#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Budget 2025 PDF: ಕೇಂದ್ರ ಬಜೆಟ್‌ ಪ್ರತಿ ಇಲ್ಲಿ ಡೌನ್​ಲೋಡ್​ ಮಾಡಿ

ಬಜೆಟ್‌ ಆರಂಭದಲ್ಲೇ ಇದು ಬಡ ಜನ, ಯುವಕರು, ಮಹಿಳೆಯರು ಮತ್ತು ಅನ್ನದಾತನನ್ನು ಗಮನದಲ್ಲಿಟ್ಟುಕೊಂಡು ಮಂಡಿಸಲಾಗುತ್ತಿದೆ ಎಂದು ಅವರು ಹೇಳಿದ್ದರು. ಮೋದಿ 3.0 ಸರ್ಕಾರದ ಮೊದಲ ಪೂರ್ಣಪ್ರಮಾಣದ ಬಜೆಟ್ ಇದಾಗಿದ್ದು, ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಎಲ್ಲಾ ವಿವರಗಳನ್ನು ಓದಿ ಹೇಳಿದ್ದಾರೆ.

ಕೇಂದ್ರ ಬಜೆಟ್‌ ಪ್ರತಿ ಲಭ್ಯ- ಡೌನ್‌ಲೋಡ್‌ ಮಾಡಿ

Profile Rakshita Karkera Feb 1, 2025 1:12 PM

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitaraman) ಅವರು ಸಂಸತ್ತಿನಲ್ಲಿ ತಮ್ಮ ದಾಖಲೆಯ ಎಂಟನೇ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ಮಧ್ಯಮವರ್ಗ ಹಾಗೂ ತೆರಿಗೆದಾರರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಬಜೆಟ್‌ ಆರಂಭದಲ್ಲೇ ಇದು ಬಡ ಜನ, ಯುವಕರು, ಮಹಿಳೆಯರು ಮತ್ತು ಅನ್ನದಾತನನ್ನು ಗಮನದಲ್ಲಿಟ್ಟುಕೊಂಡು ಮಂಡಿಸಲಾಗುತ್ತಿದೆ ಎಂದು ಅವರು ಹೇಳಿದ್ದರು. ಮೋದಿ 3.0 ಸರ್ಕಾರದ ಮೊದಲ ಪೂರ್ಣಪ್ರಮಾಣದ ಬಜೆಟ್ ಇದಾಗಿದ್ದು, ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಎಲ್ಲಾ ವಿವರಗಳನ್ನು ಓದಿ ಹೇಳಿದ್ದಾರೆ. ಬಜೆಟ್ ಭಾಷಣ ಸಂಪೂರ್ಣ ವಿವರಗಳಿರುವ ಪಿಡಿಎಫ್ ಫೈಲ್​ಗಳು ವಿಶ್ವವಾಣಿ ವೆಬ್‌ಸೈಟ್‌ನಲ್ಲಿ ಲಭ್ಯ ಇವೆ.



ಬೇರೆ ಎಲ್ಲೆಲ್ಲಿ ಬಜೆಟ್‌ ಪ್ರತಿ ಲಭ್ಯವಿದೆ?

ಇನ್ನು ಬಜೆಟ್‌ ಪ್ರತಿಗಳು ಅನೇಕ ಕಡೆಗಳಲ್ಲಿ ಲಭ್ಯವಿದ್ದು, ಅಲ್ಲೂ ನೀವು ಅದನ್ನು ಪಡೆಯಬಹುದಾಗಿದೆ. ಮುಖ್ಯವಾಗಿ ಇಂಡಿಯಾ ಬಜೆಟ್​ನ ಅಧಿಕೃತ ವೆಬ್​ಸೈಟ್‌ನಲ್ಲಿ ಬಜೆಟ್‌ ಪ್ರತಿಯ ಲಿಂಕ್‌ ಇದ್ದು, ಅಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಈ ಸುದ್ದಿಯನ್ನೂ ಓದಿ: Union Budget: ಬಜೆಟ್‌ ಎಷ್ಟು ಗೌಪ್ಯವಾಗಿರುತ್ತೆ? ಬಜೆಟ್‌ನ ಮುದ್ರಿತ ಪ್ರತಿ ಯಾರಿಗೆಲ್ಲ ತಲುಪಿರುತ್ತೆ? ಇಲ್ಲಿದೆ ಸಂಪೂರ್ಣ ವಿವರ

www.indiabudget.gov.in/ ವೆಬ್‌ಸೈಟ್‌ಗೆ ಭೇಟಿ ಕೊಟ್ಟಾಗ ಇಲ್ಲಿ ಮುಖ್ಯಪುಟದಲ್ಲೇ ನೀವು 2025-26ನೇ ಸಾಲಿನ ಕೇಂದ್ರ ಬಜೆಟ್​ನ ವಿವಿಧ ಫೈಲ್​ಗಳಿಗೆ ಲಿಂಕ್ ಕಾಣಬಹುದು. ಬಜೆಟ್ ಭಾಷಣ, ಬಜೆಟ್ ಮುಖ್ಯಾಂಶ ಇತ್ಯಾದಿ ಫೈಲ್​ಗಳನ್ನು ನೀವು ಡೌನ್​ಲೋಡ್ ಮಾಡಬಹುದು. ಈ ವರ್ಷ ಮಾತ್ರವಲ್ಲದೇ ಹಿಂದಿನ ವರ್ಷಗಳ ಬಜೆಟ್​ಗಳ ಪ್ರತಿಗಳೂ ಅಲ್ಲಿ ಲಭ್ಯವಿದೆ.