ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಂಪೂರ್ಣ ನಗದು ರಹಿತ ಆರ್ಥಿಕತೆ; ಸಾಧಕ-ಬಾಧಕಗಳ ಬಗ್ಗೆ ತಜ್ಞರು ಹೇಳುವುದೇನು?

ಪ್ರತಿಯೊಂದು ದೇಶವು ಕೂಡ ಕ್ಯಾಶ್ ಲೆಸ್ ಎಕಾನಮಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ನಗದು ರಹಿತ ಆರ್ಥಿಕತೆಗಾಗಿ ಟೆಕ್ನಲಾಜಿಯ ಅತಿಯಾದ ಬಳಕೆಯಿಂದ ಅಪಾಯವಿದೆಯೇ? ಎನ್ನುವ ಭಯ ಕಾಡುತ್ತಿದೆ. ದೇಶ ಕ್ಯಾಶ್ ಲೆಸ್ ಅರ್ಥವ್ಯವಸ್ಥೆಗೆ ಪ್ರೋತ್ಸಾಹ ಕೊಡುತ್ತಿದ್ದರೂ ಕೂಡ ಆತಂಕ ಇದ್ದೇ ಇದೆ. ಈ ಕುರಿತು ಹಣಕಾಸು ತಜ್ಞರು ಹೇಳುವುದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಕ್ಯಾಶ್ ಲೆಸ್ ಎಕಾನಮಿಯ ಆತಂಕಕ್ಕೆ ಕಾರಣವೇನು?

ಸಂಗ್ರಹ ಚಿತ್ರ -

ಬೆಂಗಳೂರು: ವಿಶ್ವದ ಪ್ರತಿಯೊಂದು ರಾಷ್ಟ್ರಗಳು ಕೂಡ ಈಗ ನಗದು ರಹಿತ ಆರ್ಥಿಕತೆಗೆ (cashless economy) ಮುಂದಾಗುತ್ತಿದೆ. ಪ್ರತಿಯೊಂದು ವಹಿವಾಟಿಗೂ ತಂತ್ರಜ್ಞಾನವನ್ನು ಅವಲಂಬಿಸಿರುವುದು ಸುರಕ್ಷಿತವಲ್ಲ ಎನ್ನುತ್ತಾರೆ ಖ್ಯಾತ ಹೂಡಿಕೆ ತಜ್ಞ, ಕೌಟಿಲ್ಯ ಕ್ಯಾಪಿಟಲ್ ಸಂಸ್ಥಾಪಕ (Founder of cautilya Capital) ಅಶೋಕ್ ದೇವನಾಂಪ್ರಿಯ (Ashok Devanampriya) 'ವಿಶ್ವವಾಣಿ ಮನಿ' (Vishwavani money) ಯುಟ್ಯೂಬ್‌ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು ಸಂಪೂರ್ಣ ನಗದು ರಹಿತ ಆರ್ಥಿಕತೆ ಒಳ್ಳೆಯದಲ್ಲ ಎಂದು ತಿಳಿಸಿದರು.

ದೇಶದ ಆರ್ಥಿಕತೆಯಲ್ಲಿ ನಗದು ರಹಿತ ವಹಿವಾಟಿನೊಂದಿಗೆ ಅಲ್ಪ ಪ್ರಮಾಣದ ನಗದು ವಹಿವಾಟು ವ್ಯವಸ್ಥೆಗೂ ಅವಕಾಶ ನೀಡಬೇಕು. ಇಲ್ಲವಾದರೆ ಒಂದು ವ್ಯವಸ್ಥೆ ಸಂಪೂರ್ಣವಾಗಿ ಬಾಗಿಲು ಮುಚ್ಚಿದಂತಾಗುತ್ತದೆ. ತಂತ್ರಜ್ಞಾನದ ಅತಿಯಾದ ಬಳಕೆ ತನ್ನದೇ ಆದ ಕೆಲವು ಸಮಸ್ಯೆಗಳನ್ನು ಹೊತ್ತುಕೊಂಡು ಬರುತ್ತವೆ. ಹೀಗಾಗಿ ಎರಡೂ ಅವಕಾಶ ಇದ್ದರೆ ಮಾತ್ರ ವ್ಯವಸ್ಥೆ ಸರಿಯಾಗಿ ನಡೆಯಲು ಸಾಧ್ಯವಿದೆ ಎಂದರು.

ಅಮೆರಿಕ, ಚೀನಾ, ಭಾರತ...ಯಾರಿಗೆ ಸಿಗುತ್ತೆ ವಿಶ್ವದ ಸೂಪರ್ ಪವರ್ ಪಟ್ಟ?

ಪೂರ್ತಿ ನಗದು ವಹಿವಾಟು ದೇಶದಲ್ಲಿದ್ದಾಗ ಹಣ ಎಲ್ಲಿ ಹೋಗುತ್ತೆ, ಯಾರು ಎಷ್ಟು ಖರ್ಚು ಮಾಡುತ್ತಾರೆ, ಯಾವ ಉದ್ದೇಶಕ್ಕೆ ಬಳಕೆ ಮಾಡುತ್ತಾರೆ ಎನ್ನುವ ಸ್ಪಷ್ಟ ಮಾಹಿತಿ ಸಿಗುತ್ತಿರಲಿಲ್ಲ. ಆದರೆ ಈಗ ಬಹುತೇಕ ನಗದು ರಹಿತ ವಹಿವಾಟು ನಡೆಯುತ್ತಿದೆ. ಬಹುತೇಕ ಮಂದಿ ಯುಪಿಐ ಬಳಕೆ ಮಾಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಎಲ್ಲಾ ಸ್ಪಷ್ಟ ಅಂಕಿ ಅಂಶಗಳು ಲಭ್ಯವಾಗುತ್ತಿವೆ ಎಂದು ಹೇಳಿದರು.



ನಗದು ರಹಿತ ಆರ್ಥಿಕತೆಯೊಂದಿಗೆ ನಗದು ವಹಿವಾಟು ಕೂಡ ಇರಬೇಕು. ಸಂಪೂರ್ಣ ನಗದು ರಹಿತ ವ್ಯವಸ್ಥೆ ಸರಿಯಲ್ಲ. ಯಾಕೆಂದರೆ ಒಮ್ಮೆ ಮುಚ್ಚಿ ಹೋದ ದಾರಿಯನ್ನು ತೆರೆಯುವುದು ಸುಲಭವಲ್ಲ. ಕ್ಯಾಶ್ ಲೆಸ್ ಹೆಚ್ಚು ಜನಪ್ರಿಯತೆ ಪಡೆಯಲು ಸೈಬರ್ ಸೆಕ್ಯೂರಿಟಿ ಬಹಳ ಮುಖ್ಯವಾಗುತ್ತದೆ ಎಂದು ತಿಳಿಸಿದರು.

ಪ್ರತಿ ವರ್ಷ ನೂರಾರು ಕೋಟಿ ರೂ. ವಂಚನೆ ನಡೆಯುತ್ತಿದೆ. ಇದರಲ್ಲಿ ಹೆಚ್ಚಾಗಿ ಹಿರಿಯ ನಾಗರಿಕರು, ಗ್ರಾಮೀಣ ಪ್ರದೇಶದ ಹಣ ಕಳೆದುಕೊಳ್ಳುತ್ತಿದ್ದಾರೆ. ಮೊದಲು ಅರಿವು ಮೂಡಿಸುವ ಪ್ರಯತ್ನ ನಡೆಯಬೇಕು. ಯಾವುದೇ ಕಾರಣಕ್ಕೂ ಎಲ್ಲದಕ್ಕೂ ಯಂತ್ರವನ್ನು ಅವಲಂಬಿಸುವ ಪರಿಸ್ಥಿತಿ ಇರಬಾರದು. ಕ್ಯಾಶ್ ಲೆಸ್ ಎಕಾನಮಿ ಬಳಕೆ ಮಾಡುವುದು, ಬಿಡುವುದು ನಮ್ಮ ಆಯ್ಕೆಗೆ ಬಿಟ್ಟ ವಿಚಾರವಾಗಿರುತ್ತದೆ ಎಂದರು.

ಶೇಕಾಡ 90ರಷ್ಟು ನಗದು ರಹಿತ ಮತ್ತು ಶೇಕಡಾ 10ರಷ್ಟು ನಗದು ವಹಿವಾಟು ಇರಬೇಕು. ಯಾಕೆಂದರೆ ರಾಜಕಾರಣಿಗಳು, ವ್ಯಾಪಾರಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಕೂಡ ಸ್ವಲ್ಪ ಪ್ರಮಾಣದ ನಗದು ಬಳಕೆ ಬೇಕಾಗುತ್ತದೆ ಎಂದು ಹೇಳಿದರು.

Impact of Freebies: ರಾಜಕೀಯ ಪಕ್ಷಗಳ ಉಚಿತ ಕೊಡುಗೆಯ ಹೊರೆ ಯಾರ ಮೇಲೆ? ದೇಶದ ಆರ್ಥಿಕತೆಯ ಮೇಲೆ ಇದರ ಪರಿಣಾಮವೇನು?

ದೇಶದಲ್ಲಿ ಈಗ ಯುಪಿಐ ಬಳಕೆ ಹೆಚ್ಚಾಗುತ್ತಿದೆ. ಡಿಜಿಟಲ್ ಅರೆಸ್ಟ್, ತಾಂತ್ರಿಕ ತೊಂದರೆಗಳು ಕೂಡ ಸಾಮಾನ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರು ಕೂಡ ಈ ನಿಟ್ಟಿನಲ್ಲಿ ತಿಳುವಳಿಕೆ ಹೊಂದಿರುವುದು ಮುಖ್ಯವಾಗಿದೆ. ಹಿರಿಯ ನಾಗರಿಕರು ಇದರಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ಅವರನ್ನು ಇದರಿಂದ ಹೊರಗಿಟ್ಟರೂ ಸಮಸ್ಯೆಯಾಗುವುದಿಲ್ಲ ಎಂದು ಅಶೋಕ್ ದೇವಾನಾಂಪ್ರಿಯ ಅವರು ತಿಳಿಸಿದರು.