ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Baba Vanga’s prediction: ಮುಂದಿನ ವರ್ಷ ಚಿನ್ನ ಖರೀದಿ ಮಾಡಬಹುದೇ? ಬಾಬಾ ವಂಗಾ ಭವಿಷ್ಯವೇನು?

Gold Rate: ಈಗಾಗಲೇ ಚಿನ್ನದ ಬೆಲೆ ಗಗನ ಮುಟ್ಟಿದೆ. ಹೀಗಾಗಿ ಮುಂದಿನ ವರ್ಷ ಇದು ಮತ್ತಷ್ಟು ದುಬಾರಿಯಾಗಬಹುದು ಎಂದು ಎಲ್ಲರೂ ನಿರೀಕ್ಷೆ ಮಾಡುತ್ತಿದ್ದಾರೆ. ಇನ್ನು ಕೆಲವರು ಕಡಿಮೆ ಆದರೂ ಆಗಬಹುದು ಎನ್ನುವ ಕುತೂಹಲವಿಟ್ಟುಕೊಂಡು ಕಾಯುತ್ತಿದ್ದಾರೆ. ಹೀಗಿರುವಾಗ ಬಲ್ಗೇರಿಯನ್ ಅತೀಂದ್ರಿಯ ಬಾಬಾ ವಂಗಾ (Baba Vanga’s prediction) ಹೇಳಿರುವ ಭವಿಷ್ಯವಾಣಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಮಾಡುತ್ತಿದೆ.

1/7

ಚಿನ್ನ ಖರೀದಿ ಯೋಚನೆಯೇ? ಇದಕ್ಕಾಗಿ ಸ್ವಲ್ಪ ಕಾಯಬೇಕೇ, ಬೇಡವೇ ಎನ್ನುವ ಚಿಂತೆ ಕಾಡುತ್ತಿದೆಯೇ ? ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಬಲ್ಗೇರಿಯನ್ ಅತೀಂದ್ರಿಯ ಬಾಬಾ ವಂಗಾ (Baba Vanga’s prediction) ಹೇಳಿರುವ ಭವಿಷ್ಯವಾಣಿ ಚಿನ್ನದ ಮೇಲೆ ಹೂಡಿಕೆ ಮಾಡಲು ಇಚ್ಛೆ ಉಳ್ಳವರ ಗಮನ ಸೆಳೆದಿದೆ.

2/7

ದೇಶಾದ್ಯಂತ ಈಗ ಚಿನ್ನದ ಬೆಲೆಗಳು ಗರಿಷ್ಠ ಮಟ್ಟಕ್ಕೆ ಏರಿದೆ. 10 ಗ್ರಾಂ ಚಿನ್ನದ ಬೆಲೆ 1.23 ಲಕ್ಷ ರೂ. ಗಳನ್ನು ದಾಟಿದೆ. ಹೀಗಿರುವಾಗ ಹೂಡಿಕೆದಾರರು ಮತ್ತು ಗ್ರಾಹಕರಲ್ಲಿ ಇದು ಕಳವಳವನ್ನು ಹೆಚ್ಚಿಸಿದೆ. ಈ ನಡುವೆ 2026ರಲ್ಲಿ ಚಿನ್ನದ ಬೆಲೆ ಎಷ್ಟಾಗಬಹುದು ಎನ್ನುವ ಕುತೂಹಲವನ್ನೂ ಹೆಚ್ಚಿಸಿದೆ.

3/7

2026ರಲ್ಲಿ ಚಿನ್ನದ ಬೆಲೆಯ ಬಗ್ಗೆ ಬಲ್ಗೇರಿಯನ್ ಅತೀಂದ್ರಿಯ ಬಾಬಾ ವಂಗಾ ಅವರು ಹೇಳಿರುವ ಭವಿಷ್ಯವಾಣಿ ಚಿನ್ನದ ಮೇಲೆ ಹೂಡಿಕೆ ಮಾಡಲು ಇಚ್ಛೆ ಉಳ್ಳವರ ಗಮನ ಸೆಳೆದಿದೆ. ಇವರ ಭವಿಷ್ಯವಾಣಿಯು ಮತ್ತೊಮ್ಮೆ ಚರ್ಚೆಯಾಗುತ್ತಿದ್ದು, ಇದು ಬೆಲೆಗಳಲ್ಲಿ ಮತ್ತಷ್ಟು ಏರಿಕೆಯಾಗುವ ಆತಂಕವನ್ನು ಉಂಟು ಮಾಡಿದೆ.

4/7

ಮಾರುಕಟ್ಟೆ ಅನಿಶ್ಚಿತವಾಗಿರುವಾಗ ಮತ್ತು ಹಣದುಬ್ಬರದ ಪರಿಸ್ಥಿತಿಯಲ್ಲಿ ಚಿನ್ನದ ಮೇಲಿನ ಹೂಡಿಕೆಯನ್ನು ಸುರಕ್ಷಿತ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಸದ್ಯದ ಪರಿಸ್ಥಿತಿಯಲ್ಲಿ ಯುಎಸ್ ಡಾಲರ್ ದುರ್ಬಲಗೊಳ್ಳುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಸ್ಥಿರತೆ ಕಾಣುತ್ತಿಲ್ಲ. ಹೀಗಾಗಿ ಎಲ್ಲರೂ ಲೋಹದ ಕಡೆಗೆ ಆಕರ್ಷಿಸಿತರಾಗುತ್ತಿದ್ದಾರೆ.

5/7

ಈ ನಡುವೆ ಬಾಬಾ ವಂಗಾ ಅವರ ಭವಿಷ್ಯ ಸಾಕಷ್ಟು ಕುತೂಹಲ ಮೂಡಿಸಿದೆ. ಬಾಬಾ ವಂಗಾ ಅವರು 2026 ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಅಥವಾ ನಗದು ಕೊರತೆಯ ಬಗ್ಗೆ ಎಚ್ಚರಿಕೆ ನೀಡಿದ್ದರು. ಇದು ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರಬಹುದು. ಇದರಿಂದಾಗಿ ಚಿನ್ನದ ಬೆಲೆಗಳು ಶೇ. 25 ರಿಂದ 40 ರಷ್ಟು ಏರಿಕೆಯಾಗಬಹುದು.

6/7

ಒಂದು ವೇಳೆ ಬಾಬಾ ವಂಗಾ ಅವರ ಈ ಭವಿಷ್ಯವಾಣಿಯು ನಿಜವಾದರೆ ಭಾರತದಲ್ಲಿ ಚಿನ್ನದ ಬೆಲೆಗಳು 10 ಗ್ರಾಂಗೆ 1.62 ಲಕ್ಷದಿಂದ 1.82 ಲಕ್ಷ ರೂ. ಗಳವರೆಗೆ ತಲುಪಬಹುದು. ಹೀಗಾದರೆ ಇದೊಂದು ಚಿನ್ನದ ದರದಲ್ಲಿ ಅತ್ಯಧಿಕ ದಾಖಲೆಯಾಗುತ್ತದೆ. ಎಲ್ಲವೂ ಭವಿಷ್ಯವಾಣಿಯಂತೆ ನಡೆಯುತ್ತದೆ ಎನ್ನಲಾಗುವುದಿಲ್ಲ. ಆದರೆ ಸದ್ಯದ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಇದನ್ನು ಅಲ್ಲಗಳೆಯುವಂತೆಯೂ ಇಲ್ಲ.

7/7

ಹೂಡಿಕೆಗೆ ಚಿನ್ನವನ್ನು ದೀರ್ಘಕಾಲದಿಂದ ಸುರಕ್ಷಿತ ಎಂದೇ ನೋಡಲಾಗುತ್ತಿದೆ. ಹಣದುಬ್ಬರ, ಬಡ್ಡಿದರಗಳು ಮತ್ತು ಜಾಗತಿಕ ಮಾರುಕಟ್ಟೆ ಪರಿಸ್ಥಿತಿಗಳಿಂದ ಹೂಡಿಕೆಯನ್ನು ನಿರ್ಧರಿಸಬೇಕು ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಚಿನ್ನ ಹೊಳೆಯುತ್ತಿದ್ದರೂ ಎಚ್ಚರಿಕೆ ಮತ್ತು ಸರಿಯಾದ ಮಾಹಿತಿ ಪಡೆದು ಹೂಡಿಕೆ ಮಾಡಿದರೆ ಮಾತ್ರ ಅದು ಸುರಕ್ಷಿತ ನಡೆಯಾಗುತ್ತದೆ.

ವಿದ್ಯಾ ಇರ್ವತ್ತೂರು

View all posts by this author