ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಈ ಬಾರಿಯೂ ತೆರಿಗೆದಾರರಿಗೆ ಸಿಗುತ್ತಾ ಸಿಹಿ ಸುದ್ದಿ; ಬಜೆಟ್‌ ಕುರಿತು ನಿರೀಕ್ಷೆಯೇನು?

ಕೇಂದ್ರ ಸರಕಾರದ 2026-27ರ ಸಾಲಿನ ಬಜೆಟ್‌ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬೆಳಗ್ಗೆ 11 ಗಂಟೆಗೆ ತಮ್ಮ 9ನೇ ಆಯವ್ಯಯ ಮಂಡಿಸಲಿದ್ದಾರೆ. ಕೋಟ್ಯಂತರ ತೆರಿಗೆದಾರರು, ಮಧ್ಯಮ ವರ್ಗದ ಜನತೆ ತಮಗೆ ಏನು ಸಿಗಲಿದೆ ಎಂದು ಕುತೂಹಲದಿಂದ ಗಮನಿಸುವುದು ಸಹಜ.

ಕೇಂದ್ರ ಬಜೆಟ್‌ 2026-27

ನವದೆಹಲಿ: ಕೇಂದ್ರ ಸರಕಾರದ 2026-27ರ ಸಾಲಿನ ಬಜೆಟ್‌ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಅವರು (Budget 2026 Budget 2026 Live) ಬೆಳಗ್ಗೆ 11 ಗಂಟೆಗೆ ತಮ್ಮ 9ನೇ ಆಯವ್ಯಯ ಮಂಡಿಸಲಿದ್ದಾರೆ. ಕೋಟ್ಯಂತರ ತೆರಿಗೆದಾರರು, ಮಧ್ಯಮ ವರ್ಗದ ಜನತೆ ತಮಗೆ ಏನು ಸಿಗಲಿದೆ ಎಂದು ಕುತೂಹಲದಿಂದ ಗಮನಿಸುವುದು ಸಹಜ. ಹಣದುಬ್ಬರ, ಆರೋಗ್ಯ ವೆಚ್ಚ, ಗೃಹ ಸಾಲ, ಆದಾಯ ತೆರಿಗೆ ಉಳಿತಾಯ ಹೀಗೆ ಹಲವು ನಿರೀಕ್ಷೆಗಳು ಮಧ್ಯಮ ವರ್ಗದ ಆದಾಯದ ಜನರಲ್ಲಿ ಸ್ವಾಭಾವಿಕ.

ಅಂಥ ನಿರೀಕ್ಷೆಗಳ ಲಿಸ್ಟ್‌ ನೋಡೋದಿದ್ರೆ- ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಮತ್ತಷ್ಟು ಟ್ಯಾಕ್ಸ್‌ ರಿಲೀಫ್‌ ಸಿಗಲಿದೆಯೇ ಎಂಬ ನಿರೀಕ್ಷೆ ಇದೆ.

ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಮಿತಿಯನ್ನು ಈಗಿನ 75,000/- ದಿಂದ 1 ಲಕ್ಷಕ್ಕೆ ಏರಿಸಬೇಕು ಎಂಬ ಬೇಡಿಕೆ ಇದೆ. ತೆರಿಗೆದಾರರು 30 % ತೆರಿಗೆಯ ಸ್ಲ್ಯಾಬ್‌ ಅನ್ನು ಈಗಿನ 24 ಲಕ್ಷ ರುಪಾಯಿ ಆದಾಯದಿಂದ 40 ಲಕ್ಷ ರುಪಾಯಿಗೆ ವಿಸ್ತರಿಸಬೇಕು ಎಂದು ಬಯಸುತ್ತಿದ್ದಾರೆ. ಇದರಿಂದ ಅವರಿಗೆ ಉಳಿತಾಯ ಆಗಲಿದೆ.

  • ಗೃಹ ಸಾಲದ ಬಡ್ಡಿಗೆ ತೆರಿಗೆ ಕಡಿತವನ್ನು ಈಗಿನ 2 ಲಕ್ಷ ರುಪಾಯಿಗಳಿಂದ 5 ಲಕ್ಷಕ್ಕೆ ಏರಿಸಬೇಕು ಎಂಬ ಬೇಡಿಕೆ ಇದೆ. ಎಚ್‌ ಆರ್‌ಎ ಮಿತಿಯ ವಿಸ್ತರಣೆಗೂ ಡಿಮಾಂಡ್‌ ಇದೆ.
  • ಲಾಂಗ್‌ ಟರ್ಮ್‌ ಕ್ಯಾಪಿಟಲ್‌ ಗೈನ್ಸ್‌ ವಿನಾಯಿತಿ ಮಿತಿಯನ್ನು ಈಗಿನ 1 ಲಕ್ಷದ 25 ಸಾವಿರ ರುಪಾಯಿಗಳಿಂದ 2 ಲಕ್ಷಕ್ಕೆ ಏರಿಸಬೇಕು ಎಂಬ ಒತ್ತಾಯ ಇದೆ.
  • ಹಿರಿಯ ನಾಗರಿಕರು ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿ ಮಿತಿಯನ್ನು ಈಗಿನ 50,000 ರುಪಾಯಿಗಳಿಂದ 1 ಲಕ್ಷಕ್ಕೆ ಏರಿಸಬೇಕು ಎಂಬ ಬೇಡಿಕೆ ಸಲ್ಲಿಸಿದ್ದಾರೆ.
  • ಹೊಸ ತೆರಿಗೆ ಪದ್ಧತಿಯಡಿಯಲ್ಲಿ ಸೆಕ್ಷನ್‌ 80 ಡಿ ಅಡಿಯಲ್ಲಿ ಹೆಲ್ತ್‌ ಇನ್ಷೂರೆನ್ಸ್‌ ಡಿಡಕ್ಷನ್‌ ಮಿತಿಯನ್ನು ವೈಯಕ್ತಿಕವಾಗಿ ಜನರಿಗೆ 50,000/-ಕ್ಕೆ ಮತ್ತು ಹಿರಿಯ ನಾಗರಿಕರಿಗೆ 1 ಲಕ್ಷ ರುಪಾಯಿಗೆ ವಿಸ್ತರಿಸಬೇಕು ಎಂ ಬೇಡಿಕೆ ಇದೆ.

ಈಗ ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆಯ ಶ್ರೇಣಿಗಳು ಇಂತಿವೆ

0 ಯಿಂದ 4,00,000 : 0%

4,00,001 ಯಿಂದ 8,00,000: 5%

8,00,001ಯಿಂದ 12,00,000: 10%

12,00,001 ಯಿಂದ 16,00,000: 15%

16,00,001ಯಿಂದ 20,00,000: 20%

20,00,001ಯಿಂದ 24,00,000: 25%

24,00,001 ರುಪಾಯಿಗಳಿಗೂ ಮೇಲ್ಪಟ್ಟು: 30%

ಹಳೆಯ ತೆರಿಗೆ ಪದ್ಧತಿಯಲ್ಲಿ ಈಗ ಆದಾಯ ತೆರಿಗೆಯ ಶ್ರೇಣಿಗಳು ಇಂತಿವೆ

0 ಯಿಂದ 2,50,000: 0%

2,50,001ಯಿಂದ 5,00,000: 5%

5,00,001ಯಿಂದ 10,00,000:20%

10,00,001 ಮತ್ತು ಮೇಲ್ಪಟ್ಟು: 30%