ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Economic Survey 2026: ಆರ್ಥಿಕ ಸಮೀಕ್ಷೆ ಉದ್ದೇಶ, ಮಹತ್ವ ಗೊತ್ತಾ? ಇದನ್ನು ತಯಾರಿಸುವವರು ಯಾರು?; ಇಲ್ಲಿದೆ ಮಾಹಿತಿ

ಈ ವರ್ಷದ ಬಜೆಟ್ ಅಧಿವೇಶನದ ಮೊದಲ ಹಂತ ಜನವರಿ 28ರಿಂದ ಆರಂಭವಾಗಿ ಫೆಬ್ರುವರಿ 13ರವರೆಗೆ ನಡೆಯಲಿದೆ. ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಮಂಡನೆ ಆಗಲಿದ್ದು, ಅದರ ಪೂರ್ವಭಾವಿಯಾಗಿ ಆರ್ಥಿಕ ಸಮೀಕ್ಷೆ ವರದಿಯನ್ನು ಪ್ರಕಟಿಸಲಾಗುತ್ತದೆ. ಸಾಮಾನ್ಯವಾಗಿ ಬಜೆಟ್ ಮಂಡನೆಯ ಒಂದು ದಿನ ಮೊದಲು ಈ ವರದಿಯನ್ನು ಸಂಸತ್ತಿನಲ್ಲಿ ಇಡಲಾಗುತ್ತದೆ.

ಆರ್ಥಿಕ ಸಮೀಕ್ಷೆ

ನವದೆಹಲಿ: 2025–26ನೇ ಹಣಕಾಸು ವರ್ಷದ ಆರ್ಥಿಕ ಸಮೀಕ್ಷೆ(Economic Survey) ವರದಿಯನ್ನು ಜನವರಿ 29ರಂದು ಗುರುವಾರ ಸಂಸತ್ತಿನಲ್ಲಿ ಅಧಿಕೃತವಾಗಿ ಮಂಡಿಸಲಾಗುತ್ತದೆ. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಈ ಸಮೀಕ್ಷೆಯನ್ನು ಸಿದ್ಧಪಡಿಸಿದ್ದು, ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಲೋಕಸಭೆ ಮತ್ತು ರಾಜ್ಯಸಭೆ ಮುಂದೆ ಈ ಮಹತ್ವದ ದಾಖಲೆ ಪುಸ್ತಕವನ್ನು ಪ್ರಸ್ತುತಪಸುತ್ತಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರರ ನೇತೃತ್ವದ ತಜ್ಞರ ತಂಡ ದೇಶದ ಆರ್ಥಿಕ ಪರಿಸ್ಥಿತಿಯನ್ನು ಆಳವಾಗಿ ಅಧ್ಯಯನ ಮಾಡಿ, ವಿವಿಧ ಅಂಕಿ-ಅಂಶಗಳ ಆಧಾರದಲ್ಲಿ ಈ ವರದಿಯನ್ನು ರೂಪಿಸಿ ಸರ್ಕಾರಕ್ಕೆ ಸಲ್ಲಿಸಿದೆ.

ಈ ವರ್ಷದ ಬಜೆಟ್ ಅಧಿವೇಶನದ ಮೊದಲ ಹಂತ ಜನವರಿ 28ರಿಂದ ಆರಂಭವಾಗಿ ಫೆಬ್ರುವರಿ 13ರವರೆಗೆ ನಡೆಯಲಿದೆ. ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಮಂಡನೆ ಆಗಲಿದ್ದು, ಅದರ ಪೂರ್ವಭಾವಿಯಾಗಿ ಆರ್ಥಿಕ ಸಮೀಕ್ಷೆ ವರದಿಯನ್ನು ಪ್ರಕಟಿಸಲಾಗುತ್ತದೆ. ಸಾಮಾನ್ಯವಾಗಿ ಬಜೆಟ್ ಮಂಡನೆಯ ಒಂದು ದಿನ ಮೊದಲು ಈ ವರದಿಯನ್ನು ಸಂಸತ್ತಿನಲ್ಲಿ ಇಡಲಾಗುತ್ತದೆ.

ಇಡೀ ದೇಶದ ಗಮನ ಫೆಬ್ರುವರಿ 1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನತ್ತ ನೆಟ್ಟಿದ್ದು, ಅದಕ್ಕೂ ಮುನ್ನ ಜನವರಿ 29ರಂದು ಬೆಳಗ್ಗೆ 11 ಗಂಟೆಗೆ ಆರ್ಥಿಕ ಸಮೀಕ್ಷೆ ಸಂಸತ್ತಿನಲ್ಲಿ ಪ್ರಸ್ತುತಗೊಳ್ಳುತ್ತಿದೆ. ಈ ವರದಿ ದೇಶದ ಇತ್ತೀಚಿನ ಆರ್ಥಿಕ ಸ್ಥಿತಿ, ಸಾಧನೆ ಹಾಗೂ ಸವಾಲುಗಳನ್ನು ಸಮಗ್ರವಾಗಿ ಚಿತ್ರಿಸುವ ಪ್ರಮುಖ ದಾಖಲೆ ಆಗಿದ್ದು, ಮುಂದಿನ ಹಣಕಾಸು ನೀತಿಗಳಿಗೆ ದಿಕ್ಕು ತೋರಿಸುವ ಮಾರ್ಗಸೂಚಿಯಂತಿದೆ.

ಆರ್ಥಿಕ ಸಮೀಕ್ಷೆಯಲ್ಲಿ ಏನು ಒಳಗೊಂಡಿರುತ್ತದೆ? ಅದರ ಮಹತ್ವವೇನು?

ಬಜೆಟ್ ಮುಂದಿನ ಹಣಕಾಸು ವರ್ಷದ ಆದಾಯ ಮತ್ತು ವೆಚ್ಚದ ಪೂರ್ವಯೋಜನೆ. ಸರ್ಕಾರಕ್ಕೆ ಎಷ್ಟು ತೆರಿಗೆ ಮತ್ತು ಇತರ ಮೂಲಗಳಿಂದ ಆದಾಯ ಬರುತ್ತದೆ, ಎಷ್ಟು ವೆಚ್ಚ ಮಾಡಲಾಗುತ್ತದೆ, ಎಷ್ಟು ಸಾಲ ಮಾಡಲಾಗುತ್ತದೆ, ಯಾವ ಯಾವ ಇಲಾಖೆಗಳು ಮತ್ತು ಯೋಜನೆಗಳಿಗೆ ಎಷ್ಟು ಅನುದಾನ ನೀಡಲಾಗುತ್ತದೆ ಎಂಬ ಎಲ್ಲ ಅಂಶಗಳ ಅಂದಾಜು ಲೆಕ್ಕಪತ್ರವೇ ಬಜೆಟ್.

Union Budget 2026: ಇಂದಿನಿಂದ ಬಜೆಟ್‌ ಅಧಿವೇಶನ ಆರಂಭ, ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ

ಆದರೆ ಆರ್ಥಿಕ ಸಮೀಕ್ಷೆ ದೇಶದ ಒಟ್ಟಾರೆ ಆರ್ಥಿಕ ಪರಿಸ್ಥಿತಿಯ ವಿಶ್ಲೇಷಣಾತ್ಮಕ ಚಿತ್ರಣ. ಕಳೆದ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆ ಹೇಗೆ ಮುಂದುವರಿದಿದೆ, ಕೃಷಿ, ಕೈಗಾರಿಕೆ, ಸೇವಾ ವಲಯ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧನೆ ಹೇಗಿದೆ ಎಂಬುದನ್ನು ಇದು ವಿವರವಾಗಿ ಪರಿಶೀಲಿಸುತ್ತದೆ. ಜಿಡಿಪಿ ಬೆಳವಣಿಗೆ, ಹಣದುಬ್ಬರದ ಪ್ರಮಾಣ, ವಿತ್ತೀಯ ಕೊರತೆ, ರಫ್ತು–ಆಮದು, ಉದ್ಯೋಗ ಸ್ಥಿತಿ ಮೊದಲಾದ ಪ್ರಮುಖ ಆರ್ಥಿಕ ಸೂಚಕಗಳ ಅಂಕಿ-ಅಂಶಗಳು ಈ ವರದಿಯಲ್ಲಿ ಸೇರಿರುತ್ತವೆ.

ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಸರ್ಕಾರ ಅನುಸರಿಸಬೇಕಾದ ಆರ್ಥಿಕ ಮತ್ತು ಹಣಕಾಸು ನೀತಿಗಳ ಕುರಿತು ಸಲಹೆ, ಸುಧಾರಣೆಗಳ ಅಗತ್ಯತೆ ಮತ್ತು ಅಭಿವೃದ್ಧಿಯ ದಿಕ್ಕುಗಳನ್ನೂ ಈ ಸಮೀಕ್ಷೆ ಸೂಚಿಸುತ್ತದೆ. ಇದರಿಂದ ಸರ್ಕಾರಕ್ಕೆ ದೇಶದ ಸ್ಥೂಲ ಆರ್ಥಿಕತೆಯ ವಾಸ್ತವಿಕ ಸ್ಥಿತಿಯ ಸ್ಪಷ್ಟ ಚಿತ್ರ ಸಿಗುತ್ತದೆ ಮತ್ತು ಬಜೆಟ್ ರೂಪಿಕೆಗೆ ಅಗತ್ಯವಾದ ಭೂಮಿಕೆಯನ್ನು ಈ ವರದಿ ಸಿದ್ಧಪಡಿಸುತ್ತದೆ.

ವರದಿಯನ್ನು ಹೀಗೆ ಪಡೆಯಿರಿ

ಆರ್ಥಿಕ ಸಮೀಕ್ಷೆ ಮಂಡನೆಯ ನಂತರ ಮಧ್ಯಾಹ್ನ ಮುಖ್ಯ ಆರ್ಥಿಕ ಸಲಹೆಗಾರರು ಪತ್ರಿಕಾಗೋಷ್ಠಿ ನಡೆಸಿ ಅದರ ಪ್ರಮುಖ ಅಂಶಗಳನ್ನು ವಿವರಿಸಲಿದ್ದಾರೆ. ಸಂಪೂರ್ಣ ಸಮೀಕ್ಷಾ ವರದಿ https://www.indiabudget.gov.in/economicsurvey/ ವೆಬ್‌ಸೈಟ್‌ನಲ್ಲಿ PDF ರೂಪದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.