ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗಿಜಿಗುಡುವ ಬೆಂಗಳೂರಿನಲ್ಲಿ ಪ್ರಶಾಂತ ಜೀವನ: ತಲೆ ಎತ್ತುತ್ತಿದೆ ವಿನೂತನ 'ಲೋ-ಡೆನ್ಸಿಟಿ' ವಸತಿ ಯೋಜನೆ

ಇಂದಿನ ಗ್ರಾಹಕರು ಐಷಾರಾಮಿ ಸೌಲಭ್ಯ ಗಳಿಗಿಂತ ಹೆಚ್ಚಾಗಿ ಉಸಿರಾಡಲು ಮುಕ್ತ ಜಾಗ, ಹಸಿರು ಮತ್ತು ಖಾಸಗಿತನ ಬಯಸುತ್ತಿದ್ದಾರೆ. ನಾವು ನಗರ-ವ್ಯಾಪಿ ಸಮೀಕ್ಷೆ ನಡೆಸಿದಾಗಲೂ ಇದೇ ಅಂಶಗಳು ವ್ಯಕ್ತವಾಗಿದ್ದವು. ಗ್ರಾಹಕರ ಈ ನಿರೀಕ್ಷೆಗಳೇ ನಮ್ಮ ಈ ಪ್ರಾಜೆಕ್ಟ್‌ನ ಅಡಿಪಾಯ. ಭಾರತದ ವಸತಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿ ಬೆಳೆಸುವುದು ನಮ್ಮ ಉದ್ದೇಶ

ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಯು, ಉತ್ತರ ಬೆಂಗಳೂರಿನಲ್ಲಿ 'ದಿವ್ಯಶ್ರೀ ಕ್ವೈಟ್‌ ಸೈಡ್' ಎಂಬ ಹೊಸ ವಸತಿ ಯೋಜನೆಯನ್ನು ಅನಾವರಣಗೊಳಿಸಿದೆ. ಸುಮಾರು 800 ಕೋಟಿ ರೂ.ಗೂ ಅಧಿಕ ಅಭಿವೃದ್ಧಿ ಮೌಲ್ಯದ (ಜಿಡಿವಿ) ಸಾಮರ್ಥ್ಯ ಹೊಂದಿರುವ ಈ ಯೋಜನೆಯು, ಕಂಪನಿಯ ವಸತಿ ವಲಯದ ಮುಂದಿನ ಹಂತದ ಬೆಳವಣಿಗೆಗೆ ಮುನ್ನುಡಿ ಬರೆದಿದೆ.

5 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಈ ಕಡಿಮೆ ಸಾಂದ್ರತೆಯ ಯೋಜನೆಯಲ್ಲಿ ಮೂರು ಟವರ್‌ಗಳು ಇರಲಿದ್ದು, ಕೇವಲ 260 3-BHK ಮನೆಗಳನ್ನು ನಿರ್ಮಿಸಲಾಗುತ್ತಿದೆ. ವಿಶೇಷ ವೆಂದರೆ, ಒಟ್ಟು ಜಾಗದಲ್ಲಿ ಶೇ. 85 ರಷ್ಟು ಪ್ರದೇಶವನ್ನು ಮುಕ್ತ ಸ್ಥಳಾವಕಾಶಕ್ಕಾಗಿ ಕಾಯ್ದಿರಿಸ ಲಾಗಿದೆ. ನಗರದ ಜನದಟ್ಟಣೆಯಿಂದ ದೂರವಾಗಿ, ಸಾಕಷ್ಟು ಸ್ಥಳಾವಕಾಶ, ಖಾಸಗಿತನ ಮತ್ತು ಪ್ರಶಾಂತತೆ ಬಯಸುವವರಿಗಾಗಿ ಈ ವಿನ್ಯಾಸ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಕ್ಲಬ್‌ಹೌಸ್, ಈಜುಕೊಳ, ಲೈಬ್ರರಿ, ಮಿನಿ ಥಿಯೇಟರ್

ಈ ಯೋಜನೆಯ ಪ್ರತಿಯೊಂದು ಮನೆಯನ್ನು ಸ್ವತಂತ್ರ ಗೋಡೆಗಳೊಂದಿಗೆ ನಿರ್ಮಿಸಲಾಗುತ್ತಿದ್ದು, ನೆರೆಹೊರೆಯವರೊಂದಿಗೆ ಯಾವುದೇ ಗೋಡೆಗಳನ್ನು ಹಂಚಿಕೊಳ್ಳುವ ವಿನ್ಯಾಸ ಇರುವುದಿಲ್ಲ. ಇದು ಶಬ್ದದ ಪ್ರಸರಣವನ್ನು ತಪ್ಪಿಸುವುದರ ಜೊತೆಗೆ ನಿವಾಸಿಗಳ ಖಾಸಗಿತನವನ್ನು ಕಾಪಾಡುತ್ತದೆ.

ಇದನ್ನೂ ಓದಿ: ₹4,200 ಕೋಟಿ ಅಭಿವೃದ್ಧಿ ಮೌಲ್ಯದೊಂದಿಗೆ Real Assets ಸಂಸ್ಥೆ ಆರಂಭಿಸಿದ ತಿರು ಅಂಶುಲ್ ಸಿಂಘಲ್

1,900 ಮತ್ತು 2,200 ಚದರ ಅಡಿ ವಿಸ್ತೀರ್ಣದ ಈ 3-BHK ಮನೆಗಳ ಬೆಲೆ 2.99 ಕೋಟಿ ರೂ.ಗಳಿಂದ (ಎಲ್ಲಾ ವೆಚ್ಚ ಒಳಗೊಂಡಂತೆ) ಆರಂಭವಾಗಲಿದೆ. ಜತೆಗೆ, 15,000 ಚದರ ಅಡಿಯ ಕ್ಲಬ್‌ಹೌಸ್, ಈಜುಕೊಳ, ಲೈಬ್ರರಿ, ಮಿನಿ ಥಿಯೇಟರ್ ಸೇರಿದಂತೆ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸೌಕರ್ಯಗಳನ್ನು ಇದು ಒಳಗೊಂಡಿರಲಿದೆ.

ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅಧ್ಯಕ್ಷ ಹಾಗೂ ಸಿಇಒ ಭಾಸ್ಕರ್ ಎನ್. ರಾಜು, "ನಗರಗಳು ಬೆಳೆದಂತೆಲ್ಲಾ ಪ್ರಸ್ತುತ ಹಾಗೂ ಮೌಲ್ಯಯುತವಾಗಿ ಉಳಿಯುವಂತಹ ಅಭಿವೃದ್ಧಿ ಗಳನ್ನು ಸೃಷ್ಟಿಸುವುದು ಗುರಿ. ನಮ್ಮ ವ್ಯವಹಾರದ ಪ್ರತಿಯೊಂದು ವಿಭಾಗವೂ ಮುಂದಿನ ಹಂತದ ಬೆಳವಣಿಗೆಗೆ ಸಜ್ಜಾಗಿದೆ. 'ಕ್ವೈಟ್‌ ಸೈಡ್' ಮೂಲಕ ಮುಂದಿನ ಪೀಳಿಗೆಯ ಮನೆಗಳು ಹೇಗಿರಲಿವೆ, ವಿನ್ಯಾಸ ಮತ್ತು ದೀರ್ಘಕಾಲೀನ ಮೌಲ್ಯ ಹೇಗಿರಲಿದೆ ಎಂಬುದನ್ನು ನಾವು ತೋರಿಸುತ್ತಿದ್ದೇವೆ," ಎಂದರು.

ವಸತಿ ವಿಭಾಗದ ಸಿಇಒ ಅವಿನಾಶ್ ಸುರೇಶ್ ವಿವರಿಸಿ, "ಇಂದಿನ ಗ್ರಾಹಕರು ಐಷಾರಾಮಿ ಸೌಲಭ್ಯ ಗಳಿಗಿಂತ ಹೆಚ್ಚಾಗಿ ಉಸಿರಾಡಲು ಮುಕ್ತ ಜಾಗ, ಹಸಿರು ಮತ್ತು ಖಾಸಗಿತನ ಬಯಸುತ್ತಿದ್ದಾರೆ. ನಾವು ನಗರ-ವ್ಯಾಪಿ ಸಮೀಕ್ಷೆ ನಡೆಸಿದಾಗಲೂ ಇದೇ ಅಂಶಗಳು ವ್ಯಕ್ತವಾಗಿದ್ದವು. ಗ್ರಾಹಕರ ಈ ನಿರೀಕ್ಷೆಗಳೇ ನಮ್ಮ ಈ ಪ್ರಾಜೆಕ್ಟ್‌ನ ಅಡಿಪಾಯ. ಭಾರತದ ವಸತಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿ ಬೆಳೆಸುವುದು ನಮ್ಮ ಉದ್ದೇಶ," ಎಂದು ತಿಳಿಸಿದರು.

ಎಚ್‌ಡಿಎಫ್‌ಸಿ ಜೊತೆ 1,500 ಕೋಟಿ ರೂ. ಪಾಲುದಾರಿಕೆ

ರಿಯಲ್ ಎಸ್ಟೇಟ್ ವಲಯದಲ್ಲಿ ತನ್ನ ವಿಸ್ತರಣೆಯನ್ನು ಚುರುಕುಗೊಳಿಸಿರುವ ರಿಯಲ್ ಎಸ್ಟೇಟ್ ಕಂಪನಿ ಮುಂಬರುವ 3-4 ವರ್ಷಗಳಲ್ಲಿ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲಿ 18 ದಶಲಕ್ಷ ಚದರ ಅಡಿಗಿಂತ ಹೆಚ್ಚಿನ ವಿಸ್ತಾರದ 14 ಹೊಸ ಯೋಜನೆಗಳನ್ನು ಆರಂಭಿಸುವ ಗುರಿ ಹೊಂದಿದೆ.

ಈ ವಿಸ್ತರಣಾ ಯೋಜನೆಯ ಭಾಗವಾಗಿ, ಸಂಸ್ಥೆಯು ಇತ್ತೀಚೆಗಷ್ಟೇ 'ಎಚ್‌ಡಿಎಫ್‌ಸಿ ಕ್ಯಾಪಿಟಲ್ ಅಡ್ವೈಸರ್ಸ್' ಜೊತೆ ಪಾಲುದಾರಿಕೆ ಘೋಷಿಸಿದ್ದು, 1,500 ಕೋಟಿ ರೂ. ಮೌಲ್ಯದ ವಸತಿ ವೇದಿಕೆಯನ್ನು ನಿರ್ಮಿಸಲಿದೆ. ಇದರ ಬೆಂಬಲದೊಂದಿಗೆ ಮುಂದಿನ ದಿನಗಳಲ್ಲಿ ವಿವಿಧ ನಗರಗಳಲ್ಲಿ ಸುಮಾರು 6,750 ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳಲು ಕಂಪನಿ ಸಜ್ಜಾಗಿದೆ.