ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಡಿಎಸ್‌ಪಿ ಅಸೆಟ್ ಮ್ಯಾನೇಜರ್ಸ್‌ಗೆ ಅನೀಶ್ ತಾವಕ್ಲಿ ಮುಖ್ಯ ಹೂಡಿಕೆ ಅಧಿಕಾರಿ- ಈಕ್ವಿಟಿ ಹಾಗೂ ಫಿಕ್ಸ್ಡ್ ಇನ್‌ಕಂ ಹೂಡಿಕೆಗಳ ಒಟ್ಟಾರೆ ಮೇಲ್ವಿಚಾರಣೆ ಜವಾಬ್ದಾರಿ

ಅನೀಶ್ ತಾವಕ್ಲಿ ಅವರು ಈ ಮೊದಲು ಐಸಿಐಸಿಐ ಪ್ರುಡೆನ್ಷಿಯಲ್ ಅಸೆಟ್ ಮ್ಯಾನೇಜ್‌ ಮೆಂಟ್ ಕಂಪನಿಯಲ್ಲಿ ಸಹ-ಮುಖ್ಯ ಹೂಡಿಕೆ ಅಧಿಕಾರಿ (ಈಕ್ವಿಟೀಸ್) ಆಗಿ ಸೇವೆ ಸಲ್ಲಿಸಿದ್ದರು. ಅವರಿಗೆ ಸುಮಾರು ಮೂರು ದಶಕಗಳ ಅನುಭವವಿದ್ದು, ವಿವಿಧ ಮಾರುಕಟ್ಟೆ ಚಕ್ರಗಳಲ್ಲಿ ಈಕ್ವಿಟಿ ಸಂಶೋಧನೆ, ಪೋರ್ಟ್‌ಫೋಲಿಯೊ ನಿರ್ವಹಣೆ, ಆಸ್ತಿ ಹಂಚಿಕೆ (Asset Allocation) ಮತ್ತು ತಂಡದ ನಾಯಕತ್ವ ಕ್ಷೇತ್ರಗಳಲ್ಲಿ ವಿಶಾಲ ಅನುಭವ ಹೊಂದಿದ್ದಾರೆ.

ನವದೆಹಲಿ: ಡಿಎಸ್‌ಪಿ ಅಸೆಟ್ ಮ್ಯಾನೇಜರ್ಸ್ ಸಂಸ್ಥೆಯು ಅನೀಶ್ ತಾವಕ್ಲಿ ಅವರನ್ನು ತನ್ನ *ಮುಖ್ಯ ಹೂಡಿಕೆ ಅಧಿಕಾರಿ (Chief Investment Officer – CIO)*ಯಾಗಿ ನೇಮಕ ಮಾಡಿದೆ.

ಈ ಹುದ್ದೆಯಲ್ಲಿ ಅನೀಶ್ ತಾವಕ್ಲಿ ಅವರು ಸಂಸ್ಥೆಯ ಈಕ್ವಿಟಿ ಮತ್ತು ಫಿಕ್ಸ್ಡ್ ಇನ್‌ಕಂ ಹೂಡಿಕೆ ವಿಭಾಗಗಳ ಮೇಲ್ವಿಚಾರಣೆ ವಹಿಸಿಕೊಳ್ಳಲಿದ್ದು, ಡಿಎಸ್‌ಪಿಯ ಒಟ್ಟಾರೆ ಹೂಡಿಕೆ ನಾಯಕತ್ವವನ್ನು ಇನ್ನಷ್ಟು ಬಲಪಡಿಸುವ ಹೊಣೆಗಾರಿಕೆ ಹೊಂದಿರಲಿದ್ದಾರೆ.

ಅನೀಶ್ ತಾವಕ್ಲಿ ಅವರು ಈ ಮೊದಲು ಐಸಿಐಸಿಐ ಪ್ರುಡೆನ್ಷಿಯಲ್ ಅಸೆಟ್ ಮ್ಯಾನೇಜ್‌ ಮೆಂಟ್ ಕಂಪನಿಯಲ್ಲಿ ಸಹ-ಮುಖ್ಯ ಹೂಡಿಕೆ ಅಧಿಕಾರಿ (ಈಕ್ವಿಟೀಸ್) ಆಗಿ ಸೇವೆ ಸಲ್ಲಿಸಿದ್ದರು. ಅವರಿಗೆ ಸುಮಾರು ಮೂರು ದಶಕಗಳ ಅನುಭವವಿದ್ದು, ವಿವಿಧ ಮಾರುಕಟ್ಟೆ ಚಕ್ರಗಳಲ್ಲಿ ಈಕ್ವಿಟಿ ಸಂಶೋಧನೆ, ಪೋರ್ಟ್‌ಫೋಲಿಯೊ ನಿರ್ವಹಣೆ, ಆಸ್ತಿ ಹಂಚಿಕೆ (Asset Allocation) ಮತ್ತು ತಂಡದ ನಾಯಕತ್ವ ಕ್ಷೇತ್ರಗಳಲ್ಲಿ ವಿಶಾಲ ಅನುಭವ ಹೊಂದಿದ್ದಾರೆ.

06

ಡಿಎಸ್‌ಪಿಯಲ್ಲಿ ಅವರು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಈಕ್ವಿಟಿ ಮತ್ತು ಫಿಕ್ಸ್ಡ್ ಇನ್‌ಕಂ ತಂಡಗಳೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದಾರೆ. ವಿವಿಧ ಆಸ್ತಿ ವರ್ಗಗಳ ನಡುವೆ ಉತ್ತಮ ಸಮನ್ವಯವನ್ನು ಸಾಧಿಸುವುದು ಹಾಗೂ ಸಂಸ್ಥೆಯ ದೀರ್ಘಕಾಲದ ಶಿಸ್ತುಬದ್ಧ, ಸಂಶೋಧನೆ ಆಧಾರಿತ ಹೂಡಿಕೆ ಧೋರಣೆಯನ್ನು ಮುಂದುವರಿಸುವ ಉದ್ದೇಶದಿಂದ ಈ ನೇಮಕಾತಿ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: Equity Mutual Funds: 2025ರ 6 ತಿಂಗಳಲ್ಲಿ ಶೇ. 32ರಷ್ಟು ತನಕ ಲಾಭ ನೀಡಿದ ಟಾಪ್‌ ಈಕ್ವಿಟಿ ಮ್ಯೂಚುವಲ್‌ ಫಂಡ್ಸ್‌

ಕಲ್ಪೆನ್ ಪಾರೇಖ್ ಪ್ರತಿಕ್ರಿಯೆ:-ಡಿಎಸ್‌ಪಿ ಅಸೆಟ್ ಮ್ಯಾನೇಜರ್ಸ್‌ನ ಎಂಡಿ ಮತ್ತು ಸಿಇಒ ಕಲ್ಪೆನ್ ಪಾರೇಖ್ ಮಾತನಾಡಿ, “ಅನೀಶ್ ಅವರು ನಮ್ಮೊಂದಿಗೆ ಸಿಐಒ ಆಗಿ ಸೇರುತ್ತಿರು ವುದು ಸಂತಸದ ಸಂಗತಿ. ಮೂರು ದಶಕಗಳ ಮಾರುಕಟ್ಟೆ ಅನುಭವದೊಂದಿಗೆ ಅವರು ಸಂಯಮಿತ ಮತ್ತು ಕಠಿಣ ವಿಶ್ಲೇಷಣಾತ್ಮಕ ಹೂಡಿಕೆ ದೃಷ್ಟಿಕೋನವನ್ನು ಹೊಂದಿದ್ದಾರೆ. ಕುಸಿತದ ಮಾರುಕಟ್ಟೆ ಚಕ್ರಗಳಲ್ಲಿ ಆಲ್ಫಾ ಗಳಿಸಬೇಕು, ಮೊದಲಿಗೆ ಡೌನ್‌ಸೈಡ್ ಅಪಾಯ ಗಳಿಂದ ರಕ್ಷಿಸಬೇಕು ಎಂಬ ಅವರ ನಿಲುವು ಡಿಎಸ್‌ಪಿಗೆ ಮಹತ್ವದ್ದು. ಮ್ಯಾಕ್ರೋ, ಈಕ್ವಿಟಿ, ಫಿಕ್ಸ್ಡ್ ಇನ್‌ಕಂ ಹಾಗೂ ಕ್ರೆಡಿಟ್ ಅನ್ನು ಒಟ್ಟಾಗಿ ನೋಡುವ ಅವರ ಸಾಮರ್ಥ್ಯ ನಮ್ಮ ಹೂಡಿಕೆದಾರರಿಗೆ ಮಾರುಕಟ್ಟೆಯ ಎಲ್ಲ ಹಂತಗಳಲ್ಲೂ ಸ್ಥಿರ ಫಲಿತಾಂಶ ನೀಡಲು ಸಹಕಾರಿಯಾಗಲಿದೆ,” ಎಂದರು.

ಅನೀಶ್ ತಾವಕ್ಲಿ ಹೇಳಿಕೆ:- ಈ ಕುರಿತು ಪ್ರತಿಕ್ರಿಯಿಸಿದ ಅನೀಶ್ ತಾವಕ್ಲಿ, “ಡಿಎಸ್‌ಪಿಯ ಹೂಡಿಕೆ ತತ್ವದ ಸ್ಪಷ್ಟತೆ ಮತ್ತು ದೀರ್ಘಾವಧಿಯಲ್ಲಿ ಹೂಡಿಕೆದಾರರ ಹಿತವನ್ನು ಮೊದಲ ಆದ್ಯತೆಯಾಗಿ ಪರಿಗಣಿಸುವ ನಿಲುವು ನನ್ನನ್ನು ವಿಶೇಷವಾಗಿ ಆಕರ್ಷಿಸಿದೆ. ವಿವಿಧ ತಂಡಗಳೊಂದಿಗೆ ಕೆಲಸ ಮಾಡಿ, ಮಾರುಕಟ್ಟೆಯ ಎಲ್ಲ ಪರಿಸ್ಥಿತಿಗಳಲ್ಲೂ ಸ್ಥಿರ, ಸಮತೋ ಲನಯುತ ಮತ್ತು ಹೂಡಿಕೆದಾರರ ಅಗತ್ಯಗಳಿಗೆ ಹೊಂದಿಕೊಳ್ಳುವ ಪೋರ್ಟ್‌ ಫೋಲಿಯೊ ಗಳನ್ನು ನಿರ್ಮಿಸಲು ಎದುರು ನೋಡುತ್ತಿದ್ದೇನೆ,” ಎಂದು ಹೇಳಿದರು.