ನವದೆಹಲಿ: ಭಾರತದ ಸುಮಾರು 4 ಲಕ್ಷ ಟನ್ ಬಾಸ್ಮತಿ ಅಕ್ಕಿ (basmati rice) ಅಂತಾರಾಷ್ಟ್ರೀಯ ಬಂದರುಗಳಲ್ಲಿ (international ports) ಸಿಲುಕಿಕೊಂಡಿದ್ದು, ಇದರಿಂದ ಭಾರಿ ನಷ್ಟದ ಆತಂಕ ಎದುರಾಗಿದೆ. ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ನಡೆಸುತ್ತಿರುವ ಸಂಘರ್ಷದ (US-Israel and Iran war) ಪರಿಣಾಮ ಭೌಗೋಳಿಕ, ರಾಜಕೀಯ ಉದ್ವಿಗ್ನತೆಗಳು ಹೆಚ್ಚಾಗಿವೆ. ಇದು ಭಾರತದ ಕೃಷಿ ರಫ್ತು (Indias Basmati Trade) ಆರ್ಥಿಕತೆಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿವೆ. ಈಗಾಗಲೇ ಬಾಸ್ಮತಿ ಅಕ್ಕಿ ವ್ಯಾಪಾರಕ್ಕೆ ಬಹುದೊಡ್ಡ ಹೊಡೆತ ಬೀಳುವ ಆತಂಕ ಎದುರಾಗಿದೆ.
ಸಾಗಬೇಕಾದ ದಾರಿಯಲ್ಲಿ ಅನಿಶ್ಚಿತತೆ, ಯುದ್ಧ ಅಪಾಯದ ಆತಂಕ, ಹೆಚ್ಚುವರಿ ಶುಲ್ಕಗಳು, ವ್ಯಾಪಾರ ಮಾರ್ಗಗಳಲ್ಲಿ ಅಡ್ಡಿ, ಸರಕುಗಳ ಸಾಗಾಟ ಸ್ಥಗಿತ ಮೊದಲಾದ ಕಾರಣಗಳಿಂದ ವಿಶ್ವದಾದ್ಯಂತ ರಫ್ತು ಚಟುವಟಿಕೆ ನಿಧಾನವಾಗಿದೆ. ಇದರಿಂದ ಸುಮಾರು 4 ಲಕ್ಷ ಟನ್ ಭಾರತದ ಬಾಸ್ಮತಿ ಅಕ್ಕಿ ಅಂತಾರಾಷ್ಟ್ರೀಯ ಬಂದರುಗಳಲ್ಲಿ ಸಿಲುಕಿಕೊಂಡಿವೆ. ಇದು ರಫ್ತುದಾರರು, ಗಿರಣಿಗಾರರು ಮತ್ತು ರೈತರಿಗೆ ಭಾರಿ ಸಂಕಷ್ಟ ತಂದೊಡ್ಡುವ ಭೀತಿಯನ್ನು ಉಂಟು ಮಾಡಿದೆ.
ವಿಶ್ವದ ಪ್ರಮುಖ ಬಾಸ್ಮತಿ ಅಕ್ಕಿ ರಫ್ತುದಾರ ರಾಷ್ಟ್ರವಾಗಿರುವ ಭಾರತವು ಈ ಸಂಬಂಧ ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ವ್ಯಾಪಾರ ವಹಿವಾಟನ್ನು ನಡೆಸುತ್ತಿದೆ. ಭಾರತದ ಬಾಸ್ಮತಿ ರಫ್ತು ಮಾರುಕಟ್ಟೆಯಲ್ಲಿ ಶೇ. 50ರಷ್ಟು ಬೇಡಿಕೆ ಇರಾನ್, ಸೌದಿ ಅರೇಬಿಯಾ, ಇರಾಕ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮೆನ್ ನಿಂದ ಹೊಂದಿದೆ. ಆದರೆ ಈಗ ಸಂಘರ್ಷದ ವಾತಾವರಣದ ಕಾರಣದಿಂದ ಪರಿಸ್ಥಿತಿ ಆತಂಕವನ್ನು ಉಂಟು ಮಾಡಿದೆ.
ಈಗಾಗಲೇ ದೇಶೀಯ ಮಾರುಕಟ್ಟೆಯಲ್ಲಿ ಬಾಸ್ಮತಿ ಅಕ್ಕಿ ಬೆಲೆ ಕ್ವಿಂಟಾಲ್‌ಗೆ 1,000 ರೂ. ಗಳಷ್ಟು ಕುಸಿದಿವೆ. ಬಾಸ್ಮತಿ ಸೆಲಾ 1509, ಬಾಸ್ಮತಿ 1121, ಸುಗಂಧ ಮತ್ತು ಶರ್ಬತಿಯಂತಹ ಹಡಗು ಕಂಪೆನಿಗಳು ಯುದ್ಧ ಅಪಾಯದ ಕಾರಣಕ್ಕೆ ಸುಂಕಗಳನ್ನು ಹೆಚ್ಚಿಸಿ, ಸಾಗಾಟದ ದಾರಿಯನ್ನು ಬದಲಾಯಿಸಿರುವುದು ರಫ್ತಿಗೆ ತೀವ್ರ ಅಡ್ಡಿಯನ್ನು ಉಂಟು ಮಾಡಿದೆ. ಮಧ್ಯಪ್ರದೇಶದಿಂದ ಬಾಸ್ಮತಿ ಅಕ್ಕಿ ರಫ್ತು ಆದೇಶಗಳಲ್ಲಿ ಹಠಾತ್ ನಿಧಾನ ಪ್ರಕ್ರಿಯೆ ನಡೆಯುತ್ತಿದೆ. ಇದು ಹೆಚ್ಚಿನ ವೆಚ್ಚಗಳಿಗೆ ಕಾರಣವಾಗಿವೆ ಎನ್ನುತ್ತಾರೆ ರಫ್ತುದಾರರು ಹೇಳುತ್ತಾರೆ.
ಈ ಕುರಿತು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ರಾಯ್ಸೆನ್‌ನಲ್ಲಿರುವ ಅಪರ್ಣಾ ಆಹಾರ ಗಿರಣಿ ಸಂಘದ ಅಧ್ಯಕ್ಷ ಸಚಿನ್ ವರ್ಮಾ, ಇರಾನ್ ಮೇಲೆ ಇಸ್ರೇಲ್, ಯುಎಸ್ ನಡೆಸುತ್ತಿರುವ ಸಂಘರ್ಷದ ಪರಿಣಾಮ ಬಾಸ್ಮತಿ ಅಕ್ಕಿ ರಫ್ತು ಮೇಲೆ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲಾಗುತ್ತಿದೆ. ಇದರಿಂದ ಅಕ್ಕಿಯ ಬೆಲೆ ಪ್ರತಿ ಕಿಲೋಗ್ರಾಂಗೆ 8 ರಿಂದ 10 ರೂ. ನಷ್ಟು ಹೆಚ್ಚಾಗಿದೆ. ಇಷ್ಟು ಮಾತ್ರವಲ್ಲದೆ ಹಡಗು ಕಂಪನಿಗಳು ಉದ್ದೇಶಿತ ಮಾರ್ಗಗಳ ಬದಲಾಗಿ ಪರ್ಯಾಯ ಬಂದರುಗಳಿಗೆ ಸರಕುಗಳನ್ನು ತಿರುಗಿಸಿವೆ. ಇದರಿಂದ ವೆಚ್ಚವನ್ನು ಮತ್ತಷ್ಟು ಹೆಚ್ಚಾಗಿದ್ದು, ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂದರು.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮ ಹಂತಕ್ಕೆ: ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ
ಉದ್ಯಮಿ ಪ್ರಾಂಜಲ್ ಮಲಾನಿ ಪ್ರಕಾರ, ಸುಮಾರು 4 ಲಕ್ಷ ಮೆಟ್ರಿಕ್ ಟನ್ ಬಾಸ್ಮತಿ ಅಕ್ಕಿ ಅಂತಾರಾಷ್ಟ್ರೀಯ ಬಂದರುಗಳಲ್ಲಿ ಸಿಲುಕಿಕೊಂಡಿದೆ. ಇದರ ವಿತರಣೆ ವಿಳಂಬವಾದರೆ ರಫ್ತುದಾರರಿಗೆ ಬಹಳಷ್ಟು ಸಮಸ್ಯೆಗಳನ್ನು ಉಂಟು ಮಾಡಲಿದೆ ಎಂದು ಹೇಳಿದರು.