ನವದೆಹಲಿ: ಜಾಗತಿಕ ತೈಲ ಮಾರುಕಟ್ಟೆಯಲ್ಲಿ (Global oil market) ಉಂಟಾಗಿರುವ ತಲ್ಲಣಗಳಿಂದಾಗಿ ಸಾಮಾನ್ಯ ಗ್ರಾಹಕರಿಗೆ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ (petrol and diesel) ಲಭ್ಯವಾಗುವುದನ್ನು ಖಚಿತ ಪಡಿಸಿಕೊಳ್ಳಲು ಕೇಂದ್ರ ಸರ್ಕಾರವು (central government) ಪೆಟ್ರೋಲ್ ಪಂಪ್‌ಗಳಿಂದ (petrol pumps) ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸುವುದನ್ನು ನಿಷೇಧಿಸಿದೆ. ಕೈಗಾರಿಕೆ, ವಾಣಿಜ್ಯ ಮತ್ತು ಸಾಂಸ್ಥಿಕ ಬಳಕೆಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಪೆಟ್ರೋಲ್ ಪಂಪ್‌ಗಳಿಂದ ಖರೀದಿಸುವುದನ್ನು ನಿರ್ಬಂಧಿಸಿರುವ ಕೇಂದ್ರ ಸರ್ಕಾರ, ಇದಕ್ಕಾಗಿ ಬೃಹತ್ ಮಾರಾಟ ಕೇಂದ್ರಗಳಿಂದ ಪಡೆಯುವಂತೆ ಸೂಚಿಸಿದೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಸಂಘರ್ಷದ ಪರಿಣಾಮದಿಂದ ಇಂಧನ ಬೆಲೆಗಳು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಹೀಗಾಗಿ ಹಲವು ವಾಣಿಜ್ಯ ಬಳಕೆದಾರರು ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್ ಖರೀದಿಯನ್ನು ಪೆಟ್ರೋಲ್ ಪಂಪ್ ಗಳಿಂದ ಮಾಡಲು ಪ್ರಾರಂಭಿಸಿದ್ದಾರೆ. ಇದು ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿದೆ.
ಸಂಪೂರ್ಣ ನಗದು ರಹಿತ ಆರ್ಥಿಕತೆ; ಸಾಧಕ-ಬಾಧಕಗಳ ಬಗ್ಗೆ ತಜ್ಞರು ಹೇಳುವುದೇನು?
ಬೃಹತ್ ಪ್ರಮಾಣದಲ್ಲಿ ಡೀಸೆಲ್ ಖರೀದಿಗೆ 90 ದಿನಗಳ ನಿರ್ಬಂಧ ಜಾರಿಯಲ್ಲಿದೆ. ಪೆಟ್ರೋಲ್ ಪಂಪ್‌ಗಳಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 95.20 ರೂ. ಆಗಿದ್ದರೆ, ಬೃಹತ್ ಮಾರಾಟದ ಬೆಲೆ 134.50 ರೂ. ಆಗಿದೆ. ಹೀಗಾಗಿ ಹಲವು ಕೈಗಾರಿಕೆ, ವಾಣಿಜ್ಯ ಮತ್ತು ಸಾಂಸ್ಥಿಕ ಘಟಕಗಳು ಪೆಟ್ರೋಲ್ ಪಂಪ್ ಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಗೆ ಮುಂದಾಗಿವೆ.
ಕಳೆದ ಫೆಬ್ರವರಿ ತಿಂಗಳಾಂತ್ಯದಿಂದ ಮಧ್ಯಪ್ರಾಚ್ಯ ಭಾಗಗಳಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಇದು ಜಾಗತಿಕ ಇಂಧನ ಬೆಲೆಯ ಮೇಲೆ ಪರಿಣಾಮ ಬೀರಿದೆ. ತೈಲ ಬೆಲೆ ಏರಿಕೆಯಿಂದ ಸಾಮಾನ್ಯ ಬಳಕೆದಾರರನ್ನು ರಕ್ಷಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಚಿಲ್ಲರೆ ಮಾರುಕಟ್ಟೆ ದರದ ಮೇಲೆ ಹೆಚ್ಚು ಪರಿಣಾಮ ಬೀರದಂತೆ ಮಾಡಿತು. ವಿದ್ಯುತ್ ಉತ್ಪಾದನೆ ಸೇರಿದಂತೆ ಬೃಹತ್ ಬಳಕೆದಾರರಿಗೆ ಮಾರುಕಟ್ಟೆ ಬೆಲೆಯನ್ನು ವಿಧಿಸಲಾಗಿದ್ದರೂ ಇದು ಚಿಲ್ಲರೆ ಮಾರುಕಟ್ಟೆಯ ದರಗಳಿಗಿಂತ ಹೆಚ್ಚಾಗಿದೆ.
ಇದು ಜನಸಾಮಾನ್ಯರ ಖರೀದಿ ಮೇಲೆ ಅಡ್ಡಿಯಾಗದಂತೆ ಖಚಿತ ಪಡಿಸಿಕೊಳ್ಳಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಜೂನ್ 11ರಂದು ಇಂಧನ ಚಿಲ್ಲರೆ ವ್ಯಾಪಾರಿಗಳು, ತೈಲ ಮಾರುಕಟ್ಟೆ ಕಂಪನಿಗಳು, ಚಿಲ್ಲರೆ ಮಾರಾಟ ಮಳಿಗೆಗಳಿಂದ ಬೃಹತ್ ಖರೀದಿಗಳನ್ನು 90 ದಿನಗಳವರೆಗೆ ನಿರ್ಬಂಧಿಸುವಂತೆ ಆದೇಶಿಸಿದೆ.
ಸದ್ಯದ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಈ ಕ್ರಮ ಅಗತ್ಯವಾಗಿದೆ. ಅಸಹಜ ಬೆಲೆ ಹೆಚ್ಚಳ, ಬೃಹತ್ ಮಾರಾಟ ನಡುವೆ ಸ್ಥಿರತೆಯನ್ನು ತರಲು ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ತಿಳಿಸಿದೆ.
ಅಧಿಸೂಚನೆಯ ಪ್ರಕಾರ ಸಾಂಸ್ಥಿಕ, ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರು ಪೆಟ್ರೋಲ್ ಪಂಪ್ ಗಳಿಂದ ಬೃಹತ್ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸುವುದನ್ನು ನಿಷೇಧಿಸಲಾಗಿದೆ. ಚಿಲ್ಲರೆ ಮಾರಾಟ ಮಳಿಗೆಯಿಂದ ವಾಹನ ಇಂಧನ ಟ್ಯಾಂಕ್‌ಗಳು ಅಥವಾ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (PESO) ಅನುಮೋದಿತ ಕಂಟೇನರ್‌ಗಳಿಗೆ ಮಾತ್ರ ಡೀಸೆಲ್ ಮಾರಾಟ ಮಾಡಲಾಗುತ್ತದೆ. ಪ್ರತಿ ಗ್ರಾಹಕ ಅಥವಾ ವಾಹನಕ್ಕೆ ದಿನಕ್ಕೆ 200 ಲೀಟರ್ ಮಾತ್ರ ಪೆಟ್ರೋಲ್, ಡೀಸೆಲ್ ಮಾರಾಟ ಮಾಡಲಾಗುತ್ತದೆ.
ಆಕಾಶ ಏರ್‌ನಿಂದ ಪ್ರಯಾಣಿಕರಿಗಾಗಿ ಆರೋಗ್ಯಪೂರ್ಣ ಯೋಗ ಡೇ ಸ್ಪೆಷಲ್ ಮೀಲ್ ಬಿಡುಗಡೆ; ಬುಕ್ಕಿಂಗ್ ಮಾಡುವ ವಿಧಾನ ಇಲ್ಲಿದೆ
ಬೃಹತ್ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್ ಖರೀದಿಯು ಸಾಮಾನ್ಯ ಗ್ರಾಹಕರಿಗೆ ನೀಡಲು ಉದ್ದೇಶಿಸಲಾದ ಸರಬರಾಜುಗಳನ್ನು ಬೇರೆಡೆಗೆ ತಿರುಗಿಸಬಹುದು. ಸ್ಥಳೀಯ ಮಟ್ಟದಲ್ಲಿ ಕೊರತೆ ಉಂಟು ಮಾಡಬಹುದು. ಇದರಿಂದ ಅಗತ್ಯ ಸೇವೆಗಳ ಮೇಲೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಸರ್ಕಾರ ತಿಳಿಸಿದೆ.