ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಮೃತ್ ಭಾರತ್ ಎಕ್ಸ್‌ಪ್ರೆಸ್‌ ರೈಲು; ಆರ್‌ಎಸಿ ಇಲ್ಲ, ಕೈಗೆಟಕುವ ದರದಲ್ಲಿ ಟಿಕೆಟ್ ಲಭ್ಯ

ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಶುಭ ಸುದ್ದಿ. ಹೊಸದಾಗಿ ಘೋಷಣೆಯಾಗಿರುವ ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಕೈಗೆಟಕುವ ದರದಲ್ಲಿ ಟಿಕೆಟ್ ಲಭ್ಯವಾಗಲಿದೆ. ಇದರ ರಚನೆ ಮತ್ತು ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಂಗ್ರಹ ಚಿತ್ರ

ಬೆಂಗಳೂರು: ದೇಶದ ಕೋಟ್ಯಾಂತರ ಜನರು ಬಳಸುವ ಭಾರತೀಯ ರೈಲು (indian railway) ಸಾರಿಗೆಯ ಟಿಕೆಟ್ (Rail ticket) ಬುಕ್ಕಿಂಗ್, ಟಿಕೆಟ್ ದರದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಹೊಸ ವರ್ಷದ ಆರಂಭದಲ್ಲೇ ಘೋಷಿಸಲಾಗಿರುವ ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ (Amrit Bharat Express train) ಇದು ಅನ್ವಯವಾಗಲಿದೆ. ಹೊಸ ರೈಲುಗಳ ದರದಲ್ಲಿ ಭಾರಿ ಕೊಡುಗೆಯನ್ನು ಪ್ರಕಟಿಸಲಾಗಿದೆ. ಹೊಸ ಅಮೃತ್ ಭರತ್ ಎಕ್ಸ್ ಪ್ರೆಸ್ ರೈಲುಗಳ ದರ, ಬುಕ್ಕಿಂಗ್ ನಿಯಮಗಳು ಹಿಂದಿನ ಭಾರತ್ ರೈಲುಗಳಿಗಿಂತ ಕೊಂಚ ಭಿನ್ನವಾಗಿದೆ.

ಭಾರತೀಯ ರೈಲ್ವೆ ಮಂಡಳಿ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಹೊಸ ರೈಲ್ವೆ ನಿಯಮಗಳ ಅಡಿಯಲ್ಲಿ ಮೂಲ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಕನಿಷ್ಠ ದೂರದ ದರ ನಿಗದಿ ನಿಯಮಗಳಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಇದರಿಂದ ದರದಲ್ಲಿ ವ್ಯತ್ಯಾಸವಾಗಲಿದೆ.

ಟಿಶ್ಯೂ ಪೇಪರ್‌ನಲ್ಲಿ ಬಾಂಬ್ ಬೆದರಿಕೆ; ದೆಹಲಿಯಿಂದ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ ಲಖನೌನಲ್ಲಿ ತುರ್ತು ಭೂಸ್ಪರ್ಶ

ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲಿನ ಸ್ಲೀಪರ್ ಕ್ಲಾಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕನಿಷ್ಠ 200 ಕಿ.ಮೀ. ದೂರದ ದರವನ್ನು ಪಾವತಿಸಲೇಬೇಕು. ಇದರ ಕನಿಷ್ಠ ದರ 149 ರೂ. ಆಗಿದೆ. ಸೆಕೆಂಡ್ ಕ್ಲಾಸ್ ನಲ್ಲಿ ಕನಿಷ್ಠ ದೂರವನ್ನು 50 ಕಿ.ಮೀ. ಗೆ ನಿಗದಿಪಡಿಸಲಾಗಿದೆ. ಇಲ್ಲಿ ಕನಿಷ್ಠ ದರ 36 ರೂ. ಆಗಿರಲಿದೆ. ಇದರೊಂದಿಗೆ ಸೀಟು ಕಾಯ್ದಿರಿಸುವಿಕೆ ಶುಲ್ಕ, ಸೂಪರ್ ಫಾಸ್ಟ್ ಶುಲ್ಕಗಳು ಪ್ರತ್ಯೇಕವಾಗಿ ಅನ್ವಯವಾಗಲಿದೆ. ಪ್ರಯಾಣಿಕರು ಕೇವಲ ೧೦೦ ಕಿ.ಮೀ. ದೂರ ಪ್ರಯಾಣಿಸಿದರೂ ಸ್ಲೀಪರ್ ಕ್ಲಾಸ್ ನಲ್ಲಿ ಕನಿಷ್ಠ 200 ಕಿ.ಮೀ. ದರವನ್ನು ಪಾವತಿಸಬೇಕಾಗುತ್ತದೆ.

ಆರ್ ಎಸಿ ರದ್ದು

ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲಿನ ಸ್ಲೀಪರ್ ಕ್ಲಾಸ್ ವಿಭಾಗದಲ್ಲಿ ಆರ್ ಎಸಿ ಟಿಕೆಟ್ ಗಳು ಲಭ್ಯವಾಗಿರುವುದಿಲ್ಲ. ಮುಂಗಡ ಕಾಯ್ದಿರಿಸುವಿಕೆ ಪ್ರಾರಂಭವಾದಾಗಿನಿಂದಲೇ ಎಲ್ಲಾ ಬರ್ತ್ ಗಳು ಪ್ರಯಾಣಿಕರಿಗೆ ಲಭ್ಯವಾಗಲಿದೆ. ಕಾಯ್ದಿರಿಸದ ಸೆಕೆಂಡ್ ಕ್ಲಾಸ್ ವಿಭಾಗಕ್ಕೆ ಹಳೆಯ ನಿಯಮಗಳೇ ಮುಂದುವರಿಯುತ್ತದೆ ಎಂದು ರೈಲ್ವೇ ಮಂಡಳಿ ತಿಳಿಸಿದೆ.

ಜಮ್ಮು-ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಎನ್‌ಕೌಂಟರ್; ಪಾಕ್ ಬೆಂಬಲಿತ ಮೂರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನು ಸುತ್ತುವರಿದ ಭದ್ರತಾ ಪಡೆ

ಇನ್ನು ಒಮ್ಮೆ ಬುಕ್ಕಿಂಗ್ ಮಾಡಿದ ರೈಲ್ವೇ ಟಿಕೆಟ್ ರದ್ದುಗೊಳಿಸಿದರೆ 24 ಗಂಟೆಗಳ ಒಳಗೆ ಮರುಪಾವತಿ ಮಾಡಲು ಹೊಸ ನೀತಿ ಜಾರಿಗೊಳಿಸಲು ಯೋಜನೆ ಮಾಡಲಾಗುತ್ತಿದೆ. ಕಾಯ್ದಿರಿಸುವ ಟಿಕೆಟ್ ಗಳಿಗೆ ಕೇವಲ ಡಿಜಿಟಲ್ ಪಾವತಿ ವಿಧಾನ ಅನ್ವಯವಾಗಲಿದ್ದು, ಕೌಂಟರ್ ನಲ್ಲಿ ಖರೀದಿ ಮಾಡುವ ಟಿಕೆಟ್ ಗೆ ಡಿಜಿಟಲ್ ಪಾವತಿ ಅಥವಾ ಸಾಮಾನ್ಯ ಪಾವತಿಗೆ ಅವಕಾಶವಿದೆ.

ವಿದ್ಯಾ ಇರ್ವತ್ತೂರು

View all posts by this author