ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯುಪಿಐ ಶುಲ್ಕ ಹೊರೆ ಗ್ರಾಹಕರಿಗೆ ಬೀಳದಂತೆ ಖಚಿತ ಪಡಿಸಿಕೊಳ್ಳಲು ಕೇಂದ್ರದಿಂದ ಕ್ರಮ

ಯುಪಿಐ ವಹಿವಾಟುಗಳ ಮೇಲಿನ ಎಂಡಿಆರ್ ಶುಲ್ಕದ ಹೊರೆ ಗ್ರಾಹಕರಿಗೆ ಬೀಳದಂತೆ ಖಚಿತಪಡಿಸಿಕೊಳ್ಳಲು ಕೇಂದ್ರ ಹಣಕಾಸು ಸಚಿವಾಲಯವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕಾಗಿ ಮೇಲ್ವಿಚಾರಣಾ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ವ್ಯಕ್ತಿಗಳ ನಡುವಿನ ಪಾವತಿ, ದೈನಂದಿನ ವ್ಯಾಪಾರ ಪಾವತಿಗಳಲ್ಲಿ ಬಹುಪಾಲು ವಹಿವಾಟುಗಳು ಉಚಿತವಾಗಿಯೇ ಮುಂದುವರಿಯಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸಂಗ್ರಹ ಚಿತ್ರ

ನವದೆಹಲಿ: ಭಾರತದ ರಾಷ್ಟ್ರೀಯ ಪಾವತಿ ನಿಗಮವು (National Payments Corporation of India) ಸೆಪ್ಟೆಂಬರ್ 15ರಂದು ಕೆಲವು ಯುಪಿಐ ವಹಿವಾಟುಗಳಿಗೆ ಎಂಡಿಆರ್ (Merchant Discount Rate) ಶುಲ್ಕವನ್ನು ಪರಿಚಯಿಸಿದೆ. ಇದರಲ್ಲಿ 2,000 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ವಹಿವಾಟುಗಳ ಮೇಲೆ ವಿಧಿಸಲಾಗುವ ಎಂಡಿಆರ್ ಶುಲ್ಕದ ಹೊರೆ ಗ್ರಾಹಕರ ಮೇಲೆ ಬೀಳದಂತೆ ಖಚಿತಪಡಿಸಿಕೊಳ್ಳಲು ಕೇಂದ್ರ ಹಣಕಾಸು ಸಚಿವಾಲಯವು (Union finance ministry) ಮೇಲ್ವಿಚಾರಣಾ ವ್ಯವಸ್ಥೆಯನ್ನು ರೂಪಿಸುತ್ತಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ಮರ್ಚೆಂಟ್ ಡಿಸ್ಕೌಂಟ್ ರೇಟ್ ಶುಲ್ಕಕ್ಕೆ ಸಂಬಂಧಿಸಿ ಅರಿವು ಮೂಡಿಸಲು ಮತ್ತು ಅದರ ಹೊರೆ ಗ್ರಾಹಕರ ಮೇಲೆ ಬೀಳದಂತೆ ನೋಡಿಕೊಳ್ಳಲು ಹಣಕಾಸು ಸಚಿವಾಲಯವು ಈಗಾಗಲೇ ಪಾವತಿ ಅಗ್ರಿಗೇಟರ್‌ಗಳು ಮತ್ತು ಯುಪಿಐ ವ್ಯವಸ್ಥೆಯ ಪಾಲುದಾರರೊಂದಿಗೆ ಮಾತುಕತೆ ನಡೆಸಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

15 ವರ್ಷದೊಳಗಿನ ಮಕ್ಕಳ ಪಾಸ್‌ಪೋರ್ಟ್ ನಿಯಮದಲ್ಲಿ ಬದಲಾವಣೆ; ಶುಲ್ಕ ಹೆಚ್ಚಳ, ಹೊಸ ನೀತಿಯಲ್ಲೇನಿದೆ?

ಡಿಜಿಟಲ್ ಪಾವತಿ ವ್ಯವಸ್ಥೆಗೆ ಸುಸ್ಥಿರ ಆದಾಯದ ಚೌಕಟ್ಟನ್ನು ರಚಿಸುವ ಉದ್ದೇಶದಿಂದ ಭಾರತದ ರಾಷ್ಟ್ರೀಯ ಪಾವತಿ ನಿಗಮವು ಯುಪಿಐ ವಹಿವಾಟುಗಳಿಗೆ ಎಂಡಿಆರ್ ಅನ್ನು ಪರಿಚಯಿಸಿದೆ. ಇದರ ಸುತ್ತೋಲೆಯ ಪ್ರಕಾರ ಅಕ್ಟೋಬರ್ 15 ರಿಂದ 2,000 ರೂಪಾಯಿಗಿಂತ ಹೆಚ್ಚಿನ ಮೌಲ್ಯದ 'person to merchant' ಯುಪಿಐ ಪಾವತಿಗಳಿಗೆ ಶೇಕಡಾ 0.4ರಷ್ಟು ಎಂಡಿಆರ್ ಶುಲ್ಕ ಅನ್ವಯವಾಗಲಿದೆ. ಈ ಶುಲ್ಕವನ್ನು ವ್ಯಾಪಾರಿಗಳು ಪಾವತಿಸಬೇಕಾಗುತ್ತದೆ. ಇದನ್ನು ಗ್ರಾಹಕರಿಗೆ ವರ್ಗಾಯಿಸುವಂತಿಲ್ಲ. 75,000 ರು. ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಎಂಡಿಆರ್ ಶುಲ್ಕ ಗರಿಷ್ಠ 300 ರು. ನಿಗದಿಗೊಳಿಸಲಾಗಿದೆ. ವ್ಯಕ್ತಿಗಳ ನಡುವಿನ ಪಾವತಿ ಹಾಗೂ ದೈನಂದಿನ ವ್ಯಾಪಾರಿ ಪಾವತಿಗಳಲ್ಲಿ ಬಹುಪಾಲು ವಹಿವಾಟುಗಳು ಉಚಿತವಾಗಿ ಮುಂದುವರಿಯಲಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಅಮೆರಿಕದ ಒತ್ತಡವಿಲ್ಲ

ಯುಪಿಐ ವಹಿವಾಟುಗಳ ಮೇಲೆ ವಿಧಿಸಲಾಗಿರುವ ಶುಲ್ಕದ ಮೇಲೆ ಅಮೆರಿಕದ ಒತ್ತಡವಿದೆ ಎಂಬ ಆರೋಪಗಳನ್ನು ಕೇಂದ್ರ ಹಣಕಾಸು ಸಚಿವಾಲಯ ತಳ್ಳಿಹಾಕಿದೆ. ಅಲ್ಲದೇ ಈ ಶುಲ್ಕ ವಿಧಿಸುವಿಕೆಯಿಂದ ನಗದು ವಹಿವಾಟು ಹೆಚ್ಚಾಗಬಹುದು ಎನ್ನುವ ನಿರೀಕ್ಷೆಯನ್ನು ಕೂಡ ಅದು ತಳ್ಳಿ ಹಾಕಿದೆ.

ಭಾರತದ ರೂಪೇ ಯೊಂದಿಗೆ ಸಮಾನ ಅವಕಾಶದ ಆಧಾರದಲ್ಲಿ ಭಾಗವಹಿಸಲು ಅಮೆರಿಕದ ಎಲೆಕ್ಟ್ರಾನಿಕ್ ಪಾವತಿ ಸೇವಾ ಪೂರೈಕೆದಾರರಿಗೆ ಸಾಧ್ಯವಾಗುತ್ತಿಲ್ಲ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿಯೊಬ್ಬರು ಹೇಳಿದ ಮೇಲೆ ಈ ಶುಲ್ಕ ಜಾರಿಯಾಗಿದೆ. ಇದಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡಿರುವ ಹಣಕಾಸು ಸೇವೆಗಳ ಇಲಾಖೆಯು, ಭಾರತದ ರಾಷ್ಟ್ರೀಯ ಪಾವತಿ ನಿಗಮವು ರೂಪೇ ಕ್ರೆಡಿಟ್ ಕಾರ್ಡ್‌ಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಯುಪಿಐ ನಲ್ಲಿ ಕ್ರೆಡಿಟ್ ವಹಿವಾಟುಗಳನ್ನು ನಡೆಸಲು ಅನುಮತಿಸುವುದಿಲ್ಲ. ಭಾರತದಲ್ಲಿನ ಬಳಕೆದಾರರ ನಡುವೆ ರೂಪೇ ಕ್ರೆಡಿಟ್ ಕಾರ್ಡ್‌ಗಳನ್ನು ಆದ್ಯತೆಯ ಆಯ್ಕೆಯನ್ನಾಗಿ ಮಾಡುವ ಉದ್ದೇಶದಿಂದ ಯುಪಿಐನಲ್ಲಿ ಕೇವಲ ರೂಪೇ ಕ್ರೆಡಿಟ್ ಕಾರ್ಡ್‌ಗಳಿಗೆ ಮಾತ್ರ ಅವಕಾಶ ನೀಡುವ ಸ್ಪಷ್ಟ ನೀತಿಯನ್ನು ಇದು ಹೊಂದಿದೆ ಎಂದು ತಿಳಿಸಿದೆ.

ಎಂಡಿಆರ್ ಶುಲ್ಕ ವಿಧಿಸುವುದರಿಂದ ಯುಪಿಐ ವಹಿವಾಟುಗಳಲ್ಲಿ ಯಾವುದೇ ರೀತಿಯ ಇಳಿಕೆಯಾಗುವುದಿಲ್ಲ. ವಹಿವಾಟಿನ ಮೊತ್ತ ಎಷ್ಟೇ ಇದ್ದರೂ ರೂಪೇ ಡೆಬಿಟ್ ಕಾರ್ಡ್‌ಗಳ ಮೂಲಕ ನಡೆಸುವ ವಹಿವಾಟುಗಳು ಸಂಪೂರ್ಣವಾಗಿ ಉಚಿತವಾಗಿರುತ್ತವೆ. ಇದರಿಂದ ಹಣದುಬ್ಬರದ ಮೇಲೆ ಕೂಡ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಹೊಸ ಆಶಯದೊಂದಿಗೆ ಕತಾರ್‌ ‘ಕನ್ನಡ ಪಾಠಶಾಲೆ’ ಪುನರಾರಂಭ

ಭಾರತದ ಎಲೆಕ್ಟ್ರಾನಿಕ್ ಪಾವತಿ ಸೇವೆಗಳಿಗೆ ಸಂಬಂಧಿಸಿ ಅನೌಪಚಾರಿಕ ಮತ್ತು ಔಪಚಾರಿಕ ನೀತಿಗಳ ಬಗ್ಗೆ ಅಮೆರಿಕ ಹಲವಾರು ವರ್ಷಗಳಿಂದ ಕಳವಳ ವ್ಯಕ್ತಪಡಿಸುತ್ತಿದೆ. ಇದು ದೇಶೀಯ ಪೂರೈಕೆದಾರರಿಗೆ ಹೆಚ್ಚಿನ ಒಲವು ತೋರುವಂತಿದ್ದು, ಸಮಾನ ಸ್ಪರ್ಧಾತ್ಮಕ ಅವಕಾಶವನ್ನು ಕಲ್ಪಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಇದಕ್ಕೆ ಸಂಬಂಧಿಸಿ ರೂಪೇ, ಯುಪಿಐ ಆನ್‌ಲೈನ್ ಪಾವತಿ ನಿಯಮಗಳಿಗೆ ಸಂಬಂಧಿಸಿ ಅದು ಆಕ್ಷೇಪ ವ್ಯಕ್ತಪಡಿಸಿತ್ತು.

ವಿದ್ಯಾ ಇರ್ವತ್ತೂರು

View all posts by this author