಕೆಯಾಯಿತು. 383 ಲಕ್ಷ ಕೋಟಿ ರುಪಾಯಿಗೆ ಇಳಿಯಿತು.

ಈ ಸುದ್ದಿಯನ್ನೂ ಓದಿ: Stock market crash : ಟ್ರಂಪ್‌ ಟಾರಿಫ್‌ ಎಫೆಕ್ಟ್‌, ಸೆನ್ಸೆಕ್ಸ್‌ 930 ಕುಸಿತ, ಹೂಡಿಕೆದಾರರಿಗೆ 9.5 ಲಕ್ಷ ಕೋಟಿ ನಷ್ಟ

ಸೆನ್ಸೆಕ್ಸ್‌, ನಿಫ್ಟಿ ಭಾರಿ ಕುಸಿತಕ್ಕೆ ಪ್ರಮುಖ ಕಾರಣಗಳನ್ನು ನೋಡೋಣ.

  • ಅಮೆರಿಕದಲ್ಲಿ ನಾಸ್‌ಡಾಕ್ ಷೇರು ಮಾರುಕಟ್ಟೆಯ ಸೂಚ್ಯಂಕಗಳ ಭಾರಿ ಕುಸಿತ
  • ಏಷ್ಯಾ ಸೇರಿದಂತೆ ಜಾಗತಿಕ ಷೇರು ಮಾರುಕಟ್ಟೆ ಸೂಚ್ಯಂಕಗಳ ಪತನ.
  • ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ
  • ಜಾಗತಿಕ ಮಟ್ಟದಲ್ಲಿ ಕಮಾಡಿಟಿಗಳ ದರ ಕುಸಿತ
  • ಷೇರು ಪೇಟೆಯಿಂದ ಹೂಡಿಕೆದಾರರ ಹಿಂತೆಗೆತ
  • ಜಾಗತಿಕ ಟ್ರೇಡ್‌ ವಾರ್‌ ಸಂಭವಿಸುವ ಆತಂಕ