Stock market crash : ಟ್ರಂಪ್ ಟಾರಿಫ್ ಎಫೆಕ್ಟ್, ಸೆನ್ಸೆಕ್ಸ್ 930 ಕುಸಿತ, ಹೂಡಿಕೆದಾರರಿಗೆ 9.5 ಲಕ್ಷ ಕೋಟಿ ನಷ್ಟ
Stock market crash: ಶುಕ್ರವಾರ ಬಿಎಸ್‌ಇ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 930 ಅಂಕ ಕುಸಿದು 75,364ಕ್ಕೆ ಸ್ಥಿರವಾಯಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 345 ಕಳೆದುಕೊಂಡು 22,904ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಅಮೆರಿಕದಲ್ಲಿ ರಿಸೆಶನ್ ಭೀತಿ ಉಂಟಾಗಿರುವ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲೂ ಸೂಚ್ಯಂಕಗಳು ಮುಗ್ಗರಿಸಿತು.


ಮುಂಬಯಿ: ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಸೇರಿದಂತೆ ನೂರಾರು ರಾಷ್ಟ್ರಗಳ ವಿರುದ್ಧ ಪ್ರತಿ ಸುಂಕ ಹೇರಿದ ಬೆನ್ನಲ್ಲೇ ಶುಕ್ರವಾರ ಬಿಎಸ್‌ಇ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 930 ಅಂಕ ಕುಸಿದು 75,364ಕ್ಕೆ ಸ್ಥಿರವಾಯಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 345 ಕಳೆದುಕೊಂಡು 22,904ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಅಮೆರಿಕದಲ್ಲಿ ರಿಸೆಶನ್ ಭೀತಿ ಉಂಟಾಗಿರುವ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲೂ ಸೂಚ್ಯಂಕಗಳು ಮುಗ್ಗರಿಸಿತು. ಲೋಹ, ಔಷಧ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಷೇರುಗಳು ಗಣನೀಯ ಕುಸಿತಕ್ಕೀಡಾಯಿತು. ಬಿಎಸ್‌ಇನಲ್ಲಿ ಲಿಸ್ಟ್ ಆಗಿರುವ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ 9.47 ಲಕ್ಷ ಕೋಟಿ ರುಪಾಯಿ ಕರಗಿತು. 403 ಲಕ್ಷ ಕೋಟಿ ರುಪಾಯಿಗೆ ಇಳಿಯಿತು.
ಟ್ರೇಡ್ ವಾರ್ ಆತಂಕ:
ಡೊನಾಲ್ಡ್ ಟ್ರಂಪ್ ಅವರು ಚೀನಾ ಸೇರಿದಂತೆ ನೂರಾರು ದೇಶಗಳ ವಿರುದ್ಧ ಹೊಸ ಟಾರಿಫ್ ಘೋಷಿಸಿದ ಬಳಿಕ ಜಾಗತಿಕ ಮಟ್ಟದಲ್ಲಿ ಟ್ರೇಡ್ ವಾರ್ ಉಂಟಾಗುವ ಭೀತಿ ಉಂಟಾಗಿದೆ. ಅಮೆರಿಕವು ಭಾರತದ ವಿರುದ್ಧ 26%, ಚೀನಾಕ್ಕೆ 34%, ದಕ್ಷಿಣ ಕೊರಿಯಾಕ್ಕೆ 25%, ವಿಯೆಟ್ನಾಂಗೆ 46%, ತೈವಾನ್‌ಗೆ 32%, ಜಪಾನ್‌ಗೆ 24% ಟಾರಿಫ್ ಘೋಷಿಸಿದೆ.
ಅಮೆರಿಕದಲ್ಲಿ ರಿಸೆಶನ್ ಭೀತಿಯೂ ಇರುವುದರಿಂದ ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಮುಗ್ಗರಿಸಿವೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರು ದರ 4.3% ರಷ್ಟು ಕುಸಿಯಿತು. (1,194 ರುಪಾಯಿ) ನಿಫ್ಟಿ ಸೂಚ್ಯಂಕವು ಮುಂದಿನ ಮೂರು ತಿಂಗಳಿನಲ್ಲಿ 21,500 ಅಂಕಗಳಿಗೆ ಕುಸಿಯುವ ಸಾಧ್ಯತೆ ಇದೆ ಎಂದು ಬ್ರೋಕರೇಜ್ ಸಂಸ್ಥೆ ಎಮ್ಕೆ ಗ್ಲೋಬಲ್ ತಿಳಿಸಿದೆ. ಈ ನಡುವೆ
ಭಾರತ್ ಫೋರ್ಜ್, ಟಾಟಾ ಮೋಟಾರ್ಸ್ ಷೇರು 9% ತನಕ ಇಳಿಯಿತು. ಫಾರ್ಮಾ ಸೆಕ್ಟರ್‌ನ ಅರಬೊಂದೊ ಫಾರ್ಮಾ, ಐಪಿಸಿಎ ಲ್ಯಾಬೊರೇಟರೋಸ್ ಷೇರು ದರ ಕೂಡ ಇಳಿಯಿತು.
ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಳವಾದರೆ, ಆರ್ಥಿಕ ಹಿಂಜರಿತ ಸಂಭವಿಸಿದರೆ ಅದರ ಪರಿಣಾಮ ಭಾರತದ ಐಟಿ ವಲಯವನ್ನು ಕೂಡ ಕಾಡುವ ಸಾಧ್ಯತೆ ಇದೆ. ಟ್ರಂಪ್ ಅವರೇನೋ ಅಮೆರಿಕ ಮೂಲದ ಕಂಪನಿಗಳು ತವರಿಗೆ ಮರಳಬೇಕು ಎಂದು ಬಯಸುತ್ತಿದ್ದಾರೆ. ವಿದೇಶಗಳಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವ ಬದಲಿಗೆ ಅಮೆರಿಕದಲ್ಲೇ ಮಾಡಬೇಕು ಎಂಬುದು ಅವರ ಒತ್ತಾಯ. ಆದರೆ ಅದು ಸುಲಭವಲ್ಲ. ಜಾಗತೀಕರಣದ ಪ್ರಯೋಜನದ ರುಚಿಯನ್ನು ಜಗತ್ತು ಈಗಾಗಲೇ ಕಂಡಿದೆ. ಮುಖ್ಯವಾಗಿ ಅಮೆರಿಕದ ಬಲಾಢ್ಯ ತಂತ್ರಜ್ಞಾನ ಕಂಪನಿಗಳು ಜಾಗತೀಕರಣದ ಲಾಭವನ್ನು ಗಳಿಸಿ ಬೆಳೆದಿವೆ.