ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

HDFC Life: ಎಚ್.ಡಿ.ಎಫ್.ಸಿ.ಲೈಫ್: ಪಾಲಿಸಿದಾರರಿಗೆ ರೂ. 4102 ಕೋಟಿ ಬೋನಸ್ ಘೋಷಣೆ

ಭಾರತದ ಪ್ರಮುಖ ಜೀವ ವಿಮಾದಾರರಲ್ಲಿ ಒಂದಾದ ಎಚ್.ಡಿ.ಎಫ್.ಸಿ. ಲೈಫ್, ಏಪ್ರಿಲ್ 17, 2025 ರಂದು ನಡೆದ ಕಂಪನಿಯ ನಿರ್ದೇಶಕರ ಮಂಡಳಿ ತನ್ನ ಸಭೆಯಲ್ಲಿ, ಪಾಲಿಸಿದಾರರಿಗೆ ರೂ.4102 ಕೋಟಿ ಬೋನಸ್ ನೀಡುವುದಾಗಿ ಘೋಷಿಸಿದೆ. ಇದು ಎಚ್.ಡಿ.ಎಫ್.ಸಿ. ಲೈಫ್, ಇದುವರೆಗೂ ತನ್ನ ಪಾರ್ಟಿಸಿ ಪೇಟಿಂಗ್* ಪಾಲಿಸಿಗಳ ಮೇಲೆ ಘೋಷಿಸಿರುವ ಅತ್ಯಧಿಕ ಬೋನಸ್ ಆಗಿದ್ದು, 21.90+ ಲಕ್ಷ ಪಾಲಿಸಿ ದಾರರಿಗೆ ಲಾಭವನ್ನು ನೀಡುತ್ತದೆ.

ಎಚ್.ಡಿ.ಎಫ್.ಸಿ.ಲೈಫ್: ಪಾಲಿಸಿದಾರರಿಗೆ ರೂ. 4102 ಕೋಟಿ ಬೋನಸ್ ಘೋಷಣೆ

Profile Ashok Nayak Jun 12, 2025 4:06 PM

ಬೆಂಗಳೂರು: ಭಾರತದ ಪ್ರಮುಖ ಜೀವ ವಿಮಾದಾರರಲ್ಲಿ ಒಂದಾದ ಎಚ್.ಡಿ.ಎಫ್.ಸಿ. ಲೈಫ್, ಏಪ್ರಿಲ್ 17, 2025 ರಂದು ನಡೆದ ಕಂಪನಿಯ ನಿರ್ದೇಶಕರ ಮಂಡಳಿ ತನ್ನ ಸಭೆಯಲ್ಲಿ, ಪಾಲಿಸಿದಾರರಿಗೆ ರೂ.4102 ಕೋಟಿ ಬೋನಸ್ ನೀಡುವುದಾಗಿ ಘೋಷಿಸಿದೆ. ಇದು ಎಚ್.ಡಿ.ಎಫ್.ಸಿ. ಲೈಫ್, ಇದುವರೆಗೂ ತನ್ನ ಪಾರ್ಟಿಸಿಪೇಟಿಂಗ್* ಪಾಲಿಸಿಗಳ ಮೇಲೆ ಘೋಷಿಸಿರುವ ಅತ್ಯಧಿಕ ಬೋನಸ್ ಆಗಿದ್ದು, 21.90+ ಲಕ್ಷ ಪಾಲಿಸಿದಾರರಿಗೆ ಲಾಭವನ್ನು ನೀಡುತ್ತದೆ. ಇದೊಂದು ಮೈಲುಗಲ್ಲು. ಇದು ಇನ್ನೂ ವಿಶೇಷವಾಗುವುದು ಏಕೆಂದರೆ, ಇದು ಎಚ್.ಡಿ.ಎಫ್.ಸಿ. ಲೈಫ್‌ ನ 25 ನೇ ವರ್ಷದ ಸಂದರ್ಭದಲ್ಲಿ ಪ್ರಕಟವಾಗಿದೆ!

ಘೋಷಿತ ಒಟ್ಟು ಬೋನಸ್‌ನಿಂದ ಪ್ರಸ್ತುತ ಹಣಕಾಸು ವರ್ಷದಲ್ಲಿ ರೂ. 3232 ಕೋಟಿ ಮೊತ್ತ ದಷ್ಟನ್ನು ಸರ್ವೈವಲ್ ಅಥವಾ ಮೆಚುರಿಟಿ ಪಾವತಿಗಳ ಭಾಗವಾಗಿ ಪಾಲಿಸಿಗಳಿಗೆ ಪಾವತಿಸಲಾಗು ತ್ತದೆ. ಇನ್ನು ಉಳಿದದ್ದು ಪಾಲಿಸಿ ಪ್ರಯೋಜನಗಳಾಗಿ ಸಂಗ್ರಹವಾಗುತ್ತದೆ ಮತ್ತು ಮುಂದಿನ ಹಣಕಾಸು ವರ್ಷಗಳಲ್ಲಿ ಈ ಪ್ರಯೋಜನವನ್ನು ಪಾವತಿಸುವಾಗ ಬಳಸಿಕೊಳ್ಳ ಲಾಗುತ್ತದೆ.

ಎಚ್.ಡಿ.ಎಫ್.ಸಿ. ಲೈಫ್ ನೀಡುವ ವಾರ್ಷಿಕ ಬೋನಸ್, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಸರಿ ಸುಮಾರು ದ್ವಿಗುಣಗೊಂಡಿದೆ. ಇದು ಈ ಕಂಪನಿಯ ಲಾಭದಾಯಕತೆ, ಜೊತೆಗೆ ನಿಧಿಯ ಕಾರ್ಯ ಕ್ಷಮತೆ ಮತ್ತು ಪಾಲಿಸಿದಾರರ ಮೌಲ್ಯದಲ್ಲಿ ಆಗುತ್ತಿರುವ ಸ್ಥಿರವಾದ ಬೆಳವಣಿಗೆಯನ್ನು ಎತ್ತಿ ತೋರುತ್ತದೆ. ಕಂಪನಿಯು ಪ್ರಾರಂಭದಿಂದಲೂ ಎಲ್ಲ ಅರ್ಹ ಪಾರ್ಟಿಸಿಪೇಟಿಂಗ್ ಪಾಲಿಸಿ ಗಳಿಗೆ ನೀಡಿರುವ ಸಂಚಿತ ಬೀನಸ್, 22,500+ ಕೋಟಿ ರೂ.ಗಳಿಗೂ ಮಿಕ್ಕಿದೆ.

ಇದನ್ನೂ ಓದಿ: Crime News: ಬಾಲಕಿಗೆ ಅಶ್ಲೀಲ ಸಂದೇಶ, ಮೂವರು ಬಾಲಕರನ್ನು ಕಂಬಕ್ಕೆ ಕಟ್ಟಿ ಥಳಿತ

ಈಶ್ವರಿ ಮುರುಗನ್ - ನೇಮಕಗೊಂಡ ಆಕ್ಚುಯರಿ, ಎಚ್.ಡಿ.ಎಫ್.ಸಿ. ಲೈಫ್ , "ಈ ವರ್ಷ ಎಚ್.ಡಿ.ಎಫ್.ಸಿ. ಲೈಫ್ ತನ್ನ ಇತಿಹಾಸದಲ್ಲೆ ಗರಿಷ್ಠ ಬೋನಸ್ ಅನ್ನು ಘೋಷಿಸಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ಪಾಲಿಸಿ ಬೋನಸ್‌ಗಳು ದೀರ್ಘಾವಧಿ ಪಾಲಿಸಿದಾರರ ನಿಷ್ಠೆಗೆ ನೀಡುವ ಪ್ರತಿಫಲ. ನಾವು ನಮ್ಮ ಪ್ರಯಾಣದಲ್ಲಿ 25 ವರ್ಷಗಳನ್ನು ಪೂರ್ಣಗೊಳಿಸು ತ್ತಿದ್ದೇವೆ. ಈ ಸಂದರ್ಭದಲ್ಲೆ ಎಲ್ಲ ಪಾರ್ಟಿಸಿಪೇಟಿಂಗ್ ಪಾಲಿಸಿದಾರರಿಗೆ ಮೌಲ್ಯವನ್ನು ಒದಗಿಸುವ ನಮ್ಮ ಭರವಸೆಗೆ ನಾವು ಬದ್ಧರಾಗಿದ್ದೇವೆ ಎಂದು ಪುನರುಚ್ಚರಿಸುತ್ತೇವೆ.

HSFC 1

ನಮ್ಮ ಪಾಲಿಸಿದಾರರು ಮತ್ತು ಅವರ ಕುಟುಂಬಗಳನ್ನು ಜೀವ ವಿಮೆಯೊಂದಿಗೆ ಆರ್ಥಿಕವಾಗಿ ಸುಭದ್ರಗೊಳಿಸುವುದು ನಮ್ಮ ಪ್ರಯತ್ನಗಳ ಉದ್ದೇಶವಾಗಿದೆ. ನಮ್ಮ ಪಾಲಿಸಿಗಳು, ಪಾಲಿಸಿದಾರರು ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಲು ಮತ್ತು ಭವಿಷ್ಯಕ್ಕಾಗಿ ಸಿದ್ಧರಾಗಲು ನೆರವಾಗು ತ್ತವೆ. ನಮ್ಮದು ಗ್ರಾಹಕ-ಕೇಂದ್ರಿತ ವಿಧಾನ. ನಾವು ಜೀವ ವಿಮೆಗಳನ್ನು ಮಾಡುತ್ತ ಹೋಗುತ್ತೇವೆ ಮತ್ತು '2047 ರ ವೇಳೆಗೆ ಎಲ್ಲರಿಗೂ ವಿಮೆ' ಎಂಬ ಗುರಿಯ ಸಾಧನೆಗೆ ನಮ್ಮ ಕೊಡುಗೆಯನ್ನು ನೀಡುತ್ತೇವೆ.”

ಪಾರ್ಟಿಸಿಪೇಟಿಂಗ್ ಅಥವಾ ಪಾರ್ ಯೋಜನೆಗಳು ಪಾಲಿಸಿದಾರರಿಗೆ ಬೋನಸ್ ರೂಪದಲ್ಲಿ ಲಾಭ ಹಂಚಿಕೆ ಪ್ರಯೋಜನಗಳನ್ನು ಒದಗಿಸುತ್ತವೆ.