ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮುಂಗಡ ಟಿಪ್ ರದ್ದುಗೊಳಿಸಲು ಓಲಾ, ಉಬರ್ ಮತ್ತು ರಾಪಿಡೋಗೆ ಕೇಂದ್ರದಿಂದ ಸೂಚನೆ

ಅನ್ಯಾಯದ ವ್ಯಾಪಾರ ಪದ್ಧತಿ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಇದೀಗ ಸೇವೆಗಿಂತ ಮುಂಗಡವಾಗಿ ಟಿಪ್ ಪಡೆಯುವುದು ಸರಿಯಲ್ಲ. ಹೀಗಾಗಿ ಈ ಕುರಿತು ಇರುವ ಆಯ್ಕೆ ಪದ್ದತಿಯನ್ನು ರದ್ದುಗೊಳಿಸುವಂತೆ ಕ್ಯಾಬ್ ಸೇವಾ ಪೂರೈಕೆದಾರರರಿಗೆ ಸೂಚಿಸಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ಇನ್ನು ಮುಂದೆ ಯಾವುದೇ ಪ್ರಯಾಣ ಸೇವೆ (Travel Service) ನೀಡುವವರು ಮುಂಗಡವಾಗಿ ಟಿಪ್ (Advance Tip) ಪಡೆಯುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದಕ್ಕೆ ಸಂಬಂಧಿಸಿ ಬುಕ್ಕಿಂಗ್ ಅಪ್ಲಿಕೇಶನ್ ಗಳಲ್ಲಿ ಇರುವ ಆಯ್ಕೆಯನ್ನು ರದ್ದುಗೊಳಿಸಲು ಓಲಾ, ಉಬರ್ ಮತ್ತು ರಾಪಿಡೋಗೆ (Ola, Uber, Rapido) ಕೇಂದ್ರ ಸರ್ಕಾರ ಸೂಚಿಸಿದೆ. ಈ ಕುರಿತು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ (Central Consumer Protection Authority) ಮುಖ್ಯಸ್ಥರು ಹಾಗೂ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ನಿಧಿ ಖರೆ (Consumer Affairs Secretary Nidhi Khare) ಅವರು ಬುಧವಾರ ಮಾಹಿತಿ ನೀಡಿದ್ದಾರೆ.

ಯಾವುದೇ ರೀತಿಯ ಸೇವೆಗೆ ಟಿಪ್ ನೀಡುವುದು ಸಂಪೂರ್ಣವಾಗಿ ಸ್ವಯಂ ಪ್ರೇರಿತ ವಿಷಯವಾಗಿದೆ. ಇದನ್ನು ಸೇವೆ ಪಡೆದ ಬಳಿಕ ಗ್ರಾಹಕರ ಆಯ್ಕೆಗೆ ಬಿಡಬೇಕು. ಇದು ಅವರ ಸಂಪೂರ್ಣ ವಿವೇಚನೆಗೆ ಬಿಟ್ಟಿರಬೇಕು ಎಂದು ನಿಧಿ ಖರೆ ತಿಳಿಸಿದರು.

ಹೆಚ್ಚಿದ ಇಂಧನ ಬೇಡಿಕೆ: ಬಾಂಗ್ಲಾದೇಶಕ್ಕೆ ಭಾರತದಿಂದ 4 ಸಾವಿರ ಟನ್ ಡೀಸೆಲ್ ಪೂರೈಕೆ

ಕ್ಯಾಬ್ ಸೇವಾ ಪೂರೈಕೆದಾರರು ಪ್ರಯಾಣವನ್ನು ಬುಕ್ಕಿಂಗ್ ಮಾಡುವಾಗಲೇ ಚಾಲಕರಿಗೆ ಟಿಪ್ ನೀಡಲು ಕೇಳುವ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸುವ ಪದ್ಧತಿಯನ್ನು ತಕ್ಷಣ ನಿಲ್ಲಿಸಬೇಕು. ಈ ವಿಧಾನವು ದಾರಿ ತಪ್ಪಿಸುವಂತಿದೆ. ಇದು ಅನ್ಯಾಯದ ವ್ಯಾಪಾರ ಪದ್ಧತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಟ್ಯಾಕ್ಸಿ ಮತ್ತು ರೈಡ್-ಹೇಲಿಂಗ್ ಸೇರಿದಂತೆ ಪ್ರಯಾಣ ಸೇವೆ ಒದಗಿಸುವ ಪೂರೈಕೆದಾರರಿಗೆ ಸಂಬಂಧಿಸಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ಗ್ರಾಹಕರಿಂದ ಹಲವಾರು ದೂರುಗಳು ಬಂದಿವೆ. ಇದರಲ್ಲಿ ಪ್ರಮುಖವಾಗಿ ಬುಕ್ಕಿಂಗ್ ವೇಳೆ ಟಿಪ್ ನೀಡುವ ಆಯ್ಕೆಯನ್ನು ಪರಿಚಯಿಸಿರುವುದು ಕೂಡ ಸೇರಿದೆ. ಮುಂಗಡವಾಗಿ ಟಿಪ್ ನೀಡುವಂತೆ ಗ್ರಾಹಕರನ್ನು ಪ್ರೋತ್ಸಾಹಿಸಲಾಗುತ್ತಿದೆ. ಒಂದು ವೇಳೆ ಟಿಪ್ ನೀಡದೇ ಇದ್ದರೆ ವಾಹನ ಸಿಗುವ ಸಾಧ್ಯತೆಯ ಮೇಲೆ ಪರಿಣಾಮ ಬೀರಬಹುದು ಎಂದು ನಂಬುವಂತೆ ಮಾಡಲಾಗುತ್ತಿದೆ ಎಂದು ಗ್ರಾಹಕರೊಬ್ಬರು ಆರೋಪಿಸಿದ್ದರು ಎಂದು ನಿಧಿ ಅವರು ಹೇಳಿದ್ದಾರೆ.

ಈ ಕುರಿತು ತನಿಖೆ ಮತ್ತು ವಿಚಾರಣೆ ನಡೆಸಿದ ಬಳಿಕ ಅಧಿಕಾರಿಗಳು ಈ ವ್ಯವಸ್ಥೆಯನ್ನು ನಿಲ್ಲಿಸಲು ಆದೇಶಿಸಿದ್ದಾರೆ. ಟಿಪ್ ನೀಡುವುದು ಸಂಪೂರ್ಣವಾಗಿ ಸ್ವಯಂ ಪ್ರೇರಿತ ವಿಷಯವಾಗಿದೆ. ಅದು ಪ್ರಯಾಣ ಮುಗಿದ ಬಳಿಕ ಗ್ರಾಹಕನ ವಿವೇಚನೆಗೆ ಬಿಟ್ಟಿರಬೇಕು ಎಂದು ತಿಳಿಸಿದರು.

ಅನ್ಯಾಯದ ವ್ಯಾಪಾರ ಪದ್ಧತಿಗಳ ಆರೋಪದ ಮೇರೆಗೆ ರಾಪಿಡೋ ಅನ್ನು ನಿರ್ವಹಿಸುವ ರೋಪ್ಪೆನ್ ಟ್ರಾನ್ಸ್‌ಪೋರ್ಟೇಶನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್'ಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ 10 ಲಕ್ಷ ರೂಪಾಯಿ ದಂಡ ವಿಧಿಸಿದೆ ಎಂದರು.

ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಇತರ ಪ್ರಮುಖ ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್‌ಗಳ ವ್ಯಾಪಾರ ಪದ್ಧತಿಗಳನ್ನು ಸಹ ಪರಿಶೀಲಿಸಲಿದೆ. ಉಬರ್ ಮತ್ತು ಓಲಾಗೆ ಸಂಬಂಧಿಸಿದ ತನಿಖೆಗಳು ಪ್ರಸ್ತುತ ನಡೆಯುತ್ತಿವೆ ಎಂದು ತಿಳಿಸಿದರು.

UPI Charges: ಯಾವುದೇ ಕಾರಣಕ್ಕೂ ಹಿಂಪಡೆಯಲ್ಲ ಎಂದ ಕೇಂದ್ರ ಸರ್ಕಾರ; ಜನ ಸಾಮಾನ್ಯರಿಗೆ ಶುಲ್ಕ ಇಲ್ಲ ಎಂದು ಸ್ಪಷ್ಟನೆ

ಪ್ರಯಾಣ ಸೇವೆಯಲ್ಲಿ ಅನಿವಾರ್ಯವಾಗಿ ಆಯ್ಕೆಗಳನ್ನು ಮಾಡುವಂತೆ ಪ್ರಭಾವ ಬೀರಬಲ್ಲ ಡಾರ್ಕ್ ಪ್ಯಾಟರ್ನ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಮಾರ್ಗಸೂಚಿಗಳು-2023 ಅನ್ನು ಪಾಲಿಸುವಂತೆ ಸೂಚಿಸಿರುವ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಈ ಹಿಂದೆ ಉಬರ್, ಓಲಾ, ರಾಪಿಡೋ ಮತ್ತು ನಮ್ಮ ಯಾತ್ರಿ ಪ್ಲಾಟ್‌ಫಾರ್ಮ್‌ಗಳಿಗೆ ನೋಟಿಸ್‌ಗಳನ್ನು ಜಾರಿಗೊಳಿಸಿತ್ತು.

ವಿದ್ಯಾ ಇರ್ವತ್ತೂರು

View all posts by this author