Equity Mutual Funds: 2025ರ 6 ತಿಂಗಳಲ್ಲಿ ಶೇ. 32ರಷ್ಟು ತನಕ ಲಾಭ ನೀಡಿದ ಟಾಪ್ ಈಕ್ವಿಟಿ ಮ್ಯೂಚುವಲ್ ಫಂಡ್ಸ್
ಈ 2025ರ ಮೊದಲ 6 ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಹೂಡಿಕೆದಾರಿಗೆ ಶೇ. 32ರ ತನಕ ರಿಟರ್ನ್ ನೀಡಿವೆ. ಈ ಪೈಕಿ ಸೆಕ್ಟೋರಲ್ ಮತ್ತು ಥೀಮ್ಯಾಟಿಕ್ ಮ್ಯೂಚುವಲ್ ಫಂಡ್‌ಗಳು ಹೆಚ್ಚು ಆದಾಯ ನೀಡಿವೆ. ಕೆಲವು ಲಾಭದಾಯಕವಾಗಿದ್ದರೆ ಕೆಲವು ನಷ್ಟಕ್ಕೂ ಗುರಿಯಾಗಿವೆ. ಈ ಬಗ್ಗೆ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ.

-ಕೇಶವ ಪ್ರಸಾದ್ ಬಿ.
ಮುಂಬೈ: ಈ 2025ರ ಮೊದಲ 6 ತಿಂಗಳಲ್ಲಿ, ಅಂದರೆ ಜನವರಿಯಿಂದ ಜೂನ್ ತನಕದ ಅವಧಿಯಲ್ಲಿ, ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು (Equity Mutual Funds) ಹೂಡಿಕೆದಾರಿಗೆ ಶೇ. 32ರ ತನಕ ರಿಟರ್ನ್ ನೀಡಿವೆ. ಸೆಕ್ಟೋರಲ್ ಮತ್ತು ಥೀಮ್ಯಾಟಿಕ್ ಮ್ಯೂಚುವಲ್ ಫಂಡ್‌ಗಳು ಹೆಚ್ಚು ಆದಾಯ ನೀಡಿರುವುದನ್ನು ಗಮನಿಸಬಹುದು. ಕೆಲವು ಲಾಭದಾಯಕವಾಗಿದ್ದರೆ ಕೆಲವು ನಷ್ಟಕ್ಕೂ ಗುರಿಯಾಗಿವೆ. ಆದ್ದರಿಂದ ಹೂಡಿಕೆದಾರರು ಅಪಾಯದ ಸಾಧ್ಯತೆಗಳನ್ನು ಅರಿತುಕೊಂಡೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಇಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಈ ವರ್ಷ ಮೊದಲ 6 ತಿಂಗಳಿನ ಅವಧಿಯಲ್ಲಿ 538 ಮ್ಯೂಚುವಲ್ ಫಂಡ್ ಯೋಜನೆಗಳ ಪೈಕಿ 44 ಫಂಡ್‌ಗಳು ಎರಡಂಕಿಯ ರಿಟರ್ನ್ ನೀಡಿವೆ. 348 ಒಂದಂಕಿಯ ರಿಟರ್ನ್ ಕೊಟ್ಟಿದೆ. 146 ಫಂಡ್‌ಗಳು ನೆಗೆಟಿವ್ ರಿಟರ್ನ್ ನೀಡಿವೆ.
ಎಡಿಲ್‌ವೈಸ್ ಯುರೋಪ್ ಡೈನಾಮಿಕ್ ಈಕ್ವಿಟಿ ಆಫ್-ಶೋರ್ ಫಂಡ್ 32.03% ಲಾಭವನ್ನು ಹೂಡಿಕೆದಾರರಿಗೆ ಕಳೆದ ಆರು ತಿಂಗಳಿನಲ್ಲಿ ನೀಡಿದ್ದು, ಮುಂಚೂಣಿಯಲ್ಲಿದೆ. ಎಚ್‌ಎಸ್‌ಬಿಸಿ ಬ್ರೆಜಿಲ್ ಫಂಡ್ 30.97% ರಿಟರ್ನ್ ನೀಡಿದ್ದು ಎರಡನೇ ಸ್ಥಾನದಲ್ಲಿದೆ.
ಇನ್‌ವೆಸ್ಕೊ ಇಂಡಿಯಾ-ಇನ್‌ವೆಸ್ಕೊ ಪಾನ್ ಯುರೋಪಿಯನ್ ಈಕ್ವಿಟಿ ಎಫ್‌ಒಎಫ್: 23.86% ರಿಟರ್ನ್ ಕೊಟ್ಟಿದೆ.
ಐಸಿಐಸಿಐ ಪ್ರುಡೆನ್ಷಿಯಲ್ ಸ್ಟ್ರಾಟಜಿಕ್ ಮೆಟಲ್ ಆಂಡ್ ಎನರ್ಜಿ ಈಕ್ವಿಟಿ ಎಫ್‌ಒಎಫ್: 23.28% ರಿಟರ್ನ್ ಕೊಟ್ಟಿದೆ.
ಮಿರಾಯ್ ಅಸೆಟ್ ಹಾಂಗ್ ಸೆಂಗ್ ಟೆಕ್ ಇಟಿಎಫ್ ಎಫ್‌ಒಎಫ್: 20.31% ರಿಟರ್ನ್ ನೀಡಿದೆ.
ಮೋತಿಲಾಲ್ ಓಸ್ವಾಲ್ ಡೆವಲಪ್ಡ್ ಮಾರ್ಕೆಟ್ ಎಕ್ಸ್ ಯುಎಸ್ ಇಟಿಎಎಫ್ಸ್ ಎಫ್‌ಒಎಫ್: 19.36% ಲಾಭ ಕೊಟ್ಟಿದೆ.
HDFC ಡಿಫೆನ್ಸ್ ಫಂಡ್: 19.36%
ಆದಿತ್ಯ ಬಿರ್ಲಾ SL ಇಂಟರ್ ನ್ಯಾಶನಲ್ ಈಕ್ವಿಟಿ ಫಂಡ್: 18.15%
ಇನ್ವೆಸ್ಕೊ ಇಂಡಿಯಾ- ಇನ್ವೆಸ್ಕೊ ಗ್ಲೋಬಲ್ ಈಕ್ವಿಟಿ ಇನ್‌ಕಮ್ ಎಫ್‌ಒಎಫ್: 16.39%
DSP ಬ್ಯಾಂಕಿಂಗ್ & ಫೈನಾನ್ಷಿಯಲ್ ಸರ್ವೀಸ್ ಫಂಡ್: 15.55%

ಈ ಸುದ್ದಿಯನ್ನೂ ಓದಿ: People’s Education Society: ಬರೋಬ್ಬರಿ 110 ಕೋಟಿ ರೂ.ಗೆ ಬೆಂಗಳೂರಿನಲ್ಲಿ 2 ಮನೆ ಖರೀದಿಸಿದ ಪಿಇಎಸ್
2025ರ ಮೊದಲ 6 ತಿಂಗಳಲ್ಲಿ ನಷ್ಟಕ್ಕೀಡಾಗಿರುವ ಮ್ಯೂಚುವಲ್ ಫಂಡ್‌ಗಳ ಬಗ್ಗೆಯೂ ನೋಡೋಣ.
ಶ್ರೀರಾಮ್ ಮಲ್ಟಿ ಸೆಕ್ಟರ್ ರೊಟೇಶನ್ ಫಂಡ್: -18.4% ನಷ್ಟಕ್ಕೀಡಾಗಿದೆ.
ಯೂನಿಯನ್ ಆಕ್ಟಿವ್ ಮೊಮೆಂಟಮ್ ಫಂಡ್: -12.1%
LIC MF ಸ್ಮಾಲ್ ಕ್ಯಾಪ್ ಫಂಡ್: 10.9%
ಸ್ಯಾಮ್ಕೊ ಫ್ಲೆಕ್ಸಿ ಕ್ಯಾಪ್ ಫಂಡ್: -9.6%
ಮೋತಿಲಾಲ್ ಓಸ್ವಾಲ್ ನಾಸ್‌ಡಾಕ್ 100 ಎಫ್‌ಒಎಫ್ : -9.5%
ಟಾಟಾ ಡಿಜಿಟಲ್ ಇಂಡಿಯಾ ಫಂಡ್: -9.5%
LIC MF ವಾಲ್ಯೂ ಫಂಡ್: -9.0%
ಎಡಿಲ್ ವೈಸ್ IPO ಫಂಡ್: -7.9%
UTI ಇನ್ನೊವೇಶನ್ ಫಂಡ್: -7.8%
ಟಾಟಾ ಮ್ಯೂಚುವಲ್ ಫಂಡ್ ದೇಶದಲ್ಲೇ ಮುಂಚೂಣಿಯಲ್ಲಿರುವ ಮತ್ತು ಹಳೆಯ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಗಳಲ್ಲಿ ಒಂದಾಗಿದೆ.
ಈ ಟಾಟಾ ಮ್ಯೂಚುವಲ್ ಫಂಡ್ 10 ಸ್ಕೀಮ್‌ಗಳನ್ನು ಒಳಗೊಂಡಿದ್ದು, ಅವುಗಳು 20 ವರ್ಷಕ್ಕೂ ಹೆಚ್ಚು ಹಳೆಯದಾಗಿವೆ. ಇವುಗಳಲ್ಲಿ ಕೆಲವು ಮ್ಯೂಚುವಲ್ ಫಂಡ್‌ಗಳು ಸಿಪ್ ಹೂಡಿಕೆದಾರರಿಗೆ ಉತ್ತಮ ರಿಟರ್ನ್ ನೀಡಿವೆ. ಅಂಥ ಸ್ಕೀಮ್‌ಗಳು ಯಾವುದು ಎಂದರೆ-
ಟಾಟಾ ಮಿಡ್ ಕ್ಯಾಪ್ ಫಂಡ್, ಟಾಟಾ ವಾಲ್ಯು ಫಂಡ್ ಮತ್ತು ಟಾಟಾ ELSS ಫಂಡ್.
ಟಾಟಾ ಮಿಡ್ ಕ್ಯಾಪ್ ಫಂಡ್
Tata Mid Cap Fund
ಆರಂಭ: ಜುಲೈ 1, 1994
ಇಲ್ಲಿಯವರೆಗೆ ರಿಟರ್ನ್: 13.39%
AUM: 4,701 ಕೋಟಿ ರುಪಾಯಿ.
Expense ratio: 1.85%
ಈ ಟಾಟಾ ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್‌ನಲ್ಲಿ 20 ವರ್ಷಗಳ ಹಿಂದಿನಿಂದ ಪ್ರತಿ ತಿಂಗಳು 10,000 ರುಪಾಯಿಗಳ ಸಿಪ್ ಹೂಡಿಕೆಯನ್ನು ಮಾಡಿರುತ್ತಿದ್ದರೆ, 17.13% CAGR ಲೆಕ್ಕದಲ್ಲಿ 1 ಕೋಟಿ 73 ಲಕ್ಷ ರುಪಾಯಿಗೆ ಬೆಳೆದಿರುತ್ತಿತ್ತು. ಒಂದು ವೇಳೆ ಈ ಫಂಡ್ ಆರಂಭವಾದಾಗಿನಿಂದ, ಅಂದರೆ 1994ರ ಜುಲೈನಿಂದ 10,000/- ಸಿಪ್ ಹೂಡಿಕೆ ಮಾಡಿರುತ್ತಿದ್ದರೆ, 17.13% CAGR ಲೆಕ್ಕದಲ್ಲಿ, ಈಗ ಅಂದರೆ 31 ವರ್ಷಗಳ ಬಳಿಕ 11 ಕೋಟಿ 27 ಲಕ್ಷ ರುಪಾಯಿ ಆಗಿರುತ್ತಿತ್ತು.
ಟಾಟಾ ವಾಲ್ಯೂ ಫಂಡ್
Tata Value Fund
ಆರಂಭ: ಜೂನ್ 9, 2004
ಇಲ್ಲಿಯವರೆಗೆ ರಿಟರ್ನ್: 18.46 %
AUM: 8,506 ಕೋಟಿ ರುಪಾಯಿ.
Expense ratio: 1.77%
ಟಾಟಾ ವಾಲ್ಯೂ ಫಂಡ್‌ನಲ್ಲಿ ಆರಂಭವಾದಾಗಿನಿಂದ, ಪ್ರತಿ ತಿಂಗಳು 10,000 ರುಪಾಯಿಗಳ ಸಿಪ್ ಹೂಡಿಕೆಯನ್ನು 15.94% CAGR ಲೆಕ್ಕದಲ್ಲಿ 20 ವರ್ಷಗಳ ಕಾಲ ಹೂಡಿಕೆ ಮಾಡಿರುತ್ತಿದ್ದರೆ, 1 ಕೋಟಿ 49 ಲಕ್ಷ ರುಪಾಯಿಗೆ ಬೆಳೆದಿರುತ್ತಿತ್ತು.
ಟಾಟಾ ಇಎಲ್‌ಎಸ್‌ಎಸ್ ಫಂಡ್
Tata ELSS Fund
ಆರಂಭ: ಮಾರ್ಚ್ 31, 1996
ಇಲ್ಲಿಯವರೆಗೆ ರಿಟರ್ನ್: 18.36 %
AUM: 4,582 ಕೋಟಿ ರುಪಾಯಿ.
Expense ratio: 1.81%
ಟಾಟಾ ಇಎಲ್‌ಎಸ್‌ಎಸ್ ಫಂಡ್, ಟ್ಯಾಕ್ಸ್ ಸೇವಿಂಗ್ ಫಂಡ್ ಆಗಿದ್ದು, ಆರಂಭವಾದಾಗಿನಿಂದ 10,000 ರುಪಾಯಿಗಳ ಸಿಪ್ ಹೂಡಿಕೆ ಮಾಡಿರುತ್ತಿದ್ದರೆ 14.64% CAGR ಲೆಕ್ಕದಲ್ಲಿ 1 ಕೋಟಿ 27 ಲಕ್ಷ ರುಪಾಯಿಗೆ ಬೆಳೆದಿರುತ್ತಿತ್ತು. ಕಳೆದ 29 ವರ್ಷಗಳಲ್ಲಿ ಹೂಡಿಕೆ ಮಾಡಿರುತ್ತಿದ್ದರೆ 9 ಕೋಟಿ 27 ಲಕ್ಷ ರುಪಾಯಿಗೆ ಬೆಳೆದಿರುತ್ತಿತ್ತು. ಅಂದರೆ 29 ವರ್ಷಗಳಲ್ಲಿ 18.27% CAGR ಇತ್ತು. CAGR ಎಂದರೆ ಕಂಪೌಂಡ್ ಆನ್ಯುವಲ್ ಗ್ರೋತ್ ರೇಟ್.
ಮ್ಯೂಚುವಲ್ ಫಂಡ್ ವಲಯಕ್ಕೂ ಕಾಲಿಟ್ಟ ರಿಲಯನ್ಸ್ ಇಂಡಸ್ಟ್ರೀಸ್
ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಅಧೀನ ಸಂಸ್ಥೆಯಾಗಿರುವ ಜಿಯೊ ಫೈನಾನ್ಷಿಯಲ್ ಸರ್ವೀಸ್ ಮೂಲಕ ಇದೀಗ ಮ್ಯೂಚುವಲ್ ಫಂಡ್ ವಲಯಕ್ಕೂ ಪದಾರ್ಪಣೆ ಮಾಡಿದೆ. ಜಿಯೊ ಫೈನಾನ್ಷಿಯಲ್ ಸರ್ವೀಸ್ ಸಂಸ್ಥೆಯು ಬ್ಲಾಕ್ ರಾಕ್ ಸಂಸ್ಥೆಯ ಸಹಭಾಗಿತ್ವದಲ್ಲಿ ಜಿಯೊ ಬ್ಲಾಕ್ ರಾಕ್ ಮ್ಯೂಚುವಲ್ ಫಂಡ್ ಎಂಬ ಜಾಯಿಂಟ್ ವೆಂಚರ್ ಅನ್ನು ಸ್ಥಾಪಿಸಿದೆ. ಈ ಜಿಯೊ ಬ್ಲಾಕ್ ರಾಕ್, ತನ್ನ ಆರಂಭಿಕ ಹಂತದ ಮ್ಯೂಚುವಲ್ ಫಂಡ್ ಪ್ರಾಡಕ್ಟ್‌ಗಳನ್ನು ಮಾರುಕಟ್ಟೆಗೆ ಇತ್ತೀಚೆಗೆ ಬಿಡುಗಡೆಗೊಳಿಸಿದೆ.
ಮೂರು ಡೆಟ್ ಮ್ಯೂಚುವಲ್ ಫಂಡ್ ಸ್ಕೀಮ್‌ಗಳನ್ನು ಪರಿಚಯಿಸಿದೆ. ಅವುಗಳು ಯಾವುದು ಎಂದರೆ-
JioBlackRock Liquid Fund,
JioBlackRock Money Market Fund,
JioBlackRock Overnight Fund.
ಜಿಯೊ ಬ್ಲಾಕ್ ರಾಕ್ ಲಿಕ್ವಿಡ್ ಫಂಡ್‌ನಲ್ಲಿ ಕನಿಷ್ಠ ಹೂಡಿಕೆಯ ಮೊತ್ತ 500 ರುಪಾಯಿಗಳಾಗಿದೆ. ಜಿಯೊ ಬ್ಲಾಕ್ ರಾಕ್ ಮ್ಯೂಚುವಲ್ ಫಂಡ್ ಮಾರುಕಟ್ಟೆಗೆ ಬಂದಿರುವುದರಿಂದ ಮ್ಯೂಚುವಲ್ ಫಂಡ್ ವಲಯದಲ್ಲಿ ಸಂಚಲನ ಉಂಟಾಗಿದ್ದು, ಸ್ಪರ್ಧಾತ್ಮಕತೆ ಹೆಚ್ಚಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.