ಬೆಂಗಳೂರು: ಆಧುನಿಕ ಭಾರತದಲ್ಲಿ ಉದ್ಯೋಗಸ್ಥ ಮಹಿಳೆಯರು ಕೇವಲ ಕುಟುಂಬದ ಆದಾಯ ದ ಮೂಲವಾಗಿ ಉಳಿದಿಲ್ಲ; ಅವರು ಕುಟುಂಬದ ಪ್ರಮುಖ ಹಣಕಾಸು ನಿರ್ಧಾರಗಳನ್ನು ಕೈಗೊಳ್ಳುವ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಆದರೆ, ವೃತ್ತಿಜೀವನ ಮತ್ತು ವೈಯಕ್ತಿಕ ಜವಾಬ್ದಾರಿಗಳ ನಡುವಿನ ಸಮತೋಲನದಲ್ಲಿ, ತಮ್ಮ ಆರ್ಥಿಕ ಭವಿಷ್ಯದ ಸಿದ್ಧತೆಯ ವಿಷಯದಲ್ಲಿ ಮಹಿಳೆಯರು ಇನ್ನೂ ಹಿಂದುಳಿದಿದ್ದಾರೆ ಎಂಬ ಅಂಶವನ್ನು ಎಚ್‌ಡಿಎಫ್‌ಸಿ ಲೈಫ್‌ನ ‘ರೆಡಿ ಫಾರ್ ಲೈಫ್ ರಿಪೋರ್ಟ್ 2025’ ಬಹಿರಂಗಪಡಿಸಿದೆ.
ವರದಿಯ ಪ್ರಕಾರ, ಮಹಿಳೆಯರು ತಮ್ಮ ಆರ್ಥಿಕ ಸಿದ್ಧತೆಯನ್ನು ಅತಿಯಾಗಿ ಅಂದಾಜಿಸಿ ಕೊಳ್ಳುತ್ತಿದ್ದಾರೆ. ಮಹಿಳೆಯರ ಸ್ವಯಂ-ಅಂದಾಜಿನ ಆರ್ಥಿಕ ಸಿದ್ಧತಾ ಅಂಕ 84 ರಷ್ಟಿದ್ದರೆ, ಅವರ ನೈಜ ಸಿದ್ಧತಾ ಮಟ್ಟ ಕೇವಲ 58 ಇದೆ. ಈ 26 ಅಂಕಗಳ ಅಂತರವು ಆರ್ಥಿಕ ಯೋಜನೆ ರೂಪಿಸು ವಾಗ ಮಹಿಳೆಯರಲ್ಲಿರುವ ಗ್ರಹಿಕೆ ಮತ್ತು ವಾಸ್ತವಿಕ ಅರಿವಿನ ಕೊರತೆಯನ್ನು ಎತ್ತಿ ತೋರಿಸುತ್ತದೆ.
ಮಹಿಳೆಯರ ಹಣಕಾಸು ನಿರ್ಧಾರಗಳು ಹೆಚ್ಚಾಗಿ ಕುಟುಂಬ ಕೇಂದ್ರಿತವಾಗಿವೆ. ಶೇ. 40ರಷ್ಟು ಮಹಿಳೆ ಯರು ಮಕ್ಕಳ ಶಿಕ್ಷಣವನ್ನು ತಮ್ಮ ಆದ್ಯತೆಯ ಉಳಿತಾಯ ಗುರಿಯಾಗಿ ಗುರುತಿಸಿದ್ದರೆ, ಪುರುಷರಲ್ಲಿ ಈ ಪ್ರಮಾಣ ಶೇ. 35 ರಷ್ಟಿದೆ. ಅದೇ ರೀತಿ, ಶೇ. 37 ರಷ್ಟು ಮಹಿಳೆಯರು ಸ್ವಂತ ಮನೆ ಖರೀದಿಯನ್ನು ಪ್ರಮುಖ ಗುರಿಯನ್ನಾಗಿ ಹೊಂದಿದ್ದು, ಇದು ಪುರುಷರ ಶೇ. 33 ಕ್ಕಿಂತ ಹೆಚ್ಚಾಗಿದೆ. ಕುಟುಂಬದ ದೀರ್ಘಕಾಲೀನ ಆರ್ಥಿಕ ಭದ್ರತೆಯನ್ನು ರೂಪಿಸುವಲ್ಲಿ ಮಹಿಳೆಯರ ದೂರದೃಷ್ಟಿ ಸ್ಪಷ್ಟವಾಗಿ ದ್ದರೂ, ಅದನ್ನು ಸಾಕಾರಗೊಳಿಸುವ ಹಾದಿಯಲ್ಲಿ ಅವರು ಇನ್ನೂ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ.
ಇದನ್ನೂ ಓದಿ: HDFC Life: ಎಚ್.ಡಿ.ಎಫ್.ಸಿ.ಲೈಫ್: ಪಾಲಿಸಿದಾರರಿಗೆ ರೂ. 4102 ಕೋಟಿ ಬೋನಸ್ ಘೋಷಣೆ
ಹಣಕಾಸು ರಕ್ಷಣೆ ಮತ್ತು ನಿವೃತ್ತಿ ಯೋಜನೆಯಂತಹ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ವರದಿ ಹೇಳಿದೆ. ಟರ್ಮ್ ಇನ್ಶೂರೆನ್ಸ್ ಕುರಿತಾದ ಅರಿವು ಮಹಿಳೆಯ ರಲ್ಲಿ ಇದ್ದರೂ, ಅದನ್ನು ಖರೀದಿಸುವ ಪ್ರಮಾಣ ತೀರಾ ಕಡಿಮೆಯಿದೆ. ನಿವೃತ್ತಿ ಯೋಜನೆಯ ವಿಷಯದಲ್ಲೂ, ನಿವೃತ್ತಿಯ ನಂತರ ಆರ್ಥಿಕವಾಗಿ ಯಾರ ಮೇಲೂ ಅವಲಂಬಿತರಾಗದೆ ಬದುಕಲು ತಾವು ಸಿದ್ಧರಿದ್ದೇವೆ ಎಂದು ಕೇವಲ ಶೇ. 43 ರಷ್ಟು ಮಹಿಳೆಯರು ಮಾತ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ವರದಿಯ ಕುರಿತು ಪ್ರತಿಕ್ರಿಯಿಸಿರುವ ಎಚ್‌ಡಿಎಫ್‌ಸಿ ಲೈಫ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ವ್ಯವಹಾರ ಅಧಿಕಾರಿ ವಿನೀತ್ ಅರೋರಾ, ಕುಟುಂಬದ ಆರ್ಥಿಕ ಭದ್ರತೆ ನಿರ್ಮಿಸು ವಲ್ಲಿ ಮಹಿಳೆಯರ ಪಾತ್ರ ಶ್ಲಾಘನೀಯವಾದರೂ, ಅವರ ಆರ್ಥಿಕ ಸ್ವಾವಲಂಬನೆಯನ್ನು ಖಚಿತಪಡಿಸಿಕೊಳ್ಳಲು ಕೇವಲ ಉಳಿತಾಯವಷ್ಟೇ ಸಾಲದು; ಅದಕ್ಕೆ ಸಮಗ್ರ ಹಣಕಾಸು ಯೋಜನೆ ಮತ್ತು ಸೂಕ್ತ ಜೀವ ವಿಮಾ ಪರಿಹಾರಗಳ ಅಗತ್ಯವಿದೆ ಎಂದು ತಿಳಿಸಿದ್ದಾರೆ.