ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದೇಶದಲ್ಲಿ ಸದ್ಯಕ್ಕಂತೂ ತೈಲ ಬೆಲೆ ಏರಿಕೆಯಾಗುವುದಿಲ್ಲ, ಆತಂಕ ಬೇಡ: ಕೇಂದ್ರದಿಂದ ಭರವಸೆ; ರಷ್ಯಾದಿಂದ ತೈಲ ಖರೀದಿಸಲಿದೆ ಭಾರತ

ಅಮೆರಿಕ–ಇಸ್ರೇಲ್–ಇರಾನ್ ಯುದ್ಧದ ಹಿನ್ನೆಲೆ ಇಂಧನ ಪೂರೈಕೆಯಲ್ಲಿ ಅನಿಶ್ಚಿತತೆ ಇದ್ದರೂ, ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಮುಂದುವರಿಸಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಪೂರೈಕೆ ವ್ಯತ್ಯಯ ಎದುರಾದರೂ ಭಾರತ ಬಳಿ 74ರಿಂದ 90 ದಿನಗಳವರೆಗೆ ಆಗುವಷ್ಟು ಸಾಕಷ್ಟು ತೈಲ ಮೀಸಲು ದಾಸ್ತಾನು ಇದೆ ಎಂದು ತಿಳಿಸಲಾಗಿದೆ.

ಇಂಧನ ಸಂಕಷ್ಟದ ನಡುವೆ ಭಾರತದ ನೆರವಿಗೆ ಧಾವಿಸಿದ ರಷ್ಯಾ

ಸಾಂದರ್ಭಿಕ ಚಿತ್ರ -

Profile
Sushmitha Jain Mar 6, 2026 3:09 PM

ದೆಹಲಿ, ಮಾ. 6: ಅಮೆರಿಕ-ಇಸ್ರೇಲ್-ಇರಾನ್ (US-Israel-Iran) ಯುದ್ಧದ ಮಧ್ಯೆ ಇಂಧನ ಪೂರೈಕೆಯಲ್ಲಿ ಉಂಟಾಗಿರುವ ಅನಿಶ್ಚಿತತೆಯ ನಡುವೆಯೂ ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸಲಿದೆ ಎಂದು ಸರ್ಕಾರಿ ಮೂಲಗಳು ಶುಕ್ರವಾರ ಖಚಿತಪಡಿಸಿವೆ. ಪೆಟ್ರೋಲ್ ಬೆಲೆಗಳನ್ನು ಸ್ಥಿರಗೊಳಿಸಲು ನಡೆಸಿದ ಪ್ರಯತ್ನಗಳು ಫಲ ನೀಡಿವೆ ಮತ್ತು ಕಚ್ಚಾ ತೈಲ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ. ಇರಾನ್ ಯುದ್ಧ ಮಾತ್ರವಲ್ಲದೆ, ಟೆಹರಾನ್‌ ನಿಯಂತ್ರಿತ ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ತೈಲ ನೌಕೆಗಳ ಮೇಲೆ ಮಿಲಿಟರಿ ಒತ್ತಡವಿದ್ದರೂ, ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ಅದನ್ನು ಎದುರಿಸಲು ಭಾರತದ ಬಳಿ ಸಾಕಷ್ಟು ಮೀಸಲು ದಾಸ್ತಾನು ಇದೆ ಎಂದು ವರದಿಯಾಗಿದೆ.

ಹೊರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಪಥ ಎನಿಸಿಕೊಂಡಿದೆ. ವಿಶ್ವದ ತೈಲ ವ್ಯಾಪಾರದ ಐದನೇ ಒಂದು ಭಾಗ ಮತ್ತು ಅರ್ಧದಷ್ಟು ನೈಸರ್ಗಿಕ ಅನಿಲ ವ್ಯಾಪಾರವು ಈ ಮಾರ್ಗದ ಮೂಲಕವೇ ನಡೆಯುತ್ತದೆ. ಭಾರತದ ಒಟ್ಟು ತೈಲ ಬಳಕೆಯ ಅರ್ಧದಷ್ಟು ಅಂದರೆ ದಿನಕ್ಕೆ ಸುಮಾರು 2.5ರಿಂದ 2.7 ಮಿಲಿಯನ್ ಬ್ಯಾರೆಲ್‌ಗಳಷ್ಟು ತೈಲವು ಇದೇ ಜಲಸಂಧಿಯ ಮೂಲಕ ಬರುತ್ತದೆ.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮ ಹಂತಕ್ಕೆ: ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ

ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಅಮೆರಿಕದ ನಿಲುವು ಏನಾಗಬಹುದು ಎಂಬ ಪ್ರಶ್ನೆ ಇತ್ತಾದರೂ, ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ಏಪ್ರಿಲ್ 3ರವರೆಗೆ ಭಾರತೀಯ ಸಂಸ್ಕರಣಾಗಾರಗಳಿಗೆ ರಷ್ಯಾದ ತೈಲವನ್ನು ಖರೀದಿಸಲು 30 ದಿನಗಳ ವಿನಾಯಿತಿ ಘೋಷಿಸಿದ್ದಾರೆ. ಸೌದಿ ಅರೇಬಿಯಾದ ರಾಸ್ ತನುರಾ ಮತ್ತು ಇರಾಕ್‌ನ ರುಮೈಲಾ ತೈಲಕ್ಷೇತ್ರಗಳ ಮೇಲೆ ನಡೆದ ದಾಳಿಯಿಂದಾಗಿ ಪಶ್ಚಿಮ ಏಷ್ಯಾದಲ್ಲಿ ತೈಲ ಉತ್ಪಾದನೆಗೆ ಹೊಡೆತ ಬಿದ್ದಿದೆ.

ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಸಂಸತ್ತಿನಲ್ಲಿ ತಿಳಿಸಿದಂತೆ, ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿರುವ ಭೂಗತ ಜಲಾಶಯಗಳು ಹಾಗೂ ತೈಲ ಮಾರುಕಟ್ಟೆ ಕಂಪನಿಗಳ ಬಳಿ ಇರುವ ಆಯಕಟ್ಟಿನ ಮೀಸಲು ದಾಸ್ತಾನುಗಳು ಬಳಕೆಯ ಮಟ್ಟಕ್ಕೆ ಅನುಗುಣವಾಗಿ 74ರಿಂದ 90 ದಿನಗಳವರೆಗೆ ಯಾವುದೇ ಸಮಸ್ಯೆ ಇಲ್ಲ. ಚೀನಾಕ್ಕೆ ಹೋಲಿಸಿದರೆ ಭಾರತದ ದಾಸ್ತಾನು ಕಡಿಮೆ ಇದ್ದರೂ (ಚೀನಾ 6 ತಿಂಗಳ ದಾಸ್ತಾನು ಹೊಂದಿದೆ), ಸರ್ಕಾರವು ಎಲ್ಲ 'ಅಪಾಯಕಾರಿ' ಸನ್ನಿವೇಶಗಳನ್ನು ಎದುರಿಸಲು ಯೋಜನೆಯನ್ನು ರೂಪಿಸಿದೆ. ಈ ಪೂರೈಕೆ ವ್ಯತ್ಯಯವು ಕೇವಲ ಇಂಧನ ಮಾತ್ರವಲ್ಲದೆ, ತೈವಾನ್‌ನಂತಹ ದೇಶಗಳ ಸೆಮಿಕಂಡಕ್ಟರ್ ಉದ್ಯಮದ ಮೇಲೂ ಪರಿಣಾಮ ಬೀರಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.